Latest sports news Photos

ಮಥೀಶಾ ಪತಿರಾಣಾ ಸ್ನಾಯುಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಸ್‌ಕೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಅವರು ಗಾಯದಿಂದ ಚೇತರಿಸಿಕೊಳ್ಳಲು ಶ್ರೀಲಂಕಾಗೆ ಮರಳಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಹಾರೈಸಿದೆ.

ಮುಸ್ತಫಿಜುರ್, ಚಹಾರ್ ಬಳಿಕ ಶ್ರೀಲಂಕಾ ವೇಗಿಯೂ ಔಟ್; ಸಿಎಸ್‌ಕೆ ತಂಡದಿಂದ ಹೊರನಡೆದ ಘಟಾನುಘಟಿ ಬೌಲರ್‌ಗಳು

Sunday, May 5, 2024

ಪಂಜಾಬ್ ಕಿಂಗ್ಸ್ ಬದಲಿ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ತನಯ್ ತ್ಯಾಗರಾಜನ್, ವಿಧ್ವತ್ ಕಾವೇರಪ್ಪ, ರಿಷಿ ಧವನ್

ಸುಂದರ ಧರ್ಮಶಾಲಾದಲ್ಲಿ ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್; ಹಾಲಿ ಚಾಂಪಿಯನ್ ವಿರುದ್ಧ 6ನೇ ಗೆಲುವಿನ ಗುರಿ

Sunday, May 5, 2024

ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ 8ರಲ್ಲಿ ಸೋಲು ಕಂಡಿದೆ. 3 ರಲ್ಲಿ ಮಾತ್ರ ಗೆದ್ದಿದ್ದು, ಪ್ಲೇಆಫ್​ನಿಂದ ಬಹುತೇಕ ಹೊರಬಿದ್ದಿದೆ.

ಬಹಳಷ್ಟು ಪ್ರಶ್ನೆಗಳಿವೆ, ಆದರೆ ಉತ್ತರಿಸಲು ಸ್ವಲ್ಪ ಸಮಯ ಬೇಕು; ಹಾರ್ದಿಕ್ ಪಾಂಡ್ಯ ನೋವಿನ ಮಾತು

Saturday, May 4, 2024

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತನ್ನ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಏಪ್ರಿಲ್ 30ರಂದು 15 ಸದಸ್ಯರ ತಂಡವನ್ನು ಬಿಸಿಸಿಐ ಘೋಷಿಸಿದೆ. ಭಾರತ ತಂಡಕ್ಕೆ ಆಯ್ಕೆಯಾದ ಆಟಗಾರರು ಪ್ರಸಕ್ತ ಐಪಿಎಲ್​ನಲ್ಲಿ ಹೇಗೆ ಪ್ರದರ್ಶನ ನೀಡಿದ್ದಾರೆ. ಅದರ ಸಂಪೂರ್ಣ ವಿವರ ಇಂತಿದೆ.

ಟಿ20 ವಿಶ್ವಕಪ್​ಗೆ ಆಯ್ಕೆಯಾದ ಭಾರತದ 15 ಆಟಗಾರರ ಐಪಿಎಲ್​ ಪ್ರದರ್ಶನ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

Wednesday, May 1, 2024

ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್-2024ರ ಸ್ಟೇಜ್ 1ರಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಐದು ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದು ಮೈಲಿಗಲ್ಲು ಸಾಧಿಸಿದೆ.

ಆರ್ಚರಿ ವಿಶ್ವಕಪ್​ನಲ್ಲಿ ಭಾರತ ಚಿನ್ನದ ಬೇಟೆ; 5 ಗೋಲ್ಡ್, 1 ಬೆಳ್ಳಿ, 1 ಕಂಚು ಗೆದ್ದು ಇತಿಹಾಸ ಸೃಷ್ಟಿ

Sunday, April 28, 2024

ಪ್ರಸಕ್ತ ಆವೃತ್ತಿಯಲ್ಲಿ ಮ್ಯಾಕ್‌ಗುರ್ಕ್ ಎರಡನೇ ಬಾರಿಗೆ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇದರೊಂದಿಗೆ ಟಿ20 ಕ್ರಕೆಟ್‌ನಲ್ಲಿ 15 ಅಥವಾ ಅದಕ್ಕಿಂತಲೂ ಕಡಿಮೆ ಎಸೆತಗಳಲ್ಲಿ ಎರಡು ಬಾರಿ ವೇಗದ ಅರ್ಧಶತಕ ಸಿಡಿಸಿದ ಕೇವಲ ಮೂರನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಆಂಡ್ರೆ ರಸೆಲ್‌ ಹಾಗೂ ಸುನಿಲ್‌ ನರೈನ್‌ ಮತ್ತಿಬ್ಬರು.

ಬುಮ್ರಾ, ಪಾಂಡ್ಯ ಎಸೆತಗಳು ಹಣ್ಣುಗಾಯಿ-ನೀರುಗಾಯಿ; 2ನೇ ಬಾರಿ ದಾಖಲೆಯ ಅರ್ಧಶತಕ ಬಾರಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್

Saturday, April 27, 2024

ಮುಂಬೈ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕೊಯೆಟ್ಜಿ ಬದಲಿಗೆ ಲ್ಯೂಕ್‌ ವುಡ್‌ ಆಡುವ ಬಳಗ ಸೇರಿಕೊಂಡಿದ್ದಾರೆ.

ಡೆಲ್ಲಿ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್; ಉಭಯ ತಂಡಗಳಿಂದ ಇಬ್ಬರು ಪ್ರಮುಖ ಆಟಗಾರರು ಔಟ್

Saturday, April 27, 2024

ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ರಿಷಿ ಧವನ್, ವಿಧ್ವತ್ ಕಾವೇರಪ್ಪ, ಶಿವಂ ಸಿಂಗ್, ಪ್ರಿನ್ಸ್ ಚೌಧರಿ

ಕೆಕೆಆರ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್; ಲಿವಿಂಗ್‌ಸ್ಟನ್ ಔಟ್, ಕೋಲ್ಕತ್ತಾ ತಂಡದಿಂದ ಹೊರಬಿದ್ದ ದುಬಾರಿ ಬೌಲರ್

Friday, April 26, 2024

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಅವರಂಥ ಸ್ಫೋಟಕ ಬ್ಯಾಟರ್‌ಗಳಿರುವ ತಂಡವು ಟೂರ್ನಿಯಲ್ಲಿ ಸಿಕ್ಸರ್‌ಗಳ ರಾಶಿಯನ್ನೇ ಸುರಿಸಿದೆ. ಹೀಗಾಗಿ 17ನೇ ಆವೃತಿಯ ಐಪಿಎಲ್‌ನಲ್ಲಿ ತಂಡವು ಸಿಕ್ಸರ್‌ಗಳ ಶತಕ ಸಿಡಿಸಿದೆ.

ಸಿಕ್ಸರ್‌ಗಳ ಶತಕ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್; ಐಪಿಎಲ್ ಆವೃತ್ತಿಯಲ್ಲಿ ವಿಶೇಷ ದಾಖಲೆ ಬರೆದ ಎಸ್‌ಆರ್‌ಎಚ್

Friday, April 26, 2024

ಅವರು (ವಿಟ್ಟಾಲ್) ನಿಜವಾಗಿಯೂ ಅದೃಷ್ಟಶಾಲಿ ವ್ಯಕ್ತಿ ಎಂದು ಹನ್ನಾ ಡೈಲಿ ಮೇಲ್​ಗೆ ತಿಳಿಸಿದ್ದಾರೆ. ಚಿಕಾರ ಅವರೊಂದಿಗೆ ಇದ್ದದ್ದು ಅವರ ಅದೃಷ್ಟ. ಅವರಿಗೆ ಸಾಕಷ್ಟು ಸಹಾಯ ಮಾಡಿ ಚಿರತೆಯಿಂದ ಉಳಿಸಿತು. ಇಲ್ಲದಿದ್ದರೆ ಏನಾಗುತ್ತಿತ್ತೋ ಯಾರಿಗೆ ಗೊತ್ತು. ವಿಟ್ಟಾಲ್ ಅವರು ನಮ್ಮಿಂದ ದೂರವಾಗುತ್ತಿದ್ದರು. ಸದ್ಯಕ್ಕೆ ವಿಟ್ಟಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕು ನಾಯಿಯನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹನ್ನಾ ಮಾಹಿತಿ ನೀಡಿದ್ದಾರೆ,

ಚಿರತೆ ದಾಳಿಯಿಂದ ಜಿಂಬಾಬ್ವೆ ಕ್ರಿಕೆಟಿಗನನ್ನು ರಕ್ಷಿಸಿದ ಸಾಕು ನಾಯಿ ಚಿಕರಾ; ಈ ಹಿಂದೆ ಮಂಚದ ಕೆಳಗೆ ಮಲಗಿತ್ತು ಮೊಸಳೆ!

Thursday, April 25, 2024

ದಕ್ಷಿಣ ಕೊರಿಯಾದ ಚುಂಗ್ಜುನಲ್ಲಿ ನಡೆದ 2024ರ ಏಷ್ಯನ್-ಓಷಿಯಾನಿಯನ್ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್ ಅರ್ಹತಾ ಸುತ್ತುಗಳ ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಬಲರಾಜ್ ಪನ್ವಾರ್ ಮೂರನೇ ಸ್ಥಾನ ಪಡೆದರು. ಇದರೊಂದಿಗೆ ಈ ಬಾರಿಯ ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರೋಯಿಂಗ್‌ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಬಲರಾಜ್ ಪನ್ವಾರ್

Tuesday, April 23, 2024

2013ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಯೂಜಿ, ಈವರೆಗೆ ಮೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಆರಂಭದಲ್ಲಿ ಮುಂಬೈ ಪರ ಆಡುತ್ತಿದ್ದ ಅವರು, ಆ ಬಳಿಕ ಸುದೀರ್ಘ ವರ್ಷಗಳ ಕಾಲ ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್‌ ಆಗಿದ್ದರು.

ಐಪಿಎಲ್‌ನಲ್ಲಿ ಯುಜ್ವೇಂದ್ರ ಚಹಾಲ್ ವಿಕೆಟ್‌ಗಳ ದ್ವಿಶತಕ; ವಿಶೇಷ ಮೈಲಿಗಲ್ಲು ತಲುಪಿದ ಮೊದಲ ಹಾಗೂ ಏಕೈಕ ಬೌಲರ್

Monday, April 22, 2024

ಇದಕ್ಕೆ ಪ್ರತಿಯಾಗಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಉತ್ತರಿಸಲು ವಿಫಲರಾದರು. ಆದರೆ ವಿಲ್ ಜಾಕ್ಸ್ (32 ಎಸೆತಗಳಲ್ಲಿ 55 ರನ್) ಮತ್ತು ರಜತ್ ಪಾಟೀದಾರ್ (23 ಎಸೆತಗಳಲ್ಲಿ 52 ರನ್) ಬೆಂಗಳೂರು ತಂಡವನ್ನು ಬಹುತೇಕ ಗೆಲುವಿನತ್ತ ಕೊಂಡೊಯ್ದರು. ಕೊನೆಯ ಓವರ್ನಲ್ಲಿ ಸ್ಟಾರ್ಕ್ ಎಸೆತಗಳಲ್ಲಿ ಕರಣ್ ಶರ್ಮಾ ಮೂರು ಸಿಕ್ಸರ್‌ ಸಿಡಿಸಿದರು. ಅವರು ಔಟಾದ ನಂತರ, ಕೊನೆಯ ಎಸೆತದಲ್ಲಿ ತಂಡಕ್ಕೆ 3 ರನ್ ಅವಶ್ಯಕತೆಯಿತ್ತು. ಲಾಕಿ ಫರ್ಗುಸನ್ ಎರಡನೇ ರನ್‌ ಓಡುವ ವೇಳೆ ಔಟಾದರು.

ಆರ್‌ಸಿಬಿ ವಿರುದ್ಧ ಗೆದ್ದು ತವರಿನಲ್ಲಿ ವಿಶೇಷ ಅರ್ಧಶತಕ ಬಾರಿಸಿದ ಕೆಕೆಆರ್; ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ತಂಡ

Monday, April 22, 2024

ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಆಯ್ಕೆಗಳು: ರಾಹುಲ್ ಚಾಹರ್, ವಿಧ್ವತ್ ಕಾವೇರಪ್ಪ, ಅಥರ್ವ ಟೈಡೆ, ಹರ್‌ಪ್ರೀತ್ ಸಿಂಗ್ ಭಾಟಿಯಾ, ಶಿವಂ ಸಿಂಗ್

ಗುಜರಾತ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ; ಇಂದು ಕೂಡಾ ಧವನ್ ಬದಲಿಗೆ ಸ್ಯಾಮ್‌ ಕರನ್‌ ನಾಯಕ

Sunday, April 21, 2024

ಜ್ಯಾಕ್ ಫ್ರೇಸರ್ ಮೆಕ್ಗುರ್ಕ್ ಅವರ ಅದ್ಭುತ ಇನ್ನಿಂಗ್ಸ್ ಹೊರತಾಗಿಯೂ, ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಸೋತಿತು. ಹೈದರಾಬಾದ್ ಗಳಿಸಿದ 266 ರನ್‌ಗಳಿಗೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ 199 ರನ್‌ಗಳಿಗೆ ಆಲೌಟ್ ಆಯಿತು. 67 ರನ್‌ಗಳಿಂದ ತಂಡ ಸೋಲನುಭವಿಸಿತು. ಐಪಿಎಲ್‌ನಲ್ಲಿ ಸೋತ ತಂಡದ ಪರ ಅತಿ ವೇಗದ ಅರ್ಧಶತಕ ಬಾರಿಸಿದ ಸಾರ್ವಕಾಲಿಕ ದಾಖಲೆಯನ್ನು ಇದೀಗ ಫ್ರೇಸರ್ ಹೊಂದಿದ್ದಾರೆ.

DC vs SRH: 15 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿದರೂ ಬೇಡದ ದಾಖಲೆ ಬರೆದ ಜೇಕ್​ ಫ್ರೇಸರ್

Sunday, April 21, 2024

ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಬ್‌ ಪಂತ್‌ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಸನ್‌ರೈಸರ್ಸ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್; ತಂಡದಲ್ಲಿ ಎರಡು ಬದಲಾವಣೆ

Saturday, April 20, 2024

ಎಲ್‌ಎಸ್‌ಜಿ ತಂಡದಲ್ಲಿ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಶಮರ್‌ ಜೋಸೆಫ್‌ ಹೊರಗುಳಿದಿದ್ದು, ಮ್ಯಾಟ್‌ ಹೆನ್ರಿ ಆಡುವ ಬಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಎಲ್‌ಎಸ್‌ಜಿ ಬೌಲಿಂಗ್ ಆಯ್ಕೆ; ಲಕ್ನೋ ತವರಲ್ಲಿ ಯೆಲ್ಲೋ ಫ್ಯಾನ್ಸ್ ಕಲರವ

Friday, April 19, 2024

ನರೈನ್‌ ಕೆಕೆಆರ್‌ ತಂಡದ ಪ್ರಮುಖ ಸ್ಪಿನ್‌ ಬೌಲರ್‌. ಇವರ ಬ್ಯಾಟಿಂಗ್‌ ಕೌಶಲದಿಂದಾಗಿ ಅಗ್ರ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು. ಅದರಂತೆಯೇ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತ ಹೆಚ್ಚಿಸುತ್ತಿದ್ದಾರೆ.‌ ತಂಡದ ಬ್ಯಾಟಿಗ್‌ ತಂತ್ರ ಪಲ ಕೊಡುತ್ತಿದೆ.

49 ಎಸೆತಗಳಲ್ಲಿ ಶತಕ ಸಿಡಿಸಿದ ಸುನಿಲ್ ನರೈನ್; ಐಪಿಎಲ್‌ನಲ್ಲಿ ಈ ದಾಖಲೆ ನಿರ್ಮಿಸಿದ ಮೊದಲ ಆಟಗಾರ

Tuesday, April 16, 2024

ರೋಚಕ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಕೆಕೆಆರ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್; ತಂಡಕ್ಕೆ ಮರಳಿದ‌ ಜಾಸ್ ಬಟ್ಲರ್, ಅಶ್ವಿನ್

Tuesday, April 16, 2024

ಐಪಿಎಲ್‌ನಲ್ಲಿ ಚೇಸಿಂಗ್‌ ವೇಳೆ ಅಥವಾ ಎರಡನೇ ಇನ್ನಿಂಗ್ಸ್‌ನಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತವೇ ಆರ್‌ಸಿಬಿ ಗಳಿಸಿದ 262 ರನ್‌. ಈ ಹಿಂದೆ ಈ ದಾಖಲೆಯು ಮುಂಬೈ ಇಂಡಿಯನ್ಸ್‌ ಹೆಸರಲ್ಲಿತ್ತು. ಇದೇ ಆವೃತ್ತಿಯಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಎಂಐ ಗಳಿಸಿದ್ದ 246 ರನ್‌, ಐಪಿಎಲ್‌ನಲ್ಲಿ ಈವರೆಗೆ ದಾಖಲಾದ ಗರಿಷ್ಠ ಎರಡನೇ ಇನ್ನಿಂಗ್ಸ್‌ ಮೊತ್ತವಾಗಿತ್ತು. ಇದೀಗ ಆ‌ ದಾಖಲೆಯನ್ನು ಆರ್‌ಸಿಬಿ ಬ್ರೇಕ್‌ ಮಾಡಿದೆ.

ಸೋತರೂ ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಆರ್‌ಸಿಬಿ; ರಾಯಲ್ ಚಾಲೆಂಜರ್ಸ್ ಆಟಕ್ಕೆ ಬೆಂಗಳೂರು ಪ್ರೇಕ್ಷಕರ ಬಹುಪರಾಕ್

Tuesday, April 16, 2024