logo
ಕನ್ನಡ ಸುದ್ದಿ  /  ಕ್ರಿಕೆಟ್  /  ಹರ್ಮನ್, ರಿಚಾ ಅಬ್ಬರಕ್ಕೆ ಯುಎಇ ತತ್ತರ; 78 ರನ್​ಗಳಿಂದ ಗೆದ್ದು ಏಷ್ಯಾಕಪ್ ಸೆಮಿಫೈನಲ್ ತಲುಪಿದ ಭಾರತ ತಂಡ

ಹರ್ಮನ್, ರಿಚಾ ಅಬ್ಬರಕ್ಕೆ ಯುಎಇ ತತ್ತರ; 78 ರನ್​ಗಳಿಂದ ಗೆದ್ದು ಏಷ್ಯಾಕಪ್ ಸೆಮಿಫೈನಲ್ ತಲುಪಿದ ಭಾರತ ತಂಡ

Prasanna Kumar P N HT Kannada

Jul 21, 2024 05:52 PM IST

google News

ಹರ್ಮನ್, ರಿಚಾ ಅಬ್ಬರಕ್ಕೆ ಯುಎಇ ತತ್ತರ; 78 ರನ್​ಗಳಿಂದ ಗೆದ್ದು ಏಷ್ಯಾಕಪ್ ಸೆಮಿಫೈನಲ್ ತಲುಪಿದ ಭಾರತ ತಂಡ

    • India Women vs United Arab Emirates Women: ಮಹಿಳಾ ಏಷ್ಯಾಕಪ್ 2024 ಟೂರ್ನಿಯ ಐದನೇ ಲೀಗ್​ ಪಂದ್ಯದಲ್ಲಿ ಯುಎಇ ತಂಡದ ವಿರುದ್ಧ 78 ರನ್​​ಗಳ ಅಮೋಘ ಗೆಲುವು ಸಾಧಿಸಿದ ಭಾರತ ತಂಡ, ಸೆಮಿಫೈನಲ್ ಟಿಕೆಟ್ ಖಾತ್ರಿಪಡಿಸಿಕೊಂಡಿದೆ.
ಹರ್ಮನ್, ರಿಚಾ ಅಬ್ಬರಕ್ಕೆ ಯುಎಇ ತತ್ತರ; 78 ರನ್​ಗಳಿಂದ ಗೆದ್ದು ಏಷ್ಯಾಕಪ್ ಸೆಮಿಫೈನಲ್ ತಲುಪಿದ ಭಾರತ ತಂಡ
ಹರ್ಮನ್, ರಿಚಾ ಅಬ್ಬರಕ್ಕೆ ಯುಎಇ ತತ್ತರ; 78 ರನ್​ಗಳಿಂದ ಗೆದ್ದು ಏಷ್ಯಾಕಪ್ ಸೆಮಿಫೈನಲ್ ತಲುಪಿದ ಭಾರತ ತಂಡ

ನಾಯಕಿ ಹರ್ಮನ್​ಪ್ರೀತ್ ಕೌರ್​ (66) ಮತ್ತು ವಿಕೆಟ್ ಕೀಪರ್​ ರಿಚಾ ಘೋಷ್ (64) ಅವರ ಬ್ಯಾಟಿಂಗ್ ಬಲ ಮತ್ತು ಬೌಲರ್​​ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಮಹಿಳಾ ತಂಡದ ವಿರುದ್ಧ ಭಾರತ ತಂಡದ ವನಿತೆಯರು 78 ರನ್​ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.

ರಣಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಮೈದಾನದಲ್ಲಿ ಜರುಗಿದ ಗುಂಪು ಹಂತದ 5ನೇ ಪಂದ್ಯದಲ್ಲಿ ದಿಗ್ವಿಜಯ ಸಾಧಿಸಿದ ಭಾರತ ತಂಡ, ಸತತ ಎರಡನೇ ಜಯದೊಂದಿಗೆ 2024ರ ಏಷ್ಯಾಕಪ್​ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದೆ. ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿತ್ತು.

ಮತ್ತೊಂದೆಡೆ ಹೀನಾಯವಾಗಿ ಸೋಲು ಕಂಡ ಯುನೈಟೆಡ್ ಅರಬ್ ಎಮಿರೇಟ್ಸ್, ಏಷ್ಯಾಕಪ್​ನಲ್ಲಿ ತನ್ನ ಅಭಿಯಾನವನ್ನು ಬಹುತೇಕ ಕೊನೆಗೊಳಿಸಿದೆ. ತನ್ನ ಆರಂಭಿಕ ಪಂದ್ಯದಲ್ಲಿ ನೇಪಾಳದ ಎದುರು 6 ವಿಕೆಟ್​ಗಳ ಹೀನಾಯ ಸೋಲಿಗೆ ಶರಣಾಗಿತ್ತು. ಸತತ ಸೋಲಿನೊಂದಿಗೆ ಎಲಿಮಿನೇಟ್​ ಆಗುವುದು ಬಹುತೇಕ ಖಚಿತವಾಗಿದೆ.

ರಿಚಾ ಮತ್ತು ಹರ್ಮನ್​ ಅಬ್ಬರ

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಉತ್ತಮ ಆರಂಭ ಪಡೆಯಲಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸ್ಮೃತಿ ಮಂಧಾನ 13 ರನ್​ಗೆ ಸುಸ್ತಾದರು. ನಂತರ ಶಫಾಲಿ ವರ್ಮಾ ಅಬ್ಬರಿಸಿ 37 ರನ್ ಗಳಿಸಿದರು. ದಯಾಲನ್ ಹೇಮಲತಾ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ಇರಲಿಲ್ಲ. ಪವರ್​ಪ್ಲೇನಲ್ಲೇ ಈ 3 ವಿಕೆಟ್​ಗಳು ಕಳೆದುಕೊಂಡವು.

ಜೆಮಿಮಾ ರೊಡ್ರಿಗಸ್ ಸಹ (14) ನೆರವಾಗಲಿಲ್ಲ. ಆದರೆ ಈ ವೇಳೆ ಒಂದಾದ ನಾಯಕಿ ಹರ್ಮನ್​ಪ್ರೀತ್ ಕೌರ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್​, ಯುಎಇ ಬೌಲರ್​​ಗಳ ಮೇಲೆ ದಂಡಯಾತ್ರೆ ನಡೆಸಿದರು. ಈ ಜೋಡಿ 5ನೇ ವಿಕೆಟ್​ಗೆ 81 ರನ್​ಗಳ ಪಾಲುದಾರಿಕೆ ನೀಡಿತು. ಪರಿಣಾಮ ತಂಡವು 200ರ ಗಡಿ ದಾಟಲು ಸಾಧ್ಯವಾಯಿತು.

ಹರ್ಮನ್​ 47 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ ಸಹಿತ 66 ರನ್ ಚಚ್ಚಿದರು. ರಿಚಾ, 29 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್​ ಸಹಾಯದಿಂದ 64 ರನ್ ಬಾರಿಸಿದರು. ಆ ಮೂಲಕ ಬೃಹತ್ ಗುರಿ ಪೇರಿಸಲು ಸಹಾಯ ಮಾಡಿದರು. ಯುಎಇ ಪರ ಕವಿಶ ಈಗೋಡಗೆ 2 ವಿಕೆಟ್ ಪಡೆದು ಮಿಂಚಿದರು.

ಯುಎಇ ವಿರುದ್ಧ ಬೌಲರ್​​ಗಳದ್ದೇ ದರ್ಬಾರ್

202 ರನ್​ಗಳ ಬೃಹತ್ ಗಯರ ಬೆನ್ನಟ್ಟಿದ ಯುಎಇ ಆರಂಭದಿಂದಲೂ ರನ್ ಗಳಿಸಲು ಪರದಾಡಿತು. ಭಾರತೀಯ ಬೌಲರ್​ಗಳ ಟೈಟ್ ಬೌಲಿಂಗ್​ ಮುಂದೆ, ಯುಎಇ ಬ್ಯಾಟರ್​​ಗಳ ಬ್ಯಾಟ್​ ಸದ್ದು ಮಾಡಲಿಲ್ಲ. ಈಶಾ ರೋಹಿತ್ ಓಜಾ 38, ಕವಿಶ ಈಗೋಡಗೆ ಅಜೇಯ 40 ರನ್ ಸಿಡಿಸಿ ಹೋರಾಡಿದರೂ ಗೆಲುವು ಸಾಧಿಸಲು ಬಹುದೂರ ಇತ್ತು.

ಯಾವುದೇ ಹಂತದಲ್ಲೂ ಪ್ರತಿರೋಧ ತೋರದ ಯುಎಇ, ಬೌಲರ್​​ಗಳ ದಾಳಿಗೆ ನಿಜಕ್ಕೂ ಬೆದರಿತು. ದೀಪ್ತಿ ಶರ್ಮಾ 2, ತನುಜಾ ಕನ್ವರ್, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್, ರಾಧಾ ಯಾದವ್ ತಲಾ 1 ವಿಕೆಟ್ ಪಡೆದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ