logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಗೌರವ, ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ; 20ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ

Numerology: ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಗೌರವ, ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ; 20ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ

Raghavendra M Y HT Kannada

May 04, 2024 07:10 AM IST

20ನೇ ತಾರೀಖು ಜನಿಸಿದವರ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತೆ ತಿಳಿಯಿರಿ.

    • Numerology: ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕದ ಆಧಾರದ ಮೇಲೆ ಭವಿಷ್ಯ ಹೇಳಲಾಗುತ್ತದೆ. ಒಂದೊಂದು ದಿನಾಂಕದಲ್ಲಿ ಹುಟ್ಟಿರುವವರು ಒಂದೊಂದು ರೀತಿಯ ಗುಣಗಳನ್ನು ಹೊಂದಿರುತ್ತಾರೆ. 20ನೇ ದಿನಾಂಕದಂದು ಜನಿಸಿದ ಜನರ ಗುಣ ಲಕ್ಷಣಗಳು ಹೇಗಿರುತ್ತವೆ ನೋಡೋಣ.
20ನೇ ತಾರೀಖು ಜನಿಸಿದವರ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತೆ ತಿಳಿಯಿರಿ.
20ನೇ ತಾರೀಖು ಜನಿಸಿದವರ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತೆ ತಿಳಿಯಿರಿ.

Numerology: ದಿನಾಂಕ 20 ರಂದು ಜನಿಸಿದವರು ಸಮಯಕ್ಕೆ ಗೌರವ ನೀಡಿ ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಸುಲಭವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವುದಿಲ್ಲ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವವರೆಗೂ ವಿಶ್ರಾಂತಿಯನ್ನು ಪಡೆಯುವುದಿಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ ಹಾಗೆಯೇ ತಪ್ಪು ದಾರಿ ಹಿಡಿದವರನ್ನು ಸರಿ ದಾರಿಗೆ ತರಬಲ್ಲರು. ಅನಾವಶ್ಯಕವಾಗಿ ಮಾತನಾಡದ ಇವರು ಬುದ್ದಿವಾದ ಹೇಳುವಲ್ಲಿ ನಿಸ್ಸೀಮರು. ಯಾವುದಾದರೂ ಹೊಸ ವಿಚಾರವನ್ನು ಕಲಿಯಲು ಇಷ್ಟಪಡುವರು. ಹಾಗೆಯೇ ತಮ್ಮಲ್ಲಿರುವ ವಿದ್ಯಾ ಬುದ್ಧಿಯನ್ನು ಬಯಸಿ ಬಂದವರಿಗೆ ತಿಳಿಸುವರು. ಸಾಮಾನ್ಯವಾಗಿ ಉನ್ನತ ಮಟ್ಟವನ್ನು ತಲುಪುತ್ತಾರೆ.

ತಾಜಾ ಫೋಟೊಗಳು

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಹಣಕಾಸಿನ ತೊಂದರೆ ಬರುವುದಿಲ್ಲ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಬಾಲ್ಯದಲ್ಲಿ ಸಾಮಾನ್ಯದಂತೆ ಕಂಡರು ಕ್ರಮೇಣವಾಗಿ ವಿಶೇಷವಾದಂತಹ ಬುದ್ಧಿಶಕ್ತಿಯನ್ನು ಕಲಿಯುತ್ತಾರೆ. ತಮ್ಮ ಜೀವನವನ್ನು ಯಾರ ಸಹಾಯವು ಇಲ್ಲದೆ ರೂಪಿಸಿಕೊಳ್ಳಬಲ್ಲರು. ಆತ್ಮೀಯರು ಕಷ್ಟದ ಪರಿಸ್ಥಿತಿಯಲ್ಲಿಇದ್ದಾಗ ತಾವಾಗಿ ಸಹಾಯವನ್ನು ನೀಡುತ್ತಾರೆ. ವಿದ್ಯಾಭ್ಯಾಸದಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಎಲ್ಲರನ್ನು ಆತ್ಮೀಯತೆಯಿಂದ ಕಾಣುವ ವಿಶೇಷ ಮನೋಭಾವ ಇವರಲ್ಲಿರುತ್ತದೆ. ಕಾರ್ಯಕ್ರಮಗಳನ್ನು ಆಯೋಜಿಸುವುದೆಂದರೆ ಇವರಿಗೆ ಬಲು ಪ್ರೀತಿ. ಒಂದೇ ಒಂದು ಋಣಾತ್ಮಕ ಗುಣವೆಂದರೆ ಅತಿಯಾಗಿ ನಿದ್ದೆ ಮಾಡುವುದು.

ಬಾಲ್ಯದಲ್ಲಿ ಸುಖ ಜೀವನ ನಡೆಸುವರು. ಆದರೆ ಕುಟುಂಬದಲ್ಲಿಯೇ ವಿವಾದ ಉಂಟಾಗಲು ಕಾರಣರಾಗುವರು. ಉನ್ನತ ಅಧಿಕಾರಿಯ ಉದ್ಯೋಗ ದೊರೆಯುತ್ತದೆ. ಇಲ್ಲವಾದರೆ ದೊಡ್ಡ ಬಂಡವಾಳದಿಂದ ವ್ಯಾಪಾರವನ್ನು ಮಾಡುವರು. ಅತಿಯಾದ ಆಸೆ ಇರುವುದಿಲ್ಲ, ಆದರೆ ದೊರೆಯುವ ಅವಕಾಶವನ್ನು ಸರಿಯಾದ ಹಾದಿಯಲ್ಲಿ ಬಳಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇವರು ಸಣ್ಣಗೆ ಅಥವಾ ಅತಿಯಾಗಿ ದಪ್ಪಗೆ ಇರುತ್ತಾರೆ. ಇವರಿಗೆ ತೀರ್ಥಯಾತ್ರೆ ಮಾಡುವುದೆಂದರೆ ಅತಿ ಪ್ರೀತಿ. ಕುಟುಂಬದ ಜನರೊಂದಿಗೆ ಪ್ರವಾಸವನ್ನು ಆಯೋಜಿಸುತ್ತಾರೆ. ಒಂಟಿಯಾದ ಜೀವನ ಇವರಿಗೆ ಇಷ್ಟವಾಗುವುದಿಲ್ಲ. ಆದರೆ ಎಲ್ಲರನ್ನೂ ಸ್ನೇಹಿತರಂತೆ ಒಪ್ಪಿಕೊಳ್ಳುವುದು ಇಲ್ಲ.

ತಂದೆ ತಾಯಿಯ ಅನುಮತಿಯಂತೆ ವಿವಾಹವಾಗುವುದೇ ಇವರ ಉದ್ದೇಶ

ಮೊದಲು ಇವರ ಮನಸ್ಸನ್ನು ಗೆಲ್ಲಬೇಕಾಗುತ್ತದೆ. ಸ್ನೇಹಿತರು ಮತ್ತು ಬಂಧು-ಬಳಗದವರಿಗಾಗಿ ಯಾವುದೇ ತ್ಯಾಗವನ್ನು ಮಾಡಲು ಸಿದ್ಧವಾಗುವರು. ತಂದೆ ತಾಯಿಯ ಮತ್ತು ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ಜೀವನ ಸಾಗಿಸುತ್ತಾರೆ. ತಂದೆ ತಾಯಿಯ ಅನುಮತಿಯಂತೆ ವಿವಾಹವಾಗುವುದು ಇವರ ಉದ್ದೇಶ. ಆದರೆ ಇಷ್ಟಪಟ್ಟವರನ್ನು ವಿವಾಹವಾಗುತ್ತಾರೆ. ಮಕ್ಕಳ ಬಗ್ಗೆ ವಿಶೇಷವಾದ ಅಕ್ಕರೆ ಇರುತ್ತದೆ. ಆದರೆ ಅತಿಯಾದ ಪ್ರೀತಿಯಿಂದ ಅವರು ತಪ್ಪು ಹಾದಿಯಲ್ಲಿ ನಡೆಯಲು ಆಸ್ಪದ ನೀಡುವುದಿಲ್ಲ. ಐಷಾರಾಮಿ ಜೀವನವನ್ನು ನಡೆಸಲು ಇಷ್ಟಪಡುವುದಿಲ್ಲ. ಅನಾವಶ್ಯಕವಾಗಿ ಖರ್ಚು ಮಾಡುವವರನ್ನು ಇಷ್ಟಪಡುವುದಿಲ್ಲ.

ದಿನಾಂಕ 20 ರಂದು ಹುಟ್ಟಿದವರು ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನಡೆಯದೆ ಹೋದಾಗ ಮನಸ್ಸಿನಲ್ಲಿ ಆತಂಕದ ಭಾವನೆ ಮೂಡುತ್ತದೆ. ಉದ್ಯೋಗದಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ದೂರ ಮಾಡುವಿರಿ. ಹಿರಿಯ ಅಧಿಕಾರಿಗಳ ಮೆಚ್ಚುಗೆ ಗಳಿಸುತ್ತಾರೆ. ವಂಶನುಗತವಾಗಿ ಬಂದ ವೃತ್ತಿಯಲ್ಲಿ ಆಸಕ್ತಿ ಮೂಡುವುದಿಲ್ಲ. ಆದರೆ ವಂಶದ ಹಿರಿಯರು ಮಾಡುತ್ತಿದ್ದ ವ್ಯಾಪಾರವನ್ನು ಮುಂದುವರಿಸುತ್ತಾರೆ. ಒಂದೇ ರೀತಿಯ ಕೆಲಸ ಕಾರ್ಯಗಳನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಎಲ್ಲಾ ರೀತಿಯ ಅನುಕೂಲತೆಗಳು ಇದ್ದರೂ ಉದ್ಯೋಗವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಹೊಸ ವ್ಯಾಪಾರವನ್ನು ಆರಂಭಿಸುವ ಬಗ್ಗೆ ಯೋಚನೆ ಮಾಡುತ್ತಾರೆ.

ಹಣವನ್ನು ಉಳಿಸುವ ಸಲುವಾಗಿ ಹೊಸ ಹಣಕಾಸಿನ ಯೋಜನೆಗಳನ್ನು ರೂಪಿಸುತ್ತಾರೆ. ಸೋದರರ ಮೇಲೆ ಗೌರವವಿರುತ್ತದೆ. ಆದರೆ ಸೋದರಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಹೆಣ್ಣು ಮಕ್ಕಳೆಂದರೆ ವಿಶೇಷ ಗೌರವ. ಆದ್ದರಿಂದ ಈ ದಿನಾಂಕದಂದು ಜನಿಸಿದ ಸ್ತ್ರೀಯರು ಮಹಿಳಾ ಸಂಘಗಳ ಸ್ಥಾಪನೆಗೆ ಕಾರಣರಾಗುತ್ತಾರೆ. ರಾಜಕೀಯದಲ್ಲಿ ಆಸಕ್ತಿ ಇರದೇ ಹೋದರು ಗಣ್ಯ ವ್ಯಕ್ತಿಗಳ ಸಹವಾಸ ದೊರೆಯುತ್ತದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಬೇಕು. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ನೀರಿನಿಂದ ಉಂಟಾಗುವ ರೋಗರುಜಿನಗಳು ಇವರನ್ನು ಬಹಳವಾಗಿ ಕಾಡುತ್ತವೆ. ಒಟ್ಟಾರೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ