logo
ಕನ್ನಡ ಸುದ್ದಿ  /  ಕ್ರಿಕೆಟ್  /  ನಮ್ಮ ಪ್ಲಾನ್ ಏನಿದ್ದರೂ ಈತನ ವಿರುದ್ಧ ಮಾತ್ರ; ಭಾರತದ 35 ವರ್ಷದ ಆಟಗಾರನಿಗೆ ಎಚ್ಚರಿಕೆ ನೀಡಿದ ಬಾಬರ್ ಅಜಮ್

ನಮ್ಮ ಪ್ಲಾನ್ ಏನಿದ್ದರೂ ಈತನ ವಿರುದ್ಧ ಮಾತ್ರ; ಭಾರತದ 35 ವರ್ಷದ ಆಟಗಾರನಿಗೆ ಎಚ್ಚರಿಕೆ ನೀಡಿದ ಬಾಬರ್ ಅಜಮ್

Prasanna Kumar P N HT Kannada

May 06, 2024 05:13 PM IST

ನಮ್ಮ ಪ್ಲಾನ್ ಏನಿದ್ದರೂ ಈತನ ವಿರುದ್ಧ ಮಾತ್ರ; ಭಾರತದ 35 ವರ್ಷದ ಆಟಗಾರನಿಗೆ ಎಚ್ಚರಿಕೆ ನೀಡಿದ ಬಾಬರ್ ಅಜಮ್

    • Babar Azam : ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಲು ಅತ್ಯುತ್ತಮ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಹೇಳಿದ್ದಾರೆ.
ನಮ್ಮ ಪ್ಲಾನ್ ಏನಿದ್ದರೂ ಈತನ ವಿರುದ್ಧ ಮಾತ್ರ; ಭಾರತದ 35 ವರ್ಷದ ಆಟಗಾರನಿಗೆ ಎಚ್ಚರಿಕೆ ನೀಡಿದ ಬಾಬರ್ ಅಜಮ್
ನಮ್ಮ ಪ್ಲಾನ್ ಏನಿದ್ದರೂ ಈತನ ವಿರುದ್ಧ ಮಾತ್ರ; ಭಾರತದ 35 ವರ್ಷದ ಆಟಗಾರನಿಗೆ ಎಚ್ಚರಿಕೆ ನೀಡಿದ ಬಾಬರ್ ಅಜಮ್

ಟಿ20 ವಿಶ್ವಕಪ್ 2024ರ (T20 World Cup 2024) ಟೂರ್ನಿಗೆ ದಿನಗಣನೆ ಶುರುವಾಗಿದೆ. ಜೂನ್ 1 ರಿಂದ ಅದೇ ತಿಂಗಳ 29ರ ತನಕ ನಡೆಯುವ ಈ ಮಿನಿ ಸಮರಕ್ಕೆ ವೆಸ್ಟ್ ಇಂಡೀಸ್ ಮತ್ತು ಯುಎಸ್​​ಎ ದೇಶಗಳು ಜಂಟಿ ಆತಿಥ್ಯ ವಹಿಸುತ್ತಿವೆ. ಟೂರ್ನಿ ಜೂನ್ 1ರಿಂದ ಆರಂಭವಾದರೂ ವಿಶ್ವದ ಅಭಿಮಾನಿಗಳು ಕಾಯುತ್ತಿರುವುದು ಮಾತ್ರ ಜೂನ್ 9ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯಕ್ಕಾಗಿ. ಟಿ20 ವಿಶ್ವಕಪ್​​ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಪಾಕ್ ನಾಯಕ ಬಾಬರ್ ಅಜಮ್​ (Babar Azam), ಭಾರತದ ವಿರುದ್ಧ ಪಂದ್ಯಕ್ಕೆ ವಿಶೇಷ ಪ್ಲಾನ್​ಗಳನ್ನು ರೂಪಿಸಿರುವುದಾಗಿ ಹೇಳಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಔಟ್ ಮಾಡಲು ಸಾಕಷ್ಟು ಸಿದ್ಧತೆ ಮಾಡುತ್ತಿರುವುದಾಗಿ ಬಾಬರ್ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

RCB Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

ಸೋಮವಾರ (ಮೇ 6) ಲಾಹೋರ್‌ನ ಗಡಾಫಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬರ್ ಅಜಮ್, ಮುಂಬರುವ ಟಿ20ಐ ಸರಣಿಗಾಗಿ ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗೆ ಹಾರುವ ಮೊದಲು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಕೊಹ್ಲಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹೊಸದಾಗಿ ನೇಮಕಗೊಂಡ ವೈಟ್-ಬಾಲ್ ಮುಖ್ಯ ಕೋಚ್​ ಗ್ಯಾರಿ ಕರ್ಸ್ಟನ್ ಅವರ ಸಮೀಕರಣದ ಕುರಿತು ಮತ್ತು ಬಹು ನಿರೀಕ್ಷಿತ ಟಿ20 ವಿಶ್ವಕಪ್ 2024 ಟೂರ್ನಿ ಮೆನ್ ಇನ್ ಗ್ರೀನ್ ಹೇಗೆ ತಯಾರಿ ನಡೆಸುತ್ತಿದೆ ಎಂಬುದರ ಕುರಿತು ಬಾಬರ್ ಬೆಳಕು ಚೆಲ್ಲಿದ್ದಾರೆ. ಅದರಲ್ಲೂ ಕೊಹ್ಲಿಯನ್ನು ಔಟ್ ಮಾಡಲು ಮಾಸ್ಟರ್ ಪ್ಲಾನ್​ ರೂಪಿಸಲು ಸಜ್ಜಾಗಿದೆ ಪಾಕ್.

ಗ್ಯಾರಿ ಕರ್ಸ್ಟನ್ ಅವರು ಈಗಾಗಲೇ ಕೋಚ್​​ ಆಗಿ ಕೆಲಸ ಮಾಡಿದ್ದಾರೆ ಮತ್ತು ಮಾಡುತ್ತಿದ್ದದಾರೆ. ಪಿಸಿಬಿ ಅವರನ್ನು ಸಂಪರ್ಕಿಸಿದಾಗ ಹೆಡ್​ಕೋಚ್ ಹುದ್ದೆಗೆ ಒಪ್ಪಿಗೆ ಸೂಚಿಸಿದ್ದಾರೆ. ನಮ್ಮ ಯೋಜನೆಗಳು ಬಗ್ಗೆ ಬಗ್ಗೆ ಉತ್ಸುಕರಾಗಿದ್ದಾರೆ. ಸಾಧ್ಯವಾದಷ್ಟು ಬೇಗ ತಂಡವನ್ನು ಸೇರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಬಾಬರ್ ಹೇಳಿದ್ದಾರೆ. ಇದೇ ವೇಳೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರನ್ನು ಎದುರಿಸಲು ನಿರ್ದಿಷ್ಟ ಯೋಜನೆಗಳ ಬಗ್ಗೆ ಕೇಳಿದಾಗ, ಬಾಬರ್ ಅಜಮ್ ದೊಡ್ಡ ಪ್ಲಾನ್​ ಹಾಕಿರುವುದಾಗಿ ತಿಳಿಸಿದ್ದಾರೆ. ವಿರಾಟ್ ಜತೆಗೆ ಭಾರತದ ಎಲ್ಲಾ ಆಟಗಾರರಿಗೂ ತಂತ್ರ ರೂಪಿಸುತ್ತೇವೆ ಎಂದಿದ್ದಾರೆ.

ಕೊಹ್ಲಿ ವಿರುದ್ಧವೇ ಅತ್ಯುತ್ತಮ ಯೋಜನೆ ರೂಪಿಸುತ್ತಿದ್ದೇವೆ ಎಂದ ಬಾಬರ್

ಒಂದು ತಂಡವಾಗಿ ಯಾವಾಗಲೂ ವಿವಿಧ ತಂಡಗಳ ವಿರುದ್ಧ ಮತ್ತು ಆಟಗಾರರ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜಿಸಲಾಗುತ್ತದೆ. ನಾವು ಕೇವಲ ಒಬ್ಬ ಆಟಗಾರನ ವಿರುದ್ಧ ಏನನ್ನೂ ಯೋಜಿಸುವುದಿಲ್ಲ. ನಾವು ಎಲ್ಲಾ ಹನ್ನೊಂದು ಆಟಗಾರರಿಗೂ ಪ್ಲಾನ್ ರೂಪಿಸುತ್ತೇವೆ. ನ್ಯೂಯಾರ್ಕ್‌ನಲ್ಲಿನ ಪರಿಸ್ಥಿತಿಗಳ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತೇವೆ. ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಆಟಗಾರರಾಗಿದ್ದು, ನಾವು ಅವರ ವಿರುದ್ಧವೇ ಅತ್ಯುತ್ತಮ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಬಾಬರ್ ಹೇಳಿದ್ದಾರೆ. ಆ ಮೂಲಕ ಭಾರತದ 35 ವರ್ಷದ ಆಟಗಾರನಿಗೆ ಎಚ್ಚರಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ವಿಶ್ವ ಕ್ರಿಕೆಟ್‌ನ ಇಬ್ಬರು ದೊಡ್ಡ ಸ್ಟಾರ್​ಗಳು. ಖಂಡಿತವಾಗಿಯೂ ಯುಎಸ್‌ಎಯಲ್ಲಿ ಸಾಕಷ್ಟು ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ. ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರಂತಹ ಕ್ರಿಕೆಟ್ ತಾರೆಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕ್ರಿಕೆಟ್ ಜನಪ್ರಿಯವಾಗಲು ಸಾಕಷ್ಟು ನೆರವಾಗಲಿದ್ದಾರೆ ಎಂದು ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ವೇಗಿ ಲಿಯಾಮ್ ಪ್ಲಂಕೆಟ್ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಜನರು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ ಎಂದು ನಾನು ನಂಬುವುದಿಲ್ಲ ಎಂದು ಪ್ಲಂಕೆಟ್ ಹೇಳಿದ್ದಾರೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ಟಿ20 ಸರಣಿ ­ಪಾಕಿಸ್ತಾನ ತಂಡ

ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ಇರ್ಫಾನ್ ಖಾನ್, ನಸೀಮ್ ಶಾ, ಸೈಮ್ ಅಯೂಬ್, ಸಲ್ಮಾನ್ ಅಘಾ ಖಾನ್, ಶಾಹೀನ್ ಅಫ್ರಿದಿ, ಉಸ್ಮಾನ್ ಖಾನ್.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ