logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಿಸಿಸಿಐ ಆದಾಯ ಆಸೀಸ್​ಗಿಂತ 28 ಪಟ್ಟು ಹೆಚ್ಚು; ವಿಶ್ವದ 10 ಕ್ರಿಕೆಟ್ ಮಂಡಳಿಗಳ ನಿವ್ವಳ ಮೌಲ್ಯ ಬಹಿರಂಗ

ಬಿಸಿಸಿಐ ಆದಾಯ ಆಸೀಸ್​ಗಿಂತ 28 ಪಟ್ಟು ಹೆಚ್ಚು; ವಿಶ್ವದ 10 ಕ್ರಿಕೆಟ್ ಮಂಡಳಿಗಳ ನಿವ್ವಳ ಮೌಲ್ಯ ಬಹಿರಂಗ

Prasanna Kumar P N HT Kannada

Dec 09, 2023 01:11 PM IST

ಬಿಸಿಸಿಐ.

    • Richest Cricket Board In The World: ವಿಶ್ವ ಕ್ರಿಕೆಟ್​ನಲ್ಲಿ ಶ್ರೀಮಂತ ಕ್ರಿಕೆಟ್ ಮಂಡಳಿ ಯಾವುದು? ಯಾವ ತಂಡದ ಬಳಿ ಎಷ್ಟು ಆದಾಯ ಇದೆ. ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದ ನಿವ್ವಳ ಮೌಲ್ಯ ಎಷ್ಟಿದೆ? ಇಲ್ಲಿದೆ ಸಂಪೂರ್ಣ ವಿವರ.
ಬಿಸಿಸಿಐ.
ಬಿಸಿಸಿಐ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ (Richest Cricket Board In The World) ಎಂದು ಎನಿಸಿಕೊಂಡಿದೆ. ಇತ್ತೀಚಿನ ವರದಿಯೊಂದು ಬಿಸಿಸಿಐನ ಪ್ರಸ್ತುತ ನಿವ್ವಳ ಮೌಲ್ಯದ ನಿಖರವಾದ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ. ವಿಶ್ವದ ಇತರ ಬೇರೆ ಕ್ರಿಕೆಟ್ ಮಂಡಳಿಗಳಿಗಿಂತ ಹಲವು ಪಟ್ಟು ಶ್ರೀಮಂತ ಎಂಬುದು ವಿಶೇಷ.

ಟ್ರೆಂಡಿಂಗ್​ ಸುದ್ದಿ

RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?

ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

ಮಳೆಯಿಂದ ಪಂದ್ಯ ರದ್ದು; ಎಲಿಮಿನೇಟರ್​​ನಲ್ಲಿ ಆರ್​​ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ, ಪ್ಲೇಆಫ್​ ವೇಳಾಪಟ್ಟಿ ಹೀಗಿದೆ

ಬಿಸಿಸಿಐ ಟಾಪ್

ಬಿಸಿಸಿಐ ಎಷ್ಟರ ಮಟ್ಟಿಗೆ ಶ್ರೀಮಂತ ಎಂಬುದನ್ನು ತೋರಿಸಲು ಜಗತ್ತೇ ದಿಗ್ಭ್ರಮೆಗೊಳಿಸುವ ಈ ಮುಂದಿನ ಅಂಕಿಗಳೇ ಸಾಕು. ಭಾರತೀಯ ಕ್ರಿಕೆಟ್‌ನ ಪ್ರಾಬಲ್ಯ ಹೆಚ್ಚಿಸಲು ಮತ್ತು ಆತಿಥೇಯ ದೇಶದ ಆರ್ಥಿಕ ದೃಷ್ಟಿಕೋನಕ್ಕೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಪ್ರಸ್ತುತ, ಬಿಸಿಸಿಐ ನಿವ್ವಳ ಮೌಲ್ಯ ಸರಿ ಸುಮಾರು 2.25 ಶತಕೋಟಿ ಯುಎಸ್ ಡಾಲರ್ ಎಂದು ಹೇಳಲಾಗಿದೆ. ಅಂದರೆ ಸುಮಾರು 18,700 ಕೋಟಿ ರೂಪಾಯಿಗೂ ಹೆಚ್ಚು. ವಿಶ್ವದಲ್ಲಿ ಯಾವ ಕ್ರಿಕೆಟ್ ಮಂಡಳಿಯೂ ಇಷ್ಟರಮಟ್ಟಿಗೆ ಹೊಂದಿಲ್ಲ. 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಗಿಂತ 28 ಪಟ್ಟು ಹೆಚ್ಚಿದೆ.

ಆಸ್ಟ್ರೇಲಿಯಾಗೆ ಎರಡನೇ ಸ್ಥಾನ

ಇತ್ತೀಚೆಗಷ್ಟೇ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡವು ಶ್ರೀಮಂತ ಕ್ರಿಕೆಟ್​ ಮಂಡಳಿಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) 79 ಮಿಲಿಯನ್ ಯುಎಸ್​ ಡಾಲರ್​ಗಳು ಅಂದರೆ 660 ಕೋಟಿ ರೂಪಾಯಿಗೂ ಹೆಚ್ಚು ನಿವ್ವಳ ಮೌಲ್ಯದೊಂದಿಗೆ ದೊಡ್ಡ ಮಂಡಳಿಗಳಲ್ಲಿ 2ನೇ ಸ್ಥಾನದಲ್ಲಿದೆ. ಕ್ರಿಕ್‌ಬಝ್ ನಡೆಸಿದ ವರದಿಯಲ್ಲಿ ಅಂಕಿಅಂಶಗಳನ್ನು ಹೇಳಲಾಗಿದೆ. ಹಾಗಾದರೆ ಯಾವ ತಂಡಗಳು ಯಾವ ಸ್ಥಾನದಲ್ಲಿ ಎಂಬುದನ್ನು ಈ ಮುಂದೆ ನೋಡೋಣ.

ಯಾವ ಕ್ರಿಕೆಟ್ ಮಂಡಳಿಗೆ ಎಷ್ಟನೆ ಸ್ಥಾನ?

1. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ - 2.25 ಬಿಲಿಯನ್ ಡಾಲರ್ (18,700 ಕೋಟಿ)

2. ಕ್ರಿಕೆಟ್ ಆಸ್ಟ್ರೇಲಿಯಾ - 79 ಮಿಲಿಯನ್ ಡಾಲರ್ (600+ ಕೋಟಿ)

3. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ - 59 ಮಿಲಿಯನ್ ಡಾಲರ್ (500+ ಕೋಟಿ)

4. ಪಾಕಿಸ್ತಾನ ಕ್ರಿಕೆಟ್ ಮಂಡಳಿ - 55 ಮಿಲಿಯನ್ ಡಾಲರ್ (450 + ಕೋಟಿ)

5. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ - 51 ಮಿಲಿಯನ್ ಡಾಲರ್ (400+ ಕೋಟಿ)

6. ಕ್ರಿಕೆಟ್ ದಕ್ಷಿಣ ಆಫ್ರಿಕಾ - 47 ಮಿಲಿಯನ್ ಡಾಲರ್ (350+ ಕೋಟಿ)

7. ಜಿಂಬಾಬ್ವೆ ಕ್ರಿಕೆಟ್ ಮಂಡಳಿ - 38 ಮಿಲಿಯನ್ ಡಾಲರ್ (300+ ಕೋಟಿ)

8. ಶ್ರೀಲಂಕಾ ಕ್ರಿಕೆಟ್ ಮಂಡಳಿ - 20 ಮಿಲಿಯನ್ ಡಾಲರ್ (150+ ಕೋಟಿ)

9. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ - 15 ಮಿಲಿಯನ್ ಡಾಲರ್ (100+ ಕೋಟಿ)

10. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ - 9 ಮಿಲಿಯನ್ ಡಾಲರ್ (75+ ಕೋಟಿ)

ಬಿಸಿಸಿಐ ಶ್ರೀಮಂತವಾಗಲು ಐಪಿಎಲ್ ಕಾರಣ

ಬಿಸಿಸಿಐ ಆದಾಯ ಹೆಚ್ಚಾಗಲು ಐಪಿಎಲ್ ಕಾರಣ. 2008ರಿಂದ ಶುರುವಾಗ ಮಿಲಿಯನ್ ಡಾಲರ್​ ಟೂರ್ನಿ, ಬಿಸಿಸಿಐ ಖಜಾನೆಗೆ ಕೋಟಿ ಕೋಟಿ ಆದಾಯವನ್ನು ತರುತ್ತಿದೆ. ಪ್ರಸ್ತುತ ಐಪಿಎಲ್​ಗೆ ಮುಂದಿನ ಐದು ವರ್ಷಗಳಿಗೆ ಮಾಧ್ಯಮ ಹಕ್ಕುಗಳನ್ನು 48 ಸಾವಿರದ 390 ಕೋಟಿಗೆ ಮಾರಾಟ ಮಾಡಿದೆ. ಇದು ಕೇವಲ ಐಪಿಎಲ್ ಮಾಧ್ಯಮದ ಹಕ್ಕುಗಳು ಮಾತ್ರ. ಅಂತಾರಾಷ್ಟ್ರೀಯ ಕ್ರಿಕೆಟ್​ ಸರಣಿಗಳ ಮಾಧ್ಯಮ ಹಕ್ಕುಗಳು, ಜಾಹೀರಾತು, ಕಿಟ್ ಪ್ರಾಯೋಜಕತ್ವ ಸೇರಿದಂತೆ ಹಲವು ಮೂಲಗಳಿಂದ ಹಣ ಹರಿದು ಬರುತ್ತಿದೆ. ಇತ್ತೀಚೆಗೆ ಮುಗಿದ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು. ಇದರಿಂದಲೂ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ