logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಾಜ್​ಕೋಟ್​​ನಲ್ಲಿ ರೋಹಿತ್-ಜಡೇಜಾ ದರ್ಬಾರ್​, ಚೊಚ್ಚಲ ಟೆಸ್ಟ್​ನಲ್ಲೇ ಸರ್ಫರಾಜ್ ಫಿಫ್ಟಿ​; ಬೃಹತ್ ಮೊತ್ತದತ್ತ ಭಾರತ

ರಾಜ್​ಕೋಟ್​​ನಲ್ಲಿ ರೋಹಿತ್-ಜಡೇಜಾ ದರ್ಬಾರ್​, ಚೊಚ್ಚಲ ಟೆಸ್ಟ್​ನಲ್ಲೇ ಸರ್ಫರಾಜ್ ಫಿಫ್ಟಿ​; ಬೃಹತ್ ಮೊತ್ತದತ್ತ ಭಾರತ

Prasanna Kumar P N HT Kannada

Feb 15, 2024 05:56 PM IST

ರಾಜ್​ಕೋಟ್​​ನಲ್ಲಿ ರೋಹಿತ್-ರವೀಂದ್ರ ರಾಕ್​, ಚೊಚ್ಚಲ ಟೆಸ್ಟ್​ನಲ್ಲೇ ಸರ್ಫರಾಜ್ ಫಿಫ್ಟಿ

    • India vs England 3rd Test: ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಥಮ ದಿನದ ಅಂತ್ಯಕ್ಕೆ 86 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಕಲೆ ಹಾಕಿದೆ. 
ರಾಜ್​ಕೋಟ್​​ನಲ್ಲಿ ರೋಹಿತ್-ರವೀಂದ್ರ ರಾಕ್​, ಚೊಚ್ಚಲ ಟೆಸ್ಟ್​ನಲ್ಲೇ ಸರ್ಫರಾಜ್ ಫಿಫ್ಟಿ
ರಾಜ್​ಕೋಟ್​​ನಲ್ಲಿ ರೋಹಿತ್-ರವೀಂದ್ರ ರಾಕ್​, ಚೊಚ್ಚಲ ಟೆಸ್ಟ್​ನಲ್ಲೇ ಸರ್ಫರಾಜ್ ಫಿಫ್ಟಿ (PTI)

ರೋಹಿತ್​ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರ (Rohit Sharma and Ravindra Jadeja) ಆಕರ್ಷಕ ಶತಕಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ​ ಭಾರತ ಬೃಹತ್ ಮೊತ್ತದತ್ತ ಹೆಜ್ಜೆ ಹಾಕುತ್ತಿದೆ. ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಥಮ ದಿನದ ಅಂತ್ಯಕ್ಕೆ 86 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಕಲೆ ಹಾಕಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

ಆರಂಭದಲ್ಲೇ ಮಾರ್ಕ್​ವುಡ್ ಆಘಾತ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರಂಭದಲ್ಲೇ ಮಾರ್ಕ್ ವುಡ್ ದಾಳಿಗೆ ಪತರಗುಟ್ಟಿತು. ಯಶಸ್ವಿ ಜೈಸ್ವಾಲ್ 10, ಶುಭ್ಮನ್ ಗಿಲ್ 0, ರಜತ್ ಪಾಟೀದಾರ್​ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಮಾರ್ಕ್​ವುಡ್ 2 ವಿಕೆಟ್ ಕಬಳಿಸಿದರೆ, ಟಾಮ್ ಹಾರ್ಟ್ಲೆ 1 ವಿಕೆಟ್ ಉರುಳಿಸಿದರು. ಭಾರತ 33ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಈ ಹಂತದಲ್ಲಿ ರೋಹಿತ್​ ಮತ್ತು ಜಡೇಜಾ ಆಸರೆಯಾದರು.

4ನೇ ವಿಕೆಟ್​ಗೆ 200 ರನ್​​ಗಳ ಜೊತೆಯಾಟ

ಸತತ ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾದ ಈ ಜೋಡಿ 4ನೇ ವಿಕೆಟ್​ಗೆ 200+ ರನ್​ ಪಾಲುದಾರಿಕೆ ನೀಡಿತು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರೋಹಿತ್-ಜಡ್ಡು, ಇಂಗ್ಲೆಂಡ್ ಬೌಲರ್ಸ್ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 329 ಎಸೆತಗಳನ್ನು ಎದುರಿಸಿದ 204 ರನ್​ಗಳ ಜೊತೆಯಾಟವಾಡಿದರು. ಈ ರನ್ನುಗಳ ಪೈಕಿ ರೋಹಿತ್​ 114 ರನ್​ಗಳ ಕಾಣಿಕೆ ನೀಡಿದರೆ, ಜಡ್ಡು 84 ರನ್ ಕೊಡುಗೆ ನೀಡಿದರು.

ರೋಹಿತ್​ ಶರ್ಮಾ ಭರ್ಜರಿ ಶತಕ

ನಾಯಕನ ಆಟವಾಡಿದ ರೋಹಿತ್​, ಟೆಸ್ಟ್​​ ಕ್ರಿಕೆಟ್​ನಲ್ಲಿ ತನ್ನ 11ನೇ ಶತಕ ಸಿಡಿಸಿದರು. ತಾನು ಎದುರಿಸಿದ 157ನೇ ಎಸೆತದಲ್ಲಿ ಮೂರಂಕಿ ದಾಟಿದ ಹಿಟ್​ಮ್ಯಾನ್, ಇಂಗ್ಲೆಂಡ್ ವಿರುದ್ಧವೇ ಮೂರನೇ ಸೆಂಚುರಿ ದಾಖಲಿಸಿದರು. ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ಯುತ್ತಿದ್ದ ಹಿಟ್​ಮ್ಯಾನ್, 196 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್​ ಸಹಿತ 131 ರನ್ ಸಿಡಿಸಿ ಮಾರ್ಕ್​ವುಡ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

ರವೀಂದ್ರ ಜಡೇಜಾ ಆಕರ್ಷಕ ಸೆಂಚುರಿ

ಮತ್ತೊಂದೆಡೆ ರೋಹಿತ್​ ಜೊತೆ ಅದ್ಭುತ ಪಾಲುದಾರಿಕೆ ನೀಡಿದ ಜಡೇಜಾ ಶತಕ ಸಿಡಿಸಿ ಸಂಭ್ರಮಿಸಿದರು. ಟೆಸ್ಟ್​ ಕ್ರಿಕೆಟ್​ನಲ್ಲಿ 4ನೇ ಶತಕ ಸಿಡಿಸಿ ಮಿಂಚಿದರು. 33ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟ್ ಹಿಡಿದು ಕ್ರೀಸ್​ಗೆ ಬಂದ ಜಡ್ಡು 82ನೇ ಓವರ್​​ನಲ್ಲಿ ಶತಕವನ್ನು ಪೂರೈಸಿದರು. 198ನೇ ಎಸೆತದಲ್ಲಿ ಮೂರಂಕಿ ದಾಟಿದ ಜಡೇಜಾ, 7 ಬೌಂಡರಿ, 2 ಸಿಕ್ಸರ್​​ ಕೂಡ ಸಿಡಿಸಿದ್ದಾರೆ. ಸದ್ಯ 110 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದು 2ನೇ ದಿನದಾಟ ಮುಂದುವರೆಸಲಿದ್ದಾರೆ.

ಸರ್ಫರಾಜ್ ಅರ್ಧಶತಕ

ಕಳೆದ 3 ವರ್ಷಗಳಿಂದ ದೇಶೀಯ ಕ್ರಿಕೆಟ್​​ನಲ್ಲಿ ರನ್ ಮಳೆ ಹರಿಸಿದ್ದ ಸರ್ಫರಾಜ್ ಖಾನ್ ಕೊನೆಗೂ ಭಾರತ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದು ಮಿಂಚಿದ್ದಾರೆ. ತನ್ನ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿರುವ ಸರ್ಫರಾಜ್, 66 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 62 ರನ್ ಚಚ್ಚಿ ರನೌಟ್​ ಆದರು. ಜಡೇಜಾ ಜೊತೆಗೆ 5ನೇ ವಿಕೆಟ್​ಗೆ 77 ರನ್​ಗಳ ಪಾಲುದಾರಿಕೆ ನೀಡಿದರು. ಸದ್ಯ ಜಡೇಜಾ ಜೊತೆಗೆ ಕುಲ್ದೀಪ್ ಕ್ರೀಸ್​ನಲ್ಲಿದ್ದಾರೆ. 10 ಎಸೆತಗಳಲ್ಲಿ 1 ರನ್ ಗಳಿಸಿರುವ ಕುಲ್ದೀಪ್, ಎರಡನೇ ದಿನದಾಟ ಮುಂದುವರೆಸಿದ್ದಾರೆ. ಮಾರ್ಕ್​ವುಡ್ 3 ವಿಕೆಟ್, ಟಾಮ್ ಹಾರ್ಟ್ಲೆ 1 ವಿಕೆಟ್ ಪಡೆದಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ