logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಭಿನಂದನೆಗಳು, ನಿಮ್ಮ ನಿಧಾನಗತಿಯ ಐಪಿಎಲ್​ ಶತಕಕ್ಕೆ; ವಿರಾಟ್ ಕೊಹ್ಲಿಯನ್ನು ಅಣಕಿಸಿದ ಪಾಕಿಸ್ತಾನದ ಮಾಜಿ ವೇಗಿ

ಅಭಿನಂದನೆಗಳು, ನಿಮ್ಮ ನಿಧಾನಗತಿಯ ಐಪಿಎಲ್​ ಶತಕಕ್ಕೆ; ವಿರಾಟ್ ಕೊಹ್ಲಿಯನ್ನು ಅಣಕಿಸಿದ ಪಾಕಿಸ್ತಾನದ ಮಾಜಿ ವೇಗಿ

Prasanna Kumar P N HT Kannada

Apr 07, 2024 05:48 PM IST

ವಿರಾಟ್ ಕೊಹ್ಲಿಯನ್ನು ಅಣಕಿಸಿದ ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್.

    • Virat Kohli : ರಾಜಸ್ಥಾನ್ ರಾಯಲ್ಸ್ ವಿರುದ್ಧ 67 ಎಸೆತಗಳಲ್ಲಿ ಶತಕ ಪೂರೈಸಿದ ವಿರಾಟ್ ಕೊಹ್ಲಿ ಅವರನ್ನು ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್ ಟೀಕಿಸಿದ್ದಾರೆ.
ವಿರಾಟ್ ಕೊಹ್ಲಿಯನ್ನು ಅಣಕಿಸಿದ ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್.
ವಿರಾಟ್ ಕೊಹ್ಲಿಯನ್ನು ಅಣಕಿಸಿದ ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಶನಿವಾರ (ಏಪ್ರಿಲ್ 6) ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ (Virat Kohli) ಶತಕ ಗಳಿಸಿ ಮಿಂಚಿದರು. ಆರ್‌ಸಿಬಿ ಮಾಜಿ ನಾಯಕ ಐಪಿಎಲ್​​ನಲ್ಲಿ 8ನೇ ಸೆಂಚುರಿ ಬಾರಿಸಿ ದಾಖಲೆ ಬರೆದರು. ಆದರೆ ಈ ಸೆಂಚುರಿ ಬಾರಿಸಲು ತೆಗೆದುಕೊಂಡಿದ್ದು 67 ಎಸೆತಗಳನ್ನು. ಮೂರಂಕಿ ದಾಟಲು ಅತಿ ಹೆಚ್ಚು ಎಸೆತಗಳನ್ನು ತೆಗೆದುಕೊಂಡರೆಂಬ ಕಾರಣಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕೊಹ್ಲಿಯನ್ನು ಅಣಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು

ಕ್ರಿಕೆಟ್‌ ಬಗ್ಗೆ ಅಂಧಕಾರ, ದುರಭಿಮಾನ ಇದ್ದರಷ್ಟೇ ಧೋನಿಯನ್ನು ದ್ವೇಷಿಸಲು ಸಾಧ್ಯ; ರಾಜೀವ್‌ ಹೆಗಡೆ ಬರಹ

ಭಾರತ ತಂಡದ ಮುಖ್ಯ ಕೋಚ್ ಆಯ್ಕೆಗೆ ಸಿಎಸ್‌ಕೆ ನೆಚ್ಚಿಕೊಂಡ ಬಿಸಿಸಿಐ; ಮನವೊಲಿಕೆ ಜವಾಬ್ದಾರಿ ಎಂಎಸ್ ಧೋನಿ ಹೆಗಲಿಗೆ

ಇಂಪ್ಯಾಕ್ಟ್‌ ಪ್ಲೇಯರ್ ನಿಯಮ ಪಂದ್ಯದ ಸಮತೋಲನವನ್ನೇ ಹಾಳು ಮಾಡುತ್ತೆ; ರೋಹಿತ್‌ ಬಳಿಕ ವಿರಾಟ್ ಕೊಹ್ಲಿ ವಿರೋಧ

ಆರಂಭಿಕನಾಗಿ ಕಣಕ್ಕಿಳಿದ ವಿರಾಟ್, ಇನ್ನಿಂಗ್ಸ್​ ಮುಗಿಯುವವರೆಗೂ ಕ್ರೀಸ್​​ನಲ್ಲಿದ್ದರು. ಅವರು 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್​ ಸಹಿತ 113 ರನ್ ಗಳಿಸಿ ಅಜೇಯರಾಗಿ ಉಳಿದರು. ಕಿಂಗ್ ಕೊಹ್ಲಿಯ ಭರ್ಜರಿ ಆಟದ ನೆರವಿನಿಂದ ಆರ್​ಸಿಬಿ 20 ಓವರ್​​​​​ಗೆ 3 ವಿಕೆಟ್​ ನಷ್ಟಕ್ಕೆ 183 ರನ್ ಗಳಿಸಿತು. ಆದರೆ ಈ ಗುರಿ ಬೆನ್ನಟ್ಟಿದ ಆರ್​ಆರ್​​ 19.1 ಓವರ್​ಗಳಲ್ಲೇ ಜಯದ ನಗೆ ಬೀರಿತು. ಜೋಸ್ ಬಟ್ಲರ್​ 58 ಎಸೆತಗಳಲ್ಲಿ 100 ರನ್ ಸಿಡಿಸಿ ಆರ್​ಸಿಬಿ ಗೆಲುವಿಗೆ ಅಡ್ಡಿಯಾದರು. ಅವರ ಇನ್ನಿಂಗ್ಸ್​​ನಲ್ಲಿ 9 ಬೌಂಡರಿ, 4 ಸಿಕ್ಸರ್​​ಗಳಿದ್ದವು.

ಜುನೈದ್ ಖಾನ್ ಟೀಕೆ

ಐಪಿಎಲ್‌ನಲ್ಲಿ ಕೊಹ್ಲಿ ತಮ್ಮ ದಾಖಲೆಯ ಎಂಟನೇ ಶತಕವನ್ನು ಗಳಿಸಿದ ನಂತರ, ಅನೇಕ ಮಾಜಿ ಶ್ರೇಷ್ಠರು ಮತ್ತು ಕ್ರಿಕೆಟ್ ತಜ್ಞರು, ಟಿ20 ಕ್ರಿಕೆಟ್​ನಲ್ಲಿ ವಿರಾಟ್​ ಶಕ್ತಿ ಇನ್ನೂ ಇದೆ ಎಂದು ಹಾಡಿಹೊಗಳಿದ್ದಾರೆ. ಆದರೆ, ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್, ನಗದು-ಸಮೃದ್ಧ ಲೀಗ್‌ನ ಇತಿಹಾಸದಲ್ಲಿ ನಿಧಾನಗತಿಯ ಶತಕ ಗಳಿಸಿದ್ದಕ್ಕಾಗಿ ಅವರನ್ನು ಅಭಿನಂದಿಸುವುದರ ಮೂಲಕ ಬ್ಯಾಟಿಂಗ್ ಸೂಪರ್‌ಸ್ಟಾರ್‌ ಕೊಹ್ಲಿಯನ್ನು ಅಣಕಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅಭಿಮಾನಿಗಳು ಬೆಂಡೆತ್ತಿದ್ದಾರೆ.

ಆರ್‌ಸಿಬಿ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಕೊಹ್ಲಿ ಮೈಲಿಗಲ್ಲನ್ನು ತಲುಪಿದ ನಂತರ ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜುನೈದ್ ಖಾನ್, 'ಐಪಿಎಲ್ ಇತಿಹಾಸದಲ್ಲಿ ನಿಧಾನಗತಿ 100 ರನ್ ಗಳಿಸಿದ ವಿರಾಟ್ ಕೊಹ್ಲಿಗೆ ಅಭಿನಂದನೆಗಳು' ಎಂದು ಬರೆದುಕೊಂಡಿದ್ದಾರೆ. ಇಲ್ಲಿಯವರೆಗೆ ಆಡಿದ 381 ಟಿ20 ಪಂದ್ಯಗಳಲ್ಲಿ ಕೊಹ್ಲಿ ಬಾರಿಸಿದ ಎಲ್ಲಾ 9 ಶತಕಗಳ ಪೈಕಿ ಇದು ನಿಧಾನವಾದದ್ದು. ಇದರಿಂದ ಕೊಹ್ಲಿ ಟೀಕೆಗಳನ್ನೂ ಎದುರಿಸುವಂತಾಯಿತು.

ಸ್ವಾರ್ಥದ ಇನ್ನಿಂಗ್ಸ್​ ಎಂದ ನೆಟ್ಟಿಗರು

ಕೊಹ್ಲಿಯೂ ಅನೇಕ ಟೀಕೆಗಳನ್ನು ಎದುರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಅಭಿಮಾನಿಗಳು ಅವರು ತಮ್ಮ ವೈಯಕ್ತಿಕ ಮೈಲಿಗಲ್ಲುಗಾಗಿ ಸ್ವಾರ್ಥದಿಂದ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವೇಗವಾಗಿ ಆಡಿದ್ದರೆ, ಇನ್ನೂ 30+ ರನ್​ಗಳು ತಂಡಕ್ಕೆ ಸೇರ್ಪಡೆಯಾಗುತ್ತಿದ್ದವು. ಇದು ಪಂದ್ಯವನ್ನು ಗೆಲ್ಲಿಸಿಕೊಡಲು ನೆರವಾಗುತ್ತಿತ್ತು. ಆದರೆ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಟೆಸ್ಟ್​ನಂತೆ ಆಡಿದರು. ಅದರಲ್ಲೂ ಮಧ್ಯಮ ಓವರ್​​ಗಳಲ್ಲಿ ರನ್ ಗಳಿಸಲು ತಿಣುಕಾಡಿದರು ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಪರ 8000 ರನ್

ರಾಜಸ್ಥಾನ್ ರಾಯಲ್ಸ್ ವಿರುದ್ಧ 113 ರನ್ ಗಳಿಸಿದ ಸಂದರ್ಭದಲ್ಲಿ ಕೊಹ್ಲಿ ಅನೇಕ ಬ್ಯಾಟಿಂಗ್ ಮೈಲಿಗಲ್ಲುಗಳನ್ನು ತಲುಪಿದರು. ಒಂದೇ ತಂಡದ ಪರ ಟಿ20ಯಲ್ಲಿ 8000 ಪ್ಲಸ್ ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಏಪ್ರಿಲ್ 18, 2008 ರಂದು ಆರ್‌ಸಿಬಿಗೆ ಪದಾರ್ಪಣೆ ಮಾಡಿದ ನಂತರ 257 ಪಂದ್ಯಗಳಲ್ಲಿ ಕೊಹ್ಲಿ 8003 ರನ್ ಗಳಿಸಿದ್ದಾರೆ. ಅವರು 242 ಐಪಿಎಲ್ ಪಂದ್ಯಗಳಲ್ಲಿ 7579 ರನ್ ಮತ್ತು 15 ಚಾಂಪಿಯನ್ಸ್ ಲೀಗ್ ಪಂದ್ಯಗಳಲ್ಲಿ 424 ರನ್ ಗಳಿಸಿದ್ದಾರೆ.

ಇದಲ್ಲದೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ (30 ಪಂದ್ಯಗಳಲ್ಲಿ 731 ರನ್) ಮತ್ತು ಹೆಚ್ಚು ಕ್ಯಾಚ್​ಗಳನ್ನು ಪಡೆದ ದಾಖಲೆಯನ್ನೂ ಅವರು ಹೊಂದಿದ್ದಾರೆ. ರನ್ ಚೇಸ್ ನ 16ನೇ ಓವರ್ ನ ನಾಲ್ಕನೇ ಎಸೆತದಲ್ಲಿ ರಿಯಾನ್ ಪರಾಗ್ ಕ್ಯಾಚ್ ಪೂರ್ಣಗೊಳಿಸುವ ಮೂಲಕ 205 ಐಪಿಎಲ್ ಪಂದ್ಯಗಳಲ್ಲಿ ಸುರೇಶ್ ರೈನಾ ಅವರ 109 ಕ್ಯಾಚ್​​​ಗಳ ದಾಖಲೆಯನ್ನು ಮುರಿದರು. ಸದ್ಯ ಕೊಹ್ಲಿ 110 ಕ್ಯಾಚ್​ಗಳೊಂದಿಗೆ ಐಪಿಎಲ್​ನಲ್ಲಿ ಅತಿ ಹೆಚ್ಚು ಪಡೆದ ಆಟಗಾರ ಎನಿಸಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ