ತುಲಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಇವರಿಗೆ ಮಿಶ್ರಫಲ, ಮುನ್ನೆಚ್ಚರಿಕೆ ಅಗತ್ಯ
Apr 08, 2024 10:52 PM IST
ತುಲಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ
- ತುಲಾ ರಾಶಿಯ ಯುಗಾದಿ ವರ್ಷ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ತುಲಾ ರಾಶಿಯ ಜಾತಕರಿಗೆ ಸಾಮಾನ್ಯ ಫಲಗಳಿವೆ. ಸಾಂಸಾರಿಕ ವಿಚಾರಗಳಲ್ಲಿ ಮತ್ತು ಹಣಕಾಸು ನಿರ್ವಹಣೆಯಲ್ಲಿ ಜಾಗರೂಕತೆಯಿಂದ ವರ್ತಿಸಬೇಕು. ಶುಭ ಫಲಗಳಿಗಾಗಿ ಯಾವ ದೇವರ ಆರಾಧನೆ ಒಳ್ಳೆಯದು ಎಂಬ ಮಾಹಿತಿಯನ್ನು ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಈ ಬರಹದಲ್ಲಿ ನೀಡಿದ್ದಾರೆ.
ಯುಗಾದಿ ವರ್ಷ ಭವಿಷ್ಯ 2024: ಶ್ರೀಕೋಧಿನಾಮ ಸಂವತ್ಸರವು ತುಲಾ ರಾಶಿಯವರಿಗೆ ಸಾಮಾನ್ಯದಿಂದ ಉತ್ತಮ ಫಲಗಳನ್ನು ಕೊಡಲಿದೆ. ತುಲಾ ರಾಶಿಯವರು ಈ ವರ್ಷ ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಮತ್ತು ಕಿರಿಕಿರಿ ಎದುರಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ಈ ವರ್ಷ ಕೆಲಸದ ಒತ್ತಡ ಹೆಚ್ಚಾಗಲಿದೆ. ಆದಾಗ್ಯೂ, ಉಳಿದ ಗ್ರಹಗಳ ಅನುಕೂಲಕರ ಸ್ಥಾನದಿಂದಾಗಿ, ಉದ್ಯೋಗದಲ್ಲಿ ಯೋಜಿತ ಕಾರ್ಯಗಳು ಯೋಜಿಸಿದಂತೆ ಪೂರ್ಣಗೊಳ್ಳುತ್ತವೆ. ಉದ್ಯಮಿಗಳಿಗೆ ಈ ವರ್ಷ ಸರಾಸರಿ ಫಲಿತಾಂಶವಿದೆ.
ತಾಜಾ ಫೋಟೊಗಳು
ವ್ಯಾಪಾರದಲ್ಲಿ ಲಾಭವಿದ್ದರೂ, ಅನಾರೋಗ್ಯ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆಗಳಿಂದ ತೊಂದರೆ ಎದುರಿಸಬೇಕಾಗುತ್ತದೆ. ರೈತರಿಗೆ ಈ ವರ್ಷ ಸಾಧಾರಣದಿಂದ ಅನುಕೂಲಕರ ಫಲಿತಾಂಶ ಸಿಗಬಹುದು. ಚಲನಚಿತ್ರ ಮತ್ತು ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಕೆಲಸದ ಒತ್ತಡ ಅಧಿಕವಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಮಹಿಳೆಯರು ಆರೋಗ್ಯ ವಿಚಾರದಲ್ಲಿ ಜಾಗರೂಕರಾಗಿ ಇರುವುದು ಅಗತ್ಯ.
ತುಲಾ ರಾಶಿಯವರಿಗೆ ಅಷ್ಟಮ ಗುರುವಿನ ಪ್ರಭಾವದಿಂದಾಗಿ ಪ್ರಣಯದ ವಿಚಾರದಲ್ಲಿ ಅಡಚಣೆ ಹೆಚ್ಚು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಮನಸ್ಸಿಗೆ ಕಿರಿಕಿರಿಯಾಗುವಂಥ ಸಂದರ್ಭಗಳು ಬರಬಹುದು. ಅದರೆ ಸಾಧ್ಯವಾದಮಟ್ಟಿಗೂ ಜಗಳಗಳನ್ನು ತಪ್ಪಿಸಿ. ತುಲಾ ರಾಶಿಯವರು ಈ ವರ್ಷ ಆರ್ಥಿಕವಾಗಿ ಉತ್ತಮ ಫಲಗಳನ್ನು ಹೊಂದಿಲ್ಲ. ಅನಗತ್ಯ ಖರ್ಚು ಮತ್ತು ಕಿರಿಕಿರಿ ಹೆಚ್ಚಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಸಾಧ್ಯವಾದಮಟ್ಟಿಗೂ ಜಾಗ್ರತೆ ವಹಿಸಿ. ಆರೋಗ್ಯ ಕಾಪಾಡಿಕೊಳ್ಳಲು ಹಣ ಖರ್ಚು ಮಾಡಬೇಕಾಗಿ ಬಂದರೆ ಹಿಂಜರಿಯಬೇಡಿ.
ವೃತ್ತಿ ಕ್ಷೇತ್ರದಲ್ಲಿ ತುಲಾ ರಾಶಿಯವರು ಈ ವರ್ಷ ಸಾಧಾರಣ ಫಲಗಳನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ರಾಜಕೀಯ ಒತ್ತಡಗಳು ಮತ್ತು ಸಮಸ್ಯೆಗಳು ಹೆಚ್ಚಾಗುತ್ತವೆ. ಅಷ್ಟಮ ಗುರುವು ವೃತ್ತಿ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ. ಆರೋಗ್ಯದ ವಿಷಯದಲ್ಲಿ ಕಟ್ಟುನಿಟ್ಟಿನ ಕಾಳಜಿ ವಹಿಸಬೇಕು. ಕೌಟುಂಬಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಕಾಡಿದರೆ ಧೃತಿಗೆಡಬೇಡಿ. ರಾಜಕೀಯ ಒತ್ತಡಗಳು ಮಾನಸಿಕ ಯಾತನೆ ಮತ್ತು ಅನಾರೋಗ್ಯದ ಸಮಸ್ಯೆಗಳನ್ನು ಸೂಚಿಸುತ್ತವೆ. ಉತ್ತಮ ಆರೋಗ್ಯಕ್ಕಾಗಿ ದಕ್ಷಿಣಾಮೂರ್ತಿಯ ಆರಾಧನೆ ಮಾಡಿ.
ತುಲಾ ರಾಶಿಯವರಿಗೆ ಪರಿಹಾರ ಸೂಚನೆಗಳು
ತುಲಾ ರಾಶಿಯವರು 2024 ರಲ್ಲಿ ಶುಭ ಫಲಗಳನ್ನು ಪಡೆಯಬೇಕಾದರೆ ದಕ್ಷಿಣಾಮೂರ್ತಿಯನ್ನು ಪೂಜಿಸಬೇಕು. ಪ್ರತಿದಿನ ಅಥವಾ ಕನಿಷ್ಠ ಗುರುವಾರದಂದು ದಕ್ಷಿಣಾಮೂರ್ತಿ ಸ್ತೋತ್ರವನ್ನು ಪಠಿಸುವುದರಿಂದ ಮತ್ತು ಗುರುವಾರದಂದು ಅನ್ನದಾನ ಮಾಡುವುದರಿಂದ ಹೆಚ್ಚಿನ ಶ್ರೇಯಸ್ಸು ಉಂಟಾಗುತ್ತದೆ. ದತ್ತಾತ್ರೇಯನನ್ನು ಪೂಜಿಸುವುದು ಮತ್ತು ನವಗ್ರಹ ಪಿಡಾ ಪರಿಹಾರಕ ಸ್ತೋತ್ರವನ್ನು ಪಠಿಸುವುದರಿಂದ ಉತ್ತಮ ಫಲಗಳು ಸಿಗಲಿವೆ. ನವರತ್ನಗಳಲ್ಲಿ ವಜ್ರವನ್ನು ತುಲಾ ರಾಶಿಯವರು ಧರಿಸಬೇಕು. ಲಕ್ಷ್ಮಿದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಬೇಕು.
ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ತುಲಾ ರಾಶಿಯ ಮಾಸವಾರು ಭವಿಷ್ಯ
ಏಪ್ರಿಲ್ 2024: ಈ ತಿಂಗಳು ನಿಮಗೆ ಸಾಮಾನ್ಯದಿಂದ ಉತ್ತಮ ಫಲಗಳನ್ನು ಕೊಡಬಹುದು. ಆದರೆ ಅನಿರೀಕ್ಷಿತ ತೊಡಕುಗಳು ಎದುರಾಗಬಹುದು. ಮಾನಸಿಕ ಸಂಕಟ ಉಂಟಾದರೆ ಧೃತಿಗೆಡಬೇಡಿ. ಪೋಷಕರಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೇಹಶ್ರಮದ ಕೆಲಸಗಳೂ ಹೆಚ್ಚಾಗಬಹುದು.
ಮೇ 2024: ಈ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿಲ್ಲ. ಆರ್ಥಿಕವಾಗಿ ವೆಚ್ಚಗಳಿದ್ದರೂ ಅದರಿಂದ ಅನುಕೂಲವೇ ಆಗಬಹುದು. ಹೊಸ ವಸ್ತುಗಳ ಖರೀದಿ ಸಾಧ್ಯತೆಯಿದೆ. ಕೌಟುಂಬಿಕ ವೆಚ್ಚದಲ್ಲಿ ಹೆಚ್ಚಳ ಕಂಡುಬರಬಹುದು. ವಾಹನ ಸಮಸ್ಯೆಗಳು. ಸಾಲದ ಪ್ರಯತ್ನಗಳಲ್ಲಿ ವೈಫಲ್ಯ. ಮಾನಸಿಕ ಒತ್ತಡಗಳು ಕಾಣಿಸಿಕೊಳ್ಳಬಹುದು.
ಜೂನ್ 2024: ಈ ತಿಂಗಳು ತುಲಾ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿಲ್ಲ. ಹಳೆಯ ಸಮಸ್ಯೆಗಳು ಮರುಕಳಿಸಬಹುದು. ಬಂಧುಗಳಲ್ಲಿ ದ್ವೇಷ ಕಾಣಿಸಿಕೊಳ್ಳಬಹುದು. ಪ್ರಯಾಣದಲ್ಲಿ ಆಯಾಸ ತಲೆದೋರಬಹುದು. ನ್ಯಾಯಾಲಯದ ವ್ಯವಹಾರಗಳಲ್ಲಿ ಸಮಸ್ಯೆ ಆಗಬಹುದು. ಕೆಲವರು ವ್ಯಾಪಾರ, ವೃತ್ತಿ ಮತ್ತು ಉದ್ಯೋಗಗಳಲ್ಲಿ ಒಲವು ತೋರುತ್ತಾರೆ.
ಜುಲೈ 2024: ಈ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿಲ್ಲ. ಹಣದ ವೆಚ್ಚದಲ್ಲಿ ಹೆಚ್ಚಳ. ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆ. ಜಲ ಸಂಬಂಧಿತ ಕ್ಷೇತ್ರಗಳಲ್ಲಿ ಹಾನಿ, ಬೆಳವಣಿಗೆ ಕುಂಠಿತಗೊಳ್ಳುವ ಅಪಾಯವಿದೆ. ಅನಗತ್ಯ ಆತಂಕ ಹೆಚ್ಚಾಗಲಿದೆ. ತಾಳ್ಮೆಯಿಂದ ಪರಿಸ್ಥಿತಿ ಎದುರಿಸುವುದು ಜಾಣತನ.
ಆಗಸ್ಟ್ 2024: ತುಲಾ ರಾಶಿಯವರಿಗೆ ಈ ತಿಂಗಳು ಸಾಧಾರಣ ಫಲಿತಾಂಶಗಳಿವೆ. ರಾಜಕಾರಣಿಗಳ ಮೇಲೆ ಒತ್ತಡ. ಹಿರಿಯರೊಂದಿಗೆ ಒಡನಾಟ. ಮದುವೆಯಂಥ ಶುಭ ಕಾರ್ಯಗಳು ಮುಂದಕ್ಕೆ ಹೋಗಬಹುದು. ಸಮುದಾಯದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.
ಸೆಪ್ಟೆಂಬರ್ 2024: ಈ ತಿಂಗಳು ನಿಮಗೆ ಅನುಕೂಲಕರವಾಗಿಲ್ಲ. ಆರೋಗ್ಯದ ವಿಷಯಗಳಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ಪ್ರೇಮ ವ್ಯವಹಾರಗಳು ಫಲಪ್ರದವಾಗುವುದಿಲ್ಲ. ಅನಿರೀಕ್ಷಿತ ಸಮಸ್ಯೆಗಳಿಂದ ಗೃಹ ಕಲಹ. ಕೆಲವು ವ್ಯವಹಾರಗಳು ಅಭಿವೃದ್ಧಿಯಾಗುವುದಿಲ್ಲ. ಸಂಬಂಧಿಕರೊಂದಿಗೆ ಮಾತುಕತೆ ನಡೆಯಲಿದೆ.
ಅಕ್ಟೋಬರ್ 2024: ಈ ತಿಂಗಳು ನಿಮಗೆ ಮಧ್ಯಮ ಸಮಯ. ಉದ್ಯೋಗ ವ್ಯವಹಾರಗಳಲ್ಲಿ ಅನುಕೂಲ ಕಂಡುಬರಲಿದೆ. ಪ್ರಣಯದ ವಿಚಾರಗಳು ಫಲಪ್ರದವಾಗುವುದಿಲ್ಲ. ರಾಜಕಾರಣಿಗಳು ಹೊಸ ಪಕ್ಷ ಸೇರುವ ಸಾಧ್ಯತೆ ಇದೆ. ಸ್ಥಿರಾಸ್ತಿ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ.
ನವೆಂಬರ್ 2024: ಈ ತಿಂಗಳಲ್ಲಿ ಫಲಗಳು ಸಾಮಾನ್ಯವಾಗಿವೆ. ಆದಾಯ ಉತ್ತಮವಾಗಿದ್ದರೂ ವ್ಯಾಪಾರದಲ್ಲಿ ತೊಂದರೆಗಳು ಎದುರಾಗುತ್ತವೆ. ಹಿರಿಯರ ಆರೋಗ್ಯ ಬಿಗಡಾಯಿಸಬಹುದು. ತೀರ್ಥಕ್ಷೇತ್ರಗಳಿಗೆ ಪ್ರಯಾಣ ಮಾಡುವ ಸಾದ್ಯತೆಯಿದೆ.
ಡಿಸೆಂಬರ್ 2024: ಈ ತಿಂಗಳು ನಿಮಗೆ ಅನುಕೂಲಕರವಾಗಿಲ್ಲ. ಕಠಿಣ ಪರಿಶ್ರಮದಿಂದ ಕೆಲ ಕೆಲಸಗಳನ್ನು ಪೂರ್ಣಗೊಳಿಸಬಹುದು. ಒಡಹುಟ್ಟಿದವರ ಪೈಪೋಟಿಗೆ ಕಾರಣವಾಗದಂತೆ ಸಲಹೆ ನೀಡಿ. ವ್ಯಾಪಾರದಲ್ಲಿ ಸ್ವಲ್ಪಮಟ್ಟಿಗೆ ಅನುಕೂಲ ಸಿಗಬಹುದು. ಮನೆಕೆಲಸಗಳು ಮುಂದಕ್ಕೆ ಹೋಗಬಹುದು. ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಜನವರಿ 2025: ತುಲಾ ರಾಶಿಯವರಿಗೆ ಈ ತಿಂಗಳು ಹೆಚ್ಚು ಅನುಕೂಲಕರ ಎಂದು ಕಾಣಿಸುತ್ತಿಲ್ಲ. ಹಣಕಾಸಿನ ವಿಚಾರದಲ್ಲಿ ಇಕ್ಕಟ್ಟಿನ ಸ್ಥಿತಿ ಎದುರಾಗಬಹುದು. ಕೆಲಸದಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. ಇಷ್ಟಪಟ್ಟವರೊಂದಿಗಿನ ಒಡನಾಟವು ನಿಮಗೆ ನೆಮ್ಮದಿ ತರಬಹುದು. ಹೊಸ ಮನೆ ನಿರ್ಮಾಣ ಮತ್ತು ಆರೋಗ್ಯದ ವಿಚಾರದಲ್ಲಿ ತೊಂದರೆ ಎದುರಾಗಬಹುದು.
ಫೆಬ್ರವರಿ 2025: ಈ ತಿಂಗಳು ನಿಮಗೆ ಅನುಕೂಲಕರವಾಗಿಲ್ಲ. ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ವಸತಿಗೆ ಸಂಬಂಧಿಸಿದ ಸಮಸ್ಯೆಗಳು. ವ್ಯಾಪಾರ ಮತ್ತು ವೃತ್ತಿ ಕ್ಷೇತ್ರದವರಿಗೆ ಸ್ವಲ್ಪ ಅನುಕೂಲವಿದ್ದರೂ ನಿರೀಕ್ಷಿತ ಲಾಭದ ಕೊರತೆ ಕಾಣಿಸಿಕೊಳ್ಳಲಿದೆ.
ಮಾರ್ಚ್ 2025: ಈ ತಿಂಗಳು ತುಲಾ ರಾಶಿಯವರಿಗೆ ಅನುಕೂಲಕರವಾಗಿ ಇಲ್ಲ. ವಿದ್ಯಾರ್ಥಿಗಳಿಗೆ ಹಲವು ರೀತಿಯ ಸಂಕಷ್ಟಗಳು ಎದುರಾಗಬಹುದು. ಉತ್ತಮ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗಿದೆ. ಅನಿರೀಕ್ಷಿತ ಘಟನೆಗಳನ್ನು ಧೈರ್ಯದಿಂದ ಎದುರಿಸುವಿರಿ. ಸೋದರ ಸಂಬಂಧಿಗಳ ಚರ ಸ್ಥಿರಾಸ್ತಿ ವಿಷಯಗಳು ಚರ್ಚೆಗೆ ಬರುತ್ತವೆ.
ಬರಹ: ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ