logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್ ಟೈಟಾನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್‌ ಪಂದ್ಯ; ಅಹಮದಾಬಾದ್ ಪಿಚ್ ಹಾಗೂ ಹವಾಮಾನ ವರದಿ

ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್‌ ಪಂದ್ಯ; ಅಹಮದಾಬಾದ್ ಪಿಚ್ ಹಾಗೂ ಹವಾಮಾನ ವರದಿ

Jayaraj HT Kannada

Apr 17, 2024 07:10 AM IST

ಅಹಮದಾಬಾದ್ ಪಿಚ್ ಹಾಗೂ ಹವಾಮಾನ ವರದಿ

    • GT vs DC: ಏಪ್ರಿಲ್ 17ರಂದು ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಎದುರಾಗುತ್ತಿವೆ. ಪಂದ್ಯದ ಪಿಚ್‌ ಹಾಗೂ ಹವಾಮಾನ ವರದಿ ಇಲ್ಲಿದೆ.
ಅಹಮದಾಬಾದ್ ಪಿಚ್ ಹಾಗೂ ಹವಾಮಾನ ವರದಿ
ಅಹಮದಾಬಾದ್ ಪಿಚ್ ಹಾಗೂ ಹವಾಮಾನ ವರದಿ

ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಪ್ರಿಲ್ 17ರ ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (GT vs DC) ಸವಾಲೊಡ್ಡುತ್ತಿದೆ. ಟೂರ್ನಿಯಲ್ಲಿ ಆವರೆಗೆ ಆಡಿರುವ 6 ಪಂದ್ಯಗಳಲ್ಲಿ ಶುಭ್ಮನ್‌ ಗಿಲ್‌ ನಾಯಕತ್ವದ ಜಿಟಿ 3ರಲ್ಲಿ ಗೆದ್ದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಅತ್ತ ರಿಷಬ್ ಪಂತ್‌ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 9ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಕೂಡಾ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಲಯಕ್ಕೆ ಮರಳಲು ಎದುರು ನೋಡುತ್ತಿವೆ.

ಟ್ರೆಂಡಿಂಗ್​ ಸುದ್ದಿ

ರಾಹುಲ್ ದ್ರಾವಿಡ್ ಸ್ಥಾನಕ್ಕೆ ಕೆಕೆಆರ್ ಮೆಂಟರ್‌ಗೆ ಗಾಳ ಹಾಕಲು ಮುಂದಾದ ಬಿಸಿಸಿಐ; ಆಫರ್‌ ಒಪ್ತಾರಾ 2011ರ ವಿಶ್ವಕಪ್ ವಿಜೇತ?

ಕನ್ನಡಿಗರ ಮನೆ ಮಗ ವಿರಾಟ್ ಕೊಹ್ಲಿ; ಕರುನಾಡ ಜನತೆಗೆ ಆರ್​​ಸಿಬಿ ಮಾಜಿ ನಾಯಕನೆಂದರೆ ಅಷ್ಟೇಕೆ ಇಷ್ಟ?

ಆರ್​ಸಿಬಿ vs ಸಿಎಸ್​ಕೆ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ಇಲ್ಲಿ ಪಾರ್ಕಿಂಗ್ ಮಾಡಂಗಿಲ್ಲ

Bengaluru Weather: ಐಪಿಎಲ್‌ ಕ್ರಿಕೆಟ್‌ನ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಇಂದು, ಬೆಂಗಳೂರನ್ನಾವರಿಸಿದೆ ಮಳೆ ಮೋಡ, ಇವತ್ತಿನ ಮಳೆ ಕಥೆ ಏನು

ಗುಜರಾತ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 3 ಪಂದ್ಯಗಳಲ್ಲಿ ಮಾತ್ರವೇ ಎದುರಾಗಿವೆ. ಇದರಲ್ಲಿ ಜಿಟಿ 2 ಪಂದ್ಯಗಳಲ್ಲಿ ಗೆದ್ದರೆ, ಡೆಲ್ಲಿ 1 ಪಂದ್ಯವನ್ನು ಗೆದ್ದುಕೊಂಡಿದೆ.

ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ವರದಿ

ಅಹಮದಾಬಾದ್‌ನ ಅತಿ ದೊಡ್ಡ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳು ಹಾಗೂ ಬೌಲರ್‌ಗಳಿಗೆ ಸಮಾನ ನೆರವು ನೀಡುತ್ತಿದೆ. ಮೈದಾನದಲ್ಲಿ ಕಪ್ಪು ಮತ್ತು ಕೆಂಪು ಮಣ್ಣಿನ ಪಿಚ್‌ಗಳಿವೆ. ಟೂರ್ನಿಯಲ್ಲಿ ಇಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಮೊತ್ತ 168 ಮತ್ತು 162 ರನ್.‌ ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟೈಟಾನ್ಸ್ 199 ರನ್‌ ಪೇರಿಸಿತ್ತು. ಇದನ್ನು ಪಂಜಾಬ್‌ ಯಶಸ್ವಿಯಾಗಿ ಚೇಸಿಂಗ್‌ ಕೂಡಾ ಮಾಡಿತು. ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಕೇವಲ ಆರು ರನ್‌ಗಳಿಂದ ಸೋತಿತ್ತು. ಆದರೆ, ಕೊನೆಯ ಎರಡು ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡವೇ ಗೆಲುವು ಸಾಧಿಸಿತು. ಹೀಗಾಗಿ ಮೈದಾನದಲ್ಲಿ ಟಾಸ್ ಗೆಲ್ಲುವ ತಂಡವು ಚೇಸಿಂಗ್ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು.

ಇದನ್ನೂ ಓದಿ | ನನ್ನ ಬದಲು ಬೇರೊಬ್ಬರಿಗೆ ಅವಕಾಶ ಕೊಡಿ; ಆರ್‌ಸಿಬಿ ಆಡುವ ಬಳಗದಿಂದ ಹಿಂದೆ ಸರಿದು ಐಪಿಎಲ್‌ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್

ಅಹಮದಾಬಾದ್‌ ಹವಾಮಾನ ವರದಿ

ಏಪ್ರಿಲ್ 17ರಂದು ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಬಿರುಬೇಸಿಗೆಯ ಸಮಯದಲ್ಲಿ ಸೂರ್ಯನ ಶಾಖದೊಂದಿಗೆ ಬಿಸಿಯ ವಾತಾವರಣ ಆಟಗಾರರನ್ನು ಕಾಡಲಿದೆ. ಸಂಜೆ ವೇಳೆ ತಾಪಮಾನವು ಸುಮಾರು 35 ಡಿಗ್ರಿಗಳಷ್ಟಿರುವ ಸಾಧ್ಯತೆ ಇದೆ.

ಗುಜರಾತ್‌ ಟೈಟಾನ್ಸ್‌ ಸಂಭಾವ್ಯ ತಂಡ

ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್‌ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ಮೋಹಿತ್ ಶರ್ಮಾ.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ತಂಡ

ಪೃಥ್ವಿ ಶಾ, ಅಭಿಷೇಕ್ ಪೊರೆಲ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಜೇಕ್ ಫ್ರೇಸರ್ ಮೆಕ್‌ಗುರ್ಕ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ