logo
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Eng: ಆಂಗ್ಲರ ವಿರುದ್ಧ ವಿಶ್ವಕಪ್ ತಂತ್ರ ಅನುಸರಿಸಿ; ರೋಹಿತ್ ಶರ್ಮಾ ಪಡೆಗೆ ದಿನೇಶ್ ಕಾರ್ತಿಕ್ ಸಲಹೆ

IND vs ENG: ಆಂಗ್ಲರ ವಿರುದ್ಧ ವಿಶ್ವಕಪ್ ತಂತ್ರ ಅನುಸರಿಸಿ; ರೋಹಿತ್ ಶರ್ಮಾ ಪಡೆಗೆ ದಿನೇಶ್ ಕಾರ್ತಿಕ್ ಸಲಹೆ

Jayaraj HT Kannada

Jan 29, 2024 07:53 PM IST

ದಿನೇಶ್ ಕಾರ್ತಿಕ್

    • Dinesh Karthik: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ವಿಶ್ವಕಪ್ ಕಾರ್ಯತಂತ್ರವನ್ನು ಅನುಸರಿಸುವಂತೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ರೋಹಿತ್ ಶರ್ಮಾ ಬಳಗಕ್ಕೆ ಸಲಹೆ ನೀಡಿದ್ದಾರೆ.
ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್

ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (India vs England, 1st Test) ಪ್ರವಾಸಿ ಇಂಗ್ಲೆಂಡ್ ತಂಡವು 28 ರನ್‌ಗಳ ರೋಚಕ ಜಯ ಸಾಧಿಸಿತು. ಮೊದಲ ಇನ್ನಿಂಗ್ಸ್ ನಂತರ, ಪಂದ್ಯದಲ್ಲಿ ಭಾರತವು ಸುಲಭವಾಗಿ ಗೆಲ್ಲುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಎರಡನೇ ಇನ್ನಿಂಗ್ಸ್‌ ಮೂಲಕ ಲಯ ಕಂಡುಕೊಂಡ ಆಂಗ್ಲರು ಭರ್ಜರಿ ಮೊತ್ತ ಕಲೆ ಹಾಕಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಬಳಿಕ 100ಕ್ಕೂ ಅಧಿಕ ರನ್‌ಗಳ ಮುನ್ನಡೆ ಸಾಧಿಸಿದ್ದ ಭಾರತ, ಆ ಬಳಿಕ ಅಚ್ಚರಿಯ ಸೋಲು ಕಂಡಿತು. ಟೀಮ್‌ ಇಂಡಿಯಾ ಸೋಲನ್ನು ವಿಶ್ಲೇಷಿಸಿದ ಕ್ರಿಕೆಟಿಗ ದಿನೇಶ್ ಕಾರ್ತಿಕ್, ತಂಡದ ಬ್ಯಾಟಿಂಗ್ ಘಟಕದೊಳಗಿನ ಕೆಲವು ಪ್ರಮುಖ ಸಮಸ್ಯೆಗಳತ್ತ ಗಮನ ಚೆಲ್ಲಿದರು.

ಬ್ಯಾಟಿಂಗ್ ಮಾಡುವಾಗ ಭಾರತ ತಂಡಕ್ಕೆ ವೈಫಲ್ಯದ ಭಯವಿದೆಯೇ ಎಂದು ಎಂಬ ಪ್ರಶ್ನೆಗೆ ಊತ್ತರಿಸಿದ ಕಾರ್ತಿಕ್, “ಆಟದ ವೇಳೆ ಅಂಥ ಭಾವನೆಗಳನ್ನು ಹೊಂದಿರುವುದು ಸಾಮಾನ್ಯ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ ಸರಣಿ ನಡೆಯುತ್ತಿದೆ. ಭಾರತ ಚೇಸಿಂಗ್‌ ಮಾಡುತ್ತಿದೆ. ಎದುರಾಳಿಗಳು ಎಚ್ಚರದಿಂದ ಆಡುತ್ತಾರೆ. ಪಿಚ್ ಕೂಡಾ ಕಠಿಣವಾಗಿದೆ. ಹೀಗಾಗಿ ಒಬ್ಬ ಬ್ಯಾಟರ್ ಆಗಿ ಇದು ನಿಜಕ್ಕೂ ಕಠಿಣ ಕೆಲಸ” ಎಂದು ಡಿಕೆ ಕ್ರಿಕ್‌ಬಜ್‌ಗೆ ಹೇಳಿದ್ದಾರೆ.

ಇದನ್ನೂ ಓದಿ | ಹೈದರಾಬಾದ್ ಟೆಸ್ಟ್ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಜಸ್ಪ್ರೀತ್ ಬುಮ್ರಾಗೆ ಐಸಿಸಿ ಛೀಮಾರಿ; ಕಾರಣ ಹೀಗಿದೆ

“ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ತಮ್ಮ ಶಾಟ್‌ಗಳ ಆಯ್ಕೆಯಿಂದ ತಂಡವನ್ನು ಆರಂಭದಿಂದಲೇ ಮುಂದೆ ನಿಂತು ಮುನ್ನಡೆಸಿದರು. ಆ ಬಳಿಕ ಶ್ರೇಯಸ್ ಅಯ್ಯರ್ ಸಾಕಷ್ಟು ಬಾರಿ ನಾಯಕನನ್ನು ಅನುಸರಿಸಿದರು. ಅದು ತಂಡದ ಇತರ ಬ್ಯಾಟರ್‌ಗಳ ಒತ್ತಡವನ್ನು ಕಡಿಮೆ ಮಾಡಿತು. ಇಂದು ಇಂಥ ಆಟ ಇಬ್ಬರ ಬ್ಯಾಟಿಂಗ್‌ನಲ್ಲಿಯೂ ಕಾಣುತ್ತಿಲ್ಲ. ಅಯ್ಯರ್‌ ಅವರ ದೊಡ್ಡ ಶಾಟ್ ಆಡುವ ಧೈರ್ಯ ಕಾಣೆಯಾಗಿದೆ. ಅವರು ಆಫ್-ಸ್ಪಿನ್ನರ್‌ಗಳ ಎಸೆತವನ್ನು ಕಣ್ಣುಮುಚ್ಚಿ ಎದುರಿಸಬಲ್ಲ ಮತ್ತು ಬೌಂಡರಿಗಳನ್ನು ಹೊಡೆಯಬಲ್ಲ ಸಾಮರ್ಥ್ಯವಿರುವ ಆಟಗಾರ. ಆದರೆ ಒತ್ತಡ ಮತ್ತು ರನ್‌ಗಳ ಕೊರತೆಯಿಂದ ಸ್ವಲ್ಪ ಮಟ್ಟಿಗೆ ಆತ್ಮವಿಶ್ವಾಸ ಕಡಿಮೆಯಾಗಿದೆ. ಪ್ರತಿಯೊಬ್ಬ ಭಾರತೀಯ ಅಗ್ರ ಕ್ರಮಾಂಕದ ಬ್ಯಾಟರ್‌ ಕೂಡಾ ಕಠಿಣ ಪರಿಶ್ರಮ ಪಡುತ್ತಿರುವುದು ಕಾಣುತ್ತಿದೆ. ಆದರೆ ಅವರು ಅದನ್ನು ದಾಟಿ ಆಡಬೇಕು,” ಎಂದು ದಿನೇಶ್‌ ಕಾರ್ತಿಕ್ ಹೇಳಿದ್ದಾರೆ.

ಇದನ್ನೂ ಓದಿ | ಇಂಗ್ಲೆಂಡ್ ಅನ್ನು ಹಗುರವಾಗಿ ಪರಿಗಣಿಸಬೇಡಿ; ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ ಭಾರತಕ್ಕೆ ನಾಸಿರ್ ಹುಸೈನ್ ಎಚ್ಚರಿಕೆ ಕರೆ

ಐದು ಪಂದ್ಯಗಳ ಸರಣಿಯಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 1-0 ಅಂತರದಿಂದ ಮುನ್ನಡೆ ಸಾಧಿಸಿದ ಬಳಿಕ, ಸ್ಟೋಕ್ಸ್‌ ಬಳಗದ ಪ್ರದರ್ಶನವನ್ನು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಶ್ಲಾಘಿಸಿದ್ದಾರೆ. ಅಲ್ಲದೆ ಭಾರತಕ್ಕೆ ಈ ಸೋಲು ಎಚ್ಚರಿಕೆಯ ಕರೆಗಂಟೆ ಎಂದು ಹೇಳಿದ್ದಾರೆ. ಭಾರತ ತುಂಬಾ ಉತ್ತಮ ತಂಡ. ಅಲ್ಲದೆ ತವರಿನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಕಠಿಣವಾಗಲಿದೆ ಎಂಬುದನ್ನು ಇತಿಹಾಸ ಹೇಳುತ್ತದೆ. ಆದರೆ ಈ ಪರಿಸ್ಥಿತಿಗಳಲ್ಲಿ ಬಾಜ್‌ಬಾಲ್ ವಿಧಾನ ಕೆಲಸ ಮಾಡಬಲ್ಲದು ಎಂದು ಇಂಗ್ಲೆಂಡ್ ತೋರಿಸಿಕೊಟ್ಟಿದೆ. ಹೀಗಾಗಿ ಇದು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಹುಸೇನ್ ಹೇಳಿದ್ದಾರೆ.

ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯವು ಫೆಬ್ರವರಿ 2ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ.

(This copy first appeared in Hindustan Times Kannada website. To read more like this please logon to kannada.hindustantime.com )

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ