Ind vs Aus 3rd ODI Highlights: ಭಾರತ ವಿರುದ್ಧ 66 ರನ್‌ಗಳಿಂದ ಗೆದ್ದ ಆಸ್ಟ್ರೇಲಿಯಾ, ರೋಹಿತ್ ಪಡೆಗೆ ಸರಣಿ ಜಯ
Sep 27, 2023 11:21 PM IST
Ind vs Aus 3rd ODI Highlights: ರಾಜ್ಕೋಟ್ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಬಳಗ ಗೆಲುವು ಸಾಧಿಸಿದೆ. ಆ ಮೂಲಕ ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಸರಣಿ ಸೋಲಿನಲ್ಲೂ ಕಾಂಗರೂಗಳು ನಿಟ್ಟುಸಿರು
ಏಕದಿನ ವಿಶ್ವಕಪ್ ಮುಂದಿಟ್ಟುಕೊಂಡು ಆಸ್ಟ್ರೇಲಿಯಾ ತಂಡವು ಕೊನೆಗೂ ಭಾರತದ ನೆಲದಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸರಣಿ ಕಳೆದುಕೊಂಡರೂ, ವೈಟ್‌ವಾಶ್‌ನಿಂದ ತಪ್ಪಿಸಿಕೊಂಡು ಪ್ಯಾಟ್ ಕಮಿನ್ಸ್ ಬಳಗ ಸಮಾಧಾನಪಟ್ಟಿದೆ. ವಿಶ್ವಕಪ್‌ಗೂ ಮುನ್ನ ಉಭಯ ತಂಡಗಳಿಗೂ ಇದು ಕೊನೆಯ ಏಕದಿನ ಪಂದ್ಯವಾಗಿದ್ದು, ಸರಣಿಯುದ್ದಕ್ಕೂ ಉಭಯ ತಂಡಗಳು ಸಮಾಧಾನಕರ ಫಲಿತಾಂಶ ಪಡೆದಿವೆ. ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗರೂಗಳೂ, ಅಂತಿಮ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪಂದ್ಯವಾಡಿದ ಭಾರತವು, ಸೋಲಿನ ಹೊರತಾಗಿಯೂ ತಂಡದ ಫಿಟ್‌ನೆಸ್ ಕುರಿತು ಚಿಂತಿಸಬೇಕಾಗಿದೆ. ಆಸೀಸ್ ನೀಡಿದ ಬೃಹತ್ ಟಾರ್ಗೆಟ್ ಮುಂದಿಟ್ಟುಕೊಂಡು ಉತ್ತಮ ಆರಂಭ ಪಡೆದ ಭಾರತ, ಮಧ್ಯಮ ಓವರ್‌ಗಳ ಬಳಿಕ ಕುಸಿತ ಕಂಡಿತು. ಮ್ಯಾಕ್ಸ್‌ವೆಲ್ ಸ್ಪಿನ್ ಮೋಡಿ ಭಾರತಕ್ಕೆ ಕಂಟಕವಾಯ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಸೇರಿದಂತೆ ಅಗ್ರ ಕ್ರಮಾಂಕದ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಪಡೆದು ತಂಡದ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಭಾರತಕ್ಕೆ ಇಂದು ಆಲ್‌ರೌಂಡರ್‌ಗಳ ಕೊರತೆಯಾಯ್ತು. ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟ್ ಬೀಸುವ ಬ್ಯಾಟರ್‌ಗಳ ಅನುಪಸ್ಥಿತಿ ತಂಡಕ್ಕೆ ಕಾಡಿತು. ಮುಂದೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಮತ್ತೆ ಉಭಯ ತಂಡಗಳು ಸೆಣಸಲಿವೆ. ಅಕ್ಟೋಬರ್ 08 ರಂದು ಭಾರತವು ಚೆನ್ನೈನಲ್ಲಿ ಆಸೀಸ್ ವಿರುದ್ಧವೇ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇಲ್ಲಿಗೆ ಇಂದಿನ ಲೈವ್ ಅಪ್ಡೇಟ್ ಮುಕ್ತಾಯ ಮಾಡುತ್ತಿದ್ದೇವೆ. ಮುಂದೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಮತ್ತೆ ಸಿಗೋಣ. ಶುಭರಾತ್ರಿ… (ಜಯರಾಜ್, ಪ್ರಸನ್ನ ಕುಮಾರ್)
286 ರನ್ ಗಳಿಸಿ ಭಾರತ ಆಲೌಟ್
ಭಾರತ ವಿರುದ್ಧ 66 ರನ್‌ಗಳಿಂದ ಗೆದ್ದ ಆಸ್ಟ್ರೇಲಿಯಾ
49.4 ಓವರ್‌ಗಳಲ್ಲಿ 286 ರನ್ ಗಳಿಸಿ ಭಾರತ ಆಲೌಟ್
ಕೊನೆಯ ಪಂದ್ಯ ಸೋತರೂ 2-1ರಿಂದ ಸರಣಿ ವಶಪಡಿಸಿಕೊಂಡ ಭರತ
ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡ ಆಸೀಸ್
Ind vs Aus 3rd ODI Live: ರವೀಂದ್ರ ಜಡೇಜಾ ಔಟ್
ಭಾರತದ 9 ವಿಕೆಟ್ ಪತನ
ರವೀಂದ್ರ ಜಡೇಜಾ ಔಟ್
ಸೋಲಿನ ಸಮೀಪದಲ್ಲಿ ಭಾರತ ತಂಡ
48.5 ಓವರ್‌ಗಳಲ್ಲಿ ಭಾರತ 286/9
Ind vs Aus 3rd ODI Live: ಭಾರತ 269/7
45 ಓವರ್ ಬಳಿಕ ಭಾರತ 269/7
ಗೆಲುವಿನಿಂದ 83 ರನ್ ದೂರದಲ್ಲಿ ಭಾರತ
ಕುಲ್ದೀಪ್ ಯಾದವ್ ಔಟ್
2 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಕುಲ್ದೀಪ್ ಯಾದವ್
ಸೋಲಿನ ಸುಳಿಯಲ್ಲಿ ಭಾರತ
ಗೆಲುವಿನಿಂದ 96 ರನ್ ದೂರ
ರವೀಂದ್ರ ಜಡೇಜಾ ಮೇಲೆ ಭರವಸೆ
ಭಾರತ: 257/7 (42)
Ind vs Aus 3rd ODI Live: ಭಾರತ : 251/6 (40)
ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಭಾರತ
ಭಾರತ : 251/6 (40)
ಜಡೇಜಾ ಮತ್ತು ಕುಲ್ದೀಪ್ ಬ್ಯಾಟಿಂಗ್
ಗೆಲುವಿಗೆ 60 ಎಸೆತಗಳಲ್ಲಿ ಬೇಕು 102 ರನ್
Ind vs Aus 3rd ODI Live: ಭಾರತ 243/5
ರಾಹುಲ್ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಔಟ್
38 ಓವರ್ ಬಳಿಕ ಭಾರತ 243/5
ಗೆಲುವಿಗೆ ಬೇಕು 110 ರನ್
Ind vs Aus 3rd ODI Live: ರಾಹುಲ್, ಅಯ್ಯರ್ ಅರ್ಧಶತಕದ ಜೊತೆಯಾಟ
ಭಾರತ : 221/3 (35)
ಭಾರತದ ಗೆಲುವಿಗೆ 90 ಎಸೆತಗಳಲ್ಲಿ ಬೇಕು 132 ರನ್
ಅರ್ಧಶತಕದ ಜೊತೆಯಾಟವಾಡಿದ ರಾಹುಲ್ ಅಯ್ಯರ್
200ರ ಗಡಿ ದಾಟಿದ ಭಾರತ
200 ರನ್ ಗಡಿ ದಾಟಿದ ಭಾರತ
ಜೊತೆಯಾಟ ಮುಂದುವರೆಸಿದ ರಾಹುಲ್ ಮತ್ತು ಅಯ್ಯರ್
ಭಾರತ : 203/3 (31.4)
Ind vs Aus 3rd ODI Live: ಭಾರತ 185/3
3 ವಿಕೆಟ್ ಪತನ ಬಳಿಕ ನಿಧಾನಗತಿಯ ಬ್ಯಾಟಿಂಗ್
ಅಯ್ಯರ್, ರಾಹುಲ್ ಆಟ
ಭಾರತ :185/3 (30)
ವಿರಾಟ್ ಕೊಹ್ಲಿ ಔಟ್
ವಿರಾಟ್ ಕೊಹ್ಲಿ ಔಟ್
ಅರ್ಧಶತಕ (56) ಸಿಡಿಸಿ ನಿರ್ಗಮಿಸಿದ ವಿರಾಟ್
ಭಾರತ :171/3 (27)
ಗೆಲುವಿನಿಂದ 182 ರನ್ ದೂರದಲ್ಲಿ ಟೀಮ್ ಇಂಡಿಯಾ
ರೋಹಿತ್ ಶರ್ಮಾ ಔಟ್
ಮ್ಯಾಕ್ಸ್‌ವೆಲ್ ಅದ್ಭುತ ಕ್ಯಾಚ್
81 ರನ್ ಗಳಿಸಿ ರೋಹಿತ್ ಶರ್ಮಾ ಔಟ್
ಬೌಲಿಂಗ್ ಮಾಡಿ ನಾನ್‌ಸ್ಟ್ರೈಕ್ ಬಳಿ ಅಮೋಘ ಕ್ಯಾಚ್ ಹಿಡಿದ ಮ್ಯಾಕ್ಸಿ
ಭಾರತ : 147/2 (21.2)
ವಿರಾಟ್ ಜೊತೆಗೂಡಿದ ಶ್ರೇಯಸ್ ಅಯ್ಯರ್
Ind vs Aus 3rd ODI Live: ಭಾರತ 125/1
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅರ್ಧಶತಕದ (51) ಜೊತೆಯಾಟ
19 ಓವರ್ ಬಳಿಕ ಟೀಮ್ ಇಂಡಿಯಾ 125/1
ರೋಹಿತ್ ಶರ್ಮಾ 68(48)
ವಿರಾಟ್ ಕೊಹ್ಲಿ 27(30)
Ind vs Aus 3rd ODI Live: ಭಾರತ 91/1
15 ಓವರ್‌ಗಳಲ್ಲಿ ಭಾರತ 91/1
61 ರನ್ ಗಳಿಸಿ ಆಡುತ್ತಿರುವ ನಾಯಕ ರೋಹಿತ್ ಶರ್ಮಾ
Ind vs Aus 3rd ODI Live: ಭಾರತ 84/1
13 ಓವರ್ ಬಳಿಕ ಭಾರತ 84/1
ರೋಹಿತ್, ಕೊಹ್ಲಿ ಬ್ಯಾಟಿಂಗ್ ಮುಂದುವರಿಕೆ
ಮೊದಲ ವಿಕೆಟ್ ಕಳೆದುಕೊಂಡ ಭಾರತ
18 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಔಟ್
ಭಾರತದ ಮೊದಲ ವಿಕೆಟ್ ಪತನ
10.5 ಓವರ್ ಬಳಿಕ ಟೀಮ್ ಇಂಡಿಯಾ 74/1
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್ ಕೊಹ್ಲಿ
Ind vs Aus 3rd ODI Live: ಅರ್ಧಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ
ನಾಯಕ ರೋಹಿತ್ ಶರ್ಮಾ ಅರ್ಧಶತಕ
10 ಓವರ್‌ಗಳಲ್ಲಿ ಭಾರತ 72/0 ರನ್
ರೋಹಿತ್ ಶರ್ಮಾ 54(34)
ವಾಷಿಂಗ್ಟನ್ ಸುಂದರ್17(26)
Ind vs Aus 3rd ODI Live: ಭಾರತದ ಭರ್ಜರಿ ಆರಂಭ
7 ಓವರ್‌ಗಳಲ್ಲಿ 56/0 ರನ್ ಕಲೆ ಹಾಕಿದ ಭಾರತ
ರೋಹಿತ್ ಶರ್ಮಾ ಸ್ಫೋಟಕ ಆಟ
24 ಎಸೆತಗಳಲ್ಲಿ 5 ಸಿಕ್ಸರ್ ಸಹಿತತ 46 ರನ್
Ind vs Aus 3rd ODI Live: ಭಾರತ: 32/0 (5)
5 ಓವರ್ ಬಳಿಕ ಭಾರತ 32/0
ರೋಹಿತ್ ಶರ್ಮಾ 28(19)
ವಾಷಿಂಗ್ಟನ್ ಸುಂದರ್ 4(11)
ವೇಗದ ಆಟಕ್ಕೆ ಮುನ್ನುಗ್ಗಿದ ನಾಯಕ ರೋಹಿತ್
Ind vs Aus 3rd ODI Live: ಭಾರತ 8/0 (2)
ಭಾರತ 8/0 (2)
ನಿಧಾನಗತಿಯ ಆರಂಭ ಪಡೆದ ಭಾರತ
ಬೃಹತ್ ಮೊತ್ತ ಚೇಸಿಂಗ್‌ಗೆ ಜವಾಬ್ದಾರಿಯುತ ಆಟ
ಚೇಸಿಂಗ್ ಆರಂಭಿಸಿದ ಭಾರತ
ಚೇಸಿಂಗ್ ಆರಂಭಿಸಿದ ಭಾರತ
ನಾಯಕ ರೋಹಿತ್ ಶರ್ಮಾ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್
ಆರಂಭಿಕ್ ಆಟಗಾರ ಯಾರು ಎಂಬ ಗೊಂದಲಕ್ಕೆ ತೆರೆ
ದಾಖಲೆಯ ಕ್ಲೀನ್‌ಸ್ವೀಪ್‌ಗೆ ಬೇಕು 353 ರನ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ, ನಿರೀಕ್ಷೆಯಂತೆಯೇ ಬೃಹತ್ ಮೊತ್ತ ಕಲೆ ಹಾಕಿದೆ. ರಾಜ್‌ಕೋಟ್ ಮೈದಾನದಲ್ಲಿ ಇದುವರೆಗೆ ದಾಖಲಾದ ಬೃಹತ್ ಮೊತ್ತವಿದು. ತಂಡಕ್ಕೆ ಉತ್ತಮ ಆರಂಭ ನೀಡಿದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್, ಭಾರಿ ರನ್ ರೇಟ್ ಜೊತೆಗೆ ಇನ್ನಿಂಗ್ಸ್ ಮುನ್ನಡೆಸಿದರು. ಇವರಿಬ್ಬರೂ ಔಟಾದ ಬಳಿಕ ರನ್ ವೇಗಕ್ಕೆ ತುಸು ಕಡಿವಾಣ ಬಿತ್ತು. ಮಧ್ಯಮ ಓವರ್‌ಗಳಲ್ಲಿ ಭಾರತದ ಬೌಲರ್‌ಗಳು ತಂಡಕ್ಕೆ ಮುನ್ನಡೆ ತಂಡದುಕೊಟ್ಟರು. ಒಂದು ಹಂತದಲ್ಲಿ 400 ಅಧಿಕ ರನ್ ಕಲೆ ಹಾಕುವ ಸುಳಿವು ನೀಡಿದ್ದ ಆಸೀಸ್ ತಂಡವನ್ನು ಭಾರತವು 352 ರನ್‌ಗಳಿಗೆ ಕಟ್ಟಿಹಾಕಿದೆ. ಸದ್ಯ ಭಾರತದ ಮುಂದೆ ಬೃಹತ್ ಗುರಿ ಇದೆ. ಸರಣಿ ಕ್ಲೀನ್ ಸ್ವೀಪ್ ಜೊತೆಗೆ ಮದಲ ಬಾರಿ ಆಸ್ಟ್ರೇಲಿಯಾವನ್ನು ವೈಟ್‌ವಾಶ್ ಮಾಡಲು, ಟೀಮ್ ಇಂಡಿಯಾ 353 ರನ್ ಗಳಿಸಬೇಕಿದೆ.
Ind vs Aus 3rd ODI Live: ಭಾರತಕ್ಕೆ 353 ರನ್ ಟಾರ್ಗೆಟ್
ಆಸ್ಟ್ರೇಲಿಯಾ ಇನ್ನಿಂಗ್ಸ್ ಅಂತ್ಯ
ಭಾರತಕ್ಕೆ ಬೃಹತ್ ಗುರಿ ನೀಡಿದ ಕಮಿನ್ಸ್ ಬಳಗ
ನಿಗದಿತ 50 ಓವರ್‌ಗಳಲ್ಲಿ ಆಸ್ಟ್ರೇಲಿಯಾ 352/7
Ind vs Aus 3rd ODI Live:ಮಾರ್ನಸ್ ಲ್ಯಾಬುಶೇನ್ ಔಟ್
ಮೂರನೇ ವಿಕೆಟ್ ಪಡೆದ ಬುಮ್ರಾ
ಸಿಕ್ಸರ್ ಸಿಡಿಸಲು ಹೋಗಿ ಮಾರ್ನಸ್ ಲ್ಯಾಬುಶೇನ್ ಔಟ್
49 ಓವರ್‌ಗಳಲ್ಲಿ ಆಸೀಸ್ 345/7
Ind vs Aus 3rd ODI Live: ಆಸ್ಟ್ರೇಲಿಯಾ 326/6
ಮಾರ್ನಸ್ ಲ್ಯಾಬುಶೇನ್ ಅರ್ಧಶತಕ
ಆಸ್ಟ್ರೇಲಿಯಾ 326/6 (46)
ಮಾರ್ನಸ್ ಲ್ಯಾಬುಶೇನ್ 58(46)
ಪ್ಯಾಟ್ ಕಮ್ಮಿನ್ಸ್ 9(12)
Ind vs Aus 3rd ODI Live: 6 ವಿಕೆಟ್ ಕಳೆದುಕೊಂಡ ಆಸೀಸ್
9 ರನ್ ಗಳಿಸಿ ಕ್ಯಾಮರೂನ್ ಗ್ರೀನ್ ಔಟ್
42.3 ಓವರ್‌ಗಳಲ್ಲಿ ಆಸ್ಟ್ರೇಲಿಯಾ 299/6
Ind vs Aus 3rd ODI Live: ಬುಮ್ರಾ ಮ್ಯಾಜಿಕ್‌ಗೆ ಮ್ಯಾಕ್ಸ್‌ವೆಲ್ ಔಟ್
ಮ್ಯಾಕ್ಸ್‌ವೆಲ್ ಔಟ್
5 ರನ್ ಗಳಿಸಿ ಬುಮ್ರಾ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದ ಮ್ಯಾಕ್ಸಿ
39 ಓವರ್ ಬಳಿಕ ಆಸ್ಟ್ರೇಲಿಯಾ 281/5
Ind vs Aus 3rd ODI Live: ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್
11 ರನ್ ಗಳಿಸಿ ಅಲೆಕ್ಸ್ ಕ್ಯಾರಿ ಔಟ್
ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್
ಆಸ್ಟ್ರೇಲಿಯಾ 267/4
Ind vs Aus 3rd ODI Live: ಆಸ್ಟ್ರೇಲಿಯಾ 254-3
35 ಓವರ್ ಬಳಿಕ ಆಸ್ಟ್ರೇಲಿಯಾ 254-3
ಮಾರ್ನಸ್ ಲ್ಯಾಬುಶೇನ್ 21(19)
ಅಲೆಕ್ಸ್ ಕ್ಯಾರಿ 4(12)
Ind vs Aus 3rd ODI Live: 3 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ
74 ರನ್ ಗಳಿಸಿ ಸ್ಮಿತ್ ಔಟ್
3 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ
ಆಸೀಸ್ 242/3 (32)
ಲ್ಯಾಬುಶೇನ್ ಜೊತೆ ಸೇರಿಕೊಂಡ ಅಲೆಕ್ಸ್ ಕ್ಯಾರಿ
ಶತಕ ವಂಚಿತರಾದ ಮಿಚೆಲ್ ಮಾರ್ಷ್
96 ರನ್ ಗಳಿಸಿ ಶತಕ ವಂಚಿತರಾದ ಮಿಚೆಲ್ ಮಾರ್ಷ್
ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದ ಆರಂಭಿಕ ಆಟಗಾರ
28 ಓವರ್ ಅಂತ್ಯಕ್ಕೆ ಆಸ್ಟ್ರೇಲಿಯಾ 215/2
ಸ್ಮಿತ್ ಸೇರಿಕೊಂಡ ಲ್ಯಾಬುಶೇನ್
ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
30ನೇ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
44 ಎಸೆತಗಳಲ್ಲಿ 52 ರನ್
ಆಸ್ಟ್ರೇಲಿಯಾ 188/1 (25)
Ind vs Aus 3rd ODI Live: ಆಸ್ಟ್ರೇಲಿಯಾ 176/1
23 ಓವರ್ ಬಳಿಕ ಆಸ್ಟ್ರೇಲಿಯಾ 176/1
ಭಾರತದ ವೇಗದ ದಾಳಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ ಂಾರ್ಷ್, ಸ್ಮಿತ್
ಮಿಚೆಲ್ ಮಾರ್ಷ್ 73(64)
ಸ್ಟೀವ್ ಸ್ಮಿತ್ 46(40)
Ind vs Aus 3rd ODI Live: ಸ್ಮಿತ್-ಮಾರ್ಷ್ ಭರ್ಜರಿ ಜೊತೆಯಾಟ
70 ರನ್‌ಗಳ ಜೊತೆಯಾಟವಾಡಿದ ಸ್ಮಿತ್-ಮಾರ್ಷ್
21 ಓವರ್‌ಗಳಲ್ಲಿ ಭಾರತ 148/1
ಮಿಚೆಲ್ ಮಾರ್ಷ್ 54(58)
ಸ್ಟೀವನ್ ಸ್ಮಿತ್ 37(34)
Ind vs Aus 3rd ODI Live: ಆಸ್ಟ್ರೇಲಿಯಾ 128/1
ವೇಗದ ಬ್ಯಾಟಿಂಗ್ ಮುಂದುವರೆಸಿದ ಮಾರ್ಷ್
ಆಸ್ಟ್ರೇಲಿಯಾ 128/1 (16)
ಆಸೀಸ್ ವೇಗಕ್ಕೆ ಸ್ಪಿನ್ ಅಸ್ತ್ರ ಪ್ರಯೋಗಿಸುತ್ತಿರುವ ಭಾರತ
Ind vs Aus 3rd ODI Live: ಆಸ್ಟ್ರೇಲಿಯಾ 97/1
11 ಓವರ್ ಬಳಿಕ ಆಸ್ಟ್ರೇಲಿಯಾ 97/1
ಮಿಚೆಲ್ ಮಾರ್ಷ್ 32(24)
ಸ್ಟೀವನ್ ಸ್ಮಿತ್ 9(8)
ಅರ್ಧಶತಕ ಸಿಡಿಸಿ ವಾರ್ನರ್ ಔಟ್
ಮೊದಲ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ
ಅರ್ಧಶತಕ ಸಿಡಿಸಿ ವಾರ್ನರ್ ಔಟ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಕೀಪರ್ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಡೇವಿಡ್ ವಾರ್ನರ್
ಆಸ್ಟ್ರೇಲಿಯಾ 78/1 (8.1)
Ind vs Aus 3rd ODI Live: ಅರ್ಧಶತಕ ಸಿಡಿಸಿದ ವಾರ್ನರ್
ಡೇವಿಡ್ ವಾರ್ನರ್ ಅರ್ಧಶತಕ
ಸಿಕ್ಸರ್ ಸಿಡಿಸಿ ಫಿಫ್ಟಿ ಸಿಡಿಸಿದ ಆರಂಭಿಕ ಆಟಗಾರ
ಆಸ್ಟ್ರೇಲಿಯಾ 78/0 (8)
ಡೇವಿಡ್ ವಾರ್ನರ್ 56(33)
ಮಿಚೆಲ್ ಮಾರ್ಷ್ 22(15)
Ind vs Aus 3rd ODI Live: ಆಸ್ಟ್ರೇಲಿಯಾ 46/0
ಆರು ಓವರ್ ಬಳಿಕ ಆಸೀಸ್ 46/0
7.67 ರನ್ ರೇಟ್‌ನಲ್ಲಿ ರನ್ ಕಲೆ ಹಾಕಿರುವ ಆಸ್ಟ್ರೇಲಿಯಾ
ಡೇವಿಡ್ ವಾರ್ನರ್ 24(21)
ಮಿಚೆಲ್ ಮಾರ್ಷ್ 22(15)
Ind vs Aus 3rd ODI Live: ನಾಲ್ಕು ಓವರ್ ಬಳಿಕ 37/0
ಭರ್ಜರಿ ಆರಂಭ ಪಡೆದ ಆಸ್ಟ್ರೇಲಿಯಾ
ನಾಲ್ಕು ಓವರ್ ಬಳಿಕ 37/0 (4)
ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ವೇಗದ ಬ್ಯಾಟಿಂಗ್
Ind vs Aus 3rd ODI Live: ಎರಡು ಓವರ್ ಬಳಿಕ ಆಸ್ಟ್ರೇಲಿಯಾ 7 ರನ್
ಆಸ್ಟ್ರೇಲಿಯಾ: 7-0(2)
ಡೇವಿಡ್ ವಾರ್ನರ್ 2(9)
ಮಿಚೆಲ್ ಮಾರ್ಷ್ 5(3)
Ind vs Aus 3rd ODI Live: ಆಸೀಸ್ ಬ್ಯಾಟಿಂಗ್ ಆರಂಭ
ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ
ಡೇವಿಡ್ ವಾರ್ನರ್-ಮಿಚೆಲ್ ಮಾರ್ಷ್ ಆರಂಭಿಕರಾಗಿ ಕಣಕ್ಕೆ
ಜಸ್ಪ್ರೀತ್ ಬುಮ್ರಾ ಮೊದಲ ಓವರ್ ಬೌಲಿಂಗ್
Ind vs Aus 3rd ODI Live: ಉಭಯ ತಂಡಗಳ 11ರ ಬಳಗ
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಸೀಸ್ ತಂಡವು ಪ್ರಮುಖ ಐದು ಬದಲಾವಣೆ ಮಾಡಿದೆ. ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ತನ್ವೀರ್ ಸಂಘ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಭಾರತ ತಂಡದಲ್ಲೂ ಪ್ರಮುಖ ಬದಲಾವಣೆಗಳಾಗಿವೆ. ಇಶಾನ್ ಕಿಶನ್ ವೈರಲ್ ಫೀವರ್ನಿಂದ ಬಳಲುತ್ತಿದ್ದರೆ, ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ಗೆ ಅವಕಾಶ ನೀಡಲಾಗಿದೆ. ಜೊತೆಗೆ ಶುಭ್ಮನ್ ಗಿಲ್ಗೆ ವಿಶ್ರಾಂತಿ ನೀಡಲಾಗಿದ್ದರೆ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ತಮ್ಮ ಮನೆಗಳಿಗೆ ತೆರಳಿದ್ದಾರೆ. ಉಭಯ ತಂಡಗಳ ಆಡುವ 11ರ ಬಳ ಹೀಗಿದೆ ನೋಡಿ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಆಸ್ಟ್ರೇಲಿಯಾ ತಂಡ
ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ತನ್ವೀರ್ ಸಂಘ, ಜೋಶ್ ಹೇಜಲ್ವುಡ್.
Ind vs Aus 3rd ODI Live: ಟಾಸ್ ಗೆದ್ದ ಆಸ್ಟ್ರೇಲಿಯಾ
ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯ
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ
ಆಸ್ಟ್ರೇಲಿಯಾ ತಂಡದಲ್ಲಿ ಪ್ರಮುಖ ಐದು ಬದಲಾವಣೆ
ಭಾರತ ತಂಡದಲ್ಲೂ 5 ಬದಲಾವಣೆ, ಪ್ರಮುಖರಿಗೆ ರೆಸ್ಟ್
ತಂಡಕ್ಕೆ ಮರಳಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
Ind vs Aus 3rd ODI Live: ಆಸ್ಟ್ರೇಲಿಯಾ ಸಂಭಾವ್ಯ ತಂಡ
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೋಯ್ನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ.
Ind vs Aus 3rd ODI Live: ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
Ind vs Aus 3rd ODI Live: ಉಭಯ ತಂಡಗಳ ಮುಖಾಮುಖಿ ದಾಖಲೆ
ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಈವರೆಗೂ ಏಕದಿನ ಕ್ರಿಕೆಟ್ನಲ್ಲಿ ಪರಸ್ಪರ 148 ಬಾರಿ ಮುಖಾಮುಖಿಯಾಗಿವೆ. ಭಾರತ 56 ಪಂದ್ಯಗಳಲ್ಲಿ ಜಯಿಸಿದರೆ, ಕಾಂಗರೂ ಪಡೆ 82 ಪಂದ್ಯ ಗೆದ್ದಿದೆ. ಇದರಲ್ಲಿ ಎರಡು ಗೆಲುವು ದಕ್ಕಿದ್ದು ಈ ಸರಣಿಯಲ್ಲಿ ಎಂಬುದು ವಿಶೇಷ. ಸದ್ಯ ಆಸೀಸ್ ವಿರುದ್ಧ ಏಕದಿನ ಸರಣಿ ಗೆದ್ದಿರುವ ರೋಹಿತ್ ಪಡೆ, ಇಂದು 3ನೇ ಪಂದ್ಯವನ್ನೂ ವೈಟ್‌ವಾಶ್ ಮಾಡಿಕೊಳ್ಳುವ ಗುರಿಯಲ್ಲಿದೆ. ಈ ಸರಣಿ ಬೆನ್ನಲ್ಲೇ ವಿಶ್ವಕಪ್ನಲ್ಲೂ ತಮ್ಮ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಅಕ್ಟೋಬರ್ 8ರಂದು ಸೆಣಸಾಟ ನಡೆಸಲಿವೆ.
Ind vs Aus 3rd ODI Live: ಹವಾಮಾನ ವರದಿ ಹೇಳುವುದೇನು?
ಇಂಡೋ-ಆಸೀಸ್ 2ನೇ ಏಕದಿನ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿತ್ತು. ಆಸ್ಟ್ರೇಲಿಯಾದ ಇನ್ನಿಂಗ್ಸ್ ವೇಳೆ ಮಳೆ ಬಂದ ಕಾರಣ ಡಿಎಲ್ಎಸ್ ನಿಯಮದಡಿ ಗುರಿ ನಿಗದಿಪಡಿಸಲಾಯಿತು. 3ನೇ ಏಕದಿನಕ್ಕೆ ಮಳೆಯ ಕಾಟ ಇಲ್ಲ. ಆದರೆ, ಮೋಡ ಕವಿದ ವಾತಾವರಣ ಇದ್ದರೂ, ಮಳೆ ನಿರೀಕ್ಷೆ ಕಡಿಮೆ. ಮಳೆ ಬೀಳುವ ಸಾಧ್ಯತೆ ಕೇವಲ 6 ಪ್ರತಿಶತದಷ್ಟು ಮಾತ್ರ. ಆದರೆ ಸಂಜೆ ವೇಳೆ ಪಂದ್ಯಕ್ಕೆ ಇಬ್ಬನಿ ಕಾಡುವ ಸಾಧ್ಯತೆ ಇದೆ.
Ind vs Aus 3rd ODI Live: ಮೈದಾನದಲ್ಲಿ ಏಕದಿನ ಕ್ರಿಕೆಟ್ನ ದಾಖಲೆಗಳು
ರಾಜ್‌ಕೋಟ್ ಮೈದಾನದಲ್ಲಿ ಈವರೆಗೂ 3 ಏಕದಿನ ಪಂದ್ಯಗಳಷ್ಟೇ ನಡೆಸಿವೆ. ಅಚ್ಚರಿ ಏನೆಂದರೆ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳೇ ಗೆಲುವಿನ ನಗೆ ಬೀರಿವೆ. ಮೊದಲು ಇನ್ನಿಂಗ್ಸ್ನ ಸರಾಸರಿ ಮೊತ್ತ 311 ರನ್. 2ನೇ ಇನ್ನಿಂಗ್ಸ್ನ ಸರಾಸರಿ ಮೊತ್ತ 290 ರನ್. ಇನ್ನು ರಾಜ್ಕೋಟ್ನಲ್ಲಿ ದಾಖಲಾದ ಗರಿಷ್ಠ ಮೊತ್ತ 340. ಅದು ಕೂಡ ಆಸ್ಟ್ರೇಲಿಯಾ ವಿರುದ್ಧವೇ ಎಂಬುದು ವಿಶೇಷ. ಹೀಗಾಗಿ ಮತ್ತೊಮ್ಮೆ ಆಸೀಸ್ ವಿರುದ್ಧ ಅಬ್ಬರಿಸಲು ಭಾರತ ಸಜ್ಜಾಗಿದ್ದು, ಸರಣಿ ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿದೆ.
ಪಿಚ್ ರಿಪೋರ್ಟ್
ಇಂದೋರ್ನ ಹೋಲ್ಕರ್ ಮೈದಾನದಂತೆ ರಾಜ್ಕೋಚ್ ಕೂಡ ಬ್ಯಾಟ್ಸ್ಮನ್ಗಳಿಗೆ ಹೇಳಿ ಮಾಡಿಸಿದಂತಿದೆ. ಬ್ಯಾಟ್ಸ್ಮನ್ಗಳ ಸ್ವರ್ಗ. ಇಲ್ಲಿನ ಬೌಂಡರಿ ಗೆರೆಗಳು ಚಿಕ್ಕದಾಗಿದ್ದು, ಉಭಯ ತಂಡಗಳಿಂದಲೂ ರನ್ ಮಳೆ ನಿರೀಕ್ಷೆ ಮಾಡಲಾಗಿದೆ. ಆದರೆ, ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಲು ಬೌಲರ್‌ಗಳು ಹರಸಾಹಸ ಪಡಬೇಕಾಗುವುದು ಖಚಿತ. ವೇಗದ ಬೌಲರ್‌ಗಳು ಕೊಂಚ ಹಳಿ ತಪ್ಪಿದರೂ, ಸ್ಪಿನ್ನರ್ಗಳು ಮೇಲುಗೈ ಸಾಧ್ಯತೆಯೂ ಇದೆ. ಹಾಗಾಗಿ ಉಭಯ ತಂಡಗಳು ಸ್ಪಿನ್ನರ್ಗಳಿಗೆ ಮಣೆ ಹಾಕುವ ನಿರೀಕ್ಷೆ ಹೆಚ್ಚಿದೆ.
ಭಾರತ ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯ
ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಇಂದು (ಸೆಪ್ಟೆಂಬರ್ 27) ಭಾರತ-ಆಸ್ಟ್ರೇಲಿಯಾ ತಂಡಗಳ ನಡುವೆ ಅಂತಿಮ ಕಾದಾಟಕ್ಕೆ ರಾಜ್‌ಕೋಟ್‌ನ (Rajkot) ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ (Saurashtra Cricket Association Stadium) ಸಜ್ಜಾಗಿದೆ. ಮೊದಲ ಎರಡು ಏಕದಿನ ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ತಂಡಕ್ಕೆ ಮರಳಿದ್ದು, ಹಲವರು ಕಣಕ್ಕಿಳಿಯುವುದು ಅನುಮಾನ ಮೂಡಿಸಿದೆ.
ವಿಶ್ವಕಪ್ ಆರಂಭಕ್ಕೆ 12 ದಿನಗಳು ಇರುವಾಗ ಈಗಿಂದಲೇ ಸಿದ್ಧತೆ ಆರಂಭಿಸಲಿದ್ದಾರೆ. ಆದರೆ ಈ ಪಂದ್ಯದಲ್ಲಿ ಹಾರ್ದಿಕ್, ಶುಭ್ಮನ್ ಗಿಲ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್ ಕಣಕ್ಕಿಳಿಯುವುದು ಅನುಮಾನ. ಅಕ್ಷರ್ ಪಟೇಲ್ ಇನ್ನೂ ಗಾಯದ ಕಾರಣ ರಿಕವರ್ ಆಗಿಲ್ಲ. ಉಳಿದವರಿಗೆ ರೆಸ್ಟ್ ನೀಡಲಾಗುತ್ತದೆ.