logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿಗೆ ಬೆಂಬಲ ನೀಡಲ್ಲ ಎಂದಿದ್ದ ಸಿಎಸ್​ಕೆ ಅಭಿಮಾನಿ ಖರೀದಿಸಿದ ಬೆಂಗಳೂರು; ಫುಲ್ ಟ್ರೋಲ್

ಆರ್​ಸಿಬಿಗೆ ಬೆಂಬಲ ನೀಡಲ್ಲ ಎಂದಿದ್ದ ಸಿಎಸ್​ಕೆ ಅಭಿಮಾನಿ ಖರೀದಿಸಿದ ಬೆಂಗಳೂರು; ಫುಲ್ ಟ್ರೋಲ್

Prasanna Kumar P N HT Kannada

Dec 10, 2023 10:31 AM IST

ಕೇಟ್​ ಕ್ರಾಸ್​.

    • Royal Challengers Bangalore: ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬೆಂಬಲ ನೀಡಲ್ಲ ಎಂದಿದ್ದ ಸಿಎಸ್​ಕೆ ಅಭಿಮಾನಿ ಕೇಟ್​ ಕ್ರಾಸ್​ ಈಗ 30 ಲಕ್ಷ ರೂಪಾಯಿಗೆ ಆರ್​ಸಿಬಿ ಕ್ಯಾಂಪ್ ಸೇರಿದ್ದಾರೆ.
ಕೇಟ್​ ಕ್ರಾಸ್​.
ಕೇಟ್​ ಕ್ರಾಸ್​.

ಡಿಸೆಂಬರ್ 9ರಂದು ಮುಂಬೈನಲ್ಲಿ ಜರುಗಿದ ಮಹಿಳಾ ಪ್ರೀಮಿಯರ್ ಲೀಗ್​ 2024ರ ಮಿನಿ ಹರಾಜಿನಲ್ಲಿ (WPL Auction 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಸ್ಟಾರ್​​ ಆಟಗಾರ್ತಿಯರನ್ನೇ ಖರೀದಿಸಿದೆ. ಅದರಲ್ಲಿ ಐಪಿಎಲ್​ನಲ್ಲಿ (IPL) ಆರ್​​ಸಿಬಿಗೆ ಬೆಂಬಲ ನೀಡಲ್ಲ ಎಂದಿದ್ದ ಇಂಗ್ಲೆಂಡ್ ತಂಡದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಅಭಿಮಾನಿ ಕೇಟ್ ಕ್ರಾಸ್ (Kate Cross) ಕೂಡ ಒಬ್ಬರು ಎಂಬುದು ವಿಶೇಷ.

ಟ್ರೆಂಡಿಂಗ್​ ಸುದ್ದಿ

ನೀನು ನಮ್ಮ ಪ್ರಮುಖ ಬೌಲರ್‌ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್‌ ಕುರಿತು ಯಶ್‌ ದಯಾಳ್ ಮಾತು

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?

ಹರಾಜಿನಲ್ಲಿ 30 ಲಕ್ಷ ರೂಪಾಯಿಗೆ ಆರ್​ಸಿಬಿ ಸೇರಿರುವ ಕೇಟ್​ ಕ್ರಾಸ್​, ಈ ಹಿಂದೆ ಆರ್​ಸಿಬಿಗೆ ಸಪೋರ್ಟ್ ಮಾಡಲ್ಲ. ನಾನು ಸಿಎಸ್​ಕೆ ಅಭಿಮಾನಿ ಎಂದು ಟ್ವೀಟ್​ನಲ್ಲಿ ಪೋಸ್ಟ್​ ಮಾಡಿದ್ದರು. ಬೆಂಬಲ ನೀಡಲ್ಲ ಎನ್ನುವುದು ಮಾತ್ರವಲ್ಲದೆ ಕಿಚಾಯಿಸಿದ್ದರು ಕೂಡ. ಆರ್​ಸಿಬಿ ಮತ್ತು ತಂಡದ ಅಭಿಮಾನಿಗಳ ಕುರಿತು ವ್ಯಂಗ್ಯವಾಗಿದ್ದರು. ಈ ಪೋಸ್ಟ್​​ಗಳು ಈಗ ಭಾರಿ ವೈರಲ್ ಆಗುತ್ತಿವೆ. ಬೆಂಗಳೂರು ಫ್ರಾಂಚೈಸಿಯನ್ನು ಅಭಿಮಾನಿಗಳು ಫುಲ್ ಟ್ರೋಲ್ ಮಾಡುತ್ತಿದ್ದಾರೆ.

ಮಾತು ಬದಲಿಸಿದ ಕ್ರಾಸ್

ಆರ್​​ಸಿಬಿ ಖರೀದಿಸಿದ ಬೆನ್ನಲ್ಲೇ ಕೇಟ್​ ಕ್ರಾಸ್ ವರಸೆ ಬದಲಿಸಿದ್ದಾರೆ. ಬೆಂಗಳೂರು ತಂಡವನ್ನು ಬೆಂಬಲಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಡಬ್ಲ್ಯುಪಿಎಲ್​ 2024ರ 2ನೇ ಆವೃತ್ತಿಗಾಗಿ ಆರ್​ಸಿಬಿಗೆ ಸ್ವಾಗತ ಎಂದು ಇಂಗ್ಲೆಂಡ್​ನ ಅಲೆಕ್ಸಾಂಡ್ರಾ ಹಾರ್ಟ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕ್ರಾಸ್ ಅನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್​ಗೆ ಉತ್ತರಿಸಿದ ಕ್ರಾಸ್, ಆರ್‌ಸಿಬಿಗೆ ಯಾವಾಗಲೂ ವಿಶೇಷ ಸ್ಥಾನವಿದೆ ಎಂದು ಹೇಳುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ವಿರುದ್ಧ ಅಭಿಮಾನಿಗಳು ಕಿಡಿ

ತಮಗೆ ಬೆಂಬಲ ನೀಡಲ್ಲ ಎಂದಿದ್ದ ಸಿಎಸ್​ಕೆ ಅಭಿಮಾನಿ ಖರೀದಿಸಿದ್ದ ಆರ್​ಸಿಬಿ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ನಮಗೆ ಸಪೋರ್ಟ್ ಮಾಡದ, ಅದರಲ್ಲೂ ಸಿಎಸ್​ಕೆ ಫ್ಯಾನ್​ಗೆ ಮಣೆ ಹಾಕಿದ್ದಕ್ಕೆ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ವಾಟರ್​ ಬಾಟಲ್​ ತರೋದಕ್ಕೆ ಬಳಸಿಕೊಳ್ಳುತ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈಗ ಬೆಂಬಲ ನೀಡಲೇಬೇಕು, ಆಡಲೇಬೇಕು ಎಂದು ಎನ್ನುತ್ತಿದ್ದಾರೆ.

ಕೇಟ್​ ಕ್ರಾಸ್ ಪ್ರದರ್ಶನ ಹೇಗಿದೆ?

ಇಂಗ್ಲೆಂಡ್​ ತಂಡದ ಅನುಭವಿ ಆಟಗಾರ್ತಿ ಕೇಟ್​ ಕ್ರಾಸ್, ಆರ್​ಸಿಬಿಗೆ ಹೊಸ ಭರವಸೆ ಮೂಡಿಸುವ ಲೆಕ್ಕಾಚಾರದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಡಿಮೆ ಟಿ20ಗಳನ್ನು ಆಡಿದ್ದರೂ ಏಕದಿನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮಹಿಳಾ ಬಿಗ್​ ಬ್ಯಾಷ್ ಲೀಗ್ ಮತ್ತು ಹಂಡ್ರೆಡ್ ಲೀಗ್​ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಈವರೆಗೂ 16 ಟಿ20 ಪಂದ್ಯಗಳಲ್ಲಿ 11 ವಿಕೆಟ್, ಏಕದಿನದಲ್ಲಿ 59 ಪಂದ್ಯಗಳಲ್ಲಿ 79 ವಿಕೆಟ್ ಕಿತ್ತಿದ್ದಾರೆ.

ಕಾಮೆಂಟೇಟರ್​ ಆಗಿದ್ದರು!

ಡಬ್ಲ್ಯುಪಿಎಲ್ ಉದ್ಘಾಟನಾ ಆವೃತ್ತಿಯ ಮೆಗಾ ಹರಾಜಿನಲ್ಲಿ ಕ್ರಾಸ್ ಮಾರಾಟವಾಗಿರಲಿಲ್ಲ. ನಂತರ ಅವರು ಕಾಮೆಂಟೇಟರ್ ಆಗಿ ಸೇರಿದರು. ಮಧ್ಯಮ ವೇಗಿ ದಿ ಹಂಡ್ರೆಡ್ ವುಮೆನ್‌ನ ಕೊನೆಯ ಆವೃತ್ತಿಯಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್ಸ್‌ಗಾಗಿ 10 ವಿಕೆಟ್‌ಗಳನ್ನು ಉರುಳಿಸಿದ್ದರು.

ಈ ಹರಾಜಿನಲ್ಲಿ ಆರ್​​ಸಿಬಿ ಖರೀದಿಸಿದ ಆಟಗಾರ್ತಿಯರ ಪಟ್ಟಿ

ಏಕ್ತಾ ಬಿಷ್ಟ್ (ಭಾರತ) - 60 ಲಕ್ಷ, ಬೌಲರ್

ಜಾರ್ಜಿಯಾ ವೇರ್ಹ್ಯಾಮ್ (ಆಸ್ಟ್ರೇಲಿಯಾ) - 40 ಲಕ್ಷ, ಆಲ್​ರೌಂಡರ್

ಕೇಟ್ ಕ್ರಾಸ್ (ಇಂಗ್ಲೆಂಡ್) - 30 ಲಕ್ಷ, ಆಲ್​ರೌಂಡರ್​

ಸಬ್ಬಿನೇನಿ ಮೇಘನಾ (ಭಾರತ) - 30 ಲಕ್ಷ, ಆಲ್​ರೌಂಡರ್​

ಸೋಫಿ ಮೊಲಿನಿಕ್ಸ್ (ಆಸ್ಟ್ರೇಲಿಯಾ) - 30 ಲಕ್ಷ, ಆಲ್​ರೌಂಡರ್

ಸಿಮ್ರಾನ್ ಬಹದ್ದೂರ್ (ಭಾರತ) - 30 ಲಕ್ಷ, ಬೌಲರ್​

ಶುಭಾ ಸತೀಶ್ (ಭಾರತ, ಕರ್ನಾಟಕ) - 10 ಲಕ್ಷ, ಆಲ್​ರೌಂಡರ್.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ