logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿವಿಯನ್ ರಿಚರ್ಡ್ಸ್–ನೀನಾ ಗುಪ್ತಾ ಮೇಲೆ ಜನಾಂಗೀಯ ಹಾಸ್ಯ; ಗಹಗಹಿಸಿ ನಕ್ಕ ರಮೀಜ್ ರಾಜಾ ವಿರುದ್ಧ ಸಿಡಿದೆದ್ದ ಪುತ್ರಿ ಮಸಾಬಾ

ವಿವಿಯನ್ ರಿಚರ್ಡ್ಸ್–ನೀನಾ ಗುಪ್ತಾ ಮೇಲೆ ಜನಾಂಗೀಯ ಹಾಸ್ಯ; ಗಹಗಹಿಸಿ ನಕ್ಕ ರಮೀಜ್ ರಾಜಾ ವಿರುದ್ಧ ಸಿಡಿದೆದ್ದ ಪುತ್ರಿ ಮಸಾಬಾ

Prasanna Kumar P N HT Kannada

Nov 16, 2023 06:51 PM IST

google News

ರಮೀಜ್ ರಾಜಾ ವಿರುದ್ಧ ಸಿಡಿದೆದ್ದ ಪುತ್ರಿ ಮಸಾಬಾ.

    • ದಿಗ್ಗಜ ವಿವಿಯನ್ ರಿಚರ್ಡ್ಸ್ (Vivian Richards) ಹಾಗೂ ನಟಿ ನೀನಾ ಗುಪ್ತಾ (Neena Gupta) ಕುರಿತ ಜನಾಂಗೀಯ ಹಾಸ್ಯದ ಕಾಮೆಂಟ್​​ಗೆ (Racial Comment) ಪಾಕ್ ಮಾಜಿ ಕ್ರಿಕೆಟಿಗ ರಮಿಜ್ ರಾಜಾ (Ramiz Raja) ನಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
 ರಮೀಜ್ ರಾಜಾ ವಿರುದ್ಧ ಸಿಡಿದೆದ್ದ ಪುತ್ರಿ ಮಸಾಬಾ.
ರಮೀಜ್ ರಾಜಾ ವಿರುದ್ಧ ಸಿಡಿದೆದ್ದ ಪುತ್ರಿ ಮಸಾಬಾ.

ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್, ಐಶ್ವರ್ಯಾ ರೈ ಬಚ್ಚನ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬೆನ್ನಲ್ಲೇ ಮತ್ತೊಬ್ಬ ಪಾಕಿಸ್ತಾನ ತಂಡದ ಮಾಜಿ ಆಟಗಾರ ಟೀಕೆಗೆ ಗುರಿಯಾಗಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್ (Vivian Richards) ಹಾಗೂ ನಟಿ ನೀನಾ ಗುಪ್ತಾ (Neena Gupta) ಅವರ ಕುರಿತ ಜನಾಂಗೀಯ ಹಾಸ್ಯದ ಕಾಮೆಂಟ್​​ಗೆ (Racial Comment) ಪಾಕ್ ಕ್ರಿಕೆಟಿಗ ರಮಿಜ್ ರಾಜಾ (Ramiz Raja) ನಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ರಮೀಜ್ ರಾಜಾ ಅವರ ಜಂನಾಂಗೀಯ ಹಾಸ್ಯಕ್ಕೆ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ (Masaba Gupta) ಟೀಕಿಸಿದ್ದಾರೆ. ಮಸಾಬಾ, ವಿವಿಯನ್ ರಿಚರ್ಡ್ಸ್ ಮತ್ತು ನೀನಾ ಗುಪ್ತಾ ಅವರ ಪುತ್ರಿ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಟಾಕ್ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ರಿಚರ್ಡ್ಸ್​ ಮತ್ತು ನೀನಾ ಗುಪ್ತಾ ಕುರಿತ ವಿಷಯವೊಂದಕ್ಕೆ ವ್ಯಂಗ್ಯದ ನಗುವಾಡಿದ್ದರು.

ಜನಾಂಗೀಯ ಹಾಸ್ಯದ ವಿಡಿಯೋ ವೈರಲ್

ಟಾಕ್ ಶೋನಲ್ಲಿ ಅತಿಥಿಯಾಗಿದ್ದ ಮಹಿಳೆಯೊಬ್ಬರು ಮಾಡಿದ ಟೀಕೆಗೆ ರಮೀಜ್​​ ನಗುತ್ತಾರೆ. ರಿಚರ್ಡ್ಸ್ ಮತ್ತು ನೀನಾ ಗುಪ್ತಾ ಕುರಿತ ಜನಾಂಗೀಯ ಹಾಸ್ಯ ಅದಾಗಿತ್ತು. ನಿರೂಪಕರು, ನೀವು ಕ್ರಿಕೆಟ್ ನೋಡುತ್ತೀರಾ ಎಂದು ಆ ಮಹಿಳೆಗೆ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಆಕೆ, ನಾನು ಕ್ರಿಕೆಟ್ ನೋಡುತ್ತೇನೆ. ಆದರೆ ವಿವಿಯನ್ ರಿಚರ್ಡ್ಸ್, ನೀನಾ ಗುಪ್ತಾ ಅವರೊಂದಿಗೆ ಸಂಬಂಧ ಹೊಂದಿದ್ದನ್ನು ನೋಡಿ ನನ್ನ ಹೃದಯ ಒಡೆದಂತಾಯಿತು ಎಂದು ನಗುತ್ತಾ ಹೇಳುತ್ತಾರೆ. ಆ ಮೂಲಕ ಕಪ್ಪು ಮತ್ತು ಬಿಳಿ ವರ್ಣದವರು ಎಂದು ಪರೋಕ್ಷವಾಗಿ ಟೀಕಿಸಿದ್ದರು.

ಮಹಿಳೆಯ ಜನಾಂಗೀಯ ಹಾಸ್ಯಕ್ಕೆ ರಮಿಜ್ ರಾಜಾ ಗಹಗಹಸಿ ನಕ್ಕಿದ್ದರು. ಈ ವಿಡಿಯೋವನ್ನು ದಿ ಕ್ರಿಕ್ ಗೈ ಹೆಸರಿನ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಐಶ್ವರ್ಯಾ ರೈ ಕುರಿತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅಬ್ದುಲ್ ರಜಾಕ್​ ವಿರುದ್ಧ ಆಕ್ರೋಶ ವ್ಯಕ್ತವಾಗಿರುವುದನ್ನು ಕಾಣಬಹುದು. ಆದರೆ, ಯಾರೂ ಈ ಬಗ್ಗೆ ಗಮನ ಹರಿಸಲಿಲ್ಲ. ಈ ಚಾನೆಲ್​​ನಲ್ಲಿ ನೀನಾ ಗುಪ್ತಾ ಅವರನ್ನು ಗೇಲಿ ಮಾಡಲಾಗಿದೆ. ಮತ್ತು ರಿಚರ್ಡ್ಸ್ ಅವರ ಮೇಲೆ ಮಾಡಿರುವ ಜನಾಂಗೀಯ ಟೀಕೆ ಮಾಡಲಾಗಿದೆ. ಆದರೆ ಈ ಬಗ್ಗೆ ಯಾರೂ ಮಾತಾಡುತ್ತಿಲ್ಲ ಎಂದು ಕ್ಯಾಪ್ಶನ್ ಬರೆಯಲಾಗಿದೆ.

ರಮೀಜ್​ ವಿರುದ್ಧ ಮಸಾಬ ಆಕ್ರೋಶ

ಈ ಬಗ್ಗೆ ಪುತ್ರಿ ಮಸಾಬಾ ಕಿಡಿಕಾರಿದ್ದಾರೆ. ತಮ್ಮ ಪೋಷಕರಾದ ವಿವಿಯನ್ ರಿಚರ್ಡ್ಸ್ ಮತ್ತು ನೀನಾ ಗುಪ್ತಾ ವಿರುದ್ಧ ಜನಾಂಗೀಯ ಕಾಮೆಂಟ್‌ಗೆ ರಮಿಜ್ ರಾಜಾ ನಗುತ್ತಿರುವ ಬಗ್ಗೆ ಮಸಾಬಾ ಗುಪ್ತಾ ಟೀಕಿಸಿದ್ದಾರೆ. ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ಆತ್ಮೀಯ ರಮಿಜ್ ರಾಜಾ (ಸರ್) ಘನತೆ ಎಂಬುದು ಕೆಲವರಿಗೆ ಮಾತ್ರ ಇರುವ ಒಂದು ಗುಣ. ನಾನು, ನನ್ನ ತಂದೆ, ತಾಯಿ ಅದನ್ನು ಹೊಂದಿದ್ದೇವೆ. ನಿಮ್ಮ ಬಳಿ ಅಂತಹದ್ದೇನೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

30 ವರ್ಷಗಳ ಹಿಂದೆ ಜಗತ್ತು ನಗುವುದನ್ನು ನಿಲ್ಲಿಸಿದ ಯಾವುದೋ ಒಂದು ವಿಷಯದ ಬಗ್ಗೆ ಪಾಕಿಸ್ತಾನದ ರಾಷ್ಟ್ರೀಯ ಟಿವಿಯಲ್ಲಿ ಚರ್ಚೆ ನಡೆಸಿ, ಅದರಲ್ಲಿ ನೀವು ನಗುವುದನ್ನು ನೋಡಿ ಬೇಸರ ಉಂಟಾಯಿತು. ಮುಂದಿನ ಭವಿಷ್ಯದತ್ತ ಹೆಜ್ಜೆ ಹಾಕಿ. ನಾವು ಮೂವರೂ ಚೆನ್ನಾಗಿದ್ದೇವೆ ಎಂದು ಮಸಾಬಾ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ರಮೀಜ್ ರಾಜಾ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗಿದೆ. ಏಷ್ಯಾಕಪ್ ವೇಳೆ ಅಂದರೆ ಸೆಪ್ಟೆಂಬರ್ 12ರಂದು ನಡೆದ ಚರ್ಚೆ ಇದಾಗಿದೆ.

ರಿಚರ್ಡ್ಸ್-ನೀನಾ ಮದುವೆಯಾಗಿರಲಿಲ್ಲ!

ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್ ವಿವಾಹವಾಗಿರಲಿಲ್ಲ. ಜೀವನದುದ್ದಕ್ಕೂ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಈ ಜೋಡಿ ಮಸಾಬಾ ಎಂಬ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾಗಿದ್ದರು. ನವೆಂಬರ್ 2, 1989ರಂದು ಮಸಾಬಾ ಜನಿಸಿದರು. 2008ರಲ್ಲಿ ನೀನಾ, ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ  ಎಂಬವರನ್ನು ವಿವಾಹವಾದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ