logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್‌ ಸಂದರ್ಭ ಮೈದಾನದಲ್ಲಿ ಓಡುವೆ ಎಂದು ರೀಲ್ಸ್‌ ಬಿಟ್ಟವನ ಸ್ಥಿತಿ ನೋಡಿ! ಬೆಂಗಳೂರು ಪೊಲೀಸರ ಪ್ರತಿಭೆಗೆ ಸಾಟಿಯುಂಟೆ

ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್‌ ಸಂದರ್ಭ ಮೈದಾನದಲ್ಲಿ ಓಡುವೆ ಎಂದು ರೀಲ್ಸ್‌ ಬಿಟ್ಟವನ ಸ್ಥಿತಿ ನೋಡಿ! ಬೆಂಗಳೂರು ಪೊಲೀಸರ ಪ್ರತಿಭೆಗೆ ಸಾಟಿಯುಂಟೆ

Praveen Chandra B HT Kannada

May 18, 2024 08:40 PM IST

ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್‌ ಸಂದರ್ಭ ಮೈದಾನದಲ್ಲಿ ಓಡುವೆ ಎಂದು ರೀಲ್ಸ್‌ ಬಿಟ್ಟವ

    • ಈ ಐಪಿಎಲ್‌ ಋತುವಿನಲ್ಲಿ ಮೇ 18ರಂದು ಆರ್‌ಸಿಬಿ-ಸಿಎಸ್‌ಕೆ ಕ್ರಿಕೆಟ್‌ ಮ್ಯಾಚ್‌ ನಡೆಯುವ ಸಂದರ್ಭ ನಾನು ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಓಡುವೆ ಎಂದು ಭದ್ರತೆಗೆ ಸವಾಲು ಹಾಕಿದ ಯುವಕನೊಬ್ಬ ಈಗ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾನೆ. ಈ ಕುರಿತು ಬೆಂಗಳೂರು ಪೊಲೀಸರು ರೀಲ್ಸ್‌ ಮೂಲಕವೇ ಉತ್ತರ ನೀಡಿದ್ದಾರೆ.
ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್‌ ಸಂದರ್ಭ ಮೈದಾನದಲ್ಲಿ ಓಡುವೆ ಎಂದು ರೀಲ್ಸ್‌ ಬಿಟ್ಟವ
ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್‌ ಸಂದರ್ಭ ಮೈದಾನದಲ್ಲಿ ಓಡುವೆ ಎಂದು ರೀಲ್ಸ್‌ ಬಿಟ್ಟವ

ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯ ಆತಂಕದ ನಡುವೆ ಆರ್‌ಸಿಬಿ-ಸಿಎಸ್‌ಕೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದೊಳಗೆ ಓಡುವೆ ಎಂದು ಯುವಕನೊಬ್ಬ ವಿಡಿಯೋ ಮಾಡಿದ್ದು, ಅದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಬೆಂಗಳೂರು ನಗರ ಪೊಲೀಸರು ಆ ಯುವಕನ ಬಂಧಿಸಿದ್ದು, "ಭದ್ರತೆ ಉಲ್ಲಂಘನೆಗೆ ಪ್ರಯತ್ನಿಸಿದರೆ ಕಸ್ಟಡಿಗೆ ನೇರವಾಗಿ ಸಿಕ್ಸರ್‌ ಹೊಡೆತ" ಎಂದು ರೀಲ್ಸ್‌ ಮೂಲಕವೇ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಈ ರೀತಿ ರೀಲ್ಸ್‌ ಮಾಡಿದವನನ್ನು ಕಬ್ಬನ್‌ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದು ಇಂಗ್ಲೆಂಡ್‌-ಆಸ್ಟ್ರೇಲಿಯಾ ಅಲ್ಲ; 180 ವರ್ಷಗಳ ಹಿಂದೆಯೇ ಆಡಿತ್ತು ಯುಎಸ್‌-ಕೆನಡಾ

ರಿಷಭ್ ಪಂತ್ ಪವರ್​ಫುಲ್ ಆಟ; ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ

ಸಪ್ತಸಾಗರದಾಚೆ ಚುಟುಕು ವಿಶ್ವಸಮರಕ್ಕೆ ಚಾಲನೆ; ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಯುಎಸ್‌ಎ vs ಕೆನಡಾ ಹಣಾಹಣಿ

ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ; ಜನ್ಮದಿನದಂದೇ ಡಿಕೆ ವಿದಾಯದ ಭಾವುಕ ಪೋಸ್ಟ್

ಯುವಕನ ವೈರಲ್‌ ರೀಲ್ಸ್‌

"ಈ ಐಪಿಎಲ್‌ ಸೀಸನ್‌ನಲ್ಲಿ ಮೇ 18ರಂದು ನಾನು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಎಲ್ಲೆಡೆ ಓಡುವೆ. ಇದು ಆರ್‌ಸಿಬಿ ಸಿಎಸ್‌ಕೆ ಮ್ಯಾಚ್‌ ನಡೆಯುವ ಮೇ 18ರಂದು ನಡೆಯಲಿದೆ. ತುಂಬಾ ಜನರಿಗೆ ಕಾಲ್‌ ಮಾಡಿ, ನೆಟ್‌ವರ್ಕ್‌ ಬಳಸಿ ನಾನು ನಾನು ಒಂದು ಸ್ಟ್ಯಾಂಡ್‌ ಪಡೆದಿದ್ದೇನೆ. ಈ ಅವಕಾಶವನ್ನು ಬಳಸಿ ಮೈದಾನವಿಡಿ ಓಡಲಿದ್ದೇನೆ" ಎಂದು ಆತ ಹಾಕಿರುವ ಪೋಸ್ಟ್‌ ವೈರಲ್‌ ಆಗಿತ್ತು.

ಇದೀಗ ಆತನ ವೈರಲ್‌ ಪೋಸ್ಟ್‌ಗೆ ಬೆಂಗಳೂರು ನಗರ ಪೊಲೀಸರು ತನ್ನ ಒಂದಿಷ್ಟು ಪ್ರತಿಭೆಯನ್ನು ಸೇರಿಸಿ ಇನ್ನೊಂದು ರೀಲ್ಸ್‌ ಮಾಡಿದ್ದಾರೆ. ಆ ರೀಲ್ಸ್‌ನಲ್ಲಿ ಈ ರೀತಿ ಹೇಳಿದವ ಮೈದಾನವಿಡಿ ಓಡುವಂತೆ , ಆತನ ಹಿಂದೆ ಪೊಲೀಸರು ಓಡಿ ಹಿಡಿಯುವಂತೆ ಮತ್ತು ಕೆಲವು ನಿಮಿಷಗಳ ನಂತರ ಪೊಲೀಸರ ಕಸ್ಟಡಿಯಲ್ಲಿರುವುದನ್ನು ತೋರಿಸಲಾಗಿದೆ. ಜತೆಗೆ ಈ ರೀಲ್ಸ್‌ಗೆ ಹೀಗೆ ಕ್ಯಾಪ್ಷನ್‌ ನೀಡಿದ್ದಾರೆ. "ಉತ್ತಮ ಪ್ರಯತ್ನ ಬಡ್ಡಿ, ಆದರೆ, ಐಪಿಎಲ್‌ ಸಂದರ್ಭದಲ್ಲಿ ಭದ್ರತೆ ಉಲ್ಲಂಘನೆ ಮಾಡಲು ಪ್ರಯತ್ನಿಸಿದರೆ ನಮ್ಮ ಕಡೆಯಿಂದ ಕಸ್ಟಡಿಯತ್ತ ಸಿಕ್ಸರ್‌ ಹೊಡೆಯುವುದು ಖಾತ್ರಿ. ಸಾರಿ ಮೇಟ್‌, ನೀನು ಸ್ಟಂಪ್‌ ಆದೆ" ಎಂದು ಬೆಂಗಳೂರು ಪೊಲೀಸರು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಪೊಲೀಸರ ಪ್ರತಿಭೆಗೆ ವಾಹ್‌ ಅಂದ ನೆಟ್ಟಿಗರು

"ಬಹುಶಃ ಈ ಬೆಂಗಳೂರು ನಗರ ಪೊಲೀಸ್‌ ಟ್ವಿಟ್ಟರ್‌ ಪುಟದ ಅಡ್ಮಿನ್‌ ಈ ಹಿಂದೆ ಮೀಮ್ಸ್‌ ಪುಟದ ಅಡ್ಮಿನ್‌ ಆಗಿರಬೇಕು. ಭದ್ರತೆ ಉಲ್ಲಂಘನೆಗೆ ಸರಿಯಾದ ಪೆಟ್ಟು ನೀಡಿದ್ದಾರೆ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಅತ್ಯುತ್ತಮ ಕೆಲಸ ಬೆಂಗಳೂರು ಪೊಲೀಸ್.‌ ನೀವು ಯಾವತ್ತು ಬೆಸ್ಟ್‌" "ಅದೇ ರೀತಿ ಮಳೆಯನ್ನು ಸ್ಟಾಪ್‌ ಮಾಡಿ ಬೆಂಗಳೂರು ಪೊಲೀಸರೇ" "ಈ ಪುಟದ ಅಡ್ಮಿನ್‌ ರೀಲ್ಸ್‌ ಮಾಡುವವರು ಆಗಿರಬಹುದು. ಅವರಿಗೆ ಪೊಲೀಸ್‌ ಜಾಬ್‌ ಪಾರ್ಟ್‌ ಟೈಮ್‌, ರೀಲ್ಸ್‌ ಮಾಡೋದು ಫುಲ್‌ ಟೈಮ್‌" ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ