logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಕದನಕ್ಕೆ ಶೇ 90ರಷ್ಟು ಮಳೆ ಭೀತಿ; ಪಂದ್ಯ ರದ್ದಾದರೆ ಮುಂದೇನು?

ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಕದನಕ್ಕೆ ಶೇ 90ರಷ್ಟು ಮಳೆ ಭೀತಿ; ಪಂದ್ಯ ರದ್ದಾದರೆ ಮುಂದೇನು?

Prasanna Kumar P N HT Kannada

Sep 01, 2023 09:39 AM IST

google News

ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಭೀತಿ.

    •  India vs Pakistan: ಭಾರತ-ಪಾಕ್ ಪಂದ್ಯ ನಡೆಯುವ ಕ್ಯಾಂಡಿಯಲ್ಲಿ (ಪಲ್ಲೆಕೆಲ್ಲೆ ಮೈದಾನ) ಮಳೆಯಾಗುವ ಸಾಧ್ಯತೆ ಇದೆ. 70 ರಿಂದ 90ರಷ್ಟು ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದ್ದು, ಕ್ರಿಕೆಟ್​ ಪ್ರೇಮಿಗಳ ನಿರೀಕ್ಷೆಗಳಿಗೆ ತಣ್ಣೀರು ಎರಚುವ ಭೀತಿ ಹರಡಿದೆ.
ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಭೀತಿ.
ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಭೀತಿ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಪ್ರಸಕ್ತ ಸಾಲಿನ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈಗಾಗಲೇ ಏಷ್ಯಾಕಪ್ ಟೂರ್ನಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿ ಎರಡು ದಿನ ಕಳೆದರೂ ಅಸಲಿ ಕಾದಾಟ ಶುರುವಾಗುವುದು ಮಾತ್ರ ಪಾಕಿಸ್ತಾನ-ಭಾರತ ಪಂದ್ಯದ ಮೂಲಕ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ.

ಏಷ್ಯಾಕಪ್ ಹೈವೋಲ್ಟೇಜ್​ ಪಂದ್ಯವು ಶನಿವಾರ (ಸೆಪ್ಟೆಂಬರ್ 2) ನಡೆಯಲಿದ್ದು, ರೋಹಿತ್ ಶರ್ಮಾ ನೇತೃತ್ವದ ಭಾರತ ಮತ್ತು ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ನಡುವಿನ ಕಾದಾಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ಕಾತರದಿಂದ ಕಾಯುತ್ತಿದೆ. ಆದರೆ, ಫ್ಯಾನ್ಸ್​ಗೆ ಭಾರಿ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಈ ಹೈವೋಲ್ಟೇಜ್ ಕದನಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಶೇ.91ರಷ್ಟು ಮಳೆ ಸಾಧ್ಯತೆ?

ಭಾರತ-ಪಾಕ್ ಪಂದ್ಯ ನಡೆಯುವ ಕ್ಯಾಂಡಿಯಲ್ಲಿ (ಪಲ್ಲೆಕೆಲ್ಲೆ ಮೈದಾನ) ಮಳೆಯಾಗುವ ಸಾಧ್ಯತೆ ಇದೆ. 70 ರಿಂದ 90ರಷ್ಟು ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದ್ದು, ಕ್ರಿಕೆಟ್​ ಪ್ರೇಮಿಗಳ ನಿರೀಕ್ಷೆಗಳಿಗೆ ತಣ್ಣೀರು ಎರಚುವ ಭೀತಿ ಹರಡಿದೆ. ಈಗಾಗಲೇ ಲಂಕಾದ ಮಾಧ್ಯಮಗಳು ಈ ಪಂದ್ಯವು ಮಳೆಯಲ್ಲಿ ಕೊಚ್ಚಿ ಹೋಗುವುದು ಖಚಿತ ಎನ್ನುತ್ತಿವೆ. ಹವಾಮಾನದ ಪ್ರಕಾರ ಮಳೆ ಕಡಿಮೆಯಾಗುವುದು ತೀರಾ ಕಡಿಮೆ.

ಆಗಸ್ಟ್​ 31ರಂದು ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವೂ ಇಲ್ಲೇ ನಡೆಯಿತು. ಆದರೆ ಯಾವುದೇ ರೀತಿ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿಲ್ಲ. ಸದ್ಯ ಕ್ಯಾಂಡಿಯಲ್ಲಿ ಮಳೆಗಾಲದ ಸಮಯವಾಗಿದ್ದು, ಸೆಪ್ಟೆಂಬರ್​ ಮಳೆ ಸುರಿಯುವ ಸಾಧ್ಯತೆ ಶೇಕಡಾ 91ರಷ್ಟಿದೆ ಎಂದು ಸ್ಥಳಿಯ ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಮಳೆ ಬಂದು ನಿಂತರೂ ಕ್ರೀಡಾಂಗಣದಲ್ಲಿ ನುರಿತ ಸಿಬ್ಬಂದಿ ಇಲ್ಲದಿರುವುದು ಸಂಪೂರ್ಣ ಪಂದ್ಯ ನಡೆಸುವುದು ಕಷ್ಟಕರವಾಗಬಹುದು ಎಂದು ಹೇಳಲಾಗಿದೆ.

ಆಗಸ್ಟ್​-ಸೆಪ್ಟೆಂಬರ್​ ಸಮಯವು ಕ್ಯಾಂಡಿಯಲ್ಲಿ ಬಿಸಿಲು ಕಾಣಿಸಿಕೊಳ್ಳುವುದೇ ಅಪರೂಪ. ಅಷ್ಟರಮಟ್ಟಿಗೆ ಈ ಅವಧಿಯಲ್ಲಿ ಮಳೆ ಸುರಿಯಲಿದೆ. ಈವರೆಗೂ ಪಲ್ಲೆಕೆಲೆ ಮೈದಾನದಲ್ಲಿ 33 ಏಕದಿನಗಳು ನಡೆದಿವೆ. ಆದರೆ, ಆತಿಥ್ಯ ವಹಿಸಿದ ಪಂದ್ಯಗಳಲ್ಲಿ 3 ಮಾತ್ರ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ನಡೆದಿವೆ. ಮಾನ್ಸೂನ್ ಕಾರಣ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಸಮಯದಲ್ಲಿ ಪಂದ್ಯ ಆಯೋಜಿಸಲು ಹಿಂದೇಟು ಹಾಕುತ್ತದೆ.

ಪಂದ್ಯ ರದ್ದಾದರೆ ಮುಂದೇನು?

ಸೆಪ್ಟೆಂಬರ್ 2, ಶನಿವಾರ ಮಳೆ ಕಾಡಿದರೂ ಸ್ಪಷ್ಟ ಫಲಿತಾಂಶಕ್ಕೆ ಕನಿಷ್ಠ 20 ಓವರ್​ಗಳ ಪಂದ್ಯ ನಡೆಸಲು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಪ್ರಯತ್ನ ನಡೆಸಲಿದೆ. ಆದರೆ, ಇದರ ಹೊರತಾಗಿಯೂ ಪಂದ್ಯ ರದ್ದಾದರೆ, ಭಾರತ-ಪಾಕಿಸ್ತಾನ ತಂಡಕ್ಕೆ ತಲಾ ಒಂದೊಂದು ಅಂಕ ಹಂಚಲಾಗುತ್ತದೆ. ಆದರೆ, ಯಾವುದೇ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ಪಂದ್ಯ ರದ್ದಾದರೆ, ಉದ್ಘಾಟನಾ ಪಂದ್ಯದಲ್ಲಿ ಗೆದ್ದಿರುವ ಪಾಕಿಸ್ತಾನವು ಸೂಪರ್​-4 ಪ್ರವೇಶ ಪಡೆಯಲಿದೆ.

ಟೀಮ್ ಇಂಡಿಯಾ ಸೂಪರ್​-4 ಹಂತಕ್ಕೆ ಪ್ರವೇಶಿಸಲು ಸೆಪ್ಟೆಂಬರ್​ 4ರಂದು ಇದೇ ಮೈದಾನದಲ್ಲಿ ನೇಪಾಳ ಎದುರು ಸೆಣಸಲಿರುವ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದು ವೇಳೆ ಆ ಪಂದ್ಯವೂ ರದ್ದಾದರೆ, 2ನೇ ತಂಡವಾಗಿ ಭಾರತ (ಭಾರತ 2 ಅಂಕ ಪಡೆಯಲಿದೆ) ಸೂಪರ್​-4 ಹಂತಕ್ಕೆ ಪ್ರವೇಶಿಸಲಿದೆ. ಈಗಾಗಲೇ ಸೋತಿರುವ ನೇಪಾಳ 1 ಅಂಕದೊಂದಿಗೆ ಟೂರ್ನಿಯಿಂದ ಹೊರಬೀಳಲಿದೆ. ಟೂರ್ನಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನಕ್ಕೆ ಹೋಗಲು ಭಾರತ ಒಪ್ಪದ ಕಾರಣ, ಶ್ರೀಲಂಕಾಕ್ಕೆ ಜಂಟಿ ಆತಿಥ್ಯ ನೀಡಲಾಗಿದೆ.

ಪಲ್ಲೆಕೆಲೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಅಂಕಿಅಂಶಗಳನ್ನು ನೋಡಿದರೆ, ಭಾರತ ತಂಡವು ಈ ಮೈದಾನದಲ್ಲಿ 3 ಏಕದಿನ ಪಂದ್ಯಗಳನ್ನು ಆಡಿದೆ. ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾವೇ ಗೆದ್ದಿರುವುದು ಸಂತಸದ ವಿಚಾರ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ