logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಧನು ರಾಶಿಯವರಿಗೆ ಇವತ್ತು ಧನಲಾಭ, ನೆಮ್ಮದಿ ಇರಲಿದೆ; ನಿಮ್ಮ ಭವಿಷ್ಯ ತಿಳಿಯಿರಿ

Horoscope Today: ಧನು ರಾಶಿಯವರಿಗೆ ಇವತ್ತು ಧನಲಾಭ, ನೆಮ್ಮದಿ ಇರಲಿದೆ; ನಿಮ್ಮ ಭವಿಷ್ಯ ತಿಳಿಯಿರಿ

HT Kannada Desk HT Kannada

Mar 13, 2023 06:09 AM IST

ಇಂದಿನ ರಾಶಿ ಭವಿಷ್ಯ ತಿಳಿಯಿರಿ

  • Horoscope Today for March 13, 2023: ಮಾ.13 ರಂದು ಅಂದರೆ ಇಂದು ಮೇಷ, ಸಿಂಹ, ಕನ್ಯಾ, ತುಲಾ ಮತ್ತು ಇತರ ರಾಶಿಚಕ್ರಗಳ ದಿನಭವಿಷ್ಯ ವಿವರ ಇಲ್ಲಿದೆ. ಆಯಾ ರಾಶಿಚಕ್ರಗಳು ವ್ಯಕ್ತಿಗಳ ವ್ಯಕ್ತಿತ್ವವನ್ನು ಬಿಂಬಿಸುವಂಥದ್ದು. ದಿನಚರಿ ಆರಂಭಿಸುವ ಮೊದಲು ನಿತ್ಯಭವಿಷ್ಯ (Astrological prediction for March 13 2023) ಗಮನದಲ್ಲಿರಲಿ.

ಇಂದಿನ ರಾಶಿ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಭವಿಷ್ಯ ತಿಳಿಯಿರಿ

ಸೂರ್ಯೋದಯ - ಬೆಳಗ್ಗೆ 6:29 (ಬೆಂಗಳೂರು ಸಮಯ)

ತಾಜಾ ಫೋಟೊಗಳು

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

May 06, 2024 10:00 AM

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

May 06, 2024 09:00 AM

Venus Transit: ವೃಷಭ ರಾಶಿಯಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಭಾರಿ ಲಾಭ, ಸಂಪತ್ತು ದುಪ್ಪಟ್ಟಿನ ಭವಿಷ್ಯ

May 04, 2024 07:00 AM

Saturn Retrograde: ಶನಿ ಹಿಮ್ಮುಖ ಚಲನೆ; ಮುಂದಿನ 5 ತಿಂಗಳು ಈ 3 ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ

May 03, 2024 06:43 PM

Gajakesari Yoga: ಗುರು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ; ಮೇ ತಿಂಗಳಲ್ಲಿ ಸಂತೋಷದ ದಿನಗಳನ್ನು ಕಾಣುವ ರಾಶಿಗಳಿವು

May 01, 2024 12:22 PM

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಸೂರ್ಯಾಸ್ತ - ಸಂಜೆ 6:30

ತಿಥಿ - ಷಷ್ಠಿ (ರಾತ್ರಿ 9:27ರ ತನಕ)

ನಕ್ಷತ್ರ - ವಿಶಾಖ (ಬೆಳಗ್ಗೆ 8:21ರ ವರೆಗೆ)

ಮೇಷ ರಾಶಿ (ARIES) (ಮಾರ್ಚ್‌ 21- ಏಪ್ರಿಲ್ 20)

ಮೇಷ ರಾಶಿಯವರಿಗೆ ಇಂದು ಮಾಧ್ಯಮದಿಂದ ಕೂಡಿದ ಫಲಿತಾಂಶಗಳಿವೆ. ಹೆಚ್ಚಿನ ಒತ್ತಡದಲ್ಲಿ ಇರುತ್ತಾರೆ. ಕೆಲಸ ಮತ್ತು ಮಾತಿನ ವಿಷಯಗಳಲ್ಲಿ ಕಿರಿಕಿರಿ ಇರುತ್ತದೆ. ಜಗಳದಿಂದ ದೂರವಿರಬೇಕು. ಆತುರದ ನಿರ್ಧಾರಗಳು ತೊಂದರೆಗೆ ಕಾರಣವಾಗುತ್ತವೆ. ಚಿಂತನಶೀಲ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ತರುತ್ತವೆ. ಮಾಡುವ ಎಲ್ಲಾ ಕೆಲಸಗಳು ಅನುಕೂಲಕರವಾಗಿರುತ್ತದೆ. ಉದ್ಯೋಗಿಗಳಿಗೆ ಸಕಾರಾತ್ಮಕ ಫಲಿತಾಂಶಗಳಿದ್ದರೂ, ಕೆಲಸದ ಒತ್ತಡ ಹೆಚ್ಚಾಗುತ್ತದೆ. ಉದ್ಯಮಿಗಳಿಗೆ ಅನುಕೂಲಕರ ಫಲಿತಾಂಶಗಳಿವೆ. ಮಹಿಳೆಯರು ಕೌಟುಂಬಿಕ ವಿಚಾರದಲ್ಲಿ ಕಾಳಜಿ ವಹಿಸಬೇಕು.

ವೃಷಭ ರಾಶಿ (TAURUS) (ಏಪ್ರಿಲ್‌ 21- ಮೇ 20)

ವೃಷಭ ರಾಶಿಯವರು ಇವತ್ತು ಸಾಧಾರಣ ಫಲಿತಾಂಶಗಳನ್ನು ಹೊಂದಿದ್ದಾರೆ. ಆರೋಗ್ಯ ವಿಷಯಗಳಲ್ಲಿ ಕಾಳಜಿ ವಹಿಸಬೇಕು. ಆತುರದ ನಿರ್ಧಾರಗಳಿಂದ ದೂರವಿರಬೇಕು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳ ಸೂಚನೆ ಇದೆ. ವಿವಾದಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಒತ್ತಡ ಮತ್ತು ನೋವುಗಳು ಅಧಿಕವಾಗಿರುತ್ತವೆ. ಆರ್ಥಿಕ ಲಾಭವಾಗುತ್ತದೆ. ಉದ್ಯೋಗಿಗಳಿಗೆ ಲಾಭ ಇದೆ. ಉದ್ಯಮಿಗಳಿಗೆ ಇಂದು ಅನುಕೂಲಕರವಾಗಿದೆ. ಮಹಿಳೆಯರಿಗೆ ಮಾನಸಿಕ ಯಾತನೆ ಮತ್ತು ಆರೋಗ್ಯ ಸಮಸ್ಯೆಗಳು ಅಧಿಕವಾಗಿರುತ್ತದೆ.

ಮಿಥುನ ರಾಶಿ (ಮೇ 21-ಜೂನ್ 21)

ಮಿಥುನ ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಫಲಿತಾಂಶಗಳಿವೆ. ಕುಟುಂಬದಲ್ಲಿ ವಿವಾದಗಳು ಮತ್ತು ಅನಾರೋಗ್ಯವು ತೊಂದರೆಗೆ ಸಿಲುಕಿಸುತ್ತದೆ. ವೆಚ್ಚವನ್ನು ನಿಯಂತ್ರಿಸಲು ಸಲಹೆ ನೀಡಲಾಗಿದೆ. ವೃತ್ತಿಪರ ಉದ್ಯೋಗಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಾಕಷ್ಟು ಮಾನಸಿಕ ಚಿಂತೆಗಳು ಮತ್ತು ನೋವುಗಳು ಉಂಟಾಗುತ್ತವೆ. ಉದ್ಯೋಗಿಗಳಿಗೆ ಸರಾಸರಿ ಫಲಿತಾಂಶಗಳು ಮತ್ತು ಉದ್ಯಮಿಗಳಿಗೆ ಅನುಕೂಲಕರ ಫಲಿತಾಂಶಗಳು ಇವೆ. ಸಮಸ್ಯೆಗಳು ಮತ್ತು ಒತ್ತಡಗಳನ್ನು ಕೌಶಲ್ಯದಿಂದ ಜಯಿಸುತ್ತೀರಿ.

ಕರ್ಕಾಟಕ ರಾಶಿ (ಜೂನ್ 22-ಜುಲೈ 22)

ಕರ್ಕಾಟಕ ರಾಶಿಯವರಿಗೆ ಇಂದು ಕೆಟ್ಟ ಫಲಿತಾಂಶಗಳು ಹೆಚ್ಚು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಕೌಟುಂಬಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೊಸ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸುತ್ತೀರಿ. ಕೌಟುಂಬಿಕ ವಿಷಯಗಳು, ಕೋರ್ಟ್ ವ್ಯವಹಾರಗಳು ಮತ್ತು ಆರೋಗ್ಯ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಉದ್ಯೋಗಿಗಳಿಗೆ ಉತ್ತಮ ಫಲಿತಾಂಶಗಳಿವೆ. ಮಹಿಳೆಯರು ಆರೋಗ್ಯ ವಿಚಾರಗಳಲ್ಲಿ ಕಾಳಜಿ ವಹಿಸುವಂತೆ ಸಲಹೆ ನೀಡಲಾಗಿದೆ.

ಸಿಂಹ ರಾಶಿ (ಜುಲೈ 23-ಆಗಸ್ಟ್ 23)

ಸಿಂಹ ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಆರೋಗ್ಯ ಮತ್ತು ಕೌಟುಂಬಿಕ ವಿಷಯಗಳಲ್ಲಿ ಜಾಗ್ರತೆ ವಹಿಸಬೇಕು. ಕೌಟುಂಬಿಕ ವ್ಯವಹಾರಗಳನ್ನು ನಿಭಾಯಿಸುವುದು ಒಳ್ಳೆಯದು. ಇಂದಿನ ಉದ್ಯೋಗ ವ್ಯವಹಾರಗಳು ಹೆಚ್ಚು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ವಿದ್ಯಾರ್ಥಿಗಳಿಗೆ ಶುಭ ವಾರ. ಮಹಿಳೆಯರಿಗೆ ಅನುಕೂಲಕರವಾಗಿದೆ.

ಕನ್ಯಾರಾಶಿ ರಾಶಿ (ಆಗಸ್ಟ್ 24-ಸೆಪ್ಟೆಂಬರ್ 23)

ಕನ್ಯಾ ರಾಶಿಯವರಿಗೆ ಇಂದು ಅನುಕೂಲಕರವಾಗಿದೆ. ಮಾಡುವ ಪ್ರತಿಯೊಂದು ಕೆಲಸವೂ ಅನುಕೂಲಕರವಾಗಿರುತ್ತದೆ. ಆರ್ಥಿಕ ಲಾಭ ಮತ್ತು ಕುಟುಂಬ ಸೌಕರ್ಯ ಇರುತ್ತದೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗಲಿದೆ. ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸುತ್ತೀರಿ. ನಿಮ್ಮ ಎಲ್ಲಾ ಯೋಜಿತ ಕೆಲಸಗಳನ್ನು ಯೋಜಿಸಿದಂತೆ ಪೂರ್ಣಗೊಳಿಸುತ್ತೀರಿ. ಹಣದ ವಿಷಯಗಳು ಅನುಕೂಲಕರವಾಗಿವೆ. ಈ ವಾರ ಒತ್ತಡ ಕಡಿಮೆಯಾಗಲಿದೆ. ಪ್ರಯಾಣ ಮತ್ತು ದರ್ಶನಗಳು ಅನುಕೂಲಕರವಾಗಿವೆ. ಆರೋಗ್ಯ ಮತ್ತು ಕೌಟುಂಬಿಕ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.

ತುಲಾ ರಾಶಿ (ಸೆಪ್ಟೆಂಬರ್ 24-ಅಕ್ಟೋಬರ್ 23)

ತುಲಾ ರಾಶಿಯವರು ಇಂದು ಮಧ್ಯಮದಿಂದ ಕೂಡಿದ ಅನುಕೂಲಕರ ಫಲಿತಾಂಶಗಳನ್ನು ಹೊಂದಿದ್ದಾರೆ. ಶತ್ರುಗಳಿಂದ ಸಮಸ್ಯೆ ಎದುರಿಸಲಿದ್ದೀರಿ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಯೋಜಿತ ಎಲ್ಲಾ ಕಾರ್ಯಗಳನ್ನು ನೀವು ಅಂದುಕೊಂಡಂತೆ ಪೂರ್ಣಗೊಳಿಸುತ್ತೀರಿ. ಕಿರಿಕಿರಿ ಮತ್ತು ಒತ್ತಡವನ್ನು ಉಂಟಾಗಲಿದೆ. ವ್ಯಾಪಾರಿಗಳು ಸಾಧಾರಣ ಫಲಿತಾಂಶಗಳನ್ನು ಪಡೆಯುತ್ತೀರಿ. ಮಹಿಳೆಯರಿಗೆ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ವೃಶ್ಚಿಕ ರಾಶಿ (ಅಕ್ಟೋಬರ್ 24-ನವೆಂಬರ್ 22)

ವೃಶ್ಚಿಕ ರಾಶಿಯವರಿಗೆ ಇಂದು ಮಧ್ಯಮದಿಂದ ಕೂಡಿದ ಫಲಿತಾಂಶಗಳಿವೆ. ಕೌಟುಂಬಿಕ ಸಮಸ್ಯೆಗಳು ಮತ್ತು ಕೆಲಸದ ಒತ್ತಡಗಳು ಅಧಿಕ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಿವಾದಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಆರ್ಥಿಕ ಲಾಭ ಇದೆ. ಪ್ರಮುಖ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗಿಗಳು ಕೆಲಸದಲ್ಲಿ ಒತ್ತಡದಲ್ಲಿದ್ದರೂ, ಅಂದುಕೊಂಡಂತೆ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ವ್ಯಾಪಾರಿಗಳಿಗೆ ಸಾಧಾರಣ ಫಲಿತಾಂಶವಿದೆ.

ಧನು ರಾಶಿ (ನವೆಂಬರ್ 23-ಡಿಸೆಂಬರ್ 21)

ಧನು ರಾಶಿಯವರಿಗೆ ಇಂದು ಅನುಕೂಲಕರವಾಗಿದೆ. ಪ್ರಯಾಣಕ್ಕೆ ಸೂಕ್ತವಾಗಿದೆ. ವ್ಯಾಪಾರಸ್ಥರಿಗೆ ಲಾಭ ಮತ್ತು ಉದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಅನುಕೂಲಕರ ವಾರ. ವ್ಯಾಪಾರಿಗಳಿಗೆ ಮಧ್ಯಮದಿಂದ ಕೂಡಿದ ಸಮಯ. ಈ ವಾರ ಧನು ರಾಶಿಯವರಿಗೆ, ಧನಲಾಭವು ನೆಮ್ಮದಿ ಇರಲಿದೆ.

ಮಕರ ರಾಶಿ (ಡಿಸೆಂಬರ್ 22-ಜನವರಿ 21)

ಮಕರ ರಾಶಿಯವರಿಗೆ ಇಂದು ಅನುಕೂಲಕರವಾಗಿಲ್ಲ. ಆರೋಗ್ಯ ಸಮಸ್ಯೆಗಳು ಅಧಿಕವಾಗಿದ್ದು ಮಾನಸಿಕ ಒತ್ತಡ ಅಧಿಕವಾಗಿರುತ್ತದೆ. ಖರ್ಚುಗಳು ಹೆಚ್ಚಾಗಿರುತ್ತದೆ. ಜಗಳಗಳಿಂದ ದೂರವಿರಲು ಸಲಹೆ ನೀಡಲಾಗಿದೆ. ಖರ್ಚನ್ನು ನಿಯಂತ್ರಿಸಬೇಕು. ಆರೋಗ್ಯದ ವಿಷಯಗಳ ಬಗ್ಗೆ ಕಾಳಜಿ ವಹಿಸಿ. ರಾಜಕೀಯ ಒತ್ತಡ ಹೆಚ್ಚಿದೆ. ಕೆಲವು ಕಿರಿಕಿರಿಗಳನ್ನು ಉಂಟುಮಾಡುತ್ತದೆ. ಉದ್ಯಮಿಗಳಿಗೆ ಕೆಟ್ಟ ಸಮಯ. ಶತ್ರುಗಳನ್ನು ಅಕ್ಕಪಕ್ಕದಲ್ಲಿ ನಿಭಾಯಿಸುವುದು ಉತ್ತಮ.

ಕುಂಭ ರಾಶಿ (ಜನವರಿ 22-ಫೆಬ್ರವರಿ 19)

ಕುಂಭ ರಾಶಿಯವರಿಗೆ ಇಂದು ಕೆಟ್ಟ ಫಲಿತಾಂಶಗಳು ಹೆಚ್ಚು.ಆರ್ಥಿಕ ಸಮಸ್ಯೆಗಳು, ಮಾನಸಿಕ ಒತ್ತಡಗಳು ಹೆಚ್ಚಾಗುತ್ತವೆ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಉದ್ಯೋಗಿಗಳಿಗೆ ಕೆಲಸದಲ್ಲಿ ಹಲವು ಸಮಸ್ಯೆಗಳಿವೆ. ಉದ್ಯಮಿಗಳು ಸಾಲವನ್ನು ಪಡೆಯಲಿದ್ದೀರಿ. ಕುಟುಂಬ ವ್ಯವಹಾರಗಳಲ್ಲಿ ಸಾಧಾರಣ ಫಲಿತಾಂಶಗಳು ಇವೆ. ಆರ್ಥಿಕ ಸಮಸ್ಯೆಗಳಿದ್ದರೂ ಹೇಗೋ ಮುಂದೆ ಸಾಗುತ್ತೀರಿ. ವಿದ್ಯಾರ್ಥಿಗಳು ಈ ವಾರ ಸರಾಸರಿ ಫಲಿತಾಂಶಗಳನ್ನು ಹೊಂದಿದ್ದಾರೆ.

ಮೀನ ರಾಶಿ (ಫೆಬ್ರವರಿ 20-ಮಾರ್ಚ್ 20)

ಮೀನ ರಾಶಿಯವರಿಗೆ ಇಂದು ಅನುಕೂಲಕರವಾಗಿಲ್ಲ. ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡ ಅಧಿಕವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಮೀನ ರಾಶಿಯ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಸಾಧಾರಣ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲಸದಲ್ಲಿ ರಾಜಕೀಯ ಒತ್ತಡಗಳು ಹೆಚ್ಚಾಗುತ್ತವೆ. ಆರೋಗ್ಯ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು. ಮಾನಸಿಕ ಒತ್ತಡವನ್ನು ತಪ್ಪಿಸಲು ಸಲಹೆ ನೀಡಲಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು