1988 ರಿಂದ 2024 ರವರೆಗೆ ಅಂಡರ್-19 ವಿಶ್ವಕಪ್ ವಿಜೇತರ ಪಟ್ಟಿ; ಫೈನಲ್ ಸೋತರೂ ಭಾರತವೇ ಅತ್ಯಂತ ಯಶಸ್ವಿ ತಂಡ
Feb 11, 2024 10:14 PM IST
1988 ರಿಂದ 2024 ರವರೆಗೆ ಅಂಡರ್-19 ವಿಶ್ವಕಪ್ ವಿಜೇತರ ಪಟ್ಟಿ
- Under 19 Cricket World Cup winners list : 1988ರಿಂದ 2024ರವರೆಗೆ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಟ್ರೋಫಿ ಗೆದ್ದ ತಂಡಗಳ ಪಟ್ಟಿ ಇಲ್ಲಿದೆ. ಅತ್ಯಂತ ಯಶಸ್ವಿ ತಂಡ ಯಾವುದು ಎನ್ನುವುದರ ಬಗ್ಗೆಯೂ ಮಾಹಿತಿ ಇದೆ.
2024ರ ಅಂಡರ್-19 ವಿಶ್ವಕಪ್ ಟೂರ್ನಿಯ (U19 World Cup 2023) ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ (India vs Australia Final) ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬೆನೋನಿಯ ವಿಲೋಮೂರ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು _ ರನ್ಗಳಿಂದ ಮಣಿಸಿದ ಆಸೀಸ್, 2012, 2018ರ ಸೋಲಿನ ಸೇಡು ತೀರಿಸಿಕೊಂಡಿದೆ.
ಹಾಗಾದರೆ, 1988 ರಿಂದ 2024 ರವರೆಗೆ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಟ್ರೋಫಿ ಗೆದ್ದ ತಂಡಗಳು ಯಾವುವು? ಯಾವ ವರ್ಷ, ಯಾವ ತಂಡದ ವಿರುದ್ಧ ಗೆದ್ದಿವೆ? ಫೈನಲ್ನಲ್ಲಿ ಟೀಮ್ ಇಂಡಿಯಾ ಸೋತರೂ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದ್ದೇಕೆ? ಈ ಎಲ್ಲದಕ್ಕೂ ಉತ್ತರ ಇಲ್ಲಿದೆ.
1988ರಿಂದ 2024ರವರೆಗೆ ಅಂಡರ್-19 ವಿಶ್ವಕಪ್ ಗೆದ್ದ ವಿಜೇತರ ಪಟ್ಟಿ
2024 - ಆಸ್ಟ್ರೇಲಿಯಾ (ಭಾರತ ವಿರುದ್ಧ)
2022 - ಭಾರತ (ಇಂಗ್ಲೆಂಡ್ ವಿರುದ್ಧ)
2020 - ಬಾಂಗ್ಲಾದೇಶ (ಭಾರತ ವಿರುದ್ಧ)
2018 - ಭಾರತ (ಆಸ್ಟ್ರೇಲಿಯಾ ವಿರುದ್ಧ)
2016 - ವೆಸ್ಟ್ ಇಂಡೀಸ್ (ಭಾರತ ವಿರುದ್ಧ)
2014 - ದಕ್ಷಿಣ ಆಫ್ರಿಕಾ (ಪಾಕಿಸ್ತಾನ ವಿರುದ್ಧ)
2012 - ಭಾರತ (ಆಸ್ಟ್ರೇಲಿಯಾ ವಿರುದ್ಧ)
2010 - ಆಸ್ಟ್ರೇಲಿಯಾ (ಪಾಕಿಸ್ತಾನ ವಿರುದ್ಧ)
2008 - ಭಾರತ (ದಕ್ಷಿಣ ಆಫ್ರಿಕಾ ವಿರುದ್ಧ)
2006 - ಪಾಕಿಸ್ತಾನ (ಭಾರತ ವಿರುದ್ಧ)
2004 - ಪಾಕಿಸ್ತಾನ (ವೆಸ್ಟ್ ಇಂಡೀಸ್ ವಿರುದ್ಧ)
2002 - ಆಸ್ಟ್ರೇಲಿಯಾ (ದಕ್ಷಿಣ ಆಫ್ರಿಕಾ ವಿರುದ್ಧ)
2000 - ಭಾರತ (ಶ್ರೀಲಂಕಾ ವಿರುದ್ಧ)
1998 - ಇಂಗ್ಲೆಂಡ್ (ನ್ಯೂಜಿಲ್ಯಾಂಡ್ ವಿರುದ್ಧ
1988 - ಆಸ್ಟ್ರೇಲಿಯಾ (ಪಾಕಿಸ್ತಾನ ವಿರುದ್ಧ)
ಅತಿ ಹೆಚ್ಚು ಟ್ರೋಫಿ ಗೆದ್ದ ತಂಡಗಳು
ಇಂದು (ಫೆಬ್ರವರಿ 11) ಫೈನಲ್ನಲ್ಲಿ ಭಾರತ ಸೋತರೂ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಈವರೆಗೂ 5 ಬಾರಿ ವಿಶ್ವಕಪ್ ಗೆದ್ದಿದೆ. ಇಂದು ಗೆದ್ದಿದ್ದರೆ 6ನೇ ಬಾರಿಗೆ ಚಾಂಪಿಯನ್ ಆಗುತ್ತಿತ್ತು. 2000, 2008, 2012, 2018, 2022ರಲ್ಲಿ ಟ್ರೋಫಿಗೆ ಮುತ್ತಿಕ್ಕಿದ ಭಾರತ, 4 ಬಾರಿ ಫೈನಲ್ನಲ್ಲಿ (ಈ ಸಲವೂ ಸೇರಿ) ಸೋತು ರನ್ನರ್ ಅಪ್ ಆಗಿದೆ. ಫೈನಲ್ ಗೆದ್ದ ಆಸೀಸ್ 2ನೇ ಯಶಸ್ವಿ ತಂಡ ಎನಿಸಿದೆ. ಒಟ್ಟು 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪಾಕಿಸ್ತಾನ ಎರಡು ಸಲ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ತಲಾ 1 ಸಲ ಚಾಂಪಿಯನ್ ಆಗಿವೆ.
ಬಹುಮಾನದ ಮೊತ್ತ
2024ರ ಅಂಡರ್-19 ವಿಶ್ವಕಪ್ ಟೂರ್ನಿಯ ಒಟ್ಟಾರೆ ಬಹುಮಾನದ ಮೊತ್ತ 1.5 ಮಿಲಿಯನ್ ಡಾಲರ್. ಭಾರತೀಯ ಕರೆನ್ಸಿಯಲ್ಲಿ 12.50 ಕೋಟಿಗೂ ಹೆಚ್ಚು. ಆದರೆ ವಿಜೇತರಿಗೆ ಈ ಒಟ್ಟಾರೆ ಬಹುಮಾನದ ಮೊತ್ತದಲ್ಲಿ ಶೇ 40 ರಿಂದ 50 ರಷ್ಟು ಪಾಲು ಸಿಗಲಿದೆ. ರನ್ನರ್ಅಪ್ ತಂಡಕ್ಕೆ 20-30ರಷ್ಟು ಪಾಲು ಸಿಗಲಿದೆ. ಸೆಮಿಫೈನಲ್ನಲ್ಲಿ ಸೋತ ತಂಡಗಳು ಸಣ್ಣ ಸಮಾಧಾನಕರ ಬಹುಮಾನಗಳನ್ನು ಪಡೆಯಲಿವೆ. (ಮಾಹಿತಿ - ICC ವೆಬ್ಸೈಟ್)