logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶೇಷ ಮೈಲಿಗಲ್ಲು ತಲುಪಿದ ಬಾಬರ್; ವಿರಾಟ್, ರೋಹಿತ್ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟರ್

ವಿಶೇಷ ಮೈಲಿಗಲ್ಲು ತಲುಪಿದ ಬಾಬರ್; ವಿರಾಟ್, ರೋಹಿತ್ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟರ್

Jayaraj HT Kannada

Jan 12, 2024 09:29 PM IST

ಬಾಬರ್‌ ಅಜಾಮ್

    • Babar Azam Record: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆ ನಿರ್ಮಿಸಿರುವ ಬಾಬರ್‌, ಕಿವೀಸ್‌ ವಿರುದ್ಧದ ಟಿ20 ಪಂದ್ಯದಲ್ಲಿ ಸ್ಫೋಟಕ ಆಟವಾಡಿದರು. ಕ್ರೀಸ್‌ಕಚ್ಚಿ ಆಡಿದ ಮಾಜಿ ನಾಯಕ ಕೇವಲ 35 ಎಸೆತಗಳಲ್ಲಿ 57 ರನ್ ಗಳಿಸಿದರು. ಇದರೊಂದಿಗೆ ವಿಶೇಷ ದಾಖಲೆ ನಿರ್ಮಿಸಿದರು.
ಬಾಬರ್‌ ಅಜಾಮ್
ಬಾಬರ್‌ ಅಜಾಮ್ (AFP)

ನ್ಯೂಜಿಲ್ಯಾಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ (New Zealand vs Pakistan) ಪಾಕಿಸ್ತಾನ ತಂಡ ಸೋಲನುಭವಿಸಿತು. ಆದರೆ, ಮಾಜಿ ನಾಯಕ ಬಾಬರ್ ಅಜಾಮ್ (Babar Azam) ಪಂದ್ಯದಲ್ಲಿ ಅರ್ಧಶತಕ ಸಿಡಿಸುವುದರೊಂದಿಗೆ ದಾಖಲೆ ಬರೆದಿದ್ದಾರೆ. ಪಾಕ್‌ ತಂಡದ ಸ್ಟಾರ್ ಬ್ಯಾಟರ್ ಇತಿಹಾಸ ನಿರ್ಮಿಸಿದ್ದು, ಭಾರತದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಾಡಿರುವ ದಾಖಲೆ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ನಿರ್ಣಾಯಕ​ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಎಸ್​ಕೆ ಬೌಲಿಂಗ್ ಆಯ್ಕೆ; ಆರ್​ಸಿಬಿ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್​ ಟಿಕೆಟ್

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಜನವರಿ 12ರ ಶುಕ್ರವಾರ ನಡೆದ ಪಂದ್ಯದಲ್ಲಿ ಬಾಬರ್‌ ಈ ದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಈ ವಿಶೇಷ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ದಾಖಲೆ ಇದೀಗ ಬಾಬರ್‌ ಬತ್ತಳಿಕೆ ಸೇರಿಕೊಂಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ಹಲವು ದಾಖಲೆ ನಿರ್ಮಿಸಿರುವ ಬಾಬರ್‌, ಚುಟುಕು ಸ್ವರೂಪದಲ್ಲೂ ಅಬ್ಬರಿಸುತ್ತಿದ್ದಾರೆ. ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಅಪರೂಪವೆಂಬಂತೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಪ್ರವೇಶಿಸಿದ ಮಾಜಿ ನಾಯಕ, ಸ್ಫೋಟಕ ಇನ್ನಿಂಗ್ಸ್‌ ಆಡಿದರು. ಬಾಬರ್‌ ಬದಲಿಗೆ ಸೈಮ್ ಅಯೂಬ್ ಮತ್ತು ಮೊಹಮ್ಮದ್ ರಿಜ್ವಾನ್ ಇನ್ನಿಂಗ್ಸ್‌ ಆರಂಭಿಸಿದರು.

ಇದನ್ನೂ ಓದಿ | Video: ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ದುಬಾರಿ; ಒಂದೇ ಓವರ್‌ನಲ್ಲಿ 24 ರನ್ ಹೊಡೆಸಿಕೊಂಡ ಅಫ್ರಿದಿ

ಪಂದ್ಯದಲ್ಲಿ ಚೇಸಿಂಗ್‌ ವೇಳೆ ಕ್ರೀಸ್‌ಕಚ್ಚಿ ಆಡಿದ ಬಾಬರ್ ಆಕರ್ಷಕ ಅರ್ಧಶತಕ ಗಳಿಸಿದರು. ಕೇವಲ 35 ಎಸೆತಗಳಲ್ಲಿ 57 ರನ್ ಗಳಿಸಿದರು. ಇದರಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿವೆ.

3500 ರನ್‌ ಗಡಿ ದಾಟಿದ ನಾಲ್ಕನೇ ಆಟಗಾರ

ಈ ಪಂದ್ಯದ ಮೂಲಕ ಬಾಬರ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3500 ರನ್‌ಗಳ ಗಡಿ ದಾಟಿದರು. ಈ ಸಾಧನೆ ಮಾಡಿದ ವಿಶ್ವದ ಕೇವಲ ನಾಲ್ಕನೇ ಬ್ಯಾಟರ್‌ ಎನಿಸಿಕೊಂಡರು. ಭಾರತ ತಂಡದ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹಾಗೂ ನ್ಯೂಜಿಲ್ಯಾಂಡ್ ಅನುಭವಿ ಆಟಗಾರ ಮಾರ್ಟಿನ್ ಗಪ್ಟಿಲ್ ನಂತರ ಇತಿಹಾಸದಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಪಾಕ್‌ ಮಾಜಿ ನಾಯಕ ಇದೀಗ ಚುಟುಕು ಸ್ವರೂಪದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ. ವಿರಾಟ್ ಮತ್ತು ರೋಹಿತ್ ಶರ್ಮಾ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರು

  • ವಿರಾಟ್ ಕೊಹ್ಲಿ - 4008 ರನ್‌
  • ರೋಹಿತ್ ಶರ್ಮಾ - 3853 ರನ್‌
  • ಬಾಬರ್ ಅಜಾಮ್ - 3538 ರನ್‌
  • ಮಾರ್ಟಿನ್ ಗಪ್ಟಿಲ್ - 3531 ರನ್‌
  • ಪಾಲ್ ಸ್ಟರ್ಲಿಂಗ್ - 3438 ರನ್‌

ಇದನ್ನೂ ಓದಿ | ಕಿವೀಸ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್‌ಗೆ ಕೋವಿಡ್ ದೃಢ; ಪಾಕ್ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೂ ಡೌಟ್‌

ಚುಟುಕು ಸ್ವರೂಪದಲ್ಲಿ ಸಾರ್ವಕಾಲಿಕ ಗರಿಷ್ಠ ರನ್‌ ಗಳಿಸಿದ ದಾಖಲೆಯು ದಾಖಲೆಯ ಸರದಾರ ವಿರಾಟ್‌ ಕೊಹ್ಲಿ ಹೆಸರಲ್ಲಿದೆ. ಎರಡನೇ ಸ್ಥಾನದಲ್ಲಿ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಇದ್ದಾರೆ. ಬಾಬರ್ ಕೇವಲ 105 ಪಂದ್ಯಗಳಲ್ಲಿ 42.11ರ ಸರಾಸರಿಯಲ್ಲಿ ಮೂರು ಶತಕಗಳೊಂದಿಗೆ 3538 ರನ್‌ ಗಳಿಸಿದ್ದಾರೆ. ಆ ಮೂಲಕ ಕೆಲವೇ ಪಂದ್ಯಗಳಲ್ಲಿ ಈ ಪಟ್ಟಿಯಲ್ಲಿ ಮತ್ತಷ್ಟು ಮೇಲೇರುವ ವಿಶ್ವಾಸದಲ್ಲಿದ್ದಾರೆ.

IPL, 2024

Live

RCB

31/0

3.0 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ