logo
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Sl Asia Cup Final Highlights: ಶ್ರೀಲಂಕಾ ವಿರುದ್ಧ ಗೆದ್ದು ಐತಿಹಾಸಿಕ 8ನೇ ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕಿದ ಭಾರತ
ಶ್ರೀಲಂಕಾ ವಿರುದ್ಧ ಭಾರತಕ್ಕೆ 10 ವಿಕೆಟ್ ಗೆಲುವು

IND vs SL Asia Cup Final Highlights: ಶ್ರೀಲಂಕಾ ವಿರುದ್ಧ ಗೆದ್ದು ಐತಿಹಾಸಿಕ 8ನೇ ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕಿದ ಭಾರತ

Sep 17, 2023 10:54 PM IST

India vs Sri Lanka Live Score Asia Cup 2023 Final Highlights: ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ 10 ವಿಕೆಟ್​​ಗಳ ಗೆಲುವು ಸಾಧಿಸಿತು. ಇದರೊಂದಿಗೆ ದಾಖಲೆಯ 8ನೇ ಏಷ್ಯಾಕಪ್​ ಟ್ರೋಫಿಗೆ ಮುತ್ತಿಕ್ಕಿತು.

Sep 17, 2023 06:31 PM IST

India Win: ಭಾರತಕ್ಕೆ 8ನೇ ಏಷ್ಯಾಕಪ್ ಪ್ರಶಸ್ತಿ

ಪ್ರಸಕ್ತ ಸಾಲಿನ ಏಷ್ಯಾಕಪ್ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ತಂಡವು, ಐತಿಹಾಸಿಕ 8ನೇ ಟ್ರೋಫಿಗೆ ಮುತ್ತಿಕ್ಕಿದೆ. ಹಾಗೆಯೇ ವಿಶ್ವ ದಾಖಲೆಯ ಗೆಲುವನ್ನು ತನ್ನದಾಗಿಸಿಕೊಂಡಿದೆ. 2022ರ ಏಷ್ಯಾಕಪ್​​ನಲ್ಲಿ ಸೂಪರ್​​​-4 ಹಂತದಲ್ಲಿ ಮುಗ್ಗರಿಸಿ ಟೀಕೆಗೆ ಗುರಿಯಾಗಿದ್ದ ರೋಹಿತ್ ಪಡೆ, ಇದೀಗ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. 2018ರಲ್ಲಿ ಕೊನೆಯದಾಗಿ ಏಷ್ಯಾಕಪ್ ಟ್ರೋಫಿ ಗೆದ್ದಿದ್ದ ಭಾರತ, ಆ ಬಳಿಕ ಟ್ರೋಫಿ ಗೆಲ್ಲಲು ವಿಫಲವಾಗಿತ್ತು.

ಕೊಲೊಂಬೊದ ಆರ್​ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ, ಮೊದಲು ಬ್ಯಾಟಿಂಗ್ ನಡೆಸಿತು. ಭಾರತ ತಂಡದ ಅದ್ಭುತ ಬೌಲಿಂಗ್​​ಗೆ ಶ್ರೀಲಂಕಾ ತತ್ತರಿಸಿತು. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 15.2 ಓವರ್​ಗಳಲ್ಲಿ ಕೇವಲ 50 ರನ್​ಗಳಿಗೆ ಸರ್ವಪತನ ಕಂಡಿತು. 

ಈ ಸಣ್ಣ ಗುರಿಯನ್ನು ಬೆನ್ನತ್ತಿದ ಭಾರತ ತಂಡ 6.1 ಓವರ್​ಗಳಲ್ಲಿ ಅಂದರೆ ಪವರ್​ ಪ್ಲೇ ಮುಗಿಯುವುದರೊಂದಿಗೆ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗೆರೆ ದಾಟಿತು. ಇದರೊಂದಿಗೆ 10 ವಿಕೆಟ್​​ಗಳ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿತು. ಶುಭ್ಮನ್​ ಗಿಲ್​ 27 ರನ್, ಇಶಾನ್​ ಕಿಶನ್​ 23 ರನ್ ಬಾರಿಸಿ ಅಜೇಯರಾಗಿ ಉಳಿದರು.

Sep 17, 2023 06:07 PM IST

India vs Sri Lanka Live Score: ಭಾರತದ ಮುಡಿಗೆ ಏಷ್ಯಾಕಪ್​ ಟ್ರೋಫಿ

ಭಾರತ ತಂಡಕ್ಕೆ 10 ವಿಕೆಟ್​ಗಳ ಭರ್ಜರಿ

ಏಷ್ಯಾಕಪ್​​ ಫೈನಲ್​​ನಲ್ಲಿ ರೋಚಕ ಗೆಲುವು

ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ

8ನೇ ಟ್ರೋಫಿಗೆ ಮುತ್ತಿಕ್ಕಿದ ಟೀಮ್ ಇಂಡಿಯಾ

6.1ನೇ ಓವರ್​ನಲ್ಲೇ ಗೆಲುವಿನ ಗೆರೆ ದಾಟಿದ ಭಾರತ

2018ರ ಬಳಿಕ ಏಷ್ಯಾಕಪ್ ಗೆದ್ದ ರೋಹಿತ್ ಪಡೆ

ಕೊಲೊಂಬೊದ ಆರ್​ ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯ

ಶುಭ್ಮನ್ ಗಿಲ್ 27 ರನ್, ಇಶಾನ್ ಕಿಶನ್ 23 ರನ್ ಗಳಿಸಿ ಔಟಾಗದೆ ಉಳಿದರು.

Sep 17, 2023 06:06 PM IST

India vs Sri Lanka Live Score: 50/0

6 ಓವರ್​ ಮುಕ್ತಾಯಕ್ಕೆ ಭಾರತ 50 ರನ್​

ಶುಭ್ಮನ್ ಗಿಲ್ 27 ರನ್, ಇಶಾನ್ ಕಿಶನ್ 22 ರನ್

IIND 50/0 (6)- ಗೆಲುವಿಗೆ ಬೇಕು 1 ರನ್​

Sep 17, 2023 06:06 PM IST

India vs Sri Lanka Live Score: 45/0

5 ಓವರ್​ ಮುಕ್ತಾಯಕ್ಕೆ ಭಾರತ 45 ರನ್​

ಶುಭ್ಮನ್ ಗಿಲ್ 23 ರನ್, ಇಶಾನ್ ಕಿಶನ್ 21 ರನ್

ಗೆಲುವಿಗೆ ಬೇಕು 6 ರನ್​

Sep 17, 2023 05:58 PM IST

India vs Sri Lanka Live Score: ಭಾರತ 34/0

4 ಓವರ್​ ಮುಕ್ತಾಯಕ್ಕೆ ಭಾರತ 34 ರನ್​

ಶುಭ್ಮನ್ ಗಿಲ್ 19 ರನ್, ಇಶಾನ್ ಕಿಶನ್ 18 ರನ್

IND 32/0 (3)- ಗೆಲುವಿಗೆ ಬೇಕು 17 ರನ್​

Sep 17, 2023 05:55 PM IST

India vs Sri Lanka Live Score: ಗೆಲುವಿನ ಸನಿಹದಲ್ಲಿ ಭಾರತ

ಶುಭ್ಮನ್ ಗಿಲ್-ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್​​

3ನೇ ಓವರ್​ನಲ್ಲಿ ಹ್ಯಾಟ್ರಿಕ್ ಬೌಂಡರಿ ಸಿಡಿಸಿದ ಗಿಲ್

ಗೆಲುವಿನ ಸನಿಹಕ್ಕೆ ಬಂದ ಟೀಮ್ ಇಂಡಿಯಾ

ಶುಭ್ಮನ್ ಗಿಲ್ 18 ರನ್, ಇಶಾನ್ ಕಿಶನ್ 13 ರನ್

IND 32/0 (3)-  ಗೆಲುವಿಗೆ ಬೇಕು 19 ರನ್​

Sep 17, 2023 05:51 PM IST

India vs Sri Lanka Live Score: ಗೆಲುವಿಗೆ ಬೇಕು ಕೇವಲ 34 ರನ್

2ನೇ ಓವರ್​ ಮುಕ್ತಾಯಕ್ಕೆ ಭಾರತ 17 ರನ್

ಇಶಾನ್ ಕಿಶನ್ 13, ಶುಭ್ಮನ್ 4 ರನ್​

IND 17/0 (2)- ಭಾರತದ ಗೆಲುವಿಗೆ ಬೇಕು 34 ರನ್

Sep 17, 2023 05:46 PM IST

India vs Sri Lanka Live Score: ಭಾರತ ಉತ್ತಮ ಆರಂಭ

ಉತ್ತಮ ಆರಂಭ ಪಡೆದ ಟೀಮ್ ಇಂಡಿಯಾ

ಮೊದಲ ಓವರ್​ನಲ್ಲಿ 7 ರನ್​ ಗಳಿಸಿದ ಭಾರತ

ಓವರ್​​ನ ಕೊನೆಯ ಎಸೆತದಲ್ಲಿ  ಬೌಂಡರಿ ಚಚ್ಚಿದ ಗಿಲ್​

ಇಶಾನ್​ ಕಿಶನ್ 3 ರನ್, ಶುಭ್ಮನ್ ಗಿಲ್ 4 ರನ್

IND 7/0 (1) - ಭಾರತದ ಗೆಲುವಿಗೆ ಬೇಕು 44 ರನ್

Sep 17, 2023 05:44 PM IST

India vs Sri Lanka Live Score: ಬ್ಯಾಟಿಂಗ್ ಆರಂಭಿಸಿದ ಭಾರತ

ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ

ರೋಹಿತ್​ ಬದಲಿಗೆ ಇಶಾನ್​ ಕಿಶನ್ ಇನ್ನಿಂಗ್ಸ್​ ಆರಂಭ

ಕಿಶನ್ ಜೊತೆಗೆ ಶುಭ್ಮನ್​ ಗಿಲ್​ ಆರಂಭಿಕರಾಗಿ ಕಣಕ್ಕೆ

ಹೊಸ ಚೆಂಡಿನೊಂದಿಗೆ ಪ್ರಮೋದ್ ಮಧುಶಾನ್ ಬೌಲಿಂಗ್​

8ನೇ ಏಷ್ಯಾಕಪ್​ ಟ್ರೋಫಿ ಗೆಲ್ಲುವ ಕಾತರದಲ್ಲಿ ಭಾರತ

Sep 17, 2023 05:40 PM IST

India vs Sri Lanka Live Score: ಬೆಂಕಿ ಬೌಲಿಂಗ್​-ಲಂಕಾ ದಹನ

ಕೊಲೊಂಬೊದ ಆರ್​ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ, ಕೇವಲ 15.2 ಓವರ್​​ಗಳಿಗೆ 50 ರನ್​ಗಳಿಗೆ ಸರ್ವಪತನ ಕಂಡಿತು. ಭಾರತೀಯ ಬೌಲರ್​​​ಗಳ ಬೆಂಕಿ-ಬಿರುಗಾಳಿ ಬೌಲಿಂಗ್​ ಅನ್ನು ಎದುರಿಸಲಾಗದೆ ಡ್ರಿಂಕ್ಸ್​ ಬ್ರೇಕ್​​​​ಗೂ ಮೊದಲೇ ಲಂಕಾ ಅಲ್ಪಮೊತ್ತಕ್ಕೆ ಆಲೌಟ್​ ಆಗಿದೆ. ಅದರಲ್ಲೂ ಮೊಹಮ್ಮದ್ ಸಿರಾಜ್​ ಬೆಂಕಿ ಬೌಲಿಂಗ್ ದಾಳಿ ಮುಂದೆ ಉಸಿರೆತ್ತದೆ​ ಲಂಕಾ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಸಿರಾಜ್ 7 ಓವರ್​​ಗಳಲ್ಲಿ 1 ಮೇಡನ್ ಸಹಿತ 21 ರನ್ ನೀಡಿ 6 ವಿಕೆಟ್ ಉರುಳಿಸಿದ್ದಾರೆ. ಸಿರಾಜ್​ಗೆ ಜಸ್ಪ್ರೀತ್​ ಬುಮ್ರಾ -ಹಾರ್ದಿಕ್ ಪಾಂಡ್ಯ ಸಾಥ್ ನೀಡಿದರು. ಹಾರ್ದಿಕ್ 3 ವಿಕೆಟ್, ಬುಮ್ರಾ 1 ವಿಕೆಟ್ ಪಡೆದು ಮಿಂಚಿದರು. ಕುಶಾಲ್ ಮೆಂಡಿಸ್  17 ರನ್​ಗಳಿಸಿ ಶ್ರೀಲಂಕಾ ಪರ ಗರಿಷ್ಠ ಸ್ಕೊರರ್ ಎನಿಸಿಕೊಂಡರು.

Sep 17, 2023 05:14 PM IST

India vs Sri Lanka Live Score: 50 ರನ್​ಗೆ ಆಲೌಟ್​​

ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿದ ಲಂಕಾ

16ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಹಾರ್ದಿಕ್ 

ಕೇವಲ 50 ರನ್​​ಗಳಿಗೆ ಸಿಂಹಳೀಯರು ಆಲೌಟ್​​

ಭಾರತದ ಗೆಲುವಿಗೆ ಬೇಕು 51 ರನ್​

ಮತೀಶಾ ಪತಿರಾಣ ಶೂನ್ಯಕ್ಕೆ ವಿಕೆಟ್​

ಭಾರತದ ಪರ 6 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯಗೆ 3 ವಿಕೆಟ್, ಬುಮ್ರಾಗೆ 1 ವಿಕೆಟ್.

SL 50 (15.2)

Sep 17, 2023 05:10 PM IST

India vs Sri Lanka Live Score: 9ನೇ ವಿಕೆಟ್ ಪತನ

9ನೇ ವಿಕೆಟ್ ಕಳೆದುಕೊಂಡು ಶ್ರೀಲಂಕಾ

2 ವಿಕೆಟ್ ಕಬಳಿಸಿದ ಹಾರ್ದಿಕ್​​ ಪಾಂಡ್ಯ

ಸ್ಲಿಪ್​​ನಲ್ಲಿ ಕೊಹ್ಲಿಗೆ ಕ್ಯಾಚ್​ ನೀಡಿ ಹೊರ ನಡೆದ ಪ್ರಮೋದ್ ಮಧುಶಾನ್

6 ಎಸೆತಗಳಲ್ಲಿ 1 ರನ್ ಗಳಿಸಿದ ಮಧುಶಾನ್

SL 50/9 (15.1)

Sep 17, 2023 04:58 PM IST

India vs Sri Lanka Live Score: ದಾಖಲೆ ಬರೆದ ಸಿರಾಜ್

ಏಷ್ಯಾಕಪ್​ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್​​ನಲ್ಲಿ 6 ವಿಕೆಟ್​ ಪಡೆದ 2ನೇ ಬೌಲರ್​​. ಇದಕ್ಕೂ ಮೊದಲು 2008ರಲ್ಲಿ ಭಾರತದ ವಿರುದ್ಧ ಶ್ರೀಲಂಕಾದ ಅಜಂತಾ ಮೆಂಡೀಸ್​ 13 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಇದೀಗ ಸಿರಾಜ್ ಕೂಡ 13 ರನ್ ನೀಡಿ 6 ವಿಕೆಟ್ ಪಡೆದು ಇನ್ನಷ್ಟು ವಿಕೆಟ್​ ಪಡೆಯುವ ಉತ್ಸಾಹದಲ್ಲಿದ್ದಾರೆ.

Sep 17, 2023 04:56 PM IST

India vs Sri Lanka Live Score: 8ನೇ ವಿಕೆಟ್ ಪತನ

ಭಾರತದ ಬೌಲಿಂಗ್​ ದಾಳಿಗೆ ತತ್ತರಿಸುತ್ತಿರುವ ಲಂಕಾ

8ನೇ ವಿಕೆಟ್ ಕಳೆದುಕೊಂಡ ಶ್ರೀಲಂಕಾ ತಂಡ

ಸಿರಾಜ್, ಬುಮ್ರಾ ಬಳಿಕ ವಿಕೆಟ್ ಪಡೆದ ಹಾರ್ದಿಕ್​

ದುನಿತ್ ವೆಲ್ಲಾಲಗೆ 21 ಎಸೆತಗಳಲ್ಲಿ 8 ರನ್​ ಗಳಿಸಿ ಔಟ್

ಸಿರಾಜ್ 6 ವಿಕೆಟ್, ಬೂಮ್ರಾ-ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ 

SL 40/8 (12.3)

Sep 17, 2023 04:49 PM IST

India vs Sri Lanka Live Score: ಸಿರಾಜ್

ಮೊದಲ 10 ಓವರ್‌ಗಳಲ್ಲಿ ಹೆಚ್ಚು ವಿಕೆಟ್​​ ಪಡೆದ ಭಾರತದ ಬೌಲರ್ಸ್ (2002 ರಿಂದ)

5 ವಿಕೆಟ್ ಮೊಹಮ್ಮದ್ ಸಿರಾಜ್ vs ಶ್ರೀಲಂಕಾ, ಕೊಲಂಬೊ (2023)

4 ವಿಕೆಟ್ ಜಾವಗಲ್ ಶ್ರೀನಾಥ್ vs ಶ್ರೀಲಂಕಾ (2003)

4 ವಿಕೆಟ್ ಭುವನೇಶ್ವರ vs ಶ್ರೀಲಂಕಾ (2013)

4 ವಿಕೆಟ್ ಜಸ್ಪ್ರೀತ್ ಬುಮ್ರಾ vs ಇಂಗ್ಲೆಂಡ್, (2002)

Sep 17, 2023 04:46 PM IST

India vs Sri Lanka Live Score: ಸಿರಾಜ್ ಮತ್ತೆ ಮ್ಯಾಜಿಕ್

ಮೊಹಮ್ಮದ್ ಸಿರಾಜ್​ಗೆ ಮತ್ತೊಂದು ವಿಕೆಟ್​

6 ವಿಕೆಟ್​ಗಳ ಸಾಧನೆ ಮಾಡಿದ ಭಾರತದ ವೇಗಿ

ಕ್ರೀಸ್​ ಕಚ್ಚಿ ನಿಂತಿದ ಕುಸಾಲ್ ಮೆಂಡೀಸ್ ಕ್ಲೀನ್ ಬೋಲ್ಡ್

34 ಎಸೆತಗಳಲ್ಲಿ 17 ರನ್​ ಗಳಿಸಿ ವಿಕೆಟ್ ಒಪ್ಪಿಸಿದ ಮೆಂಡೀಸ್

7 ರನ್ ನೀಡಿ 6 ವಿಕೆಟ್ ಪಡೆದ ಸಿರಾಜ್

SL 34/7 (11.2)

Sep 17, 2023 04:40 PM IST

India vs Sri Lanka Live Score: ಲಂಕಾ 31/6

10 ಓವರ್​ ಮುಕ್ತಾಯಕ್ಕೆ ಲಂಕಾ 31/6

ಸಿರಾಜ್​ಗೆ 5 ವಿಕೆಟ್​, ಬುಮ್ರಾಗೆ 1 ವಿಕೆಟ್

ಮೆಂಡೀಸ್ 17, ವೆಲ್ಲಾಗೆ 1 ರನ್​

Sep 17, 2023 04:33 PM IST

India vs Sri Lanka Live Score: ಬುಮ್ರಾ  ದುಬಾರಿ

ಆಘಾತದ ನಡುವೆಯೂ ಬುಮ್ರಾ ಬೌಲಿಂಗ್​​​ನಲ್ಲಿ ಎರಡು ಬೌಂಡರಿ ಸಿಡಿಸಿದ ಮೆಂಡೀಸ್. ತಂಡಕ್ಕೆ ಚೇತರಿಕೆ ನೀಡಲು ಪ್ರಯತ್ನಿಸುತ್ತಿರುವ ಬಲಗೈ ಬ್ಯಾಟರ್​​. 9ನೇ ಓವರ್​​​ನಲ್ಲಿ 13 ರನ್ ಬಿಟ್ಟುಕೊಟ್ಟ ಬೂಮ್ರಾ.

ಕುಸಾಲ್ ಮೆಂಡೀಸ್ 17, ವೆಲ್ಲಾಲಗೆ 5 ರನ್

SL 30/6 (9)

Sep 17, 2023 04:30 PM IST

India vs Sri Lanka Live Score: ಭಾರತದಿಂದ ಬಿಗಿ ಬೌಲಿಂಗ್ ದಾಳಿ

ಆಘಾತದಲ್ಲಿ ಶ್ರೀಲಂಕಾ ತಂಡ

ಲಂಕಾ ರನ್ ಗಳಿಸಲು ಪರದಾಟ

ಭಾರತದಿಂದ ಬಿಗಿ ಬೌಲಿಂಗ್ ದಾಳಿ

ಸಿರಾಜ್ ಮತ್ತೊಂದು ಭರ್ಜರಿ ಓವರ್​

8ನೇ ಓವರ್​​ನಲ್ಲಿ 1 ರನ್ ನೀಡಿದ ಸಿರಾಜ್

ಕುಶಾಲ್ ಮೆಂಡೀಸ್ 6, ವೆಲ್ಲಾಲಗೆ 4 ರನ್

SL 18/6 (8)

Sep 17, 2023 04:26 PM IST

India vs Sri Lanka Live Score:

ಆರನೇ ವಿಕೆಟ್ ಪತನದ ಸಮಯದಲ್ಲಿ ಕಡಿಮೆ ಸ್ಕೋರ್‌ಗಳು

10/6 ಕೆನಡಾ vs ನೆಟ್ ಕಿಂಗ್ ಸಿಟಿ (2013)

12/6 ಕೆನಡಾ vs ಶ್ರೀಲಂಕಾ (2003)

12/6 SL vs ಭಾರತ ಕೊಲಂಬೊ 2023 (ಇಂದು)

13/6 SL vs ಸೌತ್ ಆಫ್ರಿಕಾ (2012)

Sep 17, 2023 04:19 PM IST

India vs Sri Lanka Live Score: ಸಿರಾಜ್​ ಮತ್ತೆ ದಾಳಿ

ಲಂಕಾದ 6ನೇ ವಿಕೆಟ್ ಪತನ

ಸಿರಾಜ್ ಬೆಂಕಿ ಬೌಲಿಂಗ್

ಲಂಕಾದ 6ನೇ ವಿಕೆಟ್​ ಪತನ

5 ವಿಕೆಟ್​ ಉರುಳಿಸಿದ ಸಿರಾಜ್

ಒಟ್ಟು ನಾಲ್ವರು ಶೂನ್ಯಕ್ಕೆ ಔಟ್

ಕುಸಾಲ್ ಮೆಂಡೀಸ್ 5, ದುನಿತ್ ವೆಲ್ಲಾಲಗೆ 1 ರನ್ 

SL 13/6 (6)

Sep 17, 2023 04:16 PM IST

India vs Sri Lanka Live Score: ಸಿರಾಜ್ ಬೆಂಕಿ ಬೌಲಿಂಗ್

4ನೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಮೊಹಮ್ಮದ್ ಸಿರಾಜ್

ಮೊದಲ ಎಸೆತದಲ್ಲಿ ಪಾತುಮ್ ನಿಸ್ಸಂಕಾ ಕ್ಯಾಚ್ ಔಟ್

2ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ

3ನೇ ಎಸೆತದಲ್ಲಿ ಸದೀರ ಸಮರವಿಕ್ರಮ ಎಲ್​ಬಿಡಬ್ಲ್ಯೂ

4ನೇ ಎಸೆತದಲ್ಲಿ ಚರಿತ್ ಅಸಲಂಕಾ ಕ್ಯಾಚ್ ಔಟ್

5ನೇ ಎಸೆತದಲ್ಲಿ ಫೋರ್ ಬಾರಿಸಿದ ಧನಂಜಯ ಡಿಸಿ ಲ್ವಾ.

6ನೇ ಎಸೆತದಲ್ಲಿ ಧನಜಂಯ ಡಿಸಿಲ್ವಾ ಕೀಪರ್ ಕ್ಯಾಚ್ ಔಟ್.

SL 12/5 (4)

Sep 17, 2023 04:09 PM IST

India vs Sri Lanka Live Score: ಒಂದೇ ಓವರ್​ನಲ್ಲಿ 4 ವಿಕೆಟ್​ ಕಳೆದುಕೊಂಡ ಲಂಕಾ

ಮೊಹಮ್ಮದ್ ಸಿರಾಜ್​ಗೆ ಮತ್ತೊಂದು ವಿಕೆಟ್

4ನೇ ಓವರ್​​​ನಲ್ಲಿ 4 ವಿಕೆಟ್ ಕಳೆದುಕೊಂಡ ಲಂಕಾ

ಬೌಂಡರಿ ಸಿಡಿಸಿದ ಬಳಿಕ ಧನಂಜಯ ಡಿ ಸಿಲ್ವಾ ಔಟ್

ಕೀಪರ್ ಕ್ಯಾಚ್ ನೀಡಿ ನಿರ್ಗಮಿಸಿದ ಸಿಲ್ವಾ

ಒಂದೇ ಓವರ್​​​ನಲ್ಲಿ 4 ವಿಕೆಟ್ ಪಡೆದ ಸಿರಾಜ್ ದಾಖಲೆ

ಒಟ್ಟು 5ವಿಕೆಟ್ ಕಳೆದುಕೊಂಡ ಸಿಂಹಳೀಯರು

Sep 17, 2023 04:06 PM IST

India vs Sri Lanka Live Score: ಸಿರಾಜ್ ದಾಳಿಗೆ ಲಂಕಾ ತತ್ತರ

ಸಿರಾಜ್ ದಾಳಿಗೆ ಶ್ರೀಲಂಕಾ ತತ್ತರ

ಒಂದೇ ಓವರ್​​​ನಲ್ಲಿ 3ನೇ ವಿಕೆಟ್​ ಪಡೆದ ಸಿರಾಜ್

ಚರಿತ್ ಅಸಲಂಕಾ  ಶೂನ್ಯಕ್ಕೆ ಔಟ್

ಲಂಕಾದ ಮೂವರು ಶೂನ್ಯಕ್ಕೆ ಔಟ್​

Sep 17, 2023 04:03 PM IST

India vs Sri Lanka Live Score: 3ನೇ ವಿಕೆಟ್ ಪತನ

ಪಂದ್ಯದ ಆರಂಭದಲ್ಲೇ ಶ್ರೀಲಂಕಾಗೆ ತ್ರಿಬಲ್ ಆಘಾತ

ಮೂರನೇ ವಿಕೆಟ್ ಕಳೆದುಕೊಂಡ ಸಿಂಹಳೀಯರು

ಒಂದೇ ಓವರ್​​ನಲ್ಲಿ 2ನೇ ವಿಕೆಟ್​ ಪಡೆದುಕೊಂಡ ಸಿರಾಜ್

ಸದೀರ ಸಮರವಿಕ್ರಮ 2 ಎಸೆತಗಳಲ್ಲಿ 0 ರನ್ ಗಳಿಸಿ ಔಟ್

ಎಲ್​ಬಿಡಬ್ಲ್ಯುಗೆ ಆಗಿ ಹೊರ ನಡೆದ ಸಮರವಿಕ್ರಮ

3.3 ಓವರ್​​ಗಳಲ್ಲಿ 3 ವಿಕೆಟ್​ ಕಳೆದುಕೊಂಡ ಲಂಕಾ ಗಳಿಸಿರುವುದು 8 ರನ್

ಸಿರಾಜ್​ಗೆ 2 ವಿಕೆಟ್, ಬುಮ್ರಾಗೆ 1 ವಿಕೆಟ್​

Sep 17, 2023 03:59 PM IST

India vs Sri Lanka Live Score: ಶ್ರೀಲಂಕಾಗೆ ಆರಂಭದಲ್ಲೇ ಡಬಲ್ ಆಘಾತ

ಶ್ರೀಲಂಕಾಗೆ ಆರಂಭದಲ್ಲೇ ಡಬಲ್ ಆಘಾತ

ಮತ್ತೊಂದು ವಿಕೆಟ್ ಕಳೆದುಕೊಂಡ ಸಿಂಹಳೀಯರು

ಈ ಬಾರಿ ಮೊಹಮ್ಮದ್ ಸಿರಾಜ್​ಗೆ ವಿಕೆಟ್​

ವಿಕೆಟ್ ಒಪ್ಪಿಸಿದ ಪಾತುಮ್ ನಿಸ್ಸಾಂಕ

4 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದ ನಿಸ್ಸಾಂಕ

ಮೊದಲ ಓವರ್​​ನಲ್ಲಿ ಮೇಡನ್ ಮಾಡಿದ್ದ ಸಿರಾಜ್, ತನ್ನ 2ನೇ ಓವರ್​​ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಜಡೇಜಾ ಅದ್ಭುತ ಕ್ಯಾಚ್ ಪಡೆದರು.

Sep 17, 2023 03:56 PM IST

India vs Sri Lanka Live Score: ಶ್ರೀಲಂಕಾ 8/1 (3)

3ನೇ ಓವರ್​​ನಲ್ಲಿ 1 ರನ್ ಬಿಟ್ಟುಕೊಟ್ಟ ಬುಮ್ರಾ

ಶ್ರೀಲಂಕಾ 3 ಓವರ್​ ಮುಕ್ತಾಯಕ್ಕೆ 8 ರನ್, 1 ವಿಕೆಟ್

Sep 17, 2023 03:53 PM IST

India vs Sri Lanka Live Score: ಸಿರಾಜ್ ಮೇಡನ್ ಓವರ್

ಮೊಹಮ್ಮದ್ ಸಿರಾಜ್ ಭರ್ಜರಿ ಬೌಲಿಂಗ್

ತನ್ನ ಮೊದಲ ಓವರ್​​ನಲ್ಲೇ ಮೇಡನ್

ಸ್ವಿಂಗ್​ ಎಸೆತಗಳಿಗೆ ರನ್​ಗಳಿಸಲು ಮೆಂಡೀಸ್ ಪರದಾಟ

ಶ್ರೀಲಂಕಾ 7-1 (2)

 

Sep 17, 2023 03:49 PM IST

India vs Sri Lanka Live Score: ಮೊದಲ ಓವರ್​ ಮುಕ್ತಾಯಕ್ಕೆ 7/1

  ಫೋರ್ ಸಿಡಿಸಿದ ಕುಸಾಲ್ ಮೆಂಡೀಸ್ 

ಮೊದಲ ಓವರ್ ಮುಕ್ತಾಯಕ್ಕೆ 7 ರನ್, 1 ವಿಕೆಟ್ ಪತನ

Sep 17, 2023 03:55 PM IST

India vs Sri Lanka Live Score: ಮೊದಲ ವಿಕೆಟ್ ಪತನ

India vs Sri Lanka Live Score: ಪಂದ್ಯದ ಆರಂಭಿಸಿದ 3ನೇ ಎಸೆತದಲ್ಲೇ ಶ್ರೀಲಂಕಾ ವಿಕೆಟ್ ಪತನ. ಜಸ್ಪ್ರೀತ್​ ಬೂಮ್ರಾ ಬೌಲಿಂಗ್​ನಲ್ಲಿ ಕುಸಾಲ್ ಪೆರೆರಾ ಡಕೌಟ್. 2 ಎಸೆತಗಳಲ್ಲಿ 0 ರನ್ ಗಳಿಸಿ ಔಟ್

Sep 17, 2023 03:39 PM IST

India vs Sri Lanka Live Score: ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ

India vs Sri Lanka Live Score: 

ಪಾತುಮ್ ನಿಸ್ಸಾಂಕ ಮತ್ತು ಕುಸಾಲ್ ಪೆರೆರಾ ಬ್ಯಾಟಿಂಗ್

ಹೊಸ ಚೆಂಡಿನೊಂದಿಗೆ ಜಸ್ಪ್ರೀತ್ ಬುಮ್ರಾ ಕಣಕ್ಕೆ

Sep 17, 2023 03:27 PM IST

India vs Sri Lanka Live Score: 3.40ಕ್ಕೆ ಪಂದ್ಯ ಆರಂಭ

India vs Sri Lanka Live Score: 3.40ಕ್ಕೆ ಪಂದ್ಯವನ್ನು ಆರಂಭಿಸಲು ಉಭಯ ತಂಡಗಳ ನಾಯಕರಿಗೆ ತಿಳಿಸಿದ ಆನ್​ಫೀಲ್ಡ್ ಅಂಪೈರ್​ಗಳು

Sep 17, 2023 03:22 PM IST

India vs Sri Lanka Live Score: 3.30ಕ್ಕೆ ಪಿಚ್​ ಪರಿಶೀಲನೆ

India vs Sri Lanka Live Score

3.30ಕ್ಕೆ ಅಂಪೈರ್​​​ಗಳಿಂದ ಪಿಚ್​ ಪರಿಶೀಲನೆ

3.45ಕ್ಕೆ ಪಂದ್ಯ ಆರಂಭಿಸಲು ನಿರ್ಧಾರ

ಯಾವುದೇ ಓವರ್​ಗಳ ಕಡಿತ ಇರುವುದಿಲ್ಲ

Sep 17, 2023 03:22 PM IST

India vs Sri Lanka Live Score: ನಿಂತ ಮಳೆ

ಸದ್ಯ ಬಿಡುವು ಕೊಟ್ಟ ಮಳೆ 

ಮೈದಾನದಲ್ಲಿ ಕವರ್​ಗಳ ತೆರವು

ಶೀಘ್ರದಲ್ಲೇ ಫೈನಲ್ ಫೈಟ್ ಆರಂಭ

ಮಳೆ ನಿಂತರೂ ಮೋಡ ಕವಿದ ವಾತಾವರಣ ಇದೆ

Sep 17, 2023 03:04 PM IST

ಪಂದ್ಯ ಆರಂಭಕ್ಕೂ ಮುನ್ನವೇ ಮಳೆ

ಪಂದ್ಯ ಆರಂಭಕ್ಕೂ ಮುನ್ನವೇ ಅಡ್ಡಿಪಡಿಸಿದ ಮಳೆ

ಟಾಸ್​​ ನಡೆದ ಸಂದರ್ಭದಲ್ಲಿ ಬಿಸಿಲು ಕಾಣಿಸಿಕೊಂಡಿತ್ತು

ಮೈದಾನದ ತುಂಬೆಲ್ಲಾ ಕವರ್​​ಗಳಿಂದ ಹೊದಿಕೆ ಮಾಡಲಾಗಿದೆ

ತಡವಾಗಿ ಪಂದ್ಯ ಆರಂಭವಾಗುವ ಸಾಧ್ಯತೆ ಇದೆ

Sep 17, 2023 03:00 PM IST

ಫೈನಲ್​ ಮುಖಾಮುಖಿಯಲ್ಲಿ ಹೆಚ್ಚು ಗೆದ್ದವರು ಯಾರು?

ಏಷ್ಯಾಕಪ್ ಟೂರ್ನಿಯ ಫೈನಲ್​​​​ ಇತಿಹಾಸದಲ್ಲಿ ಉಭಯ ತಂಡಗಳು 7 ಬಾರಿ ಮುಖಾಮುಖಿಯಾಗುತ್ತಿವೆ. ಭಾರತ 4ರಲ್ಲಿ,  ಪಾಕಿಸ್ತಾನ 3 ಬಾರಿ ಗೆದ್ದಿವೆ.

Sep 17, 2023 02:37 PM IST

ಉಭಯ ತಂಡಗಳ ಪ್ಲೇಯಿಂಗ್​ ಇಲೆವೆನ್

ಭಾರತ ಪ್ಲೇಯಿಂಗ್ XI

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್​), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್

ಶ್ರೀಲಂಕಾ ಆಡುವ XI

ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮತೀಶ ಪತಿರಾಣ

Sep 17, 2023 03:06 PM IST

ಫೈನಲ್​​ನಲ್ಲಿ ಟಾಸ್ ಗೆದ್ದ ಶ್ರೀಲಂಕಾ

16ನೇ ಆವೃತ್ತಿಯ ಏಷ್ಯಾಕಪ್​​ ಫೈನಲ್​​ನಲ್ಲಿ ಭಾರತ-ಶ್ರೀಲಂಕಾ ತಂಡಗಳು ಮುಖಾಮುಖಿ

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ

ಕೊಲೊಂಬೊದ ಆರ್​ ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ

ಭಾರತ ತಂಡದಲ್ಲಿ 6 ಬದಲಾವಣೆ; ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಆಟಗಾರರು ವಾಪಸ್, ಅಕ್ಷರ್​ ಪಟೇಲ್​ ಬದಲಿಗೆ ವಾಷಿಂಗ್ಟನ್ ಸುಂದರ್​​​ಗೆ ಅವಕಾಶ

ಕೊಹ್ಲಿ, ಸಿರಾಜ್, ಬುಮ್ರಾ, ಕುಲ್ದೀಪ್, ಹಾರ್ದಿಕ್ ತಂಡಕ್ಕೆ ವಾಪಸ್

ಶ್ರೀಲಂಕಾ ತಂಡದಲ್ಲಿ 1 ಬದಲಾವಣೆ, ಮಹೀಷ್ ತೀಕ್ಷಣಾ ಔಟ್, ಹೇಮಂತ್ ಇನ್.

ದಾಖಲೆಯ 250ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಾಯಕ ರೋಹಿತ್ ಶರ್ಮಾ

ಭಾರತ 7 ಬಾರಿ, ಶ್ರೀಲಂಕಾ 6 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿದೆ.

2022ರಲ್ಲಿ ನಡೆದ ಟಿ20 ಮಾದರಿಯ ಏಷ್ಯಾಕಪ್​ನಲ್ಲಿ ಶ್ರೀಲಂಕಾ ಚಾಂಪಿಯನ್ ಆಗಿತ್ತು

ಟೀಮ್ ಇಂಡಿಯಾ 2018ರಲ್ಲಿ ಕೊನೆಯದಾಗಿ ಏಷ್ಯಾಕಪ್ ಗೆದ್ದಿತ್ತು. ಅಂದು ಕೂಡ ರೋಹಿತ್ ಶರ್ಮಾ ಅವರೇ ನಾಯಕನಾಗಿದ್ದು ವಿಶೇಷ.

Sep 17, 2023 02:12 PM IST

ರೋಹಿತ್ ದಾಖಲೆ 

ರೋಹಿತ್​ ಶರ್ಮಾಗೆ ಇಂದು 250ನೇ ಏಕದಿನ ಪಂದ್ಯ.

ಇದೇ ಟೂರ್ನಿಯಲ್ಲಿ 10000 ರನ್ ಪೂರೈಸಿದ ರೋಹಿತ್​

ಇದೀಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ

ಈ ಸಾಧನೆ ಮಾಡಿದ ಭಾರತದ 9ನೇ ಆಟಗಾರ ಎನಿಸಲಿದ್ದಾರೆ

Sep 17, 2023 02:07 PM IST

ಭಾರತ ಮತ್ತು ಶ್ರೀಲಂಕಾ ತಂಡಗಳ ಕುರಿತ ಕೆಲವು ಆಸಕ್ತಿಕರ ಅಂಶಗಳು

  1. ಏಕದಿನದಲ್ಲಿ 166 ಬಾರಿ ಭಾರತ-ಶ್ರೀಲಂಕಾ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ.
  2. ಭಾರತ 97 ಗೆದ್ದಿದ್ದರೆ ಶ್ರೀಲಂಕಾ 57 ಗೆದ್ದಿದೆ. 11 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಒಂದು ಟೈ ಆಗಿತ್ತು.
  3. ಏಷ್ಯಾಕಪ್‌ನಲ್ಲಿ ಉಭಯ ತಂಡಗಳು 20 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಉಭಯ ತಂಡಗಳು ತಲಾ 10 ಬಾರಿ ಗೆದ್ದಿವೆ.
  4. ಈ ಟೂರ್ನಿಯ ಸೂಪರ್ 4 ಹಂತದಲ್ಲಿ ಮುಖಾಮುಖಿಯಾದ ಪಂದ್ಯದಲ್ಲಿ 41 ರನ್​​ಗಳಿಂದ ಭಾರತ, ಲಂಕಾ ವಿರುದ್ಧ ಗೆದ್ದಿತ್ತು.
  5. ಕೊಲಂಬೊದಲ್ಲಿ ಇಂದು ಸಂಜೆಯ ವೇಳೆಗೆ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
  6. ಅಂತಿಮ ದಿನದಂದು ವಾಶ್‌ಔಟ್‌ನ ಸಂದರ್ಭದಲ್ಲಿ ಮೀಸಲು ದಿನ ಲಭ್ಯವಿದೆ

Sep 17, 2023 12:42 PM IST

ಶ್ರೀಲಂಕಾ ಸಂಭಾವ್ಯ ತಂಡ

ಪಾತುಮ್ ನಿಸ್ಸಾಂಕ, ಕುಸಲ್ ಪೆರೇರ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್) ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮತ, ಪ್ರಮೋದ್ ಮದುಶನ್, ಮತೀಶ ಪತಿರಣ.

Sep 17, 2023 12:40 PM IST

ಹೇಗಿದೆ ಕೊಲಂಬೊ ಹವಾಮಾನ?

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂ ಸುತ್ತಮುತ್ತಲಿನ ಹವಾಮಾನ ಉತ್ತಮವಾಗಿದ್ದರೂ, ಶೇಕಡಾ 80 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇದ್ದು, ಗಂಟೆಗೆ 19 ಕಿಲೋ ಮೀಟರ್ ಗಾಳಿಯ ವೇಗ ಇರಲಿದೆ.

Sep 17, 2023 10:31 AM IST

ಶ್ರೀಲಂಕಾ ವಿರುದ್ಧ ಭಾರತವೇ ಗೆಲುವಿನಲ್ಲಿ ಕಿಂಗ್

ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ ಭಾರತ ಮತ್ತು ಶ್ರೀಲಂಕಾ ತಂಡಗಳು 166 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ 97 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಶ್ರೀಲಂಕಾ 57ರಲ್ಲಿ ಜಯಗಳಿಸಿದೆ. 11 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಒಂದು ಪಂದ್ಯ ಟೈ ಆಗಿದೆ.

Sep 16, 2023 10:53 PM IST

ಪಿಚ್​ ರಿಪೋರ್ಟ್​​

ಆರ್ ಪ್ರೇಮದಾಸ ಕ್ರೀಡಾಂಗಣದ ಪಿಚ್ ಸಂಪೂರ್ಣ ಸ್ನಿನ್ ಸ್ನೇಹಿ.​ ಸ್ಪಿನ್ನರ್​ಗಳು ಅದ್ಭುತ ದಾಖಲೆ ಹೊಂದಿದ್ದು, ಭಾರತದ ಎದುರಿನ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್​​ಗಳು ಎಲ್ಲಾ 10 ವಿಕೆಟ್​ ಪಡೆದಿದ್ದರು. ಅಲ್ಲದೆ, ಭಾರತದ ಪರ ಕುಲ್ದೀಪ್ ಯಾದವ್ 9 ವಿಕೆಟ್ ಪಡೆದಿದ್ದು ಕೂಡ ಇದೇ ಪಿಚ್​​​ನಲ್ಲಿ. ಹೊಸ ಚೆಂಡಿನೊಂದಿಗೆ ವೇಗಿಗಳು ಹಿಡಿತ ಸಾಧಿಸಲು ಅವಕಾಶ ಹೆಚ್ಚಿದೆ. ಒಂದು ವೇಳೆ ಸಾಧ್ಯವಾಗದಿದ್ದರೆ, ಮತ್ತೆ ವಿಕೆಟ್ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಈ ಪಿಚ್​​​​ನಲ್ಲಿ ಹೆಚ್ಚು ಇನ್ ಅಂಡ್ ಔಟ್​ ಸ್ವಿಂಗ್ ಆಗುವುದು ಸ್ಪಿನ್ನರ್​​ಗಳು ಹೆಚ್ಚು ಪ್ರಭಾವ ಬೀರಲಿದ್ದಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ.

Sep 16, 2023 10:53 PM IST

ಸೂಪರ್​​​-4ನಲ್ಲಿ ಉಭಯ ತಂಡಗಳ ಸಾಧನೆ

ಸೂಪರ್​-4 ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಗೆದ್ದು ಫೈನಲ್​ಗೆ ಅರ್ಹತೆ ಪಡೆಯಿತು. ಆದರೆ ತನ್ನ ಕೊನೆಯ ಸೂಪರ್​​-4 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 6 ರನ್​ಗಳ ಸೋಲನುಭವಿಸಿತು. ಮತ್ತೊಂದೆಡೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ, ಭಾರತದ ವಿರುದ್ಧ ಸೋಲನುಭವಿಸಿತ್ತು. ಪಾಕ್ ತಂಡವನ್ನು ಕೊನೆಯ ಎಸೆತದಲ್ಲಿ ಸೋಲಿಸಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿತು.

Sep 16, 2023 10:52 PM IST

ಭಾರತ ಸಂಭಾವ್ಯ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭ್ಮನ್‌ ಗಿಲ್‌, ವಿರಾಟ್‌ ಕೊಹ್ಲಿ,,ಕೆ.ಎಲ್​ ರಾಹುಲ್ ​(ವಿಕೆಟ್​ ಕೀಪರ್​), ಇಶಾನ್​ ಕಿಶನ್​, ಹಾರ್ದಿಕ್‌ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಜಸ್ಪ್ರಿತ್‌ ಬುಮ್ರಾ, ಶಾರ್ದೂಲ್​ ಠಾಕೂರ್​, ಮೊಹಮ್ಮದ್‌ ಸಿರಾಜ್‌.

Sep 16, 2023 10:52 PM IST

ಶ್ರೀಲಂಕಾ ಸಂಭಾವ್ಯ ತಂಡ

ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ಉಪನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದುನಿತ್ ವೆಲ್ಲಾಲಗೆ, ಮಥೀಶ ಪತಿರಾಣ, ಕಸುನ್ ರಜಿತ, ಪ್ರಮೋದ್ ಮಧುಶಾನ್.

Sep 16, 2023 10:52 PM IST

ಭಾರಿ ಮಳೆಯ ಮುನ್ಸೂಚನೆ

ಹವಾಮಾನ ಮುನ್ಸೂಚನೆಯ ಪೋರ್ಟಲ್ ಪ್ರಕಾರ, ಕೊಲಂಬೊದ ಅಕ್ಯುವೆದರ್ ಭಾನುವಾರ ಮೋಡದಿಂದ ಕೂಡಿರುತ್ತದೆ. ಪ್ರದೇಶದ ಕೆಲವು ಭಾಗಗಳಲ್ಲಿ ಬೆಳಿಗ್ಗೆ ಗುಡುಗು ಸಹಿತ ಮಳೆಯಾಗುತ್ತದೆ. ನಂತರ ಮಧ್ಯಾಹ್ನ ಒಂದೆರಡು ಗುಡುಗು ಸಹಿತ ಮಳೆಯಾಗುತ್ತದೆ. ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ, ಮಧ್ಯಾಹ್ನ 1 ಗಂಟೆಗೆ, ಸಂಜೆ 6 ಗಂಟೆಗೆ, ರಾತ್ರಿ 8 ಗಂಟೆಗೆ ಮತ್ತು ರಾತ್ರಿ 10 ಗಂಟೆಗೆ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ತಿಳಿಸಿದೆ.

ದಿನದ ಬಹುತೇಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಬಿಬಿಸಿಯ ಹವಾಮಾನ ಪೋರ್ಟಲ್ ಸ್ಥಳೀಯ ಸಮಯ ರಾತ್ರಿ 7:30ಕ್ಕೆ ಮಳೆಯಾಗುವ ಸಾಧ್ಯತೆ ಶೇ. 70 ಪ್ರತಿಶತದಷ್ಟಿದೆ. ಏಷ್ಯಾಕಪ್ 2023ರ ಫೈನಲ್ ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಮಳೆ ಕಾಡುವ ಸಾಧ್ಯತೆ ಇದ್ದರೂ ತಂಡಗಳು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿವೆ.

Sep 16, 2023 10:51 PM IST

ಭಾರತ-ಶ್ರೀಲಂಕಾ ಫೈನಲ್ ಫೈಟ್

ಕೊಲೊಂಬೊ (ಶ್ರೀಲಂಕಾ): ಮಳೆಯಾಟದ ನಡುವೆಯೇ 2023ರ ಏಷ್ಯಾಕಪ್ ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. 2010ರ ಟೂರ್ನಿಯ ಬಳಿಕ ಇದೇ ಮೊದಲ ಬಾರಿಗೆ ಏಷ್ಯಾಕಪ್​​ ಫೈನಲ್​​​​​ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಆರ್‌ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನವು ಫೈನಲ್​ ಫೈಟ್​ಗೆ ಸಾಕ್ಷಿಯಾಗಲಿದೆ. ಉಭಯ ತಂಡಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.

ಲೀಗ್​ ಮತ್ತು ಸೂಪರ್​-4 ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ ಉಭಯ ತಂಡಗಳು ದಾಖಲೆಯ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಟೀಮ್ ಇಂಡಿಯಾ ಕೊನೆಯದಾಗಿ 2018ರಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದು ಏಷ್ಯಾಕಪ್‌ ಟ್ರೋಫಿಗೆ ಮುತ್ತಿಕ್ಕಿತ್ತು. ಅಂದಿನಿಂದ ಟ್ರೋಫಿ ಬರ ಎದುರಿಸುತ್ತಿರುವ ಭಾರತಕ್ಕೆ ಈಗ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಉತ್ತಮ ಅವಕಾಶ ಒದಗಿ ಬಂದಿದೆ. ಭಾರತ 7 ಪ್ರಶಸ್ತಿ ಗೆದ್ದಿದ್ದರೆ, ಶ್ರೀಲಂಕಾ 6 ಬಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ.

ಇದೀಗ ಉಭಯ ತಂಡಗಳು ತಮ್ಮ ಪ್ರಶಸ್ತಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕಾತರದಿಂದ ಕಾಯುತ್ತಿವೆ. ಭಾರತ ತಂಡದ ಸಂಯೋಜನೆ ಬಗ್ಗೆ ತಿಳಿಯುವುದಾದರೆ, ಬಾಂಗ್ಲಾದೇಶ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಪ್ರಮುಖ ಆಟಗಾರರು ಈ ಪಂದ್ಯಕ್ಕೆ ಕೂಡಿಕೊಳ್ಳಲಿದ್ದಾರೆ. ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಹಾಗೂ ಕುಲ್ದೀಪ್‌ ಯಾದವ್‌ ಅವರು ಭಾರತದ ಆಡುವ 11ರ ಬಳಗ ಸೇರಿಕೊಳ್ಳಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು