IND vs ENG SF 2 Highlights: ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಣಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ ತಂಡ
Jun 28, 2024 02:00 AM IST
India vs England Highlights: 2024ರ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 68 ರನ್ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ಗೇರಿದೆ. ಪಂದ್ಯದ ಚಿತ್ರಣ ಇಲ್ಲಿದೆ.
ಮೂರನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ
ಅಕ್ಷರ್ ಪಟೇಲ್ (23/3) ಮತ್ತು ಕುಲ್ದೀಪ್ (19/3) ಅವರ ಸ್ಪಿನ್ ದಾಳಿ ಹಾಗೂ ರೋಹಿತ್ ಶರ್ಮಾ (57) ಅವರ ಅರ್ಧಶತಕದ ಸಹಾಯದಿಂದ ಟೀಮ್ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್ಗಳ ಗೆಲುವು ಸಾಧಿಸಿ 10 ವರ್ಷಗಳ ನಂತರ ಫೈನಲ್ ಪ್ರವೇಶಿಸಿದೆ. 2014ರಲ್ಲಿ ಕೊನೆಯ ಬಾರಿಗೆ ಭಾರತ ಟಿ20 ವಿಶ್ವಕಪ್ ಫೈನಲ್ ಆಡಿತ್ತು. ಇಂಗ್ಲೆಂಡ್ ವಿರುದ್ಧ ಗೆದ್ದು 2022ರ ಸೆಮಿಫೈನಲ್ ಪಂದ್ಯದ ಸೋಲಿನ ಸೇಡನ್ನು ಭಾರತ ತೀರಿಸಿಕೊಂಡಿದೆ. ಜೂನ್ 27ರ ಶನಿವಾರ ಬಾರ್ಬಡೋಸ್ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ ಸೌತ್ ಆಫ್ರಿಕಾ ತಂಡದ ಸವಾಲನ್ನು ಎದುರಿಸಲಿದೆ.
ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ, ರೋಹಿತ್ ಶರ್ಮ ಅವರ ಹಾಫ್ ಸೆಂಚುರಿ ಸಹಾಯದಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 171 ರನ್ ಬಾರಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡಿತು. 16.4 ಓವರ್ಗಳಲ್ಲಿ 103 ರನ್ಗೆ ಆಲೌಟ್ ಆಯಿತು. ಭಾರತದ ಪರ ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದು ಮಿಂಚಿದರು.
ಜೋರ್ಡಾನ್ ಔಟ್
ಕುಲ್ದೀಪ್ ಯಾದವ್ ಮೂರನೇ ವಿಕೆಟ್ ಪಡೆದರು. ಕ್ರಿಸ್ ಜೋರ್ಡಾನ್ 1 ರನ್ ಗಳಿಸಿ ಔಟಾದರು. ಇದರೊಂದಿಗೆ ಇಂಗ್ಲೆಂಡ್ ಸೋಲಿನ ಸುಳಿಗೆ ಸಿಲುಕಿತು.
ಹ್ಯಾರಿ ಬ್ರೂಕ್ ಔಟ್
ಹ್ಯಾರಿ ಬ್ರೂಕ್ ಅವರು ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಔಟಾದರು. 19 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು.
ಇಂಗ್ಲೆಂಡ್ 68/6 (11)
10 ಓವರ್ ಮುಕ್ತಾಯ 62/5
ಇಂಗ್ಲೆಂಡ್ 10ನೇ ಓವರ್ನಲ್ಲಿ 9 ರನ್ ಗಳಿಸಿತು. ಹ್ಯಾರಿ ಬ್ರೂಕ್ 1 ಬೌಂಡರಿ ಸಿಡಿಸಿದರು. ಗೆಲುವಿಗೆ 110 ರನ್ ಬೇಕು.
9 ಓವರ್ ಮುಕ್ತಾಯಕ್ಕೆ 53/5
9ನೇ ಓವರ್ನಲ್ಲಿ 4 ರನ್ ಬಂತು. ಇಂಗ್ಲೆಂಡ್ ಗೆಲ್ಲಲು 66 ಎಸೆತಗಳಲ್ಲಿ 119 ರನ್ ಬೇಕು. ಲಿವಿಂಗ್‌ಸ್ಟನ್ ಮತ್ತು ಹ್ಯಾರಿ ಬ್ರೂಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸ್ಯಾಮ್ ಕರನ್ ಔಟ್
ಇಂಗ್ಲೆಂಡ್ 5ನೇ ವಿಕೆಟ್ ಕಳೆದುಕೊಂಡಿತು. ಕುಲ್ದೀಪ್ ಬೌಲಿಂಗ್ನಲ್ಲಿ ಸ್ಯಾಮ್ ಕರನ್ ಎಲ್ಬಿ ಬಲೆಗೆ ಬಿದ್ದರು.
ಮೊಯಿನ್ ಅಲಿ ಔಟ್
ಅಕ್ಷರ್ ಪಟೇಲ್ ಎಸೆದ ಮೂರನೇ ಓವರ್ನ ಮೊದಲ ಎಸೆತದಲ್ಲೇ ಮೂರನೇ ವಿಕೆಟ್ ಪಡೆದರು. ಮೊಯಿನ್ ಅಲಿ ಸ್ಟಂಪೌಟ್ ಆದರು. 10 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು.
ಪವರ್ಪ್ಲೇ ಮುಕ್ತಾಯ 39/3
6 ಓವರ್ಗಳ ಪವರ್ಪ್ಲೇನಲ್ಲಿ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ.
ಬೈರ್‌ಸ್ಟೋ ಔಟ್
ಅಕ್ಷರ್ ಪಟೇಲ್ ಮತ್ತೊಂದು ವಿಕೆಟ್ ಪಡೆದರು. ಜಾನಿ ಬೈರ್‌ಸ್ಟೋ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. 3 ಎಸೆತಗಳಲ್ಲಿ ಸೊನ್ನೆ ಸುತ್ತಿ ಹೊರ ನಡೆದರು.
ಫಿಲ್ ಸಾಲ್ಟ್ ಔಟ್
ಜೋಸ್ ಬಟ್ಲರ್ ಬೆನ್ನಲ್ಲೇ ಫಿಲ್ ಸಾಲ್ಟ್ ಔಟ್. ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. 8 ಎಸೆತಗಳಲ್ಲಿ 5 ರನ್ ಗಳಿಸಿದರು.
ಜೋಸ್ ಬಟ್ಲರ್ ಔಟ್
ಜೋಸ್ ಬಟ್ಲರ್ 23 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು.
3ನೇ ಓವರ್ನಲ್ಲಿ 3 ಬೌಂಡರಿ
ಅರ್ಷದೀಪ್ ಸಿಂಗ್ ಎಸೆದ 3ನೇ ಓವರ್ನಲ್ಲಿ ಇಂಗ್ಲೆಂಡ್ 3 ಬೌಂಡರಿ ಸಿಡಿಸಿತು. ಜೋಸ್ ಬಟ್ಲರ್ ಬೌಂಡರಿ ಸಿಡಿಸಿದರು. ಒಟ್ಟು 13 ರನ್ ಹರಿದು ಬಂತು.
2 ಮುಕ್ತಾಯಕ್ಕೆ 13/0
ಎರಡನೇ ಓವರ್ನಲ್ಲಿ ಇಂಗ್ಲೆಂಡ್ 8 ರನ್ ಗಳಿಸಿತು. ಬಟ್ಲರ್ ಮೊದಲ ಬೌಂಡರಿ ಬಾರಿಸಿದರು.
ಮೊದಲ ಓವರ್ ಮುಕ್ತಾಯ 5/0
ಮೊದಲ ಓವರ್ ಮುಕ್ತಾಯಕ್ಕೆ ಇಂಗ್ಲೆಂಡ್ 5 ರನ್ ಗಳಿಸಿತು.
ಇಂಗ್ಲೆಂಡ್ ಇನ್ನಿಂಗ್ಸ್ ಆರಂಭ
ಇಂಗ್ಲೆಂಡ್ ಚೇಸಿಂಗ್ ಆರಂಭಿಸಿತು. ಜೋಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅರ್ಷದೀಪ್ ಬೌಲಿಂಗ್ ಮಾಡುತ್ತಿದ್ದಾರೆ.
ಇನ್ನಿಂಗ್ಸ್ ಮುಕ್ತಾಯ
ಟೀಮ್ ಇಂಡಿಯಾ ಇನ್ನಿಂಗ್ಸ್ ಮುಕ್ತಾಯಗೊಂಡಿತು. 20 ಓವರ್ಗಳಲ್ಲಿ ಭಾರತ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಇಂಗ್ಲೆಂಡ್ ಮತ್ತೊಮ್ಮೆ ಫೈನಲ್ಗೇರಲು 172 ರನ್ ಗಳಿಸಬೇಕಿದೆ.
ಅಕ್ಷರ್ ಪಟೇಲ್ ಔಟ್
ಇನ್ನಿಂಗ್ಸ್ನ ಕೊನೆಯ ಓವರ್ನ 5ನೇ ಎಸೆತದಲ್ಲಿ ಅಕ್ಷರ್ ಪಟೇಲ್ ಔಟಾದರು. ಕ್ರಿಸ್ ಜೋರ್ಡಾನ್ಗೆ ಇದು 3ನೇ ವಿಕೆಟ್.
19ನೇ ಓವರ್ ಮುಕ್ತಾಯಕ್ಕೆ 159/6
19ನೇ ಓವರ್ನಲ್ಲಿ ಭಾರತ 12 ರನ್ ಕಲೆ ಹಾಕಿತು. ರವೀಂದ್ರ ಜಡೇಜಾ 2 ಬೌಂಡರಿ ಸಿಡಿಸಿದರು.
ಶಿವಂ ದುಬೆ ಡಕೌಟ್
ಶಿವಂ ದುಬೆ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಕ್ರಿಸ್ ಜೋರ್ಡನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದರು.
ಹಾರ್ದಿಕ್ ಪಾಂಡ್ಯ ಔಟ್
18ನೇ ಓವರ್ನಲ್ಲಿ ಸತತ ಎರಡು ಸಿಕ್ಸರ್ ಬಾರಿಸಿ ಹಾರ್ದಿಕ್ ಪಾಂಡ್ಯ ಅವರು ಕ್ರಿಸ್ ಜೋರ್ಡಾನ್ ಬೌಲಿಂಗ್ನಲ್ಲಿ ಔಟಾದರು. 13 ಎಸೆತಗಳಲ್ಲಿ 23 ರನ್ ಬಾರಿಸಿದರು.
17 ಓವರ್ ಮುಕ್ತಾಯಕ್ಕೆ 132/4
17ನೇ ಓವರ್ನಲ್ಲಿ ಕೇವಲ 6 ರನ್ ಬಂತು. ಹಾರ್ದಿಕ್ ಮತ್ತು ಜಡೇಜಾ ಆರ್ಭಟಿಸಲು ವಿಫಲರಾಗುತ್ತಿದ್ದಾರೆ.
ಸೂರ್ಯಕುಮಾರ್ ಯಾದವ್ ಔಟ್
ಕ್ರೀಸ್ನಲ್ಲಿ ಸೆಟ್ ಆಗಿದ್ದ ಸೂರ್ಯಕುಮಾರ್ ಯಾದವ್ ಔಟಾದರು. ಜೋಪ್ರಾ ಆರ್ಚರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. 36 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 47 ರನ್ ಸಿಡಿಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು.
ಭಾರತ ನೀರಸ ಬ್ಯಾಟಿಂಗ್
ರೋಹಿತ್ ಶರ್ಮಾ ಔಟಾದ ಬೆನ್ನಲ್ಲೇ ಭಾರತ ನೀರಸ ಬ್ಯಾಟಿಂಗ್ ನಡೆಸುತ್ತಿದೆ. 15ನೇ ಓವರ್ನಲ್ಲಿ ಕೇವಲ 5 ರನ್ ಬಂತು. ಸೂರ್ಯಕುಮಾರ್ 1 ಬೌಂಡರಿ ಸಿಡಿಸಿದರು.
ಭಾರತ - 118/3 (15)
ರೋಹಿತ್ ಔಟ್
ಅರ್ಧಶತಕ ಸಿಡಿಸಿದ ಬೆನ್ನಲ್ಲೇ ರೋಹಿತ್ ಶರ್ಮಾ ಔಟ್. ಆದಿಲ್ ರಶೀದ್ ಅವರ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 57 ರನ್ ಚಚ್ಚಿದರು.
13ನೇ ಓವರ್ನಲ್ಲಿ 19 ರನ್
13ನೇ ಓವರ್ನಲ್ಲಿ ಭಾರತ 19 ರನ್ ಗಳಿಸಿತು. ಸೂರ್ಯಕುಮಾರ್ 1 ಸಿಕ್ಸರ್, ರೋಹಿತ್ ಶರ್ಮಾ 1 ಸಿಕ್ಸರ್, 1 ಬೌಂಡರಿ ಚಚ್ಚಿದರು. ರೋಹಿತ್ರ ಈ ಸಿಕ್ಸರ್ ಟಿ20 ವಿಶ್ವಕಪ್ನಲ್ಲಿ 50ನೇಯದ್ದಾಗಿದೆ.
ಭಾರತ 110/2 (13)
ರೋಹಿತ್ ಶರ್ಮಾ ಅರ್ಧಶತಕ
ರೋಹಿತ್ ಶರ್ಮಾ ಎರಡನೇ ಸೆಮಿಫೈನಲ್ನಲ್ಲಿ ಅರ್ಧಶತಕ ಪೂರೈಸಿದರು. 36 ಎಸೆತಗಳಲ್ಲಿ 50ರ ಗಡಿ ದಾಟಿದರು. ಹಾಲಿ ವಿಶ್ವಕಪ್ನಲ್ಲಿ ಮೂರನೇ ಹಾಗೂ ಒಟ್ಟಾರೆ ವಿಶ್ವಕಪ್ ಇತಿಹಾಸದಲ್ಲಿ 11ನೇ ಅರ್ಧಶತಕವಾಗಿದೆ. ಇದರೊಂದಿಗೆ ಭಾರತ ತಂಡದ ಸ್ಕೋರ್ ಕೂಡ 100ರ ಗಡಿ ದಾಟಿತು.
ಅರ್ಧಶತಕದ ಜೊತೆಯಾಟ
ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಅರ್ಧಶತಕದ ಜೊತೆಯಾಟವಾಡಿದರು. 2 ವಿಕೆಟ್ ನಂತರ ಮೂರನೇ ವಿಕೆಟ್ಗೆ 38 ಎಸೆತಗಳಲ್ಲಿ 50 ರನ್ಗಳ ಪಾಲುದಾರಿಕೆ ನೀಡಿದರು.
11 ಓವರ್ ಮುಕ್ತಾಯಕ್ಕೆ 86/2
11ನೇ ಓವರ್ನಲ್ಲಿ 9 ರನ್ ಬಂತು. ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ ಸಿಡಿಸಿದರು.
10 ಓವರ್ ಮುಕ್ತಾಯಕ್ಕೆ 77/2
10ನೇ ಓವರ್ನಲ್ಲಿ ಭಾರತ 77 ರನ್ ಗಳಿಸಿತು. ಸೂರ್ಯಕುಮಾರ್ 1 ಬೌಂಡರಿ ಸಿಡಿಸಿದರು.
ಮಳೆಯ ನಂತರ ಭಾರತ ನೀರಸ ಆರಂಭ
ಮಳೆ ಬಿಡುವು ಕೊಟ್ಟ ನಂತರ ಟೀಮ್ ಇಂಡಿಯಾ ನೀರಸ ಆರಂಭ ಪಡೆಯಿತು. 9ನೇ ಓವರ್ನಲ್ಲಿ ಕೇವಲ 4ರನ್ ಪಡೆಯಿತು.
ಭಾರತ 69/2
ಮತ್ತೆ ಪಂದ್ಯ ಆರಂಭ
ಮತ್ತೆ ಪಂದ್ಯ ಆರಂಭಗೊಂಡಿದೆ. ಯಾವುದೇ ಓವರ್ಗಳು ಕಡಿತಗೊಂಡಿಲ್ಲ. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಕ್ರೀಸ್ಗೆ ಇನ್ನಿಂಗ್ಸ್ ಮುಂದುವರೆಸಿದ್ದಾರೆ.
ನಿಂತ ಮಳೆ, ಶೀಘ್ರದಲ್ಲೇ ಪಂದ್ಯ ಆರಂಭ
ಜೋರಾಗಿ ಸುರಿದ ಮಳೆಯು ಈಗ ಬಿಡುವು ಕೊಟ್ಟಿದೆ. ಪಿಚ್ ಮುಚ್ಚಲಾಗಿದ್ದ ಕವರ್ಗಳನ್ನು ತೆಗೆಯಲಾಗುತ್ತಿದೆ. ಅಂಪೈರ್ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಪಂದ್ಯ ಆರಂಭವಾಗಲಿದ್ದು, ಓವರ್ಗಳು ಕಡಿತಗೊಳ್ಳುವುದಿಲ್ಲ.
ಮತ್ತೊಮ್ಮೆ ಮಳೆ, ಪಂದ್ಯ ತಾತ್ಕಾಲಿಕ ಸ್ಥಗಿತ
ಮತ್ತೊಮ್ಮೆ ಮಳೆ ಕಾಣಿಸಿಕೊಂಡಿದೆ. ಹೀಗಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜೋರು ಮಳೆಯಾಗುತ್ತಿದೆ. ಮಳೆ ಹೀಗೆ ಎಡಬಿಡದೆ ಸುರಿದರೆ 175 ನಿಮಿಷಗಳ ನಂತರ ಓವರ್ಗಳನ್ನು ಕಡಿತಗೊಳಿಸಲಾಗುತ್ತದೆ.
8 ಓವರ್ ಮುಕ್ತಾಯಕ್ಕೆ65/2
ಕ್ರಿಸ್ ಜೋರ್ಡಾನ್ ಎಸೆದ 8ನೇ ಓವರ್ನಲ್ಲಿ ಭಾರತ 10 ರನ್ ಗಳಿಸಿತು. ಸೂರ್ಯಕುಮಾರ್ ಒಂದು ಸಿಕ್ಸರ್ ಬಾರಿಸಿದರು.
7 ಓವರ್ ಮುಕ್ತಾಯಕ್ಕೆ 55/2
7ನೇ ಓವರ್ನಲ್ಲಿ 9 ರನ್ ಬಂತು. ರೋಹಿತ್ ಶರ್ಮಾ 2 ಬೌಂಡರಿ ಸಿಡಿಸಿದರು.
ಪವರ್ಪ್ಲೇ ಮುಕ್ತಾಯ
6 ಓವರ್ಗಳ ಪವರ್ ಪ್ಲೇ ಮುಕ್ತಾಯಕ್ಕೆ ಭಾರತ 46 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ ತಂಡಕ್ಕೆ ಆಸರೆಯಾಗುತ್ತಿದ್ದಾರೆ.
ರಿಷಭ್ ಪಂತ್ ಔಟ್
ಪವರ್ ಪ್ಲೇನಲ್ಲಿ ಭಾರತ ಮತ್ತೊಂದು ವಿಕೆಟ್ ಕಳೆದುಕೊಂಡಿತು. ರಿಷಭ್ ಪಂತ್ ಸ್ಯಾಮ್ ಕರನ್ ಬೌಲಿಂಗ್ನಲ್ಲಿ ಔಟಾದರು. 6 ಎಸೆತಗಳಲ್ಲಿ 4 ರನ್ ಗಳಿಸಿದರು.
ಭಾರತ 41/2 (5.2)
5 ಓವರ್ ಮುಕ್ತಾಯ 40/1
5ನೇ ಓವರ್ನಲ್ಲಿ ಭಾರತ 11 ರನ್ ಗಳಿಸಿತು. ರೋಹಿತ್ ಶರ್ಮಾ ಎರಡು ಬೌಂಡರಿ ಸಿಡಿಸಿದರು.
4 ಓವರ್ ಮುಕ್ತಾಯಕ್ಕೆ 29 ರನ್
ನಾಲ್ಕು ಓವರ್ ಮುಕ್ತಾಯಕ್ಕೆ ಭಾರತ 29/1 ರನ್ ಗಳಿಸಿದೆ. ನಾಲ್ಕನೇ ಓವರ್ನಲ್ಲಿ 8 ರನ್ ಬಂತು.
3 ಓವರ್ ಮುಕ್ತಾಯ
ಮೂರನೇ ಓವರ್ನಲ್ಲಿ 10 ರನ್ ಬಂತು. ವಿರಾಟ್ ಕೊಹ್ಲಿ ಈ ಓವರ್ನಲ್ಲಿ ಔಟಾದರು.
ಭಾರತ 21/1 (3)
ವಿರಾಟ್ ಕೊಹ್ಲಿ ಔಟ್
ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ರೀಸ್ ಟೋಪ್ಲಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. 9 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಒಂದು ಸಿಕ್ಸರ್ ಮತ್ತು 2 ರನ್ ಗಳಿಸಿದ ಮರು ಎಸೆತದಲ್ಲೇ ಔಟಾದರು.
2 ಓವರ್ ಮುಕ್ತಾಯ 11/0
ಎರಡನೇ ಓವರ್ನಲ್ಲಿ 5 ರನ್ ಹರಿದು ಬಂದವು. ಜೋಫ್ರಾ ಆರ್ಚರ್ ಬೌಲಿಂಗ್ ಮಾಡಿದರು. ರೋಹಿತ್ ಶರ್ಮಾ ಒಂದು ಬೌಂಡರಿ ಸಿಡಿಸಿದರು.
ಮೊದಲ ಓವರ್ ಮುಕ್ತಾಯಕ್ಕೆ 6/0
ಮೊದಲ ಓವರ್ ಮುಕ್ತಾಯಕ್ಕೆ ಭಾರತ 6 ರನ್ ಕಲೆ ಹಾಕಿದೆ. ರೋಹಿತ್ ಶರ್ಮಾ ಒಂದು ಬೌಂಡರಿ ಸಿಡಿಸಿದರು. ಕಳೆದ ಪಂದ್ಯದಲ್ಲಿ ಡಕೌಟ್ ಆಗಿದ್ದ ವಿರಾಟ್ ಕೊಹ್ಲಿ ಖಾತೆ ತೆರೆದರು.
ಭಾರತ ಬ್ಯಾಟಿಂಗ್ ಆರಂಭ
ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ರೀಸ್ ಟೋಪ್ಲಿ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.
ಪ್ಲೇಯಿಂಗ್ 11 ಹೀಗಿದೆ
ಭಾರತ (ಪ್ಲೇಯಿಂಗ್ XI)
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ
ಇಂಗ್ಲೆಂಡ್ (ಪ್ಲೇಯಿಂಗ್ XI)
ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್/ನಾಯಕ), ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.
ಟಾಸ್ ಗೆದ್ದ
ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮಳೆ ನಿಂತಿದೆ
ಮಳೆ ನಿಂತಿದೆ. ಅಂಪೈರ್ಗಳು 8.30ಕ್ಕೆ ಪಿಚ್ ಪರಿಶೀಲನೆ ನಡೆಸಲಿದ್ದಾರೆ. ಶೀಘ್ರವೇ ಪಂದ್ಯ ಆರಂಭವಾಗುವ ಸಾಧ್ಯತೆ ಇದೆ.
ಮಳೆಯ ಕಾರಣ ಟಾಸ್ ವಿಳಂಬ
ಗಯಾನಾದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಟಾಸ್ ಪ್ರಕ್ರಿಯೆ ವಿಳಂಬವಾಗಲಿದೆ. ಸಂಜೆ 7.30 ಕ್ಕೆ ಟಾಸ್ ಆರಂಭವಾಗಬೇಕಿತ್ತು.
ಧಾರಾಕಾರ ಮಳೆ
ಭಾರತೀಯ ಕಾಲಮಾನದಂತೆ ಇಂಡೋ-ಇಂಗ್ಲೆಂಡ್ ಕದನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಹವಾಮಾನ ವರದಿಯಂತೆ ಗಯಾನಾದಲ್ಲಿ ಎಡೆಬಿಡದೆ ಮಳೆ ಸುರಿಯಲಾರಂಭಿಸಿದೆ.
ವಿಶ್ವದಾಖಲೆ ಬರೆಯಲು ಅರ್ಷದೀಪ್ ಸಜ್ಜು
ಹಾಲಿ ವಿಶ್ವಕಪ್ನಲ್ಲಿ ಇನ್ನು 3 ವಿಕೆಟ್ ಪಡೆದರೆ ಅರ್ಷದೀಪ್ ಸಿಂಗ್ ನೂತನ ವಿಶ್ವದಾಖಲೆ ಬರೆಯಲಿದ್ದಾರೆ. ಆ ಮೂಲಕ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರು ಪ್ರಸ್ತುತ ಆಡಿರುವ 6 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ.
ಟಿ20ಐ ಕ್ರಿಕೆಟ್ನಲ್ಲಿ ಮುಖಾಮುಖಿ ದಾಖಲೆ
ಒಟ್ಟು ಪಂದ್ಯಗಳು - 23
ಭಾರತ ಗೆಲುವು - 12
ಇಂಗ್ಲೆಂಡ್ ಗೆಲುವು - 11
ಪಂದ್ಯ ನಡೆಯುವುದೇ ಅನುಮಾನ
ಇಂಗ್ಲೆಂಡ್ ಮತ್ತು ಭಾರತ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಏಕೆಂದರೆ ಈಗಾಗಲೇ ಗಯಾನಾದಲ್ಲಿ ಸತತ 12 ಗಂಟೆಗಳ ಕಾಲ ಮಳೆಯಾಗಿದೆ. ಇವತ್ತೂ ಪಂದ್ಯದ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ವಾರವಿಡೀ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಕಾಣಿಸಿಕೊಂಡರೂ ಪಂದ್ಯಕ್ಕೆ 250 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗಿದೆ. 5 ಓವರ್ ಅಥವಾ ಸೂಪರ್ ಓವರ್ ಆಡಲು ಅವಕಾಶ ಸಿಕ್ಕರೂ ಪಂದ್ಯ ನಡೆಸಲಾಗುತ್ತದೆ.
ಅಚ್ಚರಿ ಸುದ್ದಿ ಏನೆಂದರೆ, ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನವಿಲ್ಲ. ಪಂದ್ಯ ಸ್ಥಗಿತಗೊಂಡರೆ ಸೂಪರ್-8 ಗ್ರೂಪ್ 1ರಲ್ಲಿ ಭಾರತ ಅಗ್ರಸ್ಥಾನಿಯಾಗಿ ಫೈನಲ್ಗೇರಲಿದೆ. ಏಕೆಂದರೆ ಇಂಗ್ಲೆಂಡ್ಗಿಂತ ಹೆಚ್ಚು ಅಂಕ, ರನ್ ರೇಟ್ ಹೊಂದಿದೆ. ಗುರುವಾರ ಪಂದ್ಯವನ್ನು ಆಡದಿದ್ದರೆ, ಶುಕ್ರವಾರ ಪಂದ್ಯವನ್ನು ಮರು ಆಯೋಜಿಸುವ ಸಾಧ್ಯತೆಯಿಲ್ಲ.
ಇಂಗ್ಲೆಂಡ್ ಸಂಭಾವ್ಯ ಪ್ಲೇಯಿಂಗ್ XI
ಜೋಸ್ ಬಟ್ಲರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ವಿಲ್ ಜ್ಯಾಕ್ಸ್, ಲಿಯಾಮ್ ಲಿವಿಂಗ್‌ಸ್ಟನ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.
ಭಾರತ ನಿರೀಕ್ಷಿತ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಅರ್ಷ್‌ದೀಪ್ ಸಿಂಗ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
ಭಾರತ vs ಇಂಗ್ಲೆಂಡ್: ಪಿಚ್ ವರದಿ
ಗಯಾನಾ ನ್ಯಾಷನಲ್ ಸ್ಟೇಡಿಯಂನಲ್ಲಿನ ಪಿಚ್ ಸ್ಪಿನ್ನರ್ಸ್ಗಳ ಸ್ವರ್ಗವಾಗಿದೆ. ಹೀಗಾಗಿ ರೋಹಿತ್ ಪಡೆ ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಬಹುದು. ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಂತಹ ಮೊದಲ ದರ್ಜೆಯ ಸ್ಪಿನ್ನರ್ಗಳು ಇಂಗ್ಲೆಂಡ್ ವಿರುದ್ಧ ದಾಳಿ ನಡೆಸಲಿದ್ದಾರೆ. ಈ ಸ್ಪಿನ್ ಟ್ರ್ಯಾಕ್ನ ಪ್ರಯೋಜನ ಪಡೆಯಲು ಟೀಮ್ ಇಂಡಿಯಾ ಮುಂದಾಗಿದೆ. ಇಂಗ್ಲೆಂಡ್ ತಂಡದಲ್ಲೂ ಸ್ಪೆಷಲಿಸ್ಟ್ ಸ್ಪಿನ್ನರ್ಗಳೇ ಇದ್ದು, ರೋಹಿತ್ ಪಡೆ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ.