logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್ ಆಸ್ಟ್ರೇಲಿಯಾ ಅವಾರ್ಡ್ಸ್; ಎಲಿಸ್ ಪೆರ್ರಿ, ಗಾರ್ಡ್ನರ್, ಮಿಚೆಲ್ ಮಾರ್ಷ್ ಸೇರಿ ಹಲವರಿಗೆ ಪ್ರತಿಷ್ಠಿತ ಪ್ರಶಸ್ತಿ

ಕ್ರಿಕೆಟ್ ಆಸ್ಟ್ರೇಲಿಯಾ ಅವಾರ್ಡ್ಸ್; ಎಲಿಸ್ ಪೆರ್ರಿ, ಗಾರ್ಡ್ನರ್, ಮಿಚೆಲ್ ಮಾರ್ಷ್ ಸೇರಿ ಹಲವರಿಗೆ ಪ್ರತಿಷ್ಠಿತ ಪ್ರಶಸ್ತಿ

Prasanna Kumar P N HT Kannada

Feb 01, 2024 09:17 PM IST

ಎಲಿಸ್ ಪೆರ್ರಿ, ಗಾರ್ಡ್ನರ್, ಮಿಚೆಲ್ ಮಾರ್ಷ್ ಸೇರಿ ಹಲವರಿಗೆ ಪ್ರತಿಷ್ಠಿತ ಪ್ರಶಸ್ತಿ.

    • Cricket Australia Awards: ಮೆಲ್ಬರ್ನ್​​ನಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಆಸ್ಟ್ರೇಲಿಯಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಚೆಲ್ ಮಾರ್ಷ್, ಎಲಿಸ್ ಪೆರ್ರಿ, ಆಶ್ಲೇ ಗಾರ್ಡ್ನರ್ ಸೇರಿದಂತೆ ಪ್ರಮುಖರು ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಕ್ಕಿದರು.
ಎಲಿಸ್ ಪೆರ್ರಿ, ಗಾರ್ಡ್ನರ್, ಮಿಚೆಲ್ ಮಾರ್ಷ್ ಸೇರಿ ಹಲವರಿಗೆ ಪ್ರತಿಷ್ಠಿತ ಪ್ರಶಸ್ತಿ.
ಎಲಿಸ್ ಪೆರ್ರಿ, ಗಾರ್ಡ್ನರ್, ಮಿಚೆಲ್ ಮಾರ್ಷ್ ಸೇರಿ ಹಲವರಿಗೆ ಪ್ರತಿಷ್ಠಿತ ಪ್ರಶಸ್ತಿ.

ಕಳೆದ ವರ್ಷ ಅತ್ಯದ್ಭುತ ಪ್ರದರ್ಶನ ನೀಡಿದ ಮಹಿಳಾ ಮತ್ತು ಪುರುಷ ಕ್ರಿಕೆಟಿಗರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಜನವರಿ 31ರಂದು ವಾರ್ಷಿಕ ಪ್ರಶಸ್ತಿ (Cricket Australia Awards) ಪ್ರದಾನ ಸಮಾರಂಭ ಆಯೋಜಿಸಿತ್ತು. ಮೆಲ್ಬರ್ನ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ಆಟಗಾರರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು. ಸ್ಟಾರ್​ ಕ್ರಿಕೆಟರ್​​ಗಳಾದ ಎಲಿಸ್ ಪೆರ್ರಿ (Ellyse Perry), ಮಿಚೆಲ್ ಮಾರ್ಷ್ (Mitchell Marsh), ಆಶ್ಲೇ ಗಾರ್ಡ್ನರ್​ (Ashleigh Gardner) ಸೇರಿದಂತೆ ಹಲವರಿಗೆ ಪ್ರಮುಖ ಪ್ರಶಸ್ತಿಗಳು ದಕ್ಕಿವೆ.

ಟ್ರೆಂಡಿಂಗ್​ ಸುದ್ದಿ

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ನೀನು ನಮ್ಮ ಪ್ರಮುಖ ಬೌಲರ್‌ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್‌ ಕುರಿತು ಯಶ್‌ ದಯಾಳ್ ಮಾತು

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

2023ರಲ್ಲಿ ಆಸ್ಟ್ರೇಲಿಯಾ ಸಖತ್ ಯಶಸ್ಸು

2023ರ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ (Australia Cricket Team) ಪಾಲಿಗೆ ಮರೆಯಲಾಗದ ವರ್ಷ. ಒಂದೇ ವರ್ಷದಲ್ಲಿ ಮೂರು ಐಸಿಸಿ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿತ್ತು. ಮಹಿಳೆಯರ ತಂಡವು ಟಿ20 ವಿಶ್ವಕಪ್ ಗೆದ್ದರೆ, ಪುರುಷರ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಮತ್ತು ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್​ನಲ್ಲಿ ಗೆದ್ದಿತ್ತು. ಅಲ್ಲದೆ, ಹಲವು ಸ್ಮರಣೀಯ ಸರಣಿಗಳು ಸಹ ತನ್ನ ಖಾತೆಗೆ ಹಾಕಿಕೊಂಡಿದೆ.

ಇನ್ನು ಕ್ರಿಕೆಟ್ ಆಸ್ಟ್ರೇಲಿಯಾ ಏರ್ಪಡಿಸಿದ್ದ ಸಮಾರಂಭದಲ್ಲಿ ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬುದನ್ನು ನೋಡೋಣ. ಎಲ್ಲಾ ವಿಜೇತರ ವಿವರವಾದ ಪಟ್ಟಿ ನೋಡಿ…

  • ಅಲನ್ ಬಾರ್ಡರ್ ಪ್ರಶಸ್ತಿ - ಮಿಚೆಲ್ ಮಾರ್ಷ್

ಆಲ್‌ರೌಂಡರ್ ಮಾರ್ಷ್ ತನ್ನ ಮೊದಲ ಅಲನ್ ಬಾರ್ಡರ್ ಪದಕವನ್ನು 233 ಮತಗಳೊಂದಿಗೆ ಭದ್ರಪಡಿಸಿಕೊಂಡರು. ಆಶ್ಚರ್ಯ ಏನೆಂದರೆ ಎರಡು ಐಸಿಸಿ ಟ್ರೋಫಿ ಗೆದ್ದ ನಾಯಕ ಪ್ಯಾಟ್ ಕಮಿನ್ಸ್‌ ಅವರಿಗಿಂತ 79 ಮತ ಹೆಚ್ಚು ಮತ ಪಡೆದರು. 2023ರಲ್ಲಿ ವೈಟ್​ ಬಾಲ್ ಕ್ರಿಕೆಟ್​ ಮತ್ತು ಟೆಸ್ಟ್​ ಕ್ರಿಕೆಟ್​​ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದರು. ಗಾಯದ ನಂತರ ತಂಡಕ್ಕೆ ಮರಳಿದ್ದ ಮಾರ್ಷ್, ಬೌಲಿಂಗ್​​ನಲ್ಲೂ ತಂಡಕ್ಕೆ ಕೊಡುಗೆ ನೀಡಿದ್ದರು. ಈಗಾಗಲೇ ಅಗ್ರ ಕ್ರಮಾಂಕದ ಬ್ಯಾಟರ್​ ಆಗಿರುವ ಮಾರ್ಷ್, ಏಕದಿನ ವಿಶ್ವಕಪ್​​ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಆಶಸ್ ಟೆಸ್ಟ್​ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು.

  • ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ - ಆಶ್ಲೇ ಗಾರ್ಡ್ನರ್

ವಿಶ್ವ ಶ್ರೇಷ್ಠ ಆಲ್​ರೌಂಡರ್​​ ಆಶ್ಲೇ ಗಾರ್ಡ್ನರ್ ಅವರು ಸತತ ಎರಡನೇ ಬಾರಿಗೆ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿಯನ್ನು ಗೆದ್ದರು. 2022ರಲ್ಲೂ ಈ ಪ್ರಶಸ್ತಿಯನ್ನು ಗೆದ್ದಿದ್ದ ಗಾರ್ಡ್ನರ್​, ಮತ್ತೊಮ್ಮೆ ಈ ಪ್ರಶಸ್ತಿ ಗೆಲ್ಲಲು 147 ಮತಗಳನ್ನು ಪಡೆದರು. ಪ್ರಶಸ್ತಿಯ ರೇಸ್​ನಲ್ಲಿ ಗಾರ್ಡ್ನರ್​​ಗೆ ಪೈಪೋಟಿ ನೀಡಿದ ಎಲಿಸ್ ಪೆರ್ರಿ 134 ಮತ, ಅನ್ನಾಬೆಲ್ ಸದರ್ಲೆಂಡ್ 106 ಮತ ಪಡೆದರು. ಕ್ರಿಕೆಟ್​ನ ಮೂರು ಸ್ವರೂಪಗಳಲ್ಲೂ ಮಿಂಚಿದ ಗಾರ್ಡ್ನರ್, ಪ್ರಮುಖ ಸರಣಿಗಳ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್​​ನಲ್ಲಿ ಅಸಾಧಾರಣ ಕೊಡುಗೆ ನೀಡಿದ್ದರು.

  • ಶೇನ್ ವಾರ್ನ್ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ - ನಾಥನ್ ಲಿಯಾನ್

ನಾಥನ್ ಲಿಯಾನ್ ಅವರು ಕಳೆದ ವರ್ಷದ ಅಮೋಘ ಕೊಡುಗೆ ನೀಡಿದ್ದರು. ಟೆಸ್ಟ್​​ನಲ್ಲಿ ವಿಕೆಟ್ ಬೇಟೆಯಾಡಿರುವ ಲಿಯಾನ್, ಶೇನ್​ ವಾರ್ನ್ ವರ್ಷದ ಟೆಸ್ಟ್​ ಆಟಗಾರ ಪ್ರಶಸ್ತಿ ಗೆದ್ದರು. ಗಾಯಗೊಂಡು ತಂಡಕ್ಕೆ ಮರಳಿದ ಸ್ಪಿನ್ನರ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್​ ಪಟ್ಟಕೇರಲು ನಿರ್ಣಾಯಕ ಪಾತ್ರವಹಿಸಿದ್ದರು. ಅಲ್ಲದೆ, 500ನೇ ಟೆಸ್ಟ್ ವಿಕೆಟ್​ ಪಡೆದು ವಿಶೇಷ ದಾಖಲೆ ಬರೆದರು.

  • ಪುರುಷರ ಏಕದಿನ ಆಟಗಾರ - ಮಿಚೆಲ್ ಮಾರ್ಷ್

ವಿಶ್ವಕಪ್ ಹೀರೋಗಳಾದ ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್ ಮತ್ತು ಆಡಮ್ ಜಂಪಾ ಅವರನ್ನು ಹಿಂದಿಕ್ಕಿ ತಮ್ಮ ಮೊದಲ ಏಕದಿನ ಆಟಗಾರ ಪ್ರಶಸ್ತಿಯನ್ನು ಗೆದ್ದರು. ದ್ವಿಪಕ್ಷೀಯ ಸರಣಿಗಳು ಮತ್ತು ವಿಶ್ವಕಪ್​​ನಲ್ಲಿ ನಿರ್ಣಾಯಕ ಇನ್ನಿಂಗ್ಸ್​ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ ಆಗಿ ಅವರು ಸ್ಥಿರ ಪ್ರದರ್ಶನ ನೀಡಿದರು. ಬ್ಯಾಟ್ ಜೊತೆಗೆ ಬೌಲಿಂಗ್​​ನಲ್ಲೂ ಪ್ರಮುಖ ಪಾತ್ರವಹಿಸಿದ್ದರು.

  • ಪುರುಷರ ಟಿ20ಐ ಆಟಗಾರ - ಜೇಸನ್ ಬೆಹ್ರೆನ್ಡಾರ್ಫ್

2023ರಲ್ಲಿ ಆಸೀಸ್​ ಕೇವಲ ಎರಡು ಟಿ20 ದ್ವಿಪಕ್ಷೀಯ ಸರಣಿಗಳಲ್ಲಿ ಭಾಗವಹಿಸಿತ್ತು. ಈ ಪ್ರವಾಸಗಳಲ್ಲಿ ಜೇಸನ್ ಬೆಹ್ರೆನ್ಡಾರ್ಫ್ ಗಮನಾರ್ಹ ಪ್ರಭಾವ ಬೀರಿದರು. ವಿಶೇಷವಾಗಿ ಭಾರತದಲ್ಲಿ ಪ್ರಭಾವಶಾಲಿ ಪ್ರದರ್ಶನಗಳೊಂದಿಗೆ ಈ ಸ್ವರೂಪಕ್ಕೆ ಕಂಬ್ಯಾಕ್ ಮಾಡಿದರು. ತಮ್ಮ ಸಹ ಆಟಗಾರರಿಗಿಂತ ಕಡಿಮೆ ವಿಕೆಟ್​​ ಪಡೆದರೂ 5 ಪಂದ್ಯಗಳಲ್ಲಿ ಬೆಹ್ರೆನ್ಡಾರ್ಫ್ ಅಸಾಧಾರಣ ಎಕಾನಮಿ ರೇಟ್​ (6.68)​ ಹೊಂದಿದ್ದ ಕಾರಣ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಎದುರಾಳಿ ಬ್ಯಾಟ್ಸ್​​ಮನ್​​ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

  • ಮಹಿಳಾ ಟಿ20ಐ ಮತ್ತು ವರ್ಷದ ಏಕದಿನ ಆಟಗಾರ್ತಿ - ಎಲಿಸ್ ಪೆರ್ರಿ

ವರ್ಷದುದ್ದಕ್ಕೂ ಪರಿಣಾಮಕಾರಿ ಪ್ರದರ್ಶನ ತೋರಿದ ಎಲಿಸ್ ಪೆರ್ರಿ ಮಹಿಳಾ ವಿಭಾಗದ ಟಿ20ಐ ಮತ್ತು ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿಗಳನ್ನು ಮುಡಿಗೇರಿಕೊಂಡರು. ಬ್ಯಾಟಿಂಗ್ ಮತ್ತು ಬೌಲಿಂಗ್​​ನಲ್ಲಿ ಅಮೋಘ ಕಾಣಿಕೆ ನೀಡಿದರು. ಮಹಿಳೆಯರ ಆಶಸ್ ಸರಣಿ, ಐರ್ಲೆಂಡ್ ಮತ್ತು ಭಾರತದ ವಿರುದ್ಧ ಅಸಾಧಾರಣ ಇನ್ನಿಂಗ್ಸ್​​ಗಳೊಂದಿಗೆ ಸ್ಥಿರತೆ ಮತ್ತು ಹೊಂದಾಣಿಕೆಯ ಪ್ರದರ್ಶನ ನೀಡಿದ್ದರು. ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದರು.

ವರ್ಷದ ಮಹಿಳಾ ದೇಶೀಯ ಆಟಗಾರ್ತಿಯರ ಪಟ್ಟಿ

  • ವರ್ಷದ ಮಹಿಳಾ ದೇಶೀಯ ಆಟಗಾರ್ತಿಯರು: ಎಲಿಸ್ ವಿಲ್ಲಾನಿ ಮತ್ತು ಸೋಫಿ ಡೇ
  • ವರ್ಷದ ಪುರುಷರ ದೇಶೀಯ ಆಟಗಾರ: ಕ್ಯಾಮೆರಾನ್ ಬ್ಯಾಂಕ್ರಾಫ್ಟ್
  • ಬ್ರಾಡ್ಮನ್ ವರ್ಷದ ಯುವ ಕ್ರಿಕೆಟಿಗ: ಫರ್ಗುಸ್ ಓ'ನೀಲ್
  • ಬೆಟ್ಟಿ ವಿಲ್ಸನ್ ವರ್ಷದ ಯುವ ಕ್ರಿಕೆಟಿಗ: ಎಮ್ಮಾ ಡಿ ಬ್ರೌಗ್
  • ಬಿಬಿಎಲ್-13 ಟೂರ್ನಿಯ ಆಟಗಾರ: ಮ್ಯಾಟ್ ಶಾರ್ಟ್ (ಅಡಿಲೇಡ್ ಸ್ಟ್ರೈಕರ್ಸ್)
  • ಡಬ್ಲ್ಯುಬಿಬಿಎಲ್-9 ಟೂರ್ನಿಯ ಆಟಗಾರ್ತಿ: ಚಾಮರಿ ಅಟ್ಟಪಟ್ಟು (ಸಿಡ್ನಿ ಥಂಡರ್)

ಇದನ್ನೂ ಓದಿ: ಆಡಿದ 4 ಪಂದ್ಯಗಳಲ್ಲಿ ಸತತ 5 ಶತಕ; ರಣಜಿಯಲ್ಲಿ 12th ಫೇಲ್ ಚಿತ್ರದ ನಿರ್ದೇಶಕನ ಪುತ್ರ ಅಗ್ನಿಚೋಪ್ರಾ ವಿಶ್ವದಾಖಲೆ

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ