logo
ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್ ಔಟ್, ಅಶ್ವಿನ್ ಇನ್, ನೂತನ ಉಪನಾಯಕ ನೇಮಕ; ನ್ಯೂಜಿಲೆಂಡ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

ಹಾರ್ದಿಕ್ ಔಟ್, ಅಶ್ವಿನ್ ಇನ್, ನೂತನ ಉಪನಾಯಕ ನೇಮಕ; ನ್ಯೂಜಿಲೆಂಡ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

Prasanna Kumar P N HT Kannada

Oct 21, 2023 10:46 AM IST

google News

ನ್ಯೂಜಿಲೆಂಡ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ.

    • India vs New Zealand: ನ್ಯೂಜಿಲೆಂಡ್ ಈ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಭಾರಿ ಹಿನ್ನಡೆ ಉಂಟಾಗಿದೆ‌. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕಾಲಿನ ಪಾದದ ಗಾಯದ ಸಮಸ್ಯೆ ಕಾರಣ ಈ ಪ್ರಮುಖ ಪಂದ್ಯದಿಂದ ಹೊರಬಿದ್ದಿದ್ದಾರೆ.
ನ್ಯೂಜಿಲೆಂಡ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ.
ನ್ಯೂಜಿಲೆಂಡ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಸೋಲಿಲ್ಲದ ಸರದಾರರಾಗಿ ಮುನ್ನುಗ್ಗುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು (India vs New Zealand) ಸೆಣಸಾಟ ನಡೆಸಲು ಸಿದ್ಧಗೊಂಡಿವೆ. ಆದರೆ ಅಕ್ಟೋಬರ್​ 22ರಂದು ಭಾನುವಾರ ನಡೆಯುವ ಈ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಭಾರಿ ಹಿನ್ನಡೆ ಉಂಟಾಗಿದೆ‌. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕಾಲಿನ ಪಾದದ ಗಾಯದ ಸಮಸ್ಯೆ ಕಾರಣ ಈ ಪ್ರಮುಖ ಪಂದ್ಯದಿಂದ ಹೊರಬಿದ್ದಿದ್ದಾರೆ.

ಭಾರತ ಆಡುವ 11ರ ಬಳಗಕ್ಕೆ ಯಾರನ್ನು ಕರೆ ತರಬೇಕು ಎನ್ನುವ ಗೊಂದಲಕ್ಕೆ ಸೃಷ್ಟಿಯಾಗಿದೆ. ಧರ್ಮಶಾಲಾದಲ್ಲಿ ನಡೆಯುವ ಈ ಪಂದ್ಯಕ್ಕೆ ನೂತನ ಉಪನಾಯಕ ಆಯ್ಕೆಯೂ ನಡೆಯುತ್ತಿದೆ. ಈಗಾಗಲೇ ಹಾರ್ದಿಕ್ ಸ್ಥಾನಕ್ಕೆ ಯಾರಿಗೆ ಅವಕಾಶ ನೀಡಬೇಕು ಮತ್ತು ಯಾರನ್ನು ಉಪನಾಯಕನನ್ನಾಗಿ ನೇಮಿಸಿಕೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆದಿದೆ. ನ್ಯೂಜಿಲೆಂಡ್ ಎದುರಿನ ಪಂದ್ಯದ ರೋಹಿತ್ ನೇತೃತ್ವದ ಆಡುವ 11ರ ಬಳಗ ಹೀಗಿದೆ ನೋಡಿ.

ಆರಂಭಿಕರು

ಕಿವೀಸ್ ಪಂದ್ಯಕ್ಕೂ ರೋಹಿತ್​ ಶರ್ಮಾ (Rohit Sharma) ಮತ್ತು ಶುಭ್ಮನ್ ಗಿಲ್ (Shubman Gill) ಅವರೇ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಇಬ್ಬರು ಸಹ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತದ ಯಶಸ್ಸಿಗೆ ಪ್ರಮುಖ ಪಾತ್ರವಾಗಿದ್ದಾರೆ. ಅದರಲ್ಲೂ ರೋಹಿತ್ ಬೆಂಕಿ ಬಿರುಗಾಳಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಟಿ20 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿ ಎದುರಾಳಿ ತಂಡವನ್ನು ಕಾಡುತ್ತಿದ್ದಾರೆ. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಗಿಲ್ ಜವಾಬ್ದಾರಿಯುತ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಮಧ್ಯಮ ಕ್ರಮಾಂಕ

ವಿರಾಟ್ ಕೊಹ್ಲಿ (Virat Kohli) ಕೂಡ ಅಮೋಘ ಫಾರ್ಮ್​​ನಲ್ಲಿದ್ದಾರೆ. ಕಳೆದ 4 ಪಂದ್ಯಗಳಲ್ಲಿ 2 ಅರ್ಧಶತಕ, 1 ಶತಕ ಸಿಡಿಸಿ ಮಿಂಚಿದ್ದಾರೆ. ಕಿವೀಸ್ ಎದುರು ಕೂಡ ಅದೇ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ ಕಿಂಗ್ ಕೊಹ್ಲಿ. ಕೊಹ್ಲಿ ನಂತರ ಶ್ರೇಯಸ್ ಅಯ್ಯರ್ (Shreyas Iyer) ಬ್ಯಾಟ್ ಬೀಸಲಿದ್ದಾರೆ. ಬಳಿಕ ವಿಕೆಟ್ ಕೀಪರ್​ ಕೆಎಲ್ ರಾಹುಲ್​ (KL Rahul) ಕಣಕ್ಕಿಳಿದು ಸಿಡಿಯಲಿದ್ದಾರೆ. ಆದರೆ ಹಾರ್ದಿಕ್ ಗೈರು ಹಾಜರಿಯಾಗಿರುವುದರಿಂದ ರಾಹುಲ್ ಅವರನ್ನೇ ಉಪನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ.

ಆಲ್​ರೌಂಡರ್​​ಗಳು

ಶಾರ್ದೂಲ್ ಠಾಕೂರ್​ (Shardul Thakur) ಮತ್ತು ರವೀಂದ್ರ ಜಡೇಜಾ (Ravindra Jadeja) ಆಲ್​ರೌಂಡರ್​​ಗಳಾಗಿ ಅಂತಿಮ 11ರ ಬಳಗದಲ್ಲಿ ಅವಕಾಶ ಪಡೆಯುವುದು ಖಚಿತ. ಇವರಿಬ್ಬರಲ್ಲಿ ಯಾರನ್ನೂ ಬದಲಿಸಲು ಸಾಧ್ಯವಿಲ್ಲ.

ಬೌಲರ್​​ಗಳು

ಹಾರ್ದಿಕ್ ಪಾಂಡ್ಯ ಅಲಭ್ಯರಾದ ಕಾರಣ ಮೂವರ ನಡುವೆ ಪೈಪೋಟಿ ಏರ್ಪಟ್ಟಿದೆ. ಆದರೆ ರವಿಚಂದ್ರನ್ ಅಶ್ವಿನ್​ರನ್ನೇ (Ravichandran Ashwin) ತಂಡಕ್ಕೆ ಮತ್ತೆ ಕರೆ ತರಲು ಟೀಮ್ ಮ್ಯಾನೇಜ್​ಮೆಂಟ್ ಚಿಂತನೆ ನಡೆಸಿದೆ. ಧರ್ಮಶಾಲಾ ಮೈದಾನದಲ್ಲಿ ಸ್ಪಿನ್ನರ್​​ಗಳು ಯಶಸ್ಸು ಕಂಡಿರುವ ಹಿನ್ನೆಲೆ ಅಶ್ವಿನ್​ಗೆ ಚಾನ್ಸ್​ ನೀಡಲು ಟೀಮ್ ಇಂಡಿಯಾವು ಸಜ್ಜಾಗಿದೆ. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಮೊಹಮ್ಮದ್ ಸಿರಾಜ್ (Mohammed Siraj) ಪೇಸ್​ ಬೌಲಿಂಗ್​​ ಜವಾಬ್ದಾರಿ ಹೊರಲಿದ್ದಾರೆ. ಕುಲ್ದೀಪ್ ಯಾದವ್ (Kuldeep Yadav) ಸ್ಪಿನ್ ದಾಳಿಯನ್ನು ಮುನ್ನಡೆಸಲಿದ್ದಾರೆ.

ನ್ಯೂಜಿಲೆಂಡ್ ತಂಡಕ್ಕೂ ಆಘಾತ

ನ್ಯೂಜಿಲೆಂಡ್ ತಂಡವು ತಮ್ಮ ನಾಯಕ ಕೇನ್​ ವಿಲಿಯಮ್ಸನ್ (Kane Williamson)​ ಅವರನ್ನು ಕಳೆದುಕೊಂಡಿದೆ. ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಮುಂದಿನ ಹಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹಾಗಂತ ತಂಡದಿಂದ ಹೊರಬಿದ್ದಿಲ್ಲ. ಮುಂದಿನ ತಿಂಗಳ ಪಂದ್ಯಗಳಿಗೆ ಲಭ್ಯರಾಗುವ ಸಾಧ್ಯತೆ ಇದೆ.

ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಉಪನಾಯಕ/ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಆರ್​ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ