test-cricket News, test-cricket News in kannada, test-cricket ಕನ್ನಡದಲ್ಲಿ ಸುದ್ದಿ, test-cricket Kannada News – HT Kannada

Latest test cricket Photos

ಶಾರ್ದೂಲ್ ಠಾಕೂರ್: ಟೀಮ್ ಇಂಡಿಯಾ ಪರ ಕೆಲವು ಪಂದ್ಯಗಳಲ್ಲಿ ತಮ್ಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಶಾರ್ದೂಲ್ ಠಾಕೂರ್, ಈ ಬಾರಿ ಕೇಂದ್ರ ಒಪ್ಪಂದ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಕಳೆದ ಬಾರಿ ಅವನು ಸಿ ದರ್ಜೆಯಲ್ಲಿದ್ದರು.

ಕಳೆದ ವರ್ಷ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿದ್ದ ಈ ಐವರು ಆಟಗಾರರ ಹೆಸರು ಈ ಬಾರಿ ಇಲ್ಲ

Wednesday, April 23, 2025

ದುಲೀಪ್ ಟ್ರೋಫಿ ಹಳೆಯ ವ್ಯವಸ್ಥೆಗೆ ಮರಳಲಿದೆ. ಭಾರತೀಯ ಕ್ರಿಕೆಟ್​ನ ಈ ಸಾಂಪ್ರದಾಯಿಕ ಸ್ಪರ್ಧೆಯು ಮೊದಲಿನಂತೆ ಅಂತರ-ವಲಯ ಸ್ವರೂಪದಲ್ಲಿ ಆರು ತಂಡಗಳೊಂದಿಗೆ ನಡೆಯಲಿದೆ. ಈ ವರ್ಷದ ಸೆಪ್ಟೆಂಬರ್​ನಲ್ಲಿ ಬೆಂಗಳೂರಿನಲ್ಲಿ ಟೂರ್ನಿ ಆರಂಭವಾಗಲಿದೆ. ಪ್ರಸ್ತುತ 4 ತಂಡಗಳ ನಡುವೆ ಮಾತ್ರ ಈ ಸ್ಪರ್ಧೆ ನಡೆಯುತ್ತಿತ್ತು. ಈ ಬಗ್ಗೆ ರಾಜ್ಯ ಸಂಘಗಳು ಅತೃಪ್ತಿ ವ್ಯಕ್ತಪಡಿಸಿದ್ದವು.

ಹಳೆಯ ಮಾದರಿಗೆ ಮರಳಲಿದೆ ದುಲೀಪ್ ಟ್ರೋಫಿ; ಮಹಿಳಾ ಏಕದಿನ ವಿಶ್ವಕಪ್​ಗೆ ಸ್ಥಳಗಳು ಅಂತಿಮ

Monday, March 24, 2025

1. ಜಿಯೋ ರೂ 100 ಡೇಟಾ ಪ್ಯಾಕ್-
ಜಿಯೋದ 100 ರೂ. ಡೇಟಾ ಪ್ಯಾಕ್ 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಗ್ರಾಹಕರು ಒಟ್ಟು 5GB ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ಬಯಸಿದರೆ, ಅವರು ಈ ಡೇಟಾವನ್ನು ಒಂದೇ ದಿನದಲ್ಲಿ ಬಳಸಬಹುದು ಅಥವಾ 90 ದಿನಗಳವರೆಗೆ ಬಳಸಬಹುದು. 5GB ಡೇಟಾ ಕೋಟಾ ಮುಗಿದ ನಂತರವೂ ಬಳಕೆದಾರರು 64Kbps ವೇಗದಲ್ಲಿ ಇಂಟರ್ನೆಟ್ ಬಳಸುವುದನ್ನು ಮುಂದುವರಿಸಬಹುದು. ಈ ಯೋಜನೆಯಲ್ಲಿ, ಗ್ರಾಹಕರು 90 ದಿನಗಳವರೆಗೆ ಜಿಯೋ ಹಾಟ್‌ಸ್ಟಾರ್ (ಮೊಬೈಲ್/ಟಿವಿ) ಚಂದಾದಾರಿಕೆಯನ್ನು ಪಡೆಯುತ್ತಾರೆ. ಇದು ಡೇಟಾ ಪ್ಯಾಕ್ ಮತ್ತು ನೀವು ಈಗಾಗಲೇ ಸಕ್ರಿಯ ಯೋಜನೆಯನ್ನು ಹೊಂದಿದ್ದರೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

IPL Live: 100 ರೂಪಾಯಿಗೆ 5GB ಡೇಟಾ ಜೊತೆ 90 ದಿನ JioHotstar ಉಚಿತ; ಐಪಿಎಲ್ ಕ್ರಿಕೆಟ್‌ಗೆ ಬೆಸ್ಟ್ ಆಫರ್

Sunday, March 23, 2025

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಜಯಭೇರಿ ಬಾರಿಸುತ್ತಿದ್ದಂತೆ ನವದೆಹಲಿಯ ಇಂಡಿಯಾ ಗೇಟ್ ಬಳಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ICC Champions Trophy 2025: ಟೀಂ ಇಂಡಿಯಾ ಗೆಲುವು; ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ

Monday, March 10, 2025

ಆಡಿರುವ 52 ಟೆಸ್ಟ್​​​ಗಳಲ್ಲಿ​ ಡಾನ್ ಬ್ರಾಡ್ಮನ್ ಹೊಂದಿರುವ ಬ್ಯಾಟಿಂಗ್ ಸರಾಸರಿ ಬರೋಬ್ಬರಿ 99.94. ಈ ಸರಾಸರಿಯ ಸಮೀಪಕ್ಕೆ ಬರಲು ಯಾರಿಗೂ ಸಾಧ್ಯವಾಗಿಲ್ಲ.

ನಿಜ, ದಾಖಲೆಗಳಿರುವುದೇ ಮುರಿಯಲು; ಆದರೆ ಡಾನ್​ ಬ್ರಾಡ್ಮನ್​ರ 5 ದಾಖಲೆಗಳು ಬ್ರೇಕ್ ಮಾಡುವುದು ಅಸಾಧ್ಯ

Thursday, February 27, 2025

ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೂರು ಸ್ವರೂಪಗಳಲ್ಲಿ (ಟೆಸ್ಟ್, ಏಕದಿನ, ಟಿ20ಐ) ತಮ್ಮ ತಂಡಗಳನ್ನು ಮುನ್ನಡೆಸಿ ಯಶಸ್ವಿಯಾಗಿರುವ ಅಗ್ರ-10 ಕ್ಯಾಪ್ಟನ್​​ಗಳ ಪಟ್ಟಿಯನ್ನು ಮುಂದೆ ನೋಡೋಣ. ಈ ಲಿಸ್ಟ್​ನಲ್ಲಿ ಭಾರತದ ಇಬ್ಬರು ಸ್ಥಾನ ಪಡೆದಿರುವುದು ವಿಶೇಷ.

ವಿಶ್ವ ಕ್ರಿಕೆಟ್​ನಲ್ಲಿ ಅತ್ಯಂತ ಯಶಸ್ವಿ ನಾಯಕರಿವರು; ಅಗ್ರ-10ರ ಪಟ್ಟಿಯಲ್ಲಿ ಭಾರತೀಯರಿಬ್ಬರಿಗೆ ಸ್ಥಾನ!

Sunday, February 16, 2025

ಈ ಪಂದ್ಯದಲ್ಲಿ ಐದು ಕ್ಯಾಚ್​ಗಳನ್ನು ಪಡೆದ ಸ್ಟೀವ್​ ಸ್ಮಿತ್ ಅವರು ತಮ್ಮ ದೇಶದ ರಿಕಿ ಪಾಂಟಿಂಗ್ ಜೊತೆಗೆ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್, ದಾಖಲೆಯನ್ನೂ ಸರಿಗಟ್ಟಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಕ್ಯಾಚ್​​ಗಳಲ್ಲೇ ವಿಶ್ವದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್; ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರಿವರು!

Sunday, February 9, 2025

ಇದರೊಂದಿಗೆ 14 ವರ್ಷಗಳ ನಂತರ ಲಂಕಾ ನಾಡಿನಲ್ಲಿ ಆಸ್ಟ್ರೇಲಿಯಾ ಸರಣಿಗೆ ಗೆದ್ದಿದೆ. 156 ರನ್ ಸಿಡಿಸಿದ ಅಲೆಕ್ಸ್ ಕ್ಯಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸತತ ಟೆಸ್ಟ್ ಪಂದ್ಯಗಳಲ್ಲಿ ಶತಕ ಸಿಡಿಸಿದ ಸ್ಟೀವ್ ಸ್ಮಿತ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜೂನ್ 11 ರಿಂದ ಲಾರ್ಡ್ಸ್​ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್​ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ.

ಶ್ರೀಲಂಕಾ ವಿರುದ್ಧ ಗೆದ್ದು ಡಬ್ಲ್ಯುಟಿಸಿ ಆವೃತ್ತಿಗೆ ಅಂತ್ಯ ಹಾಡಿದ ಆಸ್ಟ್ರೇಲಿಯಾ; ಅಂತಿಮ ಅಂಕ ಪಟ್ಟಿ ಇಲ್ಲಿದೆ

Sunday, February 9, 2025

2024ರ ಪುರುಷರ ಟಿ20 ವಿಶ್ವಕಪ್‌ನಲ್ಲಿಯೂ ದಕ್ಷಿಣ ಆಫ್ರಿಕಾ ಫೈನಲ್ ತಲುಪಿತ್ತು. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. (ಗೆಟ್ಟಿ ಫೋಟೋ.)

2 ವರ್ಷಗಳಲ್ಲಿ 4 ಐಸಿಸಿ ಈವೆಂಟ್ ಫೈನಲ್‌ಗಳಲ್ಲಿ ಸೋತ ದಕ್ಷಿಣ ಆಫ್ರಿಕಾ; ಐದನೇಯದ್ದಾದರೂ ಗೆಲ್ಲುತ್ತಾರಾ ಹರಿಣಗಳು

Monday, February 3, 2025

ರವಿಚಂದ್ರನ್ ಅಶ್ವಿನ್ ಅವರಿಗೆ ಬಿಸಿಸಿಐ ವಿಶೇಷ ಪ್ರಶಸ್ತಿ ನೀಡಲಿದೆ. ಇದೇ ಜಸ್ಪ್ರೀತ್ ಬುಮ್ರಾ ಮತ್ತು ಸ್ಮೃತಿ ಮಂಧಾನ ಅವರಿಗೆ ಪ್ರಶಸ್ತಿಗಳು ದೊರೆಯಲಿವೆ. ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಿದೆ.

BCCI Awards: ಸಚಿನ್ ತೆಂಡೂಲ್ಕರ್‌ಗೆ ಜೀವಮಾನ ಸಾಧನೆ, ಅಶ್ವಿನ್‌ಗೆ ವಿಶೇಷ ಪ್ರಶಸ್ತಿ; ಬುಮ್ರಾ-ಮಂಧಾನಗೂ ಗೌರವ

Friday, January 31, 2025

ವೇಗಿ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಪರ 700 ವಿಕೆಟ್​ಗಳ ಕ್ಲಬ್​ ಸೇರಿದ್ದಾರೆ. ಸ್ಟಾರ್ಕ್ 287 ಪಂದ್ಯಗಳಲ್ಲಿ 700 ವಿಕೆಟ್‌ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 700 ವಿಕೆಟ್​ ಕಬಳಿಸಿ ದಿಗ್ಗಜರ ಪಟ್ಟಿಗೆ ಮಿಚೆಲ್ ಸ್ಟಾರ್ಕ್; ಅಗ್ರಸ್ಥಾನ ಯಾರದ್ದು?

Friday, January 31, 2025

ರಣಜಿಯಲ್ಲಿ ಈಡನ್ ಗಾರ್ಡರ್ನ್ಸ್​ನಲ್ಲಿ ಇಂದು (ಜನವರಿ 30) ನಡೆಯುತ್ತಿರುವ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್ ಪರ ಕಣಕ್ಕಿಳಿದಿರುವ ವೃದ್ಧಿಮಾನ್ ಸಾಹ ಈ ಪಂದ್ಯದ ನಂತರ ವೃತ್ತಿಪರ ಕ್ರಿಕೆಟ್​ನಿಂದ ನಿವೃತ್ತರಾಗಲಿದ್ದಾರೆ. ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡದಿಂದ ಹೊರಗುಳಿದಿದ್ದ ಈ ಆಟಗಾರನಿಗೆ ವಿದಾಯದ ಪಂದ್ಯ; ಹೀಗಿದೆ ಆತನ ಅಂಕಿ-ಅಂಶ

Thursday, January 30, 2025

ವಿಶೇಷವೆಂದರೆ, ಎಲ್ಲಾ ಮೂರು ಸ್ವರೂಪಗಳಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮಿತ್ ಈಗ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 35 ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 12 ಶತಕಗಳನ್ನು ಬಾರಿಸಿದ್ದಾರೆ. ಸ್ಮಿತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿಲ್ಲ. ಸ್ಮಿತ್ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 47 ಶತಕಗಳನ್ನು ಬಾರಿಸಿದ್ದಾರೆ. ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 46 ಶತಕಗಳನ್ನು ಬಾರಿಸಿದ್ದಾರೆ. ಫೋಟೋ: ಎಪಿ.

35ನೇ ಟೆಸ್ಟ್‌ ಶತಕದೊಂದಿಗೆ ಸುನಿಲ್ ಗವಾಸ್ಕರ್-ಕೇನ್‌ ವಿಲಿಯಮ್ಸನ್‌ ದಾಖಲೆ ಮುರಿದ ಸ್ಟೀವ್‌ ಸ್ಮಿತ್

Wednesday, January 29, 2025

ಸ್ಟೀವ್ ಸ್ಮಿತ್​ಗೂ ಮುನ್ನ ಆಸೀಸ್​ ಪರ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದವರ ಪೈಕಿ ಪಾಂಟಿಂಗ್ 13378 ರನ್ (41 ಶತಕ, 62 ಅರ್ಧಶತಕ), ಅಲನ್ ಬಾರ್ಡರ್ 11174 ರನ್ (27 ಶತಕ, 63 ಅರ್ಧಶತಕ). ಸ್ಟೀವ್ ವಾ 10927 ರನ್ (32 ಶತಕ, 50 ಅರ್ಧಶತಕ) ಸಿಡಿಸಿದ್ದಾರೆ.

1 ರನ್ ಗಳಿಸಿ ವಿಶ್ವದಾಖಲೆ ಬರೆದ ಸ್ಟೀವ್ ಸ್ಮಿತ್; ಈ ಮೈಲಿಗಲ್ಲು ತಲುಪಿದ ಆಸೀಸ್​ನ 4ನೇ, ವಿಶ್ವದ 15ನೇ ಬ್ಯಾಟರ್

Wednesday, January 29, 2025

ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ 2024ರ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕಳೆದ ವರ್ಷ ಅವರು ಅತಿ ಹೆಚ್ಚು, ಅಂದರೆ 71 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಬುಮ್ರಾ ಈ ಪ್ರಶಸ್ತಿಯನ್ನು ಗೆದ್ದ ಆರನೇ ಭಾರತೀಯ ಆಟಗಾರ. 6 ವರ್ಷಗಳ ಬಳಿಕ ಭಾರತಕ್ಕೆ ಈ ಪ್ರಶಸ್ತಿ ಬಂದಿದ್ದು, ಬುಮ್ರಾ ಬರ ನೀಗಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ; 6 ವರ್ಷಗಳ ಬರ ನೀಗಿಸಿದ ವೇಗಿ, ಈವರೆಗೆ ಐಸಿಸಿ ಗೌರವ ಪಡೆದ ಭಾರತೀಯರಿವರು

Monday, January 27, 2025

ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ಕಮಿಂದು ಮೆಂಡಿಸ್ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಅವರು ಶ್ರೀಲಂಕಾ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ವಿಶೇಷವಾಗಿ ಟೆಸ್ಟ್‌ನಲ್ಲಿ ಗಮನ ಸೆಳೆದರು. ಹೀಗಾಗಿ ಐಸಿಸಿ ಎಮರ್ಜಿಂಗ್‌ ಪ್ಲೇಯರ್‌ ಪ್ರಶಸ್ತಿ ಲಭಿಸಿದೆ. (ಚಿತ್ರ: X)

ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಶ್ರೀಲಂಕಾದ ಯುವ ಕ್ರಿಕೆಟಿಗನಿಗೆ ಐಸಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿ

Monday, January 27, 2025

ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಎರಡನೇ ಸ್ಥಾನದಲ್ಲಿದ್ದಾರೆ. ಪಂತ್ ಇದುವರೆಗೆ ಡಬ್ಲ್ಯುಟಿಸಿಯಲ್ಲಿ 34 ಪಂದ್ಯಗಳಲ್ಲಿ 56 ಸಿಕ್ಸರ್ ಬಾರಿಸಿದ್ದಾರೆ.

ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ಆಟಗಾರರು; ಭಾರತದವರೇ ಮೂವರು

Wednesday, January 22, 2025

ಕಳಪೆ ಫಾರ್ಮ್‌ನಿಂದಾಗಿ ಸಿಡ್ನಿಯಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಿಂದ ಹೊರಗುಳಿದರು. ಸೆಪ್ಟೆಂಬರ್‌ ತಿಂಗಳಿನಿಂದ ಅವರು ಆಡಿದ ಎಂಟು ಪಂದ್ಯಗಳಲ್ಲಿ 10.93ರ ಸರಾಸರಿಯಲ್ಲಿ ಕೇವಲ 164 ರನ್ ಮಾತ್ರ ಗಳಿಸಿದ್ದಾರೆ.

ಮುಂಬೈ ರಣಜಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದ ರೋಹಿತ್ ಶರ್ಮಾ; ಅಜಿಂಕ್ಯ ರಹಾನೆ ಜೊತೆ ಬ್ಯಾಟಿಂಗ್

Tuesday, January 14, 2025

ದೈನಿಕ್ ಜಾಗರಣ್‌ ವರದಿ ಪ್ರಕಾರ, ಗೌತಮ್ ಗಂಭೀರ್ ಒಬ್ಬರನ್ನು ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮತ್ತೊಬ್ಬರನ್ನು ರೋಹಿತ್ ಉತ್ತರಾಧಿಕಾರಿಯಾಗಿ ಗುರುತಿಸಿದೆ.

ಭಾರತ ತಂಡದ ಭವಿಷ್ಯದ ಕ್ಯಾಪ್ಟನ್ ಯಾರು? ತಲಾ ಒಬ್ಬೊಬ್ಬರ ಹೆಸರು ಸೂಚಿಸಿದ ಅಜಿತ್ ಅಗರ್ಕರ್, ಗೌತಮ್ ಗಂಭೀರ್

Monday, January 13, 2025

ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್‌ ಕಂಡ ಮಹಾಗೋಡೆ. ಟೆಸ್ಟ್‌ನಲ್ಲಿ ಅವರ ಸುದೀರ್ಘ ಇನ್ನಿಂಗ್ಸ್‌ಗಳು ವಿಶೇಷ. ಭಾರತೀಯ ಕ್ರಿಕೆಟ್‌ನಲ್ಲಿ ಕೆಲವೊಂದು ಸೋಲುಗಳಿಂದಾಗಿ ಹಲವು ಬಾರಿ ಸಾಕಷ್ಟು ಟೀಕೆಗಳನ್ನು ಕೂಡಾ ಎದುರಿಸಿದ್ದಾರೆ. ಆಟಗಾರನಾಗಿ ಮಾತ್ರವಲ್ಲದೆ ಭಾರತೀಯ ತಂಡದ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಐತಿಹಾಸಿಕ ವಿಜಯದ ಭಾಗವಾಗಿದ್ದಾರೆ

ರಾಹುಲ್ ದ್ರಾವಿಡ್‌ ಹುಟ್ಟುಹಬ್ಬ: ಐಸಿಸಿ ಟ್ರೋಫಿ ಬರ ನೀಗಿಸಿದ ಟೀಮ್‌ ಇಂಡಿಯಾ ಯಶಸ್ವಿ ಕೋಚ್ ದಾಖಲೆಗಳ ಚಿತ್ರಣ

Saturday, January 11, 2025