logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮೂರನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ದಿಗ್ವಿಜಯ; ಬಾಂಗ್ಲಾದೇಶಕ್ಕೆ ತವರಿನಲ್ಲೇ ಮುಖಭಂಗ, 3-0ರಲ್ಲಿ ಸರಣಿ ಗೆದ್ದ ಹರ್ಮನ್ ಪಡೆ

ಮೂರನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ದಿಗ್ವಿಜಯ; ಬಾಂಗ್ಲಾದೇಶಕ್ಕೆ ತವರಿನಲ್ಲೇ ಮುಖಭಂಗ, 3-0ರಲ್ಲಿ ಸರಣಿ ಗೆದ್ದ ಹರ್ಮನ್ ಪಡೆ

Prasanna Kumar P N HT Kannada

May 02, 2024 08:50 PM IST

ಮೂರನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ದಿಗ್ವಿಜಯ; ಬಾಂಗ್ಲಾದೇಶಕ್ಕೆ ತವರಿನಲ್ಲೇ ಮುಖಭಂಗ, 3-0ರಲ್ಲಿ ಸರಣಿ ಗೆದ್ದ ಹರ್ಮನ್ ಪಡೆ

    • India Women vs Bangladesh Women : ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವನಿತೆಯರ ವಿರುದ್ಧ ಭಾರತ ಮಹಿಳಾ ತಂಡ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.
ಮೂರನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ದಿಗ್ವಿಜಯ; ಬಾಂಗ್ಲಾದೇಶಕ್ಕೆ ತವರಿನಲ್ಲೇ ಮುಖಭಂಗ, 3-0ರಲ್ಲಿ ಸರಣಿ ಗೆದ್ದ ಹರ್ಮನ್ ಪಡೆ
ಮೂರನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ದಿಗ್ವಿಜಯ; ಬಾಂಗ್ಲಾದೇಶಕ್ಕೆ ತವರಿನಲ್ಲೇ ಮುಖಭಂಗ, 3-0ರಲ್ಲಿ ಸರಣಿ ಗೆದ್ದ ಹರ್ಮನ್ ಪಡೆ

ಬಾಂಗ್ಲಾದೇಶ ವನಿತೆಯರ ವಿರುದ್ಧ 2 ಪಂದ್ಯಗಳು ಬಾಕಿ ಇರುವಂತೆಯೇ 5 ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ಮಹಿಳಾ ತಂಡವು (India Women vs Bangladesh Women) ವಶಪಡಿಸಿಕೊಂಡಿದೆ. ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು (ಮೇ 2) ನಡೆದ 3ನೇ ಟಿ20 ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿತು. ಈ ಸೋಲಿನೊಂದಿಗೆ ತವರಿನಲ್ಲಿ ಬಾಂಗ್ಲಾದೇಶ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಭಾರತ 3-0 (5 ಪಂದ್ಯ) ಅಂತರದಲ್ಲಿ ಸಿರೀಸ್ ಕೈವಶ ಮಾಡಿಕೊಂಡಿತು.

ಟ್ರೆಂಡಿಂಗ್​ ಸುದ್ದಿ

ಇದು ಧೋನಿಯ ಕೊನೆಯ ಐಪಿಎಲ್ ಎಂದು ಭಾವಿಸಬೇಡಿ; ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?

ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ, ಭಾರತೀಯ ಬೌಲರ್​​ಗಳ ದಾಳಿಗೆ ಕುಸಿಯಿತು. ಅದರಲ್ಲೂ ಸ್ಪಿನ್ನರ್​ಗಳೇ ಹೆಚ್ಚು ಮೇಲುಗೈ ಸಾಧಿಸಿದ್ದಾರೆ. ದಿಲ್ಹಾರ ಅಕ್ತರ್ 39 ರನ್​ ಗಳಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರ್. 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 18.3 ಓವರ್​​ಗಳಲ್ಲಿ ಗೆಲುವಿನ ನಗೆ ಬೀರಿತು. ಶಫಾಲಿ ವರ್ಮಾ ಬಿರುಸಿನ 50 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸ್ಮೃತಿ ಮಂಧಾನ 47 ರನ್ ಸಿಡಿಸಿದರು.

ಮೊದಲ ಎರಡು ಪಂದ್ಯಗಳಲ್ಲೂ ಭಾರತೀಯ ಸ್ಪಿನ್ನರ್​ಗಳು, ಆತಿಥೇಯರ ವಿರುದ್ಧ ದರ್ಬಾರ್ ನಡೆಸಿದ್ದರು. ಇದೇ ಮೈದಾನದಲ್ಲಿ ನಡೆದ ಮೊದಲ ಟಿ20ಐ ಪಂದ್ಯದಲ್ಲಿ ಭಾರತ 44 ರನ್​ಗಳ ಅಂತರದ ದಿಗ್ವಿಜಯ ಸಾಧಿಸಿತ್ತು. ಭಾರತ 145/7 ರನ್ ಗಳಿಸಿದ್ದರೆ, ಬಾಂಗ್ಲಾ 101/8ಕ್ಕೆ ಸುಸ್ತಾಯಿತು. ಇನ್ನು ಎರಡನೇ ಪಂದ್ಯದಲ್ಲಿ ಡಿಎಲ್​ಎಸ್ ನಿಯಮದಡಿ ಭಾರತವೇ 19 ರನ್​ಗಳಿಂದ ಗೆದ್ದಿತ್ತು. ಬಾಂಗ್ಲಾ 119 ರನ್​ಗಳಿಗೆ ಆಲೌಟ್ ಆಗಿತ್ತು. ಭಾರತ 47ಕ್ಕೆ 1ವಿಕೆಟ್ ಕಳೆದುಕೊಂಡಿದ್ದ ವೇಳೆ ಮಳೆ ಅಡ್ಡಿಪಡಿಸಿತು. ಆಗ ರನ್​ರೇಟ್​ನಲ್ಲಿ ಮುಂದಿದ್ದ ಭಾರತಕ್ಕೆ ಗೆಲುವು ನೀಡಲಾಯಿತು.

ಯಾರಿಂದ ಬಂದಿದೆ ಅದ್ಭುತ ಪ್ರದರ್ಶನ?

ಪ್ರಸ್ತುತ ಮುಕ್ತಾಯಗೊಂಡ 3 ಪಂದ್ಯಗಳಲ್ಲಿ ಬ್ಯಾಟರ್​​ಗಳಿಗಿಂತ ಬೌಲರ್​ಗಳೇ ಉತ್ತಮ ಪ್ರದರ್ಶನ ತೋರಿದ್ದಾರೆ. ರಾಧಾ ಯಾದವ್ 6 ವಿಕೆಟ್ ಉರುಳಿಸಿದ್ದರೆ, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್, ರೇಣುಕಾ ಸಿಂಗ್ ಠಾಕೂರ್ ತಲಾ 4 ವಿಕೆಟ್ ಪಡೆದಿದ್ದಾರೆ. ದೀಪ್ತಿ ಶರ್ಮಾ 3 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ. ಆದರೆ ಬ್ಯಾಟಿಂಗ್​ನಲ್ಲಿ ಶಫಾಲಿ ವರ್ಮಾ 82 ರನ್, ಸ್ಮೃತಿ ಮಂಧಾನ 62 ರನ್ ಸಿಡಿಸಿದ್ದಾರೆ.

3ನೇ ಟಿ20ಗೆ ಕಣಕ್ಕಿಳಿದ ಬಾಂಗ್ಲಾದೇಶ ಪ್ಲೇಯಿಂಗ್ XI

ದಿಲಾರಾ ಅಕ್ತರ್, ಮುರ್ಷಿದಾ ಖಾತುನ್, ಸೋಭಾನಾ ಮೊಸ್ತರಿ, ನಿಗರ್ ಸುಲ್ತಾನಾ (ನಾಯಕ & ವಿಕೆಟ್​ ಕೀಪರ್​), ಫಾಹಿಮಾ ಖಾತುನ್, ರಬೇಯಾ ಖಾನ್, ರಿತು ಮೋನಿ, ಶೋರಿಫಾ ಖಾತುನ್, ನಹಿದಾ ಅಕ್ತರ್, ಮಾರುಫಾ ಅಕ್ತರ್, ಫರಿಹಾ ತ್ರಿಸ್ನಾ.

3ನೇ ಟಿ20ಗೆ ಕಣಕ್ಕಿಳಿದ ಭಾರತ ಪ್ಲೇಯಿಂಗ್ XI

ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದಯಾಲನ್ ಹೇಮಲತಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಎಸ್​ ಸಜನಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್, ರೇಣುಕಾ ಠಾಕೂರ್ ಸಿಂಗ್.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ