logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟೈಗರ್ ರಾಬಿ ಮೇಲೆ ಹಲ್ಲೆಯಾಗಿದ್ದು ನಿಜವೇ? ಬ್ಲಾಂಗಾದೇಶ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯ ವೃತ್ತಿ ಬದುಕಿನ ಚಿತ್ರಣ ಇಲ್ಲಿದೆ

ಟೈಗರ್ ರಾಬಿ ಮೇಲೆ ಹಲ್ಲೆಯಾಗಿದ್ದು ನಿಜವೇ? ಬ್ಲಾಂಗಾದೇಶ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯ ವೃತ್ತಿ ಬದುಕಿನ ಚಿತ್ರಣ ಇಲ್ಲಿದೆ

Raghavendra M Y HT Kannada

Sep 28, 2024 01:43 PM IST

google News

ಭಾರತ-ಬಾಂಗ್ಲಾದೇಶ 2ನೇ ಟೆಸ್ಟ್ ಪಂದ್ಯದ ವೇಳೆ ಅಸ್ವಸ್ಥಗೊಂಡ ಬಂಗ್ಲಾ ಕ್ರಿಕೆಟ್ ತಂಡದ ಅಭಿಮಾನಿ ಟೈಗರ್ ರಾಬಿ

    • ‘ಟೈಗರ್ ರೂಬಿ’ ಇವರ ನಿಜವಾದ ಹೆಸರು ಖಾದಿರ್. ಬಾಂಗ್ಲಾದೇಶದ ಕ್ರಿಕೆಟ್ ಪಂದ್ಯ ಎಲ್ಲೇ ಇದ್ದರೂ ಇವರು ಮೈದಾನದಲ್ಲಿ ಹಾಜರಿರುತ್ತಾರೆ. ಹುಲಿಯಂತೆ ವೇಷ ಧರಿಸಿ, ಹುಲಿ ಗೊಂಬೆಯೊಂದಿಗೆ ತಲೆಯ ಮೇಲೆ ಬಾಂಗ್ಲಾದೇಶದ ಧ್ವಜವನ್ನು ಹಾಕಿಕೊಂಡು ತಮ್ಮ ದೇಶದ ನಿಷ್ಠಾವಂತ ಕ್ರಿಕೆಟ್ ಅಭಿಮಾನಿ ಎಂದು ಗುರುತಿಸಿಕೊಂಡಿದ್ದಾರೆ. (ವರದಿ ವಿನಯ್ ಭಟ್)
ಭಾರತ-ಬಾಂಗ್ಲಾದೇಶ 2ನೇ ಟೆಸ್ಟ್ ಪಂದ್ಯದ ವೇಳೆ ಅಸ್ವಸ್ಥಗೊಂಡ ಬಂಗ್ಲಾ ಕ್ರಿಕೆಟ್ ತಂಡದ ಅಭಿಮಾನಿ ಟೈಗರ್ ರಾಬಿ
ಭಾರತ-ಬಾಂಗ್ಲಾದೇಶ 2ನೇ ಟೆಸ್ಟ್ ಪಂದ್ಯದ ವೇಳೆ ಅಸ್ವಸ್ಥಗೊಂಡ ಬಂಗ್ಲಾ ಕ್ರಿಕೆಟ್ ತಂಡದ ಅಭಿಮಾನಿ ಟೈಗರ್ ರಾಬಿ

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮಳೆಯ ಕಾರಣ ಮೊದಲ ದಿನ ಸಂಪೂರ್ಣ ಆಟ ನಡೆಯಲಿಲ್ಲ. ಎರಡನೇ ದಿನ ಕೂಡ ಪಂದ್ಯ ತಡವಾಗಿದೆ. ಆದರೆ, ಮೊದಲ ದಿನ ಈ ಪಂದ್ಯದ ನಡುವೆ ದೊಡ್ಡ ನಾಟಕೀಯ ಬೆಳವಣಿಗೆ ಕಂಡುಬಂತು. ಬಾಂಗ್ಲಾದೇಶ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿ ಟೈಗರ್ ರೂಬಿ ಭಾರತೀಯ ಅಭಿಮಾನಿಗಳಿಂದ ಹಲ್ಲೆಗೊಳಗಾದರು ಎಂಬ ಸುದ್ದಿ ಮಿಂಚಿನಂತೆ ಸಂಚರಿಸಿತು. ಆದರೆ, ನಂತರ ಬಿಡುಗಡೆಯಾದ ವೀಡಿಯೊದಲ್ಲಿ, ಟೈಗರ್ ರೂಬಿ ಹಲ್ಲೆಯನ್ನು ನಿರಾಕರಿಸಿದರು. ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದಾರೆ. ವೈದ್ಯಕೀಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಇವರು ಪಂದ್ಯ ವೀಕ್ಷಣೆಗೆ ಹಾಜರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸಂಚಲನ ಮೂಡಿಸಿರುವ ಈ ಟೈಗರ್ ರೂಬಿ ಯಾರು?, ಬಾಂಗ್ಲಾದೇಶದಲ್ಲಿ ಇವರು ಏನು ಕೆಲಸಮಾಡುತ್ತಾರೆ?.

ಟೈಗರ್ ರೂಬಿ ಯಾರು?

‘ಟೈಗರ್ ರೂಬಿ’ ಇವರ ನಿಜವಾದ ಹೆಸರು ಖಾದಿರ್. ಬಾಂಗ್ಲಾದೇಶದ ಕ್ರಿಕೆಟ್ ಪಂದ್ಯ ಎಲ್ಲೇ ಇದ್ದರೂ ಇವರು ಮೈದಾನದಲ್ಲಿ ಹಾಜರಿರುತ್ತಾರೆ. ಹುಲಿಯಂತೆ ವೇಷ ಧರಿಸಿ, ಹುಲಿ ಮಾದರಿಯ ಗೊಂಬೆಯೊಂದಿಗೆ ತಲೆಯ ಮೇಲೆ ಬಾಂಗ್ಲಾದೇಶದ ಧ್ವಜವನ್ನು ಹಾಕಿಕೊಂಡು ತಮ್ಮ ದೇಶದ ನಿಷ್ಠಾವಂತ ಕ್ರಿಕೆಟ್ ಅಭಿಮಾನಿ ಎಂದು ಗುರುತಿಸಿಕೊಂಡಿದ್ದಾರೆ.

ರೂಬಿ ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕ. ಅವರು ಢಾಕಾದ ಬೀದಿಗಳಲ್ಲಿ ಆಟೋ ಓಡಿಸುತ್ತಾರೆ. ಬಾಂಗ್ಲಾದೇಶದ ಪಂದ್ಯವಿದ್ದರೆ ಅಟೋವನ್ನು ಬಾಡಿಗೆಗೆ ನೀಡಿ ಪಂದ್ಯ ವೀಕ್ಷಿಸಲು ತೆರಳುತ್ತಾರೆ. ಟೈಗರ್ ರಾಬಿ ಯಾವಾಗಲೂ ಬಾಂಗ್ಲಾದೇಶದ ಪಂದ್ಯದ ದಿನಗಳಲ್ಲಿ ಮಾತ್ರವಲ್ಲದೆ ಆಟಗಾರರ ಅಭ್ಯಾಸದ ವೇಳೆಯೂ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಕೆಲವು ಬಾರಿ ಆಟಗಾರರೊಂದಿಗೆಯೇ ವಿದೇಶಿ ಪ್ರವಾಸಕ್ಕೆ ತೆರಳುತ್ತಾರೆ. ಟೈಗರ್ ರಾಬಿ ಬಾಂಗ್ಲಾದೇಶ ಆಟಗಾರರೊಂದಿಗೆ ಇಷ್ಟು ಆಪ್ತರಾಗಿರಲು ಕಾರಣ ಕೂಡ ಇದೆ.

ರಾಬಿ ಅವರು ಬಾಂಗ್ಲಾ ವಿಕೆಟ್-ಕೀಪರ್, ಬ್ಯಾಟರ್ ಮುಷ್ಫೀಕರ್ ರಹೀಮ್ ಅವರ ದೊಡ್ಡ ಅಭಿಮಾನಿ. ಪಂದ್ಯ ವೀಕ್ಷಿಸಲು ಬರುವಾಗ ತಮ್ಮ ಎದೆಯ ಮೇಲೆ ‘ಮುಷ್ಫಿಕ್ ಭಾಯ್ ರನ್ ಮೆಷಿನ್’ ಅಥವಾ ಅವರ ಜೆರ್ಸಿ ನಂಬರ್ ಅನ್ನು ಬಣ್ಣದಲ್ಲಿ ಹಾಕಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣ ಮುಷ್ಫೀಕರ್ ರಹೀಮ್ ಅವರು ರಾಬಿ ಅವರಿಗೆ ಮಾಡಿರುವ ಸಹಾಯ.

ರಾಬಿ ಆಟೋ ಓಡಿಸಿಕೊಂಡು ಜೀವನ ಸಾಗಿಸಲು ಕಾರಣ ಮುಷ್ಫೀಕರ್ ರಹೀಮ್. ರಾಬಿ ಅವರ ತಾಯಿ ಅನಾರೋಗ್ಯಕ್ಕೆ ತುತ್ತಾದಾಗ ಅವರ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಮುಷ್ಫಿಕ್ ಭರಿಸಿದ್ದರು. ‘ಯುವಕನಾಗಿದ್ದಾಗ ನಾನು ಯಾವುದೇ ಕೆಲಸ ಕಾರ್ಯ ಮಾಡುತ್ತಿರಲಿಲ್ಲ. ಆಗ ನನ್ನ ಮೇಲೆ ನನಗೆ ನಾಚಿಕೆ ಆಗುತ್ತಿತ್ತು. ಆಗ ನಾನು ಮುಷ್ಫಿಕ್ ಭಾಯ್​ಗೆ ಹೇಳಿ, ಆಟೋ ಕೊಡಿಸುವಂತೆ ಕೇಳಿದೆ. ಅದರಂತೆ ಈಗ ನಾನು ಆಟೋ ಓಡಿಸುತ್ತೇನೆ, ಪಂದ್ಯ ಇದ್ದರೆ ಅಟೋವನ್ನು ಬಾಡಿಗೆಗೆ ಕೊಡುತ್ತೇನೆ. ಆಟೋ ಓಡಿಸಿ ಅಮ್ಮನ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ಳುತ್ತಿದ್ದೇನೆ,’’ ಎಂದು ರೂಬಿ ಅವರು ಇತ್ತೀಚೆಗಷ್ಟೆ ಬಾಂಗ್ಲಾ ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ಹೇಳಿದ್ದರು. (ವರದಿ: ವಿನಯ್ ಭಟ್)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ