logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್‌ ವಿಜೇತರಿಗೆ ಭರ್ಜರಿ ಬಹುಮಾನ ಘೋಷಿಸಿದ ಐಸಿಸಿ; ಒಟ್ಟು 83 ಕೋಟಿ ರೂಪಾಯಿ ಪ್ರಶಸ್ತಿ ಹಣ

ವಿಶ್ವಕಪ್‌ ವಿಜೇತರಿಗೆ ಭರ್ಜರಿ ಬಹುಮಾನ ಘೋಷಿಸಿದ ಐಸಿಸಿ; ಒಟ್ಟು 83 ಕೋಟಿ ರೂಪಾಯಿ ಪ್ರಶಸ್ತಿ ಹಣ

Jayaraj HT Kannada

Sep 22, 2023 06:17 PM IST

google News

2011ರ ವಿಶ್ವಕಪ್‌ ಗೆದ್ದ ಭಾರತ

    • ICC Cricket World Cup 2023:‌ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಗೆದ್ದು ಏಕದಿನ ವಿಶ್ವಕಪ್ ಎತ್ತಿಹಿಡಿಯುವ ತಂಡವು ಬರೋಬ್ಬರಿ 4 ಮಿಲಿಯನ್ ಡಾಲರ್‌ ಬಹುಮಾನ ಪಡೆಯಲಿದೆ. ಅಂದರೆ ಬರೋಬ್ಬರಿ 33 ಕೋಟಿ ರೂಪಾಯಿ ಬಹುಮಾನವು ವಿಜೇತ ತಂಡಕ್ಕೆ ಸಿಗಲಿದೆ.
2011ರ ವಿಶ್ವಕಪ್‌ ಗೆದ್ದ ಭಾರತ
2011ರ ವಿಶ್ವಕಪ್‌ ಗೆದ್ದ ಭಾರತ

ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ (ICC Cricket World Cup 2023) ಪಂದ್ಯಾವಳಿಯ ವಿಜೇತರಿಗೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ಭರ್ಜರಿ ಬಹುಮಾನ ಮೊತ್ತವನ್ನು ಘೋಷಿಸಿದೆ. ಇಂದು (ಶುಕ್ರವಾರ) ಈ ಕುರಿತು ಅಧಿಕೃತ ಮಾಹಿತಿ ನೀಡಿದೆ.

ಸಂಪೂರ್ಣ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟಾರೆ 10 ಮಿಲಿಯನ್ ಡಾಲರ್‌ ಮೊತ್ತದ ಬಹುಮಾನವನ್ನು ಐಸಿಸಿ ಘೋಷಿಸಿದೆ. ಅಂದರೆ ಬರೋಬ್ಬರಿ 83 ಕೋಟಿ ರೂಪಾಯಿ. ಇದರಲ್ಲಿ ಫೈನಲ್‌ ಪಂದ್ಯದಲ್ಲಿ ಗೆದ್ದು ಏಕದಿನ ವಿಶ್ವಕಪ್ ಎತ್ತಿಹಿಡಿಯುವ ತಂಡವು ಬರೋಬ್ಬರಿ 4 ಮಿಲಿಯನ್ ಡಾಲರ್‌ ಬಹುಮಾನ ಮೊತ್ತವನ್ನು ಪಡೆಯಲಿದೆ. ಅಂದರೆ ಬರೋಬ್ಬರಿ 33 ಕೋಟಿ ರೂಪಾಯಿ ಬಹುಮಾನವು ವಿಜೇತ ತಂಡಕ್ಕೆ ಸಿಗಲಿದೆ.

ಅತ್ತ ರನ್ನರ್‌ಅಪ್ ತಂಡವು 2 ಮಿಲಿಯನ್ ಡಾಲರ್‌, ಅಂದರೆ 16.5 ಕೋಟಿ ರೂಪಾಯಿಯನ್ನು ಗೆಲ್ಲಲಿದೆ ಎಂದು ಐಸಿಸಿ ತಿಳಿಸಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳು ಗ್ರೂಪ್ ಹಂತದಲ್ಲಿ ಎಲ್ಲಾ ಎದುರಾಳಿ ತಂಡದೊಂದಿಗೆ ತಲಾ ಒಮ್ಮೆ ಪರಸ್ಪರ ಆಡಲಿದೆ. ಅಂಕ ಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ. ಗುಂಪು ಹಂತದ ಪಂದ್ಯಗಳಲ್ಲಿ ಗೆಲ್ಲುವ ಎಲ್ಲಾ ತಂಡಗಳಿಗೂ ಬಹುಮಾನ ಮೊತ್ತವಿದೆ. ಈ ಹಂತದ ಪ್ರತಿ ಗೆಲುವಿಗಾಗಿ ಆ ತಂಡಕ್ಕೆ 40,000 ಯುಎಸ್‌ ಡಾಲರ್‌ (33 ಲಕ್ಷ ರೂಪಾಯಿ) ನೀಡಲಾಗುತ್ತದೆ. ಗುಂಪು ಹಂತದ ಬಳಿಕ ನಾಕೌಟ್‌ ಹಂತ ಪ್ರವೇಶಿಲು ವಿಫಲವಾಗುವ ತಂಡಗಳು ತಲಾ 100,000 ಡಾಲರ್‌ (82 ಲಕ್ಷ ರೂಪಾಯಿ) ಬಹುಮಾನದೊಂದಿಗೆ ಟೂರ್ನಿಯಿಂದ ನಿರ್ಗಮಿಸುತ್ತವೆ.

ಅಕ್ಟೋಬರ್ 5ರಂದು ಕ್ರಿಕೆಟ್ ವಿಶ್ವಕಪ್ ಆರಂಭ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿಯ ಏಕದಿನ ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿದೆ. ಅಕ್ಟೋಬರ್ 5ರಂದು ಕ್ರಿಕೆಟ್ ವಿಶ್ವಕಪ್ ರಂದು ಪ್ರಾರಂಭವಾಗಲಿದೆ. ಕಳೆದ ಆವೃತ್ತಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಭಾಗವಹಿಸಲಿರುವ ಎಲ್ಲಾ 10 ತಂಡಗಳು ಅಂತಿಮ ಹಂತದ ತಯಾರಿ ನಡೆಸುತ್ತಿವೆ. ಟೂರ್ನಿಯ ಫೈನಲ್‌ ಪಂದ್ಯವು ನವೆಂಬರ್ 19ರಂದು ನಡೆಯಲಿದೆ.

ಭಾರತ ಏಕದಿನ ವಿಶ್ವಕಪ್​ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ