logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ಕಲಿಯುವುದು ಕಡಿಮೆ ತಿಳಿಯುವುದು ಹೆಚ್ಚು, ಸಹಾಯ ಮಾಡುವ ಮನಸ್ಸು; 22ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

Numerology: ಕಲಿಯುವುದು ಕಡಿಮೆ ತಿಳಿಯುವುದು ಹೆಚ್ಚು, ಸಹಾಯ ಮಾಡುವ ಮನಸ್ಸು; 22ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

Rakshitha Sowmya HT Kannada

May 08, 2024 03:23 PM IST

22ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

  • Birth Date Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ವ್ಯಕ್ತಿಯ ಜಾತಕ ಬರೆಯಬೇಕಾದರೂ, ರಾಶಿಫಲ ನೋಡಬೇಕಾದರೂ ಜನ್ಮ ದಿನಾಂಕ ಪರಿಗಣಿಸುವುದು ಸಹಜ. ಇದರ ಆಧಾರದ ಮೇಲೆ ಆ ವ್ಯಕ್ತಿ ಗುಣಧರ್ಮವನ್ನೂ ಅಂದಾಜಿಸಲಾಗುತ್ತದೆ. ಇಲ್ಲಿ 22 ನೇ ತಾರೀಖಿನಂದು ಜನಿಸಿದವರ ಗುಣಧರ್ಮವನ್ನು ತಿಳಿಯೋಣ. (ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು)

22ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ
22ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ (PC: Canva)

ಸಮಾಜದ ಕಟ್ಟು ಪಾಡುಗಳಿಗೆ ಹೆದರುವ ಇವರು ಜೀವನದಲ್ಲಿ ತಪ್ಪು ಮಾಡುವುದೇ ಕಡಿಮೆ. ಒಂದು ವೇಳೆ ತಪ್ಪು ಮಾಡಿದರೆ ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ. ಮನದಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿರುತ್ತದೆ. ಭಯವನ್ನು ಬದಿಗೊತ್ತಿ ಕೆಲಸ ಕಾರ್ಯಗಳನ್ನು ಆರಂಭಿಸಿದರೆ ಇವರನ್ನು ಮೀರಿಸುವವರೇ ಇರುವುದಿಲ್ಲ. ಎಲ್ಲಾ ರೀತಿಯ ವಿದ್ಯೆಗಳಲ್ಲಿಯೂ ಆಸಕ್ತಿ ಇರುತ್ತದೆ. ಆದ್ದರಿಂದ ಕಲಿಯುವುದು ಕಡಿಮೆಯಾದರೂ ತಿಳಿಯುವುದೇ ಹೆಚ್ಚು.

ತಾಜಾ ಫೋಟೊಗಳು

ಮೇ 19 ರಂದು ವೃಷಭ ರಾಶಿಗೆ ಶುಕ್ರನ ಸಂಚಾರ; ಈ ರಾಶಿಯವರಿಗೆ ಶುಕ್ರಾದಿತ್ಯ ಯೋಗ ತರಲಿದೆ ಸಕಲ ಸುಖ ಸಮೃದ್ಧಿ

May 19, 2024 01:38 PM

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಯಾವ ವಿಚಾರದಲ್ಲಿಯೂ ಸೋಲನ್ನು ಒಪ್ಪದ ಇವರು ಕೆಲಸ ಕಾರ್ಯ ಮಾಡಲು ಹಿಂಜರಿಯುವುದಿಲ್ಲ. ವಿದ್ಯಾಭ್ಯಾಸದ ವೇಳೆ ಕಲಿಕೆಯಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಆದರೆ ದಿನೇ ದಿನೇ ಹೊಸ ರೀತಿಯ ವಿಚಾರಗಳನ್ನು ಕಲಿಯುವ ಹಂಬಲ ಹೆಚ್ಚುತ್ತದೆ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯದಲ್ಲಿ ತೊಂದರೆ ಅನುಭವಿಸಿದರೂ ಕ್ರಮೇಣವಾಗಿ ಉತ್ತಮ ಆರೋಗ್ಯ ಇವರದ್ದಾಗುತ್ತದೆ. ಹಿರಿಯ ವಯಸ್ಸಿನ ಎಲ್ಲರನ್ನೂ ಪ್ರೀತಿಸುವ ಮತ್ತು ಗೌರವಿಸುವ ದೊಡ್ಡ ಮನಸ್ಸು ಇವರಲ್ಲಿ ಇರುತ್ತದೆ. ದೇವರಲ್ಲಿ ಅತಿಯಾದ ನಂಬಿಕೆ ತೋರುತ್ತಾರೆ. ಆಸಕ್ತಿಯಿಂದ ಯಾರೇ ಕೇಳಿದರೂ ತಮ್ಮಲ್ಲಿರುವ ವಿದ್ಯೆಯನ್ನು ಧಾರೆ ಎರೆಯುತ್ತಾರೆ. ಇವರ ಜೀವನದಲ್ಲಿ ವಾಹನ ಅಪಘಾತ ಹಲವು ಬಾರಿ ನಡೆಯುತ್ತದೆ. ಆದರೆ ಇವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

ಮಕ್ಕಳಿಗಾಗಿ ಗ್ರಂಥಾಲಯ ಸ್ಥಾಪಿಸುವ ಯೋಚನೆ

ಒಂದು ವೇಳೆ ಇವರು ಶಿಕ್ಷಕರಾದರೆ ಸಮಾಜದಲ್ಲಿ ವಿಶಿಷ್ಟ ಗೌರವ ಪಡೆಯುತ್ತಾರೆ. ಬೇರೆಯವರಿಗೆ ಬುದ್ಧಿವಾದ ಹೇಳುವುದು ಮತ್ತು ವಿದ್ಯೆಯನ್ನು ಕಲಿಸುವುದು ಇಷ್ಟವಾದ ಕೆಲಸ. ಪುರಾತನ ಕಾಲದ ಪುಸ್ತಕಗಳನ್ನು ಓದಿ ಅದರ ಬಗ್ಗೆ ಎಲ್ಲರಿಗೂ ತಿಳಿಸುವುದು ಇವರ ಒಂದು ಹವ್ಯಾಸ. ಓದುವ ಮಕ್ಕಳಿಗಾಗಿ ಗ್ರಂಥಾಲಯವನ್ನೇ ಸ್ಥಾಪಿಸುವ ಯೋಚನೆ ಇವರಲ್ಲಿ ಇರುತ್ತದೆ. ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ ಎಲ್ಲರಿಗೂ ಸಹಾಯ ಮಾಡುತ್ತಾರೆ. ಹಳೆಯ ವಸ್ತುಗಳನ್ನು ಪುಸ್ತಕಗಳನ್ನು ಒಪ್ಪ ಮಾಡುವುದು ಇವರಿಗೆ ಅತಿ ಇಷ್ಟ. ಸಣ್ಣಪುಟ್ಟ ಲೇಖನಗಳು ಮತ್ತು ಕವನಗಳನ್ನು ಬರೆಯುವುದು ಇವರ ಮುಖ್ಯ ಗುರಿ. ಇದರಿಂದ ತಾನಾಗಿಯೇ ಜನಪ್ರಿಯತೆ ದೊರೆಯುತ್ತದೆ. 

ಯೋಗ ಧ್ಯಾನ ಮಾಡುವುದನ್ನು ಕಲಿಸಲು ತರಗತಿಗಳನ್ನು ಆರಂಭಿಸುತ್ತಾರೆ. ತೊಂದರೆಗೆ ಪರಿಹಾರ ಕಂಡು ಹಿಡಿಯುವುದರ ಬದಲು ತೊಂದರೆಯೇ ಬಾರದಂತೆ ನೋಡಿಕೊಳ್ಳುವುದು ಇವರ ಮೂಲ ಉದ್ದೇಶ. ಇವರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಇವರು ಇರುವ ಸ್ಥಳದಲ್ಲಿ ಹಾಸ್ಯಕ್ಕೆ ಕೊನೆ ಇರುವುದಿಲ್ಲ. ತಮಗೆ ತಿಳಿದಿರುವ ವಿದ್ಯೆಯನ್ನು ಭಾಷಣಗಳ ಮುಖಾಂತರ ಎಲ್ಲರಿಗೂ ತಿಳಿಯಪಡಿಸುತ್ತಾರೆ. ಕೈ ತುಂಬಾ ಹಣವಿದ್ದರೂ ಕುಟುಂಬದ ಆಸ್ತಿ ಇದ್ದರೂ ಸರಳ ಜೀವನ ಇಷ್ಟಪಡುತ್ತಾರೆ.

ಇಳಿ ವಯಸ್ಸಿನಲ್ಲೂ ಹೊಸ ವಿಚಾರ ಕಲಿಯುವ ಹಂಬಲ

ಜೀವನದಲ್ಲಿಒಂದೇ ರೀತಿ ಇರಲು ಇಷ್ಟಪಡುವುದಿಲ್ಲ. ಬದಲಾವಣೆಗಳನ್ನು ಇಷ್ಟಪಡುತ್ತಾರೆ. ಆದ್ದರಿಂದ ಸದಾಕಾಲ ಬೆಳವಣಿಗೆಯನ್ನು ಎದುರು ನೋಡುತ್ತಾರೆ. ಬೇರೆಯವರು ಹೇಳುವುದನ್ನು ಕೇಳುವುದಕ್ಕಿಂತಲೂ ಅಭ್ಯಾಸ ಮಾಡುವಲ್ಲಿ ನಿರತರಾಗುತ್ತಾರೆ. ತಂದೆ ತಾಯಿ ಮತ್ತು ತಾಯಿಯ ಸಂಬಂಧಿಕರ ಬಗ್ಗೆ ವಿಶೇಷ ಪ್ರೀತಿ-ವಿಶ್ವಾಸ ಗೌರವ ಇರುತ್ತವೆ. ಸಾಮಾನ್ಯವಾಗಿ ಇವರು ತಾಯಿ ಹಾಕಿದ ಕಟ್ಟುಪಾಡುಗಳನ್ನು ಮೀರುವುದಿಲ್ಲ. ವಂಶ ಪಾರ್ಯಂಪರ್ಯವಾಗಿ ಬಂದ ವಿದ್ಯೆಯೊಂದು ಇವರಿಗೆ ಆಶ್ರಯ ನೀಡುತ್ತದೆ. ಇವರ ಒಂದು ವಿಶೇಷವೆಂದರೆ ತಮ್ಮ ಇಳಿ ವಯಸಿನಲ್ಲೂ ಹೊಸ ವಿಚಾರಗಳನ್ನುಕಲಿಯಲು ಇಷ್ಟಪಡುತ್ತಾರೆ. ಪ್ರಯೋಜನವಿಲ್ಲದ ಹರಟೆ ಇವರಿಗೆ ಇಷ್ಟವಾಗುವುದಿಲ್ಲ.

ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡುವುದಿಲ್ಲ. ತಮಗೆ ತಿಳಿದ ವಿಚಾರವಾದರೂ ಅದರ ಆಂತರ್ಯವನ್ನು ಅರಿಯುವ ಮನಸ್ಸಿರುತ್ತದೆ. ಇವರ ವಿವಾಹವು ಯೋಗ್ಯರೊಂದಿಗೆ ನಡೆಯಲಿದೆ. ಸಂಗಾತಿಯು ಇವರ ಮನಸ್ಸನ್ನು ಅರಿತು ನಡೆಯುವ ಕಾರಣ ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಇವರ ಮಕ್ಕಳು ವಿದ್ಯಾಭ್ಯಾಸದಲ್ಲಿ ಮತ್ತು ತಿಳುವಳಿಕೆಯಲ್ಲಿ ಮೀರಿಸುತ್ತಾರೆ. ಇವರ ಮಕ್ಕಳಿಗೆ ಅಜ್ಜಿಯಿಂದ ವಿದ್ಯೆಯೊಂದು ವರವಾಗಿ ಬರುತ್ತದೆ. ಬೇಡದ ವಿಚಾರಗಳಿಗೆ ಹಣವನ್ನು ಖರ್ಚು ಮಾಡದ ಕಾರಣ ಹಣದ ತೊಂದರೆ ಇರುವುದಿಲ್ಲ. ತಮ್ಮನ್ನು ನಂಬಿ ಬಂದವರಿಗೆ ಮೋಸ ಮಾಡುವುದಿಲ್ಲ. ಹಣವಾಗಲಿ, ಆಹಾರವಾಗಲಿ ಅಥವಾ ವಿದ್ಯೆಯಾಗಲೀ ಹಂಚಿ ತಿನ್ನುವ ಸ್ವಭಾವ ಇವರಲ್ಲಿ ಇರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ