IPL 2025 Auction Highlights: ಐಪಿಎಲ್ 2025 ಮೆಗಾ ಹರಾಜು ಮುಕ್ತಾಯ; ಎಲ್ಲಾ ತಂಡಗಳ ವಿವರ ಇಂತಿದೆ ನೋಡಿ!
Nov 25, 2024 11:28 PM IST
IPL 2025 Auction Highlights: ಸೌದಿ ಅರೇಬಿಯಾದ ಜೆದ್ದಾದಲ್ಲಿ ಎರಡು ದಿನಗಳ ಕಾಲ ನಡೆದ ಐಪಿಎಲ್ 2025 ಮೆಗಾ ಹರಾಜು ಮುಕ್ತಾಯಗೊಂಡಿದೆ. ಎಲ್ಲಾ 10 ತಂಡಗಳು ಅಳೆದು ತೂಗಿ ಆಟಗಾರರನ್ನು ಖರೀದಿಸಿವೆ. ಯಾವ ತಂಡ, ಯಾರನ್ನೆಲ್ಲಾ ಖರೀದಿಸಿವೆ, ಯಾವ ಆಟಗಾರನಿಗೆ ಎಷ್ಟು ಮೊತ್ತ ನೀಡಿದೆ ಎನ್ನುವುದರ ವಿವರವನ್ನು ಈ ಮುಂದೆ ಅಪ್ಡೇಟ್ ಮಾಡಲಾಗಿದೆ.
IPL 2025 Auction Live: 182 ಕ್ರಿಕೆಟಿಗರು ಸೇಲ್, 639.15 ಕೋಟಿ ಖರ್ಚು
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 62 ವಿದೇಶಿ ಆಟಗಾರರು ಸೇರಿ 182 ಕ್ರಿಕೆಟಿಗರು ಬಿಕರಿಯಾಗಿದ್ದಾರೆ. ಈ ಆಟಗಾರರಿಗೆ ಒಟ್ಟು 639.15 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಒಟ್ಟು 8 ಆರ್‌ಟಿಎಂ ಕಾರ್ಡ್ ಬಳಕೆಯಾಗಿದೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಎಂಬ ಹೆಗ್ಗಳಿಕೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಅವರನ್ನು 27 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿದೆ. ಸಾಕಷ್ಟು ಆಟಗಾರರು ಉತ್ತಮ ಮೊತ್ತ ಪಡೆದಿದ್ದರೆ, ಇನ್ನೂ ಕೆಲವರು ನಿರಾಸೆಗೊಂಡಿದ್ದಾರೆ. ಅಲ್ಲದೆ, ಅನೇಕ ಪ್ರತಿಭಾವಂತ ಕ್ರಿಕೆಟಿಗರೇ ಅನ್‌ಸೋಲ್ಡ್ ಆಗಿದ್ದಾರೆ. ಸೋಲ್ಡ್-ಅನ್‌ಸೋಲ್ಡ್ ಆದ ಎಲ್ಲಾ ಕ್ರಿಕೆಟಿಗರಿಗೆ ಮುಂದಿನ ವೃತ್ತಿಜೀವನ ಶುಭವಾಗಲಿ ಎಂದು ಹೆಚ್ಟಿ ಕನ್ನಡ ತಂಡ ಕೋರುತ್ತದೆ. ಧನ್ಯವಾದ.
IPL 2025 Auction Live: ಗುಜರಾತ್ ಟೈಟಾನ್ಸ್ ತಂಡ
ಜಿಟಿ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಕಗಿಸೊ ರಬಾಡ (10.75 ಕೋಟಿ), ಜೋಸ್ ಬಟ್ಲರ್ (15.75 ಕೋಟಿ). ಮೊಹಮ್ಮದ್ ಸಿರಾಜ್ (12.25 ಕೋಟಿ), ಪ್ರಸಿದ್ಧ್ ಕೃಷ್ಣ (9.50 ಕೋಟಿ), ನಿಶಾಂತ್ ಸಿಂಧು (30 ಲಕ್ಷ), ಮಹಿಪಾಲ್ ಲೊಮ್ರೋರ್ (1.70 ಕೋಟಿ), ಕುಮಾರ್ ಕುಶಾಗ್ರಾ (65 ಲಕ್ಷ), ಅನುಜ್ ರಾವತ್ (30 ಲಕ್ಷ), ಮಾನವ್ ಸುತಾರ್ (30 ಲಕ್ಷ), ವಾಷಿಂಗ್ಟನ್ ಸುಂದರ್ (3.20 ಕೋಟಿ), ಜೆರಾಲ್ಡ್ ಕೊಯೆಟ್ಜಿ (2.40 ಕೋಟಿ), ಅರ್ಷದ್ ಖಾನ್ (1.30 ಕೋಟಿ), ಗುರ್ನೂರ್ ಬ್ರಾರ್ (1.30 ಕೋಟಿ), ಶೆರ್ಫೇನ್ ರುದರ್‌ಫೋರ್ಡ್ (2.60 ಕೋಟಿ), ಸಾಯಿ ಕಿಶೋರ್ (2 ಕೋಟಿ), ಇಶಾಂತ್ ಶರ್ಮಾ (75 ಲಕ್ಷ), ಜಯಂತ್ ಯಾದವ್ (75 ಲಕ್ಷ), ಗ್ಲೆನ್ ಫಿಲಿಪ್ಸ್ (2 ಕೋಟಿ), ಕರೀಂ ಜನತ್ (75 ಲಕ್ಷ), ಕುಲ್ವಂತ್ ಖೇಜ್ಡೋಲಿಯಾ (30 ಲಕ್ಷ).
ಜಿಟಿ ರಿಟೈನ್ ಮಾಡಿಕೊಂಡ ಆಟಗಾರರು
ರಶೀದ್ ಖಾನ್ (18 ಕೋಟಿ), ಶುಭ್ಮನ್ ಗಿಲ್ (16.5 ಕೋಟಿ), ಸಾಯಿ ಸುದರ್ಶನ್ (8.5 ಕೋಟಿ), ರಾಹುಲ್ ತೆವಾಟಿಯಾ (4 ಕೋಟಿ), ಶಾರೂಖ್ ಖಾನ್ (4 ಕೋಟಿ).
ಉಳಿದ ಪರ್ಸ್ ಮೊತ್ತ - 15 ಲಕ್ಷ
ಉಳಿದ ಸ್ಲಾಟ್ - 00
ವಿದೇಶಿ ಆಟಗಾರರು - 07
ಒಟ್ಟು ಆಟಗಾರರು - 25
IPL 2025 Auction Live: ಡೆಲ್ಲಿ ಕ್ಯಾಪಿಟಲ್ಸ್ ತಂಡ
ಡಿಸಿ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಮಿಚೆಲ್ ಸ್ಟಾರ್ಕ್ (11.75 ಕೋಟಿ), ಕೆಎಲ್ ರಾಹುಲ್ (14 ಕೋಟಿ), ಹ್ಯಾರಿ ಬ್ರೂಕ್ (6.25 ಕೋಟಿ), ಜೇಕ್ ಫ್ರೇಸರ್-ಮೆಕ್‌ಗರ್ಕ್ (9 ಕೋಟಿ), ಟಿ.ನಟರಾಜನ್ (10.75 ಕೋಟಿ), ಕರುಣ್ ನಾಯರ್ (50 ಲಕ್ಷ), ಸಮೀರ್ ರಿಜ್ವಿ (95 ಲಕ್ಷ), ಅಶುತೋಷ್ ಶರ್ಮಾ (3.80 ಕೋಟಿ), ಮೋಹಿತ್ ಶರ್ಮಾ (2.20 ಕೋಟಿ), ಫಾಫ್ ಡು ಪ್ಲೆಸಿಸ್ (2 ಕೋಟಿ), ಮುಖೇಶ್ ಕುಮಾರ್ (8 ಕೋಟಿ), ದರ್ಶನ್ ನಲ್ಕಂಡೆ (30 ಲಕ್ಷ), ದುಷ್ಮಂತಾ ಚಮೀರಾ (75 ಲಕ್ಷ), ವಿಪ್ರಜ್ ನಿಗಮ್ (50 ಲಕ್ಷ), ಡೊನೊವನ್ ಫ್ರೀರಾ (75 ಲಕ್ಷ), ಅಜಯ್ ಮಂಡಲ್ (30 ಲಕ್ಷ), ಮನ್ವಂತ್ ಕುಮಾರ್ (30 ಲಕ್ಷ), ತ್ರಿಪುರಾಣ ವಿಜಯ್ (30 ಲಕ್ಷ), ಮಾಧವ್ ತಿವಾರಿ (40 ಲಕ್ಷ).
ಡಿಸಿ ರಿಟೈನ್ ಮಾಡಿಕೊಂಡ ಆಟಗಾರರು
ಅಕ್ಷರ್ ಪಟೇಲ್ (16.5 ಕೋಟಿ), ಕುಲ್ದೀಪ್ ಯಾದವ್ (14.25 ಕೋಟಿ), ಟ್ರಿಸ್ಟಾನ್ ಸ್ಟಬ್ಸ್ (10 ಕೋಟಿ), ಅಭಿಷೇಕ್ ಪೋರೆಲ್ (4 ಕೋಟಿ)
ಉಳಿದ ಪರ್ಸ್ ಮೊತ್ತ - 20 ಲಕ್ಷ
ಉಳಿದ ಸ್ಲಾಟ್ - 02
ವಿದೇಶಿ ಆಟಗಾರರು - 07
ಒಟ್ಟು ಆಟಗಾರರು - 23
IPL 2025 Auction Live: ಸನ್ ರೈಸರ್ಸ್ ಹೈದರಾಬಾದ್ ತಂಡ
ಎಸ್ಆರ್ಹೆಚ್ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಮೊಹಮ್ಮದ್ ಶಮಿ (10 ಕೋಟಿ), ಹರ್ಷಲ್ ಪಟೇಲ್ (8 ಕೋಟಿ), ಇಶಾನ್ ಕಿಶನ್ (11.25 ಕೋಟಿ), ರಾಹುಲ್ ಚಹರ್ (3.2 ಕೋಟಿ ರೂ.), ಆಡಮ್ ಝಂಪಾ (2.40 ಕೋಟಿ), ಅಥರ್ವ ಟೈಡೆ (30 ಲಕ್ಷ), ಅಭಿನವ್ ಮನೋಹರ್ (3.20 ಕೋಟಿ), ಸಿಮರ್ಜೀತ್ ಸಿಂಗ್ (1.50 ಕೋಟಿ), ಜೀಶನ್ ಅನ್ಸಾರಿ (40 ಲಕ್ಷ), ಜಯದೇವ್ ಉನದ್ಕತ್ (1 ಕೋಟಿ), ಬ್ರೀಡನ್ ಕಾರ್ಸೆ (1 ಕೋಟಿ), ಕಾಮಿಂದು ಮೆಂಡಿಸ್ (75 ಲಕ್ಷ), ಅನಿಕೇತ್ ವರ್ಮಾ (30 ಲಕ್ಷ), ಇಶಾನ್ ಮಾಲಿಂಗ (1.20 ಕೋಟಿ), ಸಚಿನ್ ಬೇಬಿ (30 ಲಕ್ಷ).
ಎಸ್ಆರ್ಹೆಚ್ ರಿಟೈನ್ ಮಾಡಿಕೊಂಡ ಆಟಗಾರರು
ಪ್ಯಾಟ್ ಕಮಿನ್ಸ್ (18 ಕೋಟಿ), ಹೆನ್ರಿಚ್ ಕ್ಲಾಸೆನ್ (23 ಕೋಟಿ), ಅಭಿಷೇಕ್ ಶರ್ಮಾ (14 ಕೋಟಿ), ಟ್ರಾವಿಸ್ ಹೆಡ್ (14 ಕೋಟಿ), ನಿತೀಶ್ ರೆಡ್ಡಿ (6 ಕೋಟಿ).
ಉಳಿದ ಪರ್ಸ್ ಮೊತ್ತ - 20 ಲಕ್ಷ
ಉಳಿದ ಸ್ಲಾಟ್ - 05
ವಿದೇಶಿ ಆಟಗಾರರು - 07
ಒಟ್ಟು ಆಟಗಾರರು - 20
IPL 2025 Auction Live: ಮುಂಬೈ ಇಂಡಿಯನ್ಸ್ ತಂಡ
ಎಂಐ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಟ್ರೆಂಟ್ ಬೌಲ್ಟ್ (12.5 ಕೋಟಿ ), ನಮನ್ ಧೀರ್ (5.25 ಕೋಟಿ), ರಾಬಿನ್ ಮಿಂಜ್ (65 ಲಕ್ಷ), ಕರಣ್ ಶರ್ಮಾ (50 ಲಕ್ಷ), ರಿಯಾನ್ ರಿಕೆಲ್ಟನ್ (1 ಕೋಟಿ), ದೀಪಕ್ ಚಹಾರ್ (9.25 ಕೋಟಿ), ಅಲ್ಲಾ ಗಜನ್ಫರ್ (4.80 ಕೋಟಿ), ವಿಲ್ ಜಾಕ್ಸ್ (5.25 ಕೋಟಿ), ಅಶ್ವನಿ ಕುಮಾರ್ (30 ಲಕ್ಷ), ಮಿಚೆಲ್ ಸ್ಯಾಂಟ್ನರ್ (2 ಕೋಟಿ), ರೀಸ್ ಟೋಪ್ಲಿ (75 ಲಕ್ಷ), ಕೃಷ್ಣನ್ ಶ್ರೀಜಿತ್ (30 ಲಕ್ಷ), ರಾಜ್ ಅಂಗದ್ ಬಾವಾ (30 ಲಕ್ಷ), ಸತ್ಯನಾರಾಯಣ ರಾಜು (30 ಲಕ್ಷ), ಬೆವನ್ ಜೇಕಬ್ಸ್ (30 ಲಕ್ಷ), ಅರ್ಜುನ್ ತೆಂಡೂಲ್ಕರ್ (30 ಲಕ್ಷ), ಲಿಜರ್ಡ್ ವಿಲಿಯಮ್ಸ್ (75 ಲಕ್ಷ), ವಿಘ್ನೇಶ್ ಪುತ್ತೂರು (30 ಲಕ್ಷ).
ಎಂಐ ರಿಟೈನ್ ಮಾಡಿಕೊಂಡ ಆಟಗಾರರು
ರೋಹಿತ್ ಶರ್ಮಾ (16.30 ಕೋಟಿ), ಹಾರ್ದಿಕ್ ಪಾಂಡ್ಯ (16.35 ಕೋಟಿ), ಜಸ್ಪ್ರೀತ್ ಬುಮ್ರಾ (18 ಕೋಟಿ), ಸೂರ್ಯಕುಮಾರ್ ಯಾದವ್ (16.35 ಕೋಟಿ), ತಿಲಕ್ ವರ್ಮಾ (8 ಕೋಟಿ)
ಉಳಿದ ಪರ್ಸ್ ಮೊತ್ತ - 20
ಉಳಿದ ಸ್ಲಾಟ್ - 02
ವಿದೇಶಿ ಆಟಗಾರರು - 08
ಒಟ್ಟು ಆಟಗಾರರು - 23
IPL 2025 Auction Live: ಲಕ್ನೋ ಸೂಪರ್ ಜೈಂಟ್ಸ್
ಎಲ್ಎಸ್ಜಿ ಹರಾಜಿನಲ್ಲಿ ಖರೀದಿಸಿದ ಆಟಗಾರರು
ರಿಷಭ್ ಪಂತ್ (27 ಕೋಟಿ), ಡೇವಿಡ್ ಮಿಲ್ಲರ್ (7.5 ಕೋಟಿ), ಏಡೆನ್ ಮಾರ್ಕ್ರಾಮ್ (2 ಕೋಟಿ), ಮಿಚೆಲ್ ಮಾರ್ಷ್ ( 3.40 ಕೋಟಿ), ಅವೇಶ್ ಖಾನ್ (9.75 ಕೋಟಿ), ಅಬ್ದುಲ್ ಸಮದ್ (4.20) ಕೋಟಿ), ಆರ್ಯನ್ ಜುಯಲ್ (30 ಲಕ್ಷ), ಆಕಾಶ್ ದೀಪ್ (8 ಕೋಟಿ), ಹಿಮ್ಮತ್ ಸಿಂಗ್ (30 ಲಕ್ಷ ರೂ.), ಎಂ. ಸಿದ್ಧಾರ್ಥ್ (75 ಲಕ್ಷ), ದಿಗ್ವೇಶ್ ಸಿಂಗ್ (30 ಲಕ್ಷ), ಸಾಯಿ ಕಿಶೋರ್ (2 ಕೋಟಿ), ಇಶಾಂತ್ ಶರ್ಮಾ (75 ಲಕ್ಷ), ಜಯಂತ್ ಯಾದವ್ (75 ಲಕ್ಷ), ಅರ್ಶಿನ್ ಕುಲಕರ್ಣಿ (30 ಲಕ್ಷ), ಮ್ಯಾಥ್ಯೂ ಬ್ರಿಟ್ಜ್ಕೆ (75 ಲಕ್ಷ)
ಎಲ್ಎಸ್ಜಿ ರಿಟೈನ್ ಮಾಡಿಕೊಂಡ ಆಟಗಾರರು
ನಿಕೋಲಸ್ ಪೂರನ್ (21 ಕೋಟಿ), ರವಿ ಬಿಷ್ಣೋಯ್ (11 ಕೋಟಿ), ಮಯಾಂಕ್ ಯಾದವ್ (11 ಕೋಟಿ), ಮೊಹ್ಸಿನ್ ಖಾನ್ (4 ಕೋಟಿ), ಆಯುಷ್ ಬದೋನಿ (4 ಕೋಟಿ)
ಉಳಿದ ಪರ್ಸ್ ಮೊತ್ತ - 10 ಲಕ್ಷ
ಉಳಿದ ಸ್ಲಾಟ್ - 01
ವಿದೇಶಿ ಆಟಗಾರರು - 06
ಒಟ್ಟು ಆಟಗಾರರು - 24
IPL 2025 Auction Live: ರಾಜಸ್ಥಾನ್ ರಾಯಲ್ಸ್ ತಂಡ
ಆರ್ಆರ್ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಜೋಫ್ರಾ ಆರ್ಚರ್ (12.50 ಕೋಟಿ), ಮಹೀಶ್ ತೀಕ್ಷಣ (4.4 ಕೋಟಿ), ವನಿಂದು ಹಸರಂಗ (5.2 ಕೋಟಿ), ಆಕಾಶ್ ಮಧ್ವಲ್ (1.20 ಕೋಟಿ), ಕುಮಾರ್ ಕಾರ್ತಿಕೇಯ (30 ಲಕ್ಷ), ನಿತೀಶ್ ರಾಣಾ (4.20 ಕೋಟಿ), ತುಷಾರ್ ದೇಶಪಾಂಡೆ (6.50 ಕೋಟಿ), ಶುಭಂ ದುಬೆ (80 ಲಕ್ಷ), ಯುದ್ಧವೀರ್ ಸಿಂಗ್ (35 ಲಕ್ಷ), ಫಜಲ್ಹಕ್ ಫಾರೂಕಿ (2 ಕೋಟಿ), ವೈಭವ್ ಸೂರ್ಯವಂಶಿ (1.10 ಕೋಟಿ), ಕ್ವೇನಾ ಮಫಕ್ (1.50 ಕೋಟಿ), ಕುನಾಲ್ ರಾಥೋಡ್ (30 ಲಕ್ಷ), ಅಶೋಕ್ ಶರ್ಮಾ (30 ಲಕ್ಷ)
ಆರ್ಆರ್ ರಿಟೈನ್ ಮಾಡಿಕೊಂಡ ಆಟಗಾರರು
ಸಂಜು ಸ್ಯಾಮ್ಸನ್ (18 ಕೋಟಿ), ಯಶಸ್ವಿ ಜೈಸ್ವಾಲ್ (18 ಕೋಟಿ), ರಿಯಾನ್ ಪರಾಗ್ (14 ಕೋಟಿ), ಧ್ರುವ್ ಜುರೆಲ್ (14 ಕೋಟಿ), ಶಿಮ್ರಾನ್ ಹೆಟ್ಮೆಯರ್ (11 ಕೋಟಿ), ಸಂದೀಪ್ ಶರ್ಮಾ (4 ಕೋಟಿ)
ಉಳಿದ ಪರ್ಸ್ ಮೊತ್ತ - 30 ಲಕ್ಷ
ಉಳಿದ ಸ್ಲಾಟ್ - 05
ವಿದೇಶಿ ಆಟಗಾರರು - 06
ಒಟ್ಟು ಆಟಗಾರರು - 20
IPL 2025 Auction Live: ಪಂಜಾಬ್ ಕಿಂಗ್ಸ್ ತಂಡ
ಪಿಬಿಕೆಎಸ್ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಅರ್ಷದೀಪ್ ಸಿಂಗ್ (18 ಕೋಟಿ), ಶ್ರೇಯಸ್ ಅಯ್ಯರ್ (26.75 ಕೋಟಿ), ಯುಜ್ವೇಂದ್ರ ಚಹಲ್ (18 ಕೋಟಿ), ಮಾರ್ಕಸ್ ಸ್ಟೋಯ್ನಿಸ್ (11 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್ 4.20 ಕೋಟಿ), ನೆಹಾಲ್ ವಧೇರಾ (4.20 ಕೋಟಿ), ಹರ್‌ಪ್ರೀತ್ ಬ್ರಾರ್ (1.50 ಕೋಟಿ), ವಿಷ್ಣು ವಿನೋದ್ (95 ಲಕ್ಷ), ವಿಜಯ್‌ಕುಮಾರ್ ವೈಶಾಕ್ (1.80 ಕೋಟಿ), ಯಶ್ ಠಾಕೂರ್ (1.60 ಕೋಟಿ), ಮಾರ್ಕೊ ಜಾನ್ಸೆನ್ (7 ಕೋಟಿ ), ಜೋಶ್ ಇಂಗ್ಲಿಸ್ (2.60 ಕೋಟಿ), ಲಾಕಿ ಫರ್ಗುಸನ್ (2 ಕೋಟಿ), ಅಜ್ಮತುಲ್ಲಾ ಒಮರ್ಜಾಯ್ (2.40 ಕೋಟಿ), ಹರ್ನೂರ್ ಪನ್ನು (30 ಲಕ್ಷ), ಕುಲದೀಪ್ ಸೇನ್ (80 ಲಕ್ಷ), ಪ್ರಿಯಾಂಶ್ ಆರ್ಯ (3.80 ಕೋಟಿ), ಆರೋನ್ ಹಾರ್ಡಿ (1.25 ಕೋಟಿ), ಮುಶೀರ್ ಖಾನ್ (30 ಲಕ್ಷ), ಸೂರ್ಯಾಂಶ್ ಶೆಡ್ಜ್ (30 ಲಕ್ಷ), ಕ್ಸೇವಿಯರ್ ಬಾರ್ಟ್ಲೆಟ್ (80 ಲಕ್ಷ), ಪೈಲಾ ಅವಿನಾಶ್ (30 ಲಕ್ಷ), ಪ್ರವೀಣ್ ದುಬೆ (30 ಲಕ್ಷ)
ಪಿಬಿಕೆಎಸ್ ರಿಟೈನ್ ಮಾಡಿಕೊಂಡ ಆಟಗಾರರು
ಪ್ರಭುಶಿಮ್ರಾನ್ ಸಿಂಗ್ (4 ಕೋಟಿ), ಶಶಾಂಕ್ ಸಿಂಗ್ (5.5 ಕೋಟಿ)
ಉಳಿದ ಪರ್ಸ್ ಮೊತ್ತ - 35 ಲಕ್ಷ
ಉಳಿದ ಸ್ಲಾಟ್ - 00
ವಿದೇಶಿ ಆಟಗಾರರು - 08
ಒಟ್ಟು ಆಟಗಾರರು - 25
IPL 2025 Auction Live: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ
ಕೆಕೆಆರ್ ಹರಾಜಿನಲ್ಲಿ ಖರೀದಿಸಿದ ಆಟಗಾರರು
ವೆಂಕಟೇಶ್ ಅಯ್ಯರ್ (23.75 ಕೋಟಿ), ಕ್ವಿಂಟನ್ ಡಿ ಕಾಕ್ (3.60 ಕೋಟಿ), ರಹಮಾನುಲ್ಲಾ ಗುರ್ಬಾಜ್ (2 ಕೋಟಿ) , ಅನ್ರಿಚ್ ನೋಕಿಯಾ (6.50 ಕೋಟಿ), ಆಂಗ್ಕ್ರಿಶ್ ರಘುವಂಶಿ (3 ಕೋಟಿ), ವೈಭವ್ ಅರೋರಾ (1.80 ಕೋಟಿ), ಮಯಾಂಕ್ ಮಾರ್ಕಾಂಡೆ (30 ಲಕ್ಷ), ರೋವ್‌ಮನ್ ಪೊವೆಲ್ (1.50 ಕೋಟಿ), ಮನೀಶ್ ಪಾಂಡೆ (75 ಲಕ್ಷ), ಸ್ಪೆನ್ಸರ್ ಜಾನ್ಸನ್ (2.80 ಕೋಟಿ), ಲವನೀತ್ ಸಿಸೋಡಿಯಾ (30 ಲಕ್ಷ), ಅಜಿಂಕ್ಯ ರಹಾನೆ (1.50 ಲಕ್ಷ), ಅನುಕುಲ್ ರಾಯ್ (40 ಲಕ್ಷ), ಮೊಯಿನ್ ಅಲಿ (2 ಕೋಟಿ), ಉಮ್ರಾನ್ ಮಲಿಕ್ (75 ಲಕ್ಷ).
ಕೆಕೆಆರ್ ರಿಟೈನ್ ಮಾಡಿಕೊಂಡ ಆಟಗಾರರು
ರಿಂಕು ಸಿಂಗ್ (13 ಕೋಟಿ), ವರುಣ್ ಚಕ್ರವರ್ತಿ (12 ಕೋಟಿ), ಸುನಿಲ್ ನರೇನ್ (12 ಕೋಟಿ), ಆ್ಯಂಡ್ರೆ ರಸೆಲ್ (12 ಕೋಟಿ), ಹರ್ಷಿತ್ ರಾಣಾ (4 ಕೋಟಿ), ರಮಣ್ ದೀಪ್ ಸಿಂಗ್ (4 ಕೋಟಿ)
ಉಳಿದ ಪರ್ಸ್ ಮೊತ್ತ - 5 ಲಕ್ಷ
ಉಳಿದ ಸ್ಲಾಟ್ - 04
ವಿದೇಶಿ ಆಟಗಾರರು - 08
ಒಟ್ಟು ಆಟಗಾರರು - 21
IPL 2025 Auction Live: ಚೆನ್ನೈ ಸೂಪರ್ ಕಿಂಗ್ಸ್ ತಂಡ
ಸಿಎಸ್‌ಕೆ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಡೆವೊನ್ ಕಾನ್ವೆ (6.25 ಕೋಟಿ), ರಾಹುಲ್ ತ್ರಿಪಾಠಿ (3.40 ಕೋಟಿ), ರಚಿನ್ ರವೀಂದ್ರ (4 ಕೋಟಿ), ಆರ್. ಅಶ್ವಿನ್ (9.75 ಕೋಟಿ), ಖಲೀಲ್ ಅಹ್ಮದ್ (4.80 ಕೋಟಿ), ನೂರ್ ಅಹ್ಮದ್ (10 ಕೋಟಿ), ವಿಜಯ್ ಶಂಕರ್ (1.20 ಕೋಟಿ), ಸ್ಯಾಮ್ ಕರನ್ (ರೂ. 2.40 ಕೋಟಿ), ಶೇಕ್ ರಶೀದ್ (30 ಲಕ್ಷ), ಅನ್ಶುಲ್ ಕಾಂಬೋಜ್ (3.40 ಕೋಟಿ), ಮುಖೇಶ್ ಚೌಧರಿ (30 ಲಕ್ಷ), ದೀಪಕ್ ಹೂಡಾ (1.70 ಕೋಟಿ ರೂ.), ಗುರ್ಜಪ್ನೀತ್ ಸಿಂಗ್ (2.20 ಕೋಟಿ), ನಾಥನ್ ಎಲ್ಲಿಸ್ (2 ಕೋಟಿ), ಜೇಮಿ ಓವರ್ಟನ್ (1.50 ಕೋಟಿ), ಕಮಲೇಶ್ ನಾಗರಕೋಟಿ (30 ಲಕ್ಷ), ರಾಮಕೃಷ್ಣ ಘೋಷ್ (30 ಲಕ್ಷ), ಶ್ರೇಯಸ್ ಗೋಪಾಲ್ (30 ಲಕ್ಷ), ವಂಶ್ ಬೇಡಿ (55 ಲಕ್ಷ), ಆಂಡ್ರೆ ಸಿದ್ದಾರ್ಥ್ (ರೂ. 30 ಲಕ್ಷ).
ಸಿಎಸ್‌ಕೆ ರಿಟೈನ್ ಮಾಡಿಕೊಂಡ ಆಟಗಾರರು
ಋತುರಾಜ್ ಗಾಯಕ್ವಾಡ್ (18 ಕೋಟಿ), ಮತೀಶಾ ಪತಿರಾಣ (13 ಕೋಟಿ), ಶಿವಂ ದುಬೆ (12 ಕೋಟಿ), ರವೀಂದ್ರ ಜಡೇಜಾ (18 ಕೋಟಿ), ಎಂಎಸ್ ಧೋನಿ (4 ಕೋಟಿ)
ಉಳಿದ ಪರ್ಸ್ ಮೊತ್ತ - 5 ಲಕ್ಷ
ಉಳಿದ ಸ್ಲಾಟ್ - 00
ವಿದೇಶಿ ಆಟಗಾರರು - 07
ಒಟ್ಟು ಆಟಗಾರರು - 25
IPL 2025 Auction Live: ಆರ್ಸಿಬಿ ಸಂಪೂರ್ಣ ತಂಡ
ಆರ್ಸಿಬಿ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಜೋಶ್ ಹೇಜಲ್‌ವುಡ್ (12.50 ಕೋಟಿ), ಫಿಲ್ ಸಾಲ್ಟ್ (11.50 ಕೋಟಿ), ಜಿತೇಶ್ ಶರ್ಮಾ (11 ಕೋಟಿ), ಲಿಯಾಮ್ ಲಿವಿಂಗ್‌ಸ್ಟನ್ (8.75 ಕೋಟಿ), ರಸಿಖ್ ಸಲಾಮ್ ದಾರ್ (6 ಕೋಟಿ), ಸುಯಾಶ್ ಶರ್ಮಾ (2.60 ಕೋಟಿ), ಭುವನೇಶ್ವರ್ ಕುಮಾರ್ (10.75 ಕೋಟಿ), ಕೃನಾಲ್ ಪಾಂಡ್ಯ (5.75 ಕೋಟಿ), ಸ್ವಪ್ನಿಲ್ ಸಿಂಗ್ (50 ಲಕ್ಷ), ಟಿಮ್ ಟೇವಿಡ್ (3ಕೋಟಿ), ರೊಮಾರಿಯೋ ಶೆಫರ್ಡ್ (1.50 ಕೋಟಿ), ನುವಾನ್ ತುಷಾರ (1.60 ಕೋಟಿ), ಮನೋಜ್ ಭಾಂಡಗೆ (30 ಲಕ್ಷ), ಜೇಕಬ್ ಬೆಥೆಲ್ (2.60 ಕೋಟಿ), ದೇವದತ್ ಪಡಿಕ್ಕಲ್ (2 ಕೋಟಿ), ಸ್ವಸ್ತಿಕ್ ಚಿಕಾರ್ (30 ಲಕ್ಷ), ಲುಂಗಿ ಗಿಡಿ (1 ಕೋಟಿ), ಅಭಿನಂದನ್ ಸಿಂಗ್ (30 ಲಕ್ಷ), ಮೋಹಿತ್ ರಾಠಿ (30 ಲಕ್ಷ).
ಆರ್ಸಿಬಿ ರಿಟೈನ್ ಮಾಡಿಕೊಂಡ ಆಟಗಾರರು
ವಿರಾಟ್ ಕೊಹ್ಲಿ (21 ಕೋಟಿ), ರಜತ್ ಪಾಟೀದಾರ್ (11 ಕೋಟಿ), ಯಶ್ ದಯಾಳ್ (5 ಕೋಟಿ)
ಉಳಿದ ಪರ್ಸ್ ಮೊತ್ತ - 75 ಲಕ್ಷ
ಆರ್‌ಟಿಎಂ ಕಾರ್ಡ್ ಬಳಕೆ - 01 (2 ಉಳಿಕೆಯಾದವು)
ಉಳಿದ ಸ್ಲಾಟ್ - 03
ವಿದೇಶಿ ಆಟಗಾರರು - 08
ಒಟ್ಟು ಆಟಗಾರರು - 22
IPL 2025 Auction Live: ವೈಭವ್ ಸೂರ್ಯವಂಶಿ 1.10 ಕೋಟಿ
ಕಮಲೇಶ್ ನಾಗರಕೋಟಿ - 30 ಲಕ್ಷ ಚೆನ್ನೈ
ಲ್ಯಾನ್ಸ್ ಮೋರಿಸ್ ಅನ್‌ಸೋಲ್ಡ್
ಓಲ್ಲಿ ಸ್ಟೋನ್ ಅನ್‌ಸೋಲ್ಡ್
ಪ್ಯಾಲಾ ಅವಿನಾಶ್ - 30 ಲಕ್ಷ - ಪಂಜಾಬ್ ಕಿಂಗ್ಸ್
ರಾಮಕೃಷ್ಣ ಘೋಷ್ - 30 ಲಕ್ಷ - ಸಿಎಸ್‌ಕೆ
ವೈಭವ್ ಸೂರ್ಯವಂಶಿ 1.10 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಸೇಲ್ ಆಗಿದ್ದಾರೆ.
IPL 2025 Auction Live: ಚೇತನ್ ಸಕಾರಿಯಾ ಅನ್‌ಸೋಲ್ಡ್
ದಿಲ್ಶಾನ್ ಮಧುಶಂಕ ಅನ್‌ಸೋಲ್ಡ್
ಜೆಮಿ ಓವರ್ಟನ್ - 1.5 ಕೋಟಿ - ಸಿಎಸ್‌ಕೆ
ಮೈಕಲ್ ಬ್ರೇಸ್ವೆಲ್ ಅನ್‌ಸೋಲ್ಡ್
ಆ್ಯಡಂ ಮಿಲ್ನೆ ಅನ್‌ಸೋಲ್ಡ್
ಲುಂಗಿ ಎನ್ಗಿಡಿ ಅನ್‌ಸೋಲ್ಡ್
ವಿಲಿಯಂ ಓರೂಕೆ ಅನ್‌ಸೋಲ್ಡ್
ಚೇತನ್ ಸಕಾರಿಯಾ ಅನ್‌ಸೋಲ್ಡ್
ಸಂದೀಪ್ ವಾರಿಯರ್ ಅನ್‌ಸೋಲ್ಡ್
ಅಬ್ದುಲ್ ಬಸಿತ್ ಅನ್‌ಸೋಲ್ಡ್
ಯುವರಾಜ್ ಚೌದರಿ - 30 ಲಕ್ಷ - ಲಕ್ನೋ
IPL 2025 Auction Live: ತಮ್ಮ ಸೋಲ್ಡ್-ಅಣ್ಣ ಅನ್‌ಸೋಲ್ಡ್
ರಾಜ್ ಅಂಗದ್ ಬಾವ - 30 ಲಕ್ಷ - ಮುಂಬೈ
ಅನಿಕೇತ್ ವರ್ಮಾ - 30 ಲಕ್ಷ - ಸನ್‌ರೈಸರ್ಸ್
ಸಲ್ಮಾನ್ ನೈಜರ್ - ಅನ್‌ಸೋಲ್ಡ್
ಎಮನ್ಜೋತ್ ಚಹಲ್ - ಅನ್‌ಸೋಲ್ಡ್
ಮುಶೀರ್ ಖಾನ್ - 30 ಲಕ್ಷ - ಪಂಜಾಬ್ (ಇವರ ಅಣ್ಣ ಸರ್ಫರಾಜ್ ಖಾನ್ ಅನ್‌ಸೋಲ್ಡ್)
ಸೂರ್ಯಾಂಶು ಶೆಡ್ಗೆ - 30 ಲಕ್ಷ - ಪಂಜಾಬ್
ಪ್ರಿನ್ಸ್ ಯಾದವ್ - 30 ಲಕ್ಷ - ಲಕ್ನೋ
ನಮನ್ ತಿವಾರಿ - ಅನ್‌ಸೋಲ್ಡ್
ದಿವೇಶ್ ಶರ್ಮಾ - ಅನ್‌ಸೋಲ್ಡ್
ಕುಲ್ವಂತ್ ಖೇಜ್ಡೋಲಿಯಾ - ಅನ್‌ಸೋಲ್ಡ್
IPL 2025 Auction Live: ಶಿವಂ ಮಾವಿ, ಸೈನಿ ಅನ್‌ಸೋಲ್ಡ್
ಮ್ಯಾಥ್ಯೂ ಶಾರ್ಟ್ - ಅನ್‌ಸೋಲ್ಡ್
ದುಷ್ಮಂತಾ ಚಮೀರಾ - 75 ಲಕ್ಷ - ಡೆಲ್ಲಿ
ನೇಥನ್ ಎಲ್ಲಿಸ್ - 2 ಕೋಟಿ - ಸಿಎಸ್‌ಕೆ
ಶಮರ್ ಜೋಸೆಫ್ - 75 ಲಕ್ಷ - ಎಲ್ಎಸ್ಜಿ
ಜೇಸನ್ ಬೆಹ್ರನ್ಡ್ರಾಫ್ - ಅನ್‌ಸೋಲ್ಡ್
ಶಿವಂ ಮಾವಿ - ಅನ್‌ಸೋಲ್ಡ್
ನವದೀಪ್ ಸೈನಿ - ಅನ್‌ಸೋಲ್ಡ್
IPL 2025 Auction Live: ಸರ್ಫರಾಜ್ ಖಾನ್ ಅನ್‌ಸೋಲ್ಡ್
ಬ್ರೈಡನ್ ಕಾರ್ಸ್ - 1 ಕೋಟಿ - ಎಸ್ಆರ್ಹೆಚ್
ಆರನ್ ಹಾರ್ಡಿ - 1.25 ಕೋಟಿ - ಪಂಜಾಬ್ ಕಿಂಗ್ಸ್
ಕೈಲ್ ಮೇಯರ್ಸ್ - ಅನ್‌ಸೋಲ್ಡ್
ಸರ್ಫರಾಜ್ ಖಾನ್ - ಅನ್‌ಸೋಲ್ಡ್
IPL 2025 Auction Live: ಆರ್‌ಸಿಬಿಗೆ ಜೇಕಬ್
ವಿಪ್ರಜ್ ನಿಗಮ್ - 50 ಲಕ್ಷ - ಡೆಲ್ಲಿ ಕ್ಯಾಪಿಟಲ್ಸ್
ಶ್ರೀಜಿತ್ ಕೃಷ್ಣನ್ - 30 ಲಕ್ಷ - ಮುಂಬೈ
ಅರ್ಪಿತ್ ಗುಲೇರಿಯಾ - ಅನ್‌ಸೋಲ್ಡ್
ಜೇಕಬ್ ಬೆತಲ್ - 2.60 ಕೋಟಿ - ಆರ್ಸಿಬಿ
IPL 2025 Auction Live: ಕನ್ನಡಿಗನಿಗೆ ಆರ್ಸಿಬಿ ಮಣೆ
ಕರ್ನಾಟಕದ ಮನೋಜ್ ಭಾಂಡಗೆಗೆ ಆರ್ಸಿಬಿ ಮಣೆ ಹಾಕಿದೆ. ಮೂಲ ಬೆಲೆ 30 ಲಕ್ಷಕ್ಕೆ ಖರೀದಿಸಿದೆ.
IPL 2025 Auction Live: ಪ್ರಿಯಾಂಶ್ ಆರ್ಯಗೆ 3.80 ಕೋಟಿ
ಕುಲ್ದೀಪ್ ಸೇನ್ - 30 ಲಕ್ಷ - ಪಂಜಾಬ್
ರೀಸ್ ಟೋಪ್ಲಿ - 75 ಲಕ್ಷ - ಮುಂಬೈ
ಲೂಕ್ ವುಡ್ - ಅನ್‌ಸೋಲ್ಡ್
ಸಚಿನ್ ದಾಸ್ - ಅನ್ ಸೋಲ್ಡ್
ಪ್ರಿಯಾಂಶ್ ಆರ್ಯ - 3.80 ಕೋಟಿ - ಪಂಜಾಬ್ ಕಿಂಗ್ಸ್
IPL 2025 Auction Live: ಸ್ಯಾಂಟ್ನರ್ ಮುಂಬೈಗೆ ಸೇಲ್
ರಾಘವ್ ಘೋಯಲ್ - ಅನ್‌ಸೋಲ್ಡ್
ಬೈಲಪುಡಿ ಯಶ್ವಂತ್ - ಅನ್‌ಸೋಲ್ಡ್
ಬ್ರೆಂಡನ್ ಕಿಂಗ್ - ಅನ್‌ಸೋಲ್ಡ್
ಗಸ್ ಆಟ್ಕಿನ್ಸನ್ - ಅನ್‌ಸೋಲ್ಡ್
ಸಿಕಂದರ್ ರಾಜಾ - ಅನ್‌ಸೋಲ್ಡ್
ಮಿಚೆಲ್ ಸ್ಯಾಂಟ್ನರ್ - 2 ಕೋಟಿ - ಮುಂಬೈ ಇಂಡಿಯನ್ಸ್
ಜಯಂತ್ ಯಾದವ್ - 75 ಲಕ್ಷ - ಗುಜರಾತ್ ಟೈಟಾನ್ಸ್
ಫಜಲ್ಹುಕ್ ಫಾರೂಕಿ 2 ಕೋಟಿ - ರಾಜಸ್ಥಾನ್ ರಾಯಲ್ಸ್
ಅಲ್ಜಾರಿ ಜೋಸೆಫ್ - ಅನ್‌ಸೋಲ್ಡ್
ರೀಚರ್ಡ್ ಗ್ಲೀಸನ್ - ಅನ್‌ಸೋಲ್ಡ್
ಕ್ವೆನಾ ಮಫಾಕ - ಅನ್‌ಸೋಲ್ಡ್
IPL 2025 Auction Live: ಸಿಎಸ್‌ಕೆ ಹೊಸ ಪ್ರತಿಭೆ
ಯುದ್ವೀರ್ ಸಿಂಗ್ - 30 ಲಕ್ಷ- ರಾಜಸ್ಥಾನ್ ರಾಯಲ್ಸ್
ರಿಷಿ ಧವನ್ - ಅನ್‌ಸೋಲ್ಡ್
ರಾಜವರ್ಧನ್ ಹಂಗರ್ಗೇಕರ್ - ಅನ್‌ಸೋಲ್ಡ್
ಅರ್ಷಿನ್ ಕುಲ್ಕರ್ಣಿ - ಅನ್‌ಸೋಲ್ಡ್
ಶಿವಂ ಸಿಂಗ್ - ಅನ್‌ಸೋಲ್ಡ್
ಅಶ್ವನಿ ಕುಮಾರ್ - ಮುಂಬೈ ಇಂಡಿಯನ್ಸ್
ಆಕಾಶ್ ಸಿಂಗ್ - ಲಕ್ನೋ ಸೂಪರ್ ಜೈಂಟ್ಸ್
ಗುರ್ಜಪ್ನೀತ್ ಸಿಂಗ್ - 2.2 ಕೋಟಿ - ಸಿಎಸ್‌ಕೆ
ಸ್ಟೀವ್ ಸ್ಮಿತ್ - ಅನ್‌ಸೋಲ್ಡ್
ನುವಾನ್ ತುಷಾರಾ ಖರೀದಿಸಿದ ಆರ್ಸಿಬಿ
ನುವಾನ್ ತುಷಾರಾ -ಆರ್‌ಸಿಬಿ -1.60 ಕೋಟಿ
ಜೈದೇವ್ ಉನಾದ್ಕತ್ -ಎಸ್‌ಆರ್‌ಎಚ್ -1 ಕೋಟಿ
ಮುಸ್ತಫಿಜುರ್ ರೆಹ್ಮಾನ್ -ಅನ್‌ಸೋಲ್ಡ್
ಉಮ್ರಾನ್ ಮಲಿಕ್ -ಅನ್‌ಸೋಲ್ಡ್
ನವೀನ್ ಉಲ್ ಹಕ್ -ಅನ್‌ಸೋಲ್ಡ್
ರೊಮಾರಿಯೋ ಶಫರ್ಡ್ ಆರ್‌ಸಿಬಿಗೆ
ರೊಮಾರಿಯೋ ಶಫರ್ಡ್ 1.50 ಕೋಟಿ ರೂ.ಗೆ ಆರ್‌ಸಿಬಿ ತಂಡಕ್ಕೆ ಬಂದಿದ್ದಾರೆ.
ಮುಂಬೈ ಇಂಡಿಯನ್ಸ್ ಕುಟುಂಬ ಸೇರಿದ ವಿಲ್ ಜ್ಯಾಕ್ಸ್
ದೀಪಕ್ ಹೂಡಾ 1.70 ಕೋಟಿ -ಸಿಎಸ್‌ಕೆ
ವಿಲ್ ಜ್ಯಾಕ್ಸ್ -5.25 ಕೋಟಿ -ಮುಂಬೈ ಇಂಡಿಯನ್ಸ್
3 ಕೋಟಿಗೆ ಆರ್‌ಸಿಬಿಗೆ ಬಂದ ಟಿಮ್ ಡೇವಿಡ್
ಟಿಮ್ ಡೇವಿಡ್- ಆರ್‌ಸಿಬಿ -3 ಕೋಟಿ
ಶಹಬಾಜ್ ಅಹ್ಮದ್ -2.40 ಕೋಟಿ (ಎಲ್‌ಎಸ್‌ಜಿ)
ಮನೀಶ್ ಪಾಂಡೆ ಮತ್ತೆ ಕೆಕೆಆರ್ ಪಾಲು
ಮನೀಶ್ ಪಾಂಡೆ 75 ಲಕ್ಷಕ್ಕೆ ಕೆಕೆಆರ್ ಪಾಲು
ಗುರ್ನೂರ್ ಬ್ರಾರ್ - ಗುಜರಾತ್ ಟೈಟಾನ್ಸ್ - 1.30 ಕೋಟಿ ರೂ
ಮುಖೇಶ್ ಚೌಧರಿ - ಚೆನ್ನೈ ಸೂಪರ್ ಕಿಂಗ್ಸ್ - 30 ಲಕ್ಷ ರೂ
ಜೀಶನ್ ಅನ್ಸಾರಿ - ಸನ್ ರೈಸರ್ಸ್ ಹೈದರಾಬಾದ್ - 40 ಲಕ್ಷ ರೂ
ಎಂ ಸಿದ್ಧಾರ್ಥ್ - ಲಕ್ನೋ ಸೂಪರ್ ಜೈಂಟ್ಸ್ - 75 ಲಕ್ಷ ರೂ
ದಿಗ್ವೇಶ್ ಸಿಂಗ್ - ಲಕ್ನೋ ಸೂಪರ್ ಜೈಂಟ್ಸ್ - 30 ಲಕ್ಷ ರೂ
ಆರ್‌ಸಿಬಿಗೆ ಮರಳಿದ ಸ್ವಪ್ನಿಲ್ ಸಿಂಗ್
ಅನ್ಶುಲ್ ಕಾಂಬೋಜ್ (ಸಿಎಸ್‌ಕೆ) -3.4
ಅರ್ಷದ್ ಖಾನ್ (ಗುಜರಾತ್ ಟೈಟಾನ್ಸ್)-1.3 ಕೋಟಿ
ಸ್ವಪ್ನಿಲ್ ಸಿಂಗ್ -ಆರ್‌ಸಿಬಿ -50 ಲಕ್ಷ
ಮಯಾಂಕ್ ಡಾಗರ್ ಅನ್‌ಸೋಲ್ಡ್
ಶುಭಂ ದುಬೆ (ರಾಜಸ್ಥಾನ್ ರಾಯಲ್ಸ್) -80 ಲಕ್ಷ
ಸೈಕ್ ರಶೀದ್ (ಸಿಎಸ್‌ಕೆ) -30 ಲಕ್ಷ
ಹಿಮ್ಮತ್ ಸಿಂಗ್ (ಎಲ್‌ಎಸ್‌ಜಿ) -30 ಲಕ್ಷ
ಮಯಾಂಕ್ ಡಾಗರ್ -ಅನ್‌ಸೋಲ್ಡ್
ಲಾಕಿ ಫರ್ಗುಸನ್ 2 ಕೋಟಿಗೆ ಸೇಲ್
ಲಾಕಿ ಫರ್ಗುಸನ್ 2 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲು
ಮುಜೀಬ್ ಉರ್ ರೆಹ್ಮಾನ್ -ಅನ್‌ಸೋಲ್ಡ್
ಅಲ್ಲಾಹ್ ಘಜಾನ್ಫರ್ -4.80 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲು
ದೀಪಕ್ ಚಹಾರ್ 9.25, ಆಕಾಶ್ ದೀಪ್ 8 ಕೋಟಿ
ದೀಪಕ್ ಚಹಾರ್ 9.25 ರೂ.ಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಶೇಲ್ ಆಗಿದ್ದಾರೆ. ಆಕಾಶ್ ದೀಪ್ 8 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ.
10.75 ಕೋಟಿಗೆ ಭುವನೇಶ್ವರ್ ಕುಮಾರ್ ಖರೀದಿ ಮಾಡಿದ ಆರ್‌ಸಿಬಿ
ಭುವನೇಶ್ವರ್ ಕುಮಾರ್ 10.75 ಕೋಟಿಗೆ ಆರ್‌ಸಿಬಿ ತಂಡಕ್ಕೆ ಬಂದಿದ್ದಾರೆ. ಮುಖೇಶ್ ಕುಮಾರ್ 6.50 ಕೋಟಿಗೆ ಪಂಜಾಬ್‌ಗೆ ಬಂದರು. ಆದರೆ ಆರ್‌ಟಿಎಂ ಬಳಸಿ ಡೆಲ್ಲಿ ಕ್ಯಾಪಿಟಲ್ಸ್ 8 ಕೋಟಿಗೆ ಅವರನ್ನು ಖರೀದಿಸಿದೆ.
ಗೆರಾಲ್ಡ್ ಕೊಯೆಟ್ಜಿ ಟೈಟಾನ್ಸ್ ಪಾಲು
ಸಿಎಸ್‌ಕೆ ಮಾಜಿ ವೇಗಿ ತುಷಾರ್ ದೇಶಪಾಂಡೆಯನ್ನು ರಾಜಸ್ಥಾನ್ ರಾಯಲ್ಸ್ ತಂಡವು 6.5 ಕೋಟಿಗೆ ಖರೀದಿಸಿದೆ. ದಕ್ಷಿಣ ಆಫ್ರಿಕಾ ವೇಗಿ ಗೆರಾಲ್ಡ್ ಕೊಯೆಟ್ಜಿ ಅವರನ್ನು 2.40 ಕೋಟಿಗೆ ಗುಜರಾತ್ ಟೈಟಾನ್ಸ್ ತಂಡ ಸೇರಿಕೊಂಡಿದ್ದಾರೆ.
ಸೋಲ್ಡ್ -ಅನ್‌ಸೋಲ್ಡ್ ಆದ ಆಟಗಾರರು
ನಿತೀಶ್ ರಾಣಾ (ರಾಜಸ್ಥಾನ್ ರಾಯಲ್ಸ್) -4.2 ಕೋಟಿ
ಶಾಯ್ ಹೋಪ್ -ಅನ್‌ಸೋಲ್ಡ್
ಕೆಎಸ್ ಭರತ್ -ಅನ್‌ಸೋಲ್ಡ್
ಜೋಶ್ ಇಂಗ್ಲಿಸ್ -(ಪಂಜಾಬ್ ಕಿಂಗ್ಸ್) -2.60 ಕೋಟಿ
ಅಲೆಕ್ಸ್ ಕ್ಯಾರಿ -ಅನ್‌ಸೋಲ್ಡ್
ಆರ್‌ಸಿಬಿಗೆ ಕೃನಾಲ್ ಪಾಂಡ್ಯ
ಕೃನಾಲ್ ಪಾಂಡ್ಯ 5.75 ಕೋಟಿಗೆ ಆರ್‌ಸಿಬಿ ತಂಡಕ್ಕೆ ಬಂದಿದ್ದಾರೆ. ಮೂಲಬೆಲೆ 2 ಕೋಟಿಯಿಂದ ಭಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.
ಡೇರಿಲ್ ಮಿಚೆಲ್ ಅನ್‌ಸೋಲ್ಡ್
ಮಾರ್ಕೊ ಜಾನ್ಸೆನ್ 7 ಕೋಟಿ ಕೊಟ್ಟು ಪಂಜಾಬ್ ಕಿಂಗ್ಸ್ ತಂಡ ಸೇರಿಸಿಕೊಂಡಿದೆ. ಡೇರಿಲ್ ಮಿಚೆಲ್ ಅನ್‌ಸೋಲ್ಡ್ ಆಗಿದ್ದಾರೆ.
ಸ್ಯಾಮ್ ಕರನ್ 2.40 ಕೋಟಿಗೆ ಸಿಎಸ್‌ಕೆ ಪಾಲು
ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ 2.40 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡಿದ್ದಾರೆ.
ಗುಜರಾತ್ ಟೈಟಾನ್ಸ್ ಸೇರಿದ ವಾಷಿಂಗ್ಟನ್ ಸುಂದರ್
ಆಲ್‌ರೌಂಡರ್‌ಗಳ ಪೈಕಿ ಶಾರ್ದುಲ್ ಠಾಕೂರ್ ಅನ್‌ಸೋಲ್ಡ್ ಆದರೆ, ವಾಷಿಂಗ್ಟನ್ ಸುಂದರ್ 3.20 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ.
ಮಯಾಂಕ್ ಅಗರ್ವಾಲ್ ಅನ್‌ಸೋಲ್ಡ್
ಅಜಿಂಕ್ಯಾ ರಹಾನೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಕೂಡಾ ಅನ್‌ಸೋಲ್ಡ್ ಆಗಿದ್ದಾರೆ.
ಫಾಫ್ ಡುಪ್ಲೆಸಿಸ್ 2 ಕೋಟಿಗೆ ಡೆಲ್ಲಿ ಪಾಲು
ಆರ್‌ಸಿಬಿ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಮೂಲ ಬೆಲೆ 2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.
ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭ
ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭವಾಗಿದೆ. ನ್ಯೂಜಿಲೆಂಡ್ ಬ್ಯಾಟರ್ ಕೇನ್ ವಿಲಿಯಮ್ಸನ್ ಅನ್‌ಸೋಲ್ಡ್ ಆಗಿದ್ದಾರೆ.
IPL 2025 Auction Live Updates: ಮೊದಲ ದಿನ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಟಾಪ್ 5 ಆಟಗಾರರು
ರಿಷಭ್ ಪಂತ್ - 27 ಕೋಟಿ ರೂ (ಲಕ್ನೋ ಸೂಪರ್ ಜೈಂಟ್ಸ್)
ಶ್ರೇಯಸ್ ಅಯ್ಯರ್ - 26.75 ಕೋಟಿ ರೂ. (ಪಂಜಾಬ್ ಕಿಂಗ್ಸ್)
ವೆಂಕಟೇಶ್ ಅಯ್ಯರ್ - 23.75 ಕೋಟಿ ರೂ. (ಕೋಲ್ಕತ್ತ ನೈಟ್ ರೈಡರ್ಸ್)
ಅರ್ಷದೀಪ್ ಸಿಂಗ್ - 18 ಕೋಟಿ ರೂ. (ಪಂಜಾಬ್ ಕಿಂಗ್ಸ್)
ಯುಜ್ವೇಂದ್ರ ಚಾಹಲ್ - 18 ಕೋಟಿ ರೂ. (ಪಂಜಾಬ್ ಕಿಂಗ್ಸ್)
IPL 2025 Auction Live Updates: ಮೊದಲ ದಿನ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಟಾಪ್ 5 ಅನ್‌ಕ್ಯಾಪ್ಡ್ ಆಟಗಾರರು
1. ರಸಿಖ್ ಸಲಾಮ್ ದಾರ್ - 6 ಕೋಟಿ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
2. ನಮನ್ ಧೀರ್ - 5.25 ಕೋಟಿ ರೂ.(ಮುಂಬೈ ಇಂಡಿಯನ್ಸ್)
3. ನೇಹಾಲ್ ವಧೇರಾ - 4.2 ಕೋಟಿ ರೂ. (ಪಂಜಾಬ್ ಕಿಂಗ್ಸ್)
4. ಅಬ್ದುಲ್ ಸಮದ್ - 4.2 ಕೋಟಿ ರೂ. (ಲಕ್ನೋ ಸೂಪರ್ ಜೈಂಟ್ಸ್)
5. ಅಶುತೋಷ್ ಶರ್ಮಾ - 3.8 ಕೋಟಿ ರೂ. (ಡೆಲ್ಲಿ ಕ್ಯಾಪಿಟಲ್ಸ್)
IPL 2025 Auction Live Updates: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿದೇಶಿ ಆಟಗಾರರು-3, ಸ್ವದೇಶಿ ಆಟಗಾರರು-9
ಮುಂಬೈ ಇಂಡಿಯನ್ಸ್: ವಿದೇಶಿ ಆಟಗಾರರು-1, ಸ್ವದೇಶಿ ಆಟಗಾರರು-9
ಪಂಜಾಬ್ ಕಿಂಗ್ಸ್: ವಿದೇಶಿ ಆಟಗಾರರು-2, ಸ್ವದೇಶಿ ಆಟಗಾರರು-12
ಗುಜರಾತ್ ಟೈಟಾನ್ಸ್: ವಿದೇಶಿ ಆಟಗಾರರು-3, ಸ್ವದೇಶಿ ಆಟಗಾರರು-14
ರಾಜಸ್ಥಾನ್ ರಾಯಲ್ಸ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-11
ಚೆನ್ನೈ ಸೂಪರ್ ಕಿಂಗ್ಸ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-12
ಲಕ್ನೋ ಸೂಪರ್ ಜೈಂಟ್ಸ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-12
ಡೆಲ್ಲಿ ಕ್ಯಾಪಿಟಲ್ಸ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-13
ಕೋಲ್ಕತ್ತ ನೈಟ್ ರೈಡರ್ಸ್: ವಿದೇಶಿ ಆಟಗಾರರು-5, ಸ್ವದೇಶಿ ಆಟಗಾರರು-13
ಸನ್ ರೈಸರ್ಸ್ ಹೈದರಾಬಾದ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-13
IPL 2025 Auction Live Updates: ಇಂದಿನ ಹರಾಜಿಗೆ ಬರಲಿರುವ ಆಟಗಾರರು
ಮಯಾಂಕ್ ಅಗರ್ವಾಲ್ (ಭಾರತ) - ಮೂಲ ಬೆಲೆ 1 ಕೋಟಿ ರೂಪಾಯಿ
ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ) - ಮೂಲ ಬೆಲೆ 2 ಕೋಟಿ ರೂಪಾಯಿ
ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್) - ಮೂಲ ಬೆಲೆ 2 ಕೋಟಿ ರೂಪಾಯಿ
ರೋವ್ಮನ್ ಪೊವೆಲ್ (ವೆಸ್ಟ್ ಇಂಡೀಸ್) - 1.5 ಕೋಟಿ ರೂಪಾಯಿ
ಅಜಿಂಕ್ಯ ರಹಾನೆ (ಭಾರತ) - 1.5 ಕೋಟಿ ರೂಪಾಯಿ
ಪೃಥ್ವಿ ಶಾ (ಭಾರತ) - 75 ಲಕ್ಷ ರೂಪಾಯಿ
ಮೊದಲ ದಿನದಂದು ಸೋಲ್ಡ್ ಮತ್ತು ಅನ್‌ಸೋಲ್ಡ್ ಆದವರ ಪಟ್ಟಿ
ಹರಾಜಿನ ಮೊದಲ ದಿನ ಮಾರಾಟವಾದ ಆಟಗಾರರ ಪಟ್ಟಿ
1. ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್ - ರೂ 18 ಕೋಟಿ (RTM)
2. ಕಗಿಸೊ ರಬಾಡ: ಗುಜರಾತ್ ಟೈಟಾನ್ಸ್ - ರೂ 10.75 ಕೋಟಿ
3. ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ - ರೂ 26.75 ಕೋಟಿ
4. ಜೋಸ್ ಬಟ್ಲರ್: ಗುಜರಾತ್ ಟೈಟಾನ್ಸ್ - ರೂ 15.75 ಕೋಟಿ
5. ಮಿಚೆಲ್ ಸ್ಟಾರ್ಕ್: ಡೆಲ್ಲಿ ಕ್ಯಾಪಿಟಲ್ಸ್ - ರೂ 11.75 ಕೋಟಿ
6. ರಿಷಬ್ ಪಂತ್: ಲಕ್ನೋ ಸೂಪರ್ ಜೈಂಟ್ಸ್ - ರೂ 27 ಕೋಟಿ
7. ಮೊಹಮ್ಮದ್ ಶಮಿ: ಸನ್ ರೈಸರ್ಸ್ ಹೈದರಾಬಾದ್ - ರೂ 10 ಕೋಟಿ
8. ಡೇವಿಡ್ ಮಿಲ್ಲರ್: ಲಕ್ನೋ ಸೂಪರ್ ಜೈಂಟ್ಸ್ - ರೂ 7.5 ಕೋಟಿ
9. ಯುಜ್ವೇಂದ್ರ ಚಹಾಲ್: ಪಂಜಾಬ್ ಕಿಂಗ್ಸ್ - ರೂ 18 ಕೋಟಿ
10. ಮೊಹಮ್ಮದ್ ಸಿರಾಜ್: ಗುಜರಾತ್ ಟೈಟಾನ್ಸ್ - ರೂ 12.25 ಕೋಟಿ
11. ಲಿಯಾಮ್ ಲಿವಿಂಗ್‌ಸ್ಟನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು - ರೂ 8.75 ಕೋಟಿ
12. ಕೆಎಲ್ ರಾಹುಲ್: ಡೆಲ್ಲಿ ಕ್ಯಾಪಿಟಲ್ಸ್ - ರೂ 14 ಕೋಟಿ
13. ಹ್ಯಾರಿ ಬ್ರೂಕ್: ಡೆಲ್ಲಿ ಕ್ಯಾಪಿಟಲ್ಸ್ - ರೂ 6.25 ಕೋಟಿ
14. ಐಡೆನ್ ಮಾರ್ಕ್ರಾಮ್: ಲಕ್ನೋ ಸೂಪರ್ ಜೈಂಟ್ಸ್ - ರೂ 2 ಕೋಟಿ
15. ಡೆವೊನ್ ಕಾನ್ವೇ: ಚೆನ್ನೈ ಸೂಪರ್ ಕಿಂಗ್ಸ್ - ರೂ 6.25 ಕೋಟಿ
16. ರಾಹುಲ್ ತ್ರಿಪಾಠಿ: ಚೆನ್ನೈ ಸೂಪರ್ ಕಿಂಗ್ಸ್ - ರೂ 3.4 ಕೋಟಿ
17. ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್: ಡೆಲ್ಲಿ ಕ್ಯಾಪಿಟಲ್ಸ್ - ರೂ 9 ಕೋಟಿ (RTM)
18. ಹರ್ಷಲ್ ಪಟೇಲ್: ಸನ್ ರೈಸರ್ಸ್ ಹೈದರಾಬಾದ್ - ರೂ 8 ಕೋಟಿ
19. ರಚಿನ್ ರವೀಂದ್ರ: ಚೆನ್ನೈ ಸೂಪರ್ ಕಿಂಗ್ಸ್ - ರೂ 4 ಕೋಟಿ (RTM)
20. ಆರ್ ಅಶ್ವಿನ್: ಚೆನ್ನೈ ಸೂಪರ್ ಕಿಂಗ್ಸ್ - ರೂ 9.75 ಕೋಟಿ
21. ವೆಂಕಟೇಶ್ ಅಯ್ಯರ್: ಕೋಲ್ಕತ್ತಾ ನೈಟ್ ರೈಡರ್ಸ್ - ರೂ 23.75 ಕೋಟಿ
22. ಮಾರ್ಕಸ್ ಸ್ಟೊಯಿನಿಸ್: ಪಂಜಾಬ್ ಕಿಂಗ್ಸ್ - ರೂ 11 ಕೋಟಿ
23. ಮಿಚೆಲ್ ಮಾರ್ಷ್: ಲಕ್ನೋ ಸೂಪರ್ ಜೈಂಟ್ಸ್ - ರೂ 3.4 ಕೋಟಿ
24. ಗ್ಲೆನ್ ಮ್ಯಾಕ್ಸ್‌ವೆಲ್: ಪಂಜಾಬ್ ಕಿಂಗ್ಸ್ - ರೂ 4.2 ಕೋಟಿ
25. ಕ್ವಿಂಟನ್ ಡಿ ಕಾಕ್: ಕೋಲ್ಕತ್ತಾ ನೈಟ್ ರೈಡರ್ಸ್ - ರೂ 3.6 ಕೋಟಿ
26. ಫಿಲ್ ಸಾಲ್ಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು - ರೂ 11.5 ಕೋಟಿ
27. ರಹಮಾನುಲ್ಲಾ ಗುರ್ಬಾಜ್: ಕೋಲ್ಕತ್ತಾ ನೈಟ್ ರೈಡರ್ಸ್ - ರೂ 2 ಕೋಟಿ
28. ಇಶಾನ್ ಕಿಶನ್: ಸನ್ ರೈಸರ್ಸ್ ಹೈದರಾಬಾದ್ - ರೂ 11.25 ಕೋಟಿ
29. ಜಿತೇಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು - ರೂ 11 ಕೋಟಿ
30. ಜೋಶ್ ಹೇಜಲ್‌ವುಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು - ರೂ 12.5 ಕೋಟಿ
31. ಪ್ರಸಿದ್ಧ್ ಕೃಷ್ಣ: ಗುಜರಾತ್ ಟೈಟಾನ್ಸ್ - ರೂ 9.5 ಕೋಟಿ
32. ಅವೇಶ್ ಖಾನ್: ಲಕ್ನೋ ಸೂಪರ್ ಜೈಂಟ್ಸ್ - ರೂ 9.75 ಕೋಟಿ
33. ಅನ್ರಿಚ್ ನಾರ್ಟ್ಜೆ: ಕೋಲ್ಕತ್ತಾ ನೈಟ್ ರೈಡರ್ಸ್ - ರೂ 6.5 ಕೋಟಿ
34. ಜೋಫ್ರಾ ಆರ್ಚರ್: ರಾಜಸ್ಥಾನ್ ರಾಯಲ್ಸ್ - ರೂ 12.5 ಕೋಟಿ
35. ಖಲೀಲ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ - ರೂ 4.8 ಕೋಟಿ
36. ಟಿ ನಟರಾಜನ್: ದೆಹಲಿ ಕ್ಯಾಪಿಟಲ್ಸ್ - ರೂ 10.75 ಕೋಟಿ
37. ಟ್ರೆಂಟ್ ಬೌಲ್ಟ್: ಮುಂಬೈ ಇಂಡಿಯನ್ಸ್ - ರೂ 12.5 ಕೋಟಿ
38. ರಾಹುಲ್ ಚಹಾರ್: ಸನ್ ರೈಸರ್ಸ್ ಹೈದರಾಬಾದ್ - ರೂ 3.2 ಕೋಟಿ
39. ಆಡಮ್ ಜಂಪಾ: ಸನ್ ರೈಸರ್ಸ್ ಹೈದರಾಬಾದ್: ರೂ 2.4 ಕೋಟಿ
40. ವನಿಂದು ಹಸರಂಗ: ರಾಜಸ್ಥಾನ್ ರಾಯಲ್ಸ್ - ರೂ 5.25 ಕೋಟಿ
41. ನೂರ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ - ರೂ 10 ಕೋಟಿ
42. ಮಹೇಶ್ ತೀಕ್ಷಣ: ರಾಜಸ್ಥಾನ್ ರಾಯಲ್ಸ್ - ರೂ 4.4 ಕೋಟಿ
43. ಅಥರ್ವ ಟೈಡೆ: ಸನ್‌ರೈಸರ್ಸ್ ಹೈದರಾಬಾದ್ - ರೂ 30 ಲಕ್ಷ
44. ನೆಹಾಲ್ ವಧೇರಾ: ಪಂಜಾಬ್ ಕಿಂಗ್ಸ್ - ರೂ 4.2 ಕೋಟಿ
45. ಕರುಣ್ ನಾಯರ್: ದೆಹಲಿ ಕ್ಯಾಪಿಟಲ್ಸ್ - ರೂ 50 ಲಕ್ಷ
46. ಅಭಿನವ್ ಮನೋಹರ್: ಸನ್ ರೈಸರ್ಸ್ ಹೈದರಾಬಾದ್ - ರೂ 3.20 ಕೋಟಿ
47. ಆಂಗ್ಕ್ರಿಶ್ ರಘುವಂಶಿ: ಕೋಲ್ಕತ್ತಾ ನೈಟ್ ರೈಡರ್ಸ್ - ರೂ 3 ಕೋಟಿ
48. ನಿಶಾಂತ್ ಸಿಂಧು: ಗುಜರಾತ್ ಟೈಟಾನ್ಸ್ - ರೂ 30 ಲಕ್ಷ
49. ಸಮೀರ್ ರಿಜ್ವಿ: ಚೆನ್ನೈ ಸೂಪರ್ ಕಿಂಗ್ಸ್ - ರೂ 95 ಲಕ್ಷ
50. ನಮನ್ ಧೀರ್: ಮುಂಬೈ ಇಂಡಿಯನ್ಸ್ - ರೂ 5.25 ಕೋಟಿ (RTM)
51. ಅಬ್ದುಲ್ ಸಮದ್: ಲಕ್ನೋ ಸೂಪರ್ ಜೈಂಟ್ಸ್ - ರೂ 4.2 ಕೋಟಿ
52. ಹರ್‌ಪ್ರೀತ್ ಬ್ರಾರ್: ಪಂಜಾಬ್ ಕಿಂಗ್ಸ್ - ರೂ 1.5 ಕೋಟಿ
53. ವಿಜಯ್ ಶಂಕರ್: ಚೆನ್ನೈ ಸೂಪರ್ ಕಿಂಗ್ಸ್ - ರೂ 1.2 ಕೋಟಿ
54. ಮಹಿಪಾಲ್ ಲೊಮ್ರರ್: ರಾಜಸ್ಥಾನ್ ರಾಯಲ್ಸ್ - ರೂ 1.7 ಕೋಟಿ
55. ಅಶುತೋಷ್ ಶರ್ಮಾ: ಡೆಲ್ಲಿ ಕ್ಯಾಪಿಟಲ್ಸ್ - ರೂ 3.8 ಕೋಟಿ
56. ಕುಮಾರ್ ಕುಶಾಗ್ರಾ: ಗುಜರಾತ್ ಟೈಟಾನ್ಸ್ - ರೂ 65 ಲಕ್ಷ
57. ರಾಬಿನ್ ಮಿಂಜ್: ಮುಂಬೈ ಇಂಡಿಯನ್ಸ್ - ರೂ 65 ಲಕ್ಷ
58. ಅನುಜ್ ರಾವತ್: ಗುಜರಾತ್ ಟೈಟಾನ್ಸ - ರೂ 30 ಲಕ್ಷ
59. ಆರ್ಯನ್ ಜುಯಲ್: ಲಕ್ನೋ ಸೂಪರ್ ಜೈಂಟ್ಸ್ - ರೂ 30 ಲಕ್ಷ
60. ವಿಷ್ಣು ವಿನೋದ್: ಪಂಜಾಬ್ ಕಿಂಗ್ಸ್ - ರೂ 95 ಲಕ್ಷ
61. ರಾಸಿಖ್ ಸಲಾಮ್ ದಾರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು - ರೂ 6 ಕೋಟಿ
62. ಆಕಾಶ್ ಮಧ್ವಲ್: ರಾಜಸ್ಥಾನ್ ರಾಯಲ್ಸ್ - ರೂ 1.2 ಕೋಟಿ
63. ಮೋಹಿತ್ ಶರ್ಮಾ: ಡೆಲ್ಲಿ ಕ್ಯಾಪಿಟಲ್ಸ್ - ರೂ 2.2 ಕೋಟಿ
64. ವಿಜಯ್‌ಕುಮಾರ್ ವೈಶಾಕ್: ಪಂಜಾಬ್ ಕಿಂಗ್ಸ್ - ರೂ 1.8 ಕೋಟಿ
65. ವೈಭವ್ ಅರೋರಾ: ಕೋಲ್ಕತ್ತಾ ನೈಟ್ ರೈಡರ್ಸ್ - ರೂ 1.8 ಕೋಟಿ
66. ಯಶ್ ಠಾಕೂರ್: ಪಂಜಾಬ್ ಕಿಂಗ್ಸ್ - ರೂ 1.6 ಕೋಟಿ
67. ಸಿಮರ್ಜೀತ್ ಸಿಂಗ್: ಸನ್ ರೈಸರ್ಸ್ ಹೈದರಾಬಾದ್ - ರೂ 1.5 ಕೋಟಿ
68. ಸುಯಾಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು - ರೂ 2.6 ಕೋಟಿ
69. ಕರ್ಣ್ ಶರ್ಮಾ: ಮುಂಬೈ ಇಂಡಿಯನ್ಸ್ - ರೂ 50 ಲಕ್ಷ
70. ಮಯಾಂಕ್ ಮಾರ್ಕಾಂಡೆ: ಕೋಲ್ಕತ್ತಾ ನೈಟ್ ರೈಡರ್ಸ್ - ರೂ 30 ಲಕ್ಷ
71. ಕುಮಾರ್ ಕಾರ್ತಿಕೇಯ: ರಾಜಸ್ಥಾನ್ ರಾಯಲ್ಸ್ - ರೂ 30 ಲಕ್ಷ
72. ಮಾನವ್ ಸುತಾರ್: ಗುಜರಾತ್ ಟೈಟಾನ್ಸ್ - ರೂ 30 ಲಕ್ಷ
ಮಾರಾಟವಾಗದ (ಅನ್‌ಸೋಲ್ಡ್) ಆಟಗಾರರು
1. ದೇವದತ್ ಪಡಿಕ್ಕಲ್
2. ಡೇವಿಡ್ ವಾರ್ನರ್
3. ಜಾನಿ ಬೈರ್‌ಸ್ಟೋ
4. ವಕಾರ್ ಸಲಾಮ್‌ಖೈಲ್
5. ಅನ್ಮೋಲ್‌ಜೀತ್ ಸಿಂಗ್
6. ಯಶ್ ಧುಲ್
7. ಉತ್ಕರ್ಷ್ ಸಿಂಗ್
8. ಉಪೇಂದ್ರ ಯಾದವ್
9. ಲುವ್ನಿತ್ ಸಿಸೋಡಿಯಾ
10. ಕಾರ್ತಿಕ್ ತ್ಯಾಗಿ
11. ಪಿಯೂಷ್ ಚಾವ್ಲಾ
12. ಶ್ರೇಯಸ್ ಗೋಪಾಲ್
ಪಂಜಾಬ್‌ಗೆ ಕನ್ನಡಿಗ
ವಿಜಯ್ ಕುಮಾರ್ ವೈಶಾಕ್ - 1.8 ಕೋಟಿ - ಪಂಜಾಬ್ ಕಿಂಗ್ಸ್ (ಕನ್ನಡಿಗ)
ವೈಭವ್ ಅರೋರಾ - 1.8 ಕೋಟಿ - ಕೋಲ್ಕತ್ತಾ ನೈಟ್ ರೈಡರ್ಸ್
ಯಶ್ ಠಾಕೂರ್ - 1.60 ಕೋಟಿ - ಪಂಜಾಬ್ ಕಿಂಗ್ಸ್
ಕಾರ್ತಿಕ್ ತ್ಯಾಗಿ - ಅನ್‌ಸೋಲ್ಡ್
ಸುಯಾಶ್ ಶರ್ಮಾ - 2.60 ಕೋಟಿ - ಆರ್ಸಿಬಿ
ಸಿಮರ್ಜಿತ್ ಸಿಂಗ್ - 1.5 ಕೋಟಿ - ಸನ್‌ರೈಸರ್ಸ್ ಹೈದರಾಬಾದ್
ಕರಣ್ ಶರ್ಮಾ - 50 ಲಕ್ಷ - ಮುಂಬೈ ಇಂಡಿಯನ್ಸ್
ಮಯಾಂಕ್ ಮಾರ್ಕಂಡೆ - 30 ಲಕ್ಷ - ಕೆಕೆಆರ್
ಪಿಯೂಷ್ ಚಾವ್ಲಾ - ಅನ್‌ಸೋಲ್ಡ್
ಮಾನವ್ ಸುತಾರ್ - 30 ಲಕ್ಷ - ಗುಜರಾತ್
ಶ್ರೇಯಸ್ ಗೋಪಾಲ್ - ಅನ್‌ಸೋಲ್ಡ್
ರಸಿಕ್ ದಾರ್ಗೆ 6 ಕೋಟಿ ಕೊಟ್ಟ ಆರ್ಸಿಬಿ
ಉತ್ಕರ್ಷ್ ಸಿಂಗ್ - ಅನ್‌ಸೋಲ್ಡ್
ಕುಮಾರ್ ಕುಷಾಗ್ರ - 65 ಲಕ್ಷ - ಗುಜರಾತ್ ಟೈಟಾನ್ಸ್
ರಾಬಿನ್ ಮಿಂಜ್ - 65 ಲಕ್ಷ - ಮುಂಬೈ ಇಂಡಿಯನ್ಸ್
ಅನೂಜ್ ರಾವತ್ - 30 ಲಕ್ಷ - ಗುಜರಾತ್ ಟೈಟಾನ್ಸ್
ಆರ್ಯನ್ ಜುಯಲ್ - 30 ಲಕ್ಷ - ರಾಜಸ್ಥಾನ್ ರಾಯಲ್ಸ್
ಉಪೇಂದ್ರ ಸಿಂಗ್ ಯಾದವ್ - ಅನ್‌ಸೋಲ್ಡ್
ಲವ್ನೀತ್ ಸಿಸೋಡಿಯಾ - ಅನ್‌ಸೋಲ್ಡ್
ವಿಷ್ಣು ವಿನೋದ್ - 95 ಲಕ್ಷ - ಪಂಜಾಬ್ ಕಿಂಗ್ಸ್
ರಸಿಕ್ ದಾರ್ - 6 ಕೋಟಿ - ಆರ್ಸಿಬಿ
ಆಕಾಶ್ ಮಧ್ವಾಲ್ - 1.2 - ರಾಜಸ್ಥಾನ್
ಮೋಹಿತ್ ಶರ್ಮಾ - 2.2 ಕೋಟಿ - ಡೆಲ್ಲಿ ಕ್ಯಾಪಿಟಲ್ಸ್
ಆರ್ಸಿಬಿ ಆಟಗಾರ ಗುಜರಾತ್ ಪಾಲು
ವಿಜಯ್ ಶಂಕರ್ - 1.50 ಕೋಟಿ- ಸಿಎಸ್‌ಕೆ
ಮಹಿಪಾಲ್ ಲೊಮ್ರೋರ್ - 1.7 ಕೋಟಿ - ಗುಜರಾತ್ ಟೈಟಾನ್ಸ್ (ಮೊದಲು ಆರ್ಸಿಬಿಯಲ್ಲಿದ್ದರು)
ಅಶುತೋಶ್ ಶರ್ಮಾ - 3.8 ಕೋಟಿ - ಡೆಲ್ಲಿ ಕ್ಯಾಪಿಟಲ್ಸ್
ಸಮದ್ಗೂ ಜಾಕ್ಪಾಟ್
ಅಬ್ದುಲ್ ಸಮದ್ - 4.20 ಕೋಟಿ - ಎಲ್ಎಸ್ಜಿ
ಹರ್ಪ್ರೀತ್ ಬ್ರಾರ್ - 1.50 ಕೋಟಿ - ಪಂಜಾಬ್
ನಮನ್ ಧೀರ್ಗೆ ಜಾಕ್ಪಾಟ್
ನಿಶಾಂತ್ ಸಿಂಧು - 30 ಲಕ್ಷ - ಗುಜರಾತ್ ಟೈಟಾನ್ಸ್
ಸಮೀರ್ ರಿಜ್ವಿ - 95 ಲಕ್ಷ - ಡೆಲ್ಲಿ ಕ್ಯಾಪಿಟಲ್ಸ್
ನಮನ್ ಧೀರ್ - 5.25 ಕೋಟಿ - ಮುಂಬೈ ಇಂಡಿಯನ್ಸ್
ಕನ್ನಡಿಗನಿಗೆ ಭರ್ಜರಿ ಮೊತ್ತ
ಅಂಗ್ಕ್ರಿಶ್ ರಘುವಂಶಿ - 3 ಕೋಟಿಗೆ ಕೆಕೆಆರ್ ಪಾಲು
ಕರುಣ್ ನಾಯರ್ - 50 ಲಕ್ಷ - ಡೆಲ್ಲಿ ಕ್ಯಾಪಿಟಲ್ಸ್
ಯಶ್ ಧುಲ್ - ಅನ್‌ಸೋಲ್ಡ್
ಅಭಿನವ್ ಮನೋಹರ್ - 3.20 ಕೋಟಿ ಸನ್‌ರೈಸರ್ಸ್ ಹೈದರಾಬಾದ್
ನೇಹಾಲ್ ವದೇರಾ ಪಂಜಾಬ್‌ಗೆ
ನೇಹಾಲ್ ವದೇರಾ - 4.20 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲು
ಅಥರ್ವ ಎಸ್ಆರ್ಹೆಚ್ಗೆ
ಅಥರ್ವ ಟೈಡೆ - 30 ಲಕ್ಷ - ಸನ್‌ರೈಸರ್ಸ್ ಹೈದರಾಬಾದ್
ಅನ್ಮೋಲ್ಪ್ರೀತ್ ಸಿಂಗ್ - 30 ಲಕ್ಷ ಅನ್‌ಸೋಲ್ಡ್
ವನಿಂದು ಹಸರಂಗ ರಾಜಸ್ಥಾನಕ್ಕೆ
ವನಿಂದು ಹಸರಂಗಗೆ 5.25 ಕೋಟಿ ರೂ. ಕೊಟ್ಟು ರಾಜಸ್ಥಾನ್ ರಾಯಲ್ಸ್ ಖರೀದಿ ಮಾಡಿದೆ. ಆರ್‌ಸಿಬಿ ತಂಡವು ಲಂಕಾ ಸ್ಪಿನ್ನರ್ ಖರೀದಿಗೆ ಆಸಕ್ತಿ ತೋರಲಿಲ್ಲ. ಅಫ್ಘಾನಿಸ್ತಾನ ಬೌಲರ್ ನೂರ್ ಅಹ್ಮದ್ ಭರ್ಜರಿ 10 ಕೋಟಿ ರೂಪಾಯಿಗೆ ಸಿಎಸ್‌ಕೆ ಸೇರಿಕೊಂಡಿದ್ದಾರೆ.
ಇಬ್ಬರು ಸ್ಪಿನ್ನರ್‌ಗಳ ಖರೀದಿ ಮಾಡಿದ ಎಸ್‌ಆರ್‌ಎಚ್
ಸ್ಪಿನ್ನರ್ ರಾಹುಲ್ ಚಹಾರ್ ಎಸ್‌ಆರ್‌ಎಚ್ ತಂಡಕ್ಕೆ 3.2 ಕೋಟಿ ರೂ.ಗೆ ಸೇಲ್ ಆಗಿದ್ದಾರೆ. ಆಡಂ ಜಂಪಾ ಕೂಡಾ 2.4 ಕೋಟಿಗೆ ತಂಡ ಸೇರಿಕೊಂಡಿದ್ದಾರೆ.
ಟ್ರೆಂಟ್ ಬೋಲ್ಟ್ ಮುಂಬೈಗೆ
ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೋಲ್ಟ್ 12.50 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ. ಲಂಕಾ ಸ್ಪಿನ್ನರ್ ಮಹೇಶ್ ತೀಕ್ಷಣ 4.40 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡಿದ್ದಾರೆ.
10.75 ಕೋಟಿಗೆ ಡೆಲ್ಲಿ ಪಾಲಾದ ನಟರಾಜನ್
ಭಾರಿ ಬಿಡ್ ವಾರ್ ನಡೆದು ಕೊನೆಗೂ 10.75 ಕೋಟಿಗೆ ವೇಗದ ಬೌಲರ್ ಟಿ ನಟರಾಜನ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.
ಜೋಫ್ರಾ ಆರ್ಚರ್‌ಗೆ 12.5 ಕೋಟಿ ಕೊಟ್ಟ ರಾಜಸ್ಥಾನ್
ಜೋಫ್ರಾ ಆರ್ಚರ್ 12.5 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾದರೆ, ಖಲೀಲ್ ಅಹ್ಮದ್ 4.80 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ.
ಆವೇಶ್ ಖಾನ್‌ಗೆ 9.75 ಕೋಟಿ
ಆವೇಶ್ ಖಾನ್ 9.75 ಕೋಟಿಗೆ ಲಕ್ನೋ ಪಾಲಾದರೆ, ಆನ್ರಿಚ್ ನಾರ್ತಜೆ 6.5 ಕೋಟಿಗೆ ಕೆಕೆಆರ್ ಪಾಲಾದರು.
ಜೋಶ್ ಹೇಜಲ್‌ವುಡ್‌ಗೆ 12.50 ಕೋಟಿ
ಆರ್‌ಸಿಬಿ ತಂಡವು ಆಸೀಸ್ ವೇಗಿ ಜೋಶ್ ಹೇಜಲ್‌ವುಡ್‌ಗೆ 12.50 ಕೋಟಿ ರೂ ಕೊಟ್ಟು ಖರೀದಿ ಮಾಡಿದೆ.
ಜಿತೇಶ್ ಶರ್ಮಾ ಶರ್ಮಾಗೆ 11 ಕೋಟಿ ರೂ ಸುರಿದ ಆರ್‌ಸಿಬಿ
ಭಾರತೀಯ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಶರ್ಮಾ ಖರೀದಿಗೆ ಆರ್‌ಸಿಬಿ ತಂಡ 7 ಕೋಟಿ ರೂ ಮಾಡಿತು. ಈ ವೇಳೆ ಪಂಜಾಬ್ ಕಿಂಗ್ಸ್ ಆರ್‌ಟಿಎಂ ಬಳಸಿತು. ಆದರೆ, 11 ಕೋಟಿಗೆ ಬಿಡ್ ಏರಿಸಿದ ಆರ್‌ಸಿಬಿ, ವಿಕೆಟ್ ಕೀಪರ್ ತೆಕ್ಕೆಗೆ ಹಾಕಿಕೊಂಡಿತು.
ಎಸ್‌ಆರ್‌ಎಚ್ ಸೇರಿದ ಇಶಾನ್ ಕಿಶನ್
ಇಶಾನ್ ಕಿಶನ್ ಖರೀದಿಗೆ ಭಾರಿ ಪೈಪೋಟಿ ಶುರುವಾಯ್ತು. ಮುಂಬೈ ಇಂಡಿಯನ್ಸ್ ಜೊತೆಗೆ ಡೆಲ್ಲಿ ಹಾಗೂ ಪಂಜಾಬ್ ತಂಡಗಳು ಕೂಡಾ ಬಿಡ್ ಮಾಡಿದವು. ಕೊನೆಗೆ ಮಧ್ಯಪ್ರವೇಶಿದ ಸನ್‌ರೈಸರ್ಸ್ ಹೈದರಾಬಾದ್ 11.25 ಕೋಟಿ ಕೊಟ್ಟು ಭಾರತೀಯ ವಿಕೆಟ್ ಕೀಪರ್ ಖರೀದಿ ಮಾಡಿದೆ.
ಕೆಕೆಆರ್ ಮರಳಿದ ರಹಮಾನುಲ್ಲಾ ಗುರ್ಬಾಜ್
ರಹಮಾನುಲ್ಲಾ ಗುರ್ಬಾಜ್ 2 ಕೋಟಿ ರೂ ಮೂಲ ಬೆಲೆಗೆ ಕೆಕೆಆರ್ ಪಾಲಾದರು.
11.50 ಕೋಟಿ ಕೊಟ್ಟು ಫಿಲ್ ಸಾಲ್ಟ್ ಖರೀದಿಸಿದ ಆರ್‌ಸಿಬಿ
ಫಿಲ್ ಸಾಲ್ಟ್ ಖರೀದಿಗೆ ಆರ್‌ಸಿಬಿ ಆಸಕ್ತಿ ತೋರಿತು. ಇದೇ ವೇಳೆ ಕೆಕೆಆರ್ ಕೂಡಾ ತಂಡದ ಮಾಜಿ ಆಟಗಾರನನ್ನು ತೆಕ್ಕೆಗೆ ಹಾಕಿಕೊಳ್ಳಲು ಮುಂದಾಯಿತು. ಆದರೆ, ಕೊನೆಗೆ ಇಂಗ್ಲೆಂಡ್ ವಿಕೆಟ್ ಕೀಪರ್ ಅನ್ನು 11.50 ಕೋಟಿ ರೂ ಕೊಟ್ಟು ಆರ್‌ಸಿಬಿ ಖರೀದಿಸಿದೆ.
ಜಾನಿ ಬೇರ್‌ಸ್ಟೋ ಅನ್‌ಸೋಲ್ಡ್
ಕ್ವಿಂಟನ್ ಡಿಕಾಕ್ 3.6 ಕೋಟಿ ರೂ.ಗೆ ಕೆಕೆಆರ್ ಪಾಲಾದರೆ, ಜಾನಿ ಬೇರ್‌ಸ್ಟೋ ಅನ್‌ಸೋಲ್ಡ್ ಆಗಿದ್ದಾರೆ.
4.20 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾದ ಗ್ಲೆನ್ ಮ್ಯಾಕ್ಸ್‌ವೆಲ್
ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 2 ಕೋಟಿ ರೂಪಾಯಿ ಮೂಲಬೆಲೆಗೆ ಹರಾಜಿಗೆ ಬಂದರು. ಸನ್‌ರೈಸರ್ಸ್ ಹೈದರಾಬಾದ್ ಜೊತೆಗೆ ಪಂಜಾಬ್ ಕಿಂಗ್ಸ್ ಬಿಡ್ ಕೂಗಿತು. ಕೊನೆಗೆ 4.20 ಕೋಟಿಗೆ ಪಂಜಾಬ್ ಕಿಂಗ್ಸ್ ಖರೀದಿ ಮಾಡಿತು. ಆದರೆ, ಆರ್‌ಸಿಬಿ ತಂಡ ಅಲ್ಪಮೊತ್ತಕ್ಕೆ ಆರ್‌ಟಿಎಂ ಕಾರ್ಡ್ ಬಳಸಲು ಹಿಂದೆಸರಿಯಿತು.
ಮಿಚೆಲ್ ಮಾರ್ಷ್ 3.40 ಕೋಟಿಗೆ ಸೇಲ್
ಮಿಚೆಲ್ ಮಾರ್ಷ್ 3.40 ಕೋಟಿಗೆ ಎಲ್‌ಎಸ್‌ಜಿ ಪಾಲಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಆರ್‌ಟಿಎಂ ಕಾರ್ಡ್ ಬಳಸಲು ಹಿಂದೆ ಸರಿದಿದೆ.
ಮಾರ್ಕಸ್ ಸ್ಟೋಯ್ನಿಸ್ ಖರೀದಿಸಿದ ಪಂಜಾಬ್
ಆಸೀಸ್ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್, 11 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಆರ್‌ಟಿಎಂ ಕಾರ್ಡ್ ಬಳಸಲು ಎಲ್ಎಸ್‌ಜಿ ಹಿಂದೆ ಸರಿದ ಕಾರಣದಿಂದ ಪಂಜಾಬ್ ಆಲ್‌ರೌಂಡರ್ ತೆಕ್ಕೆಗೆ ಹಾಕಿಕೊಂಡಿದೆ.
23.75 ಕೋಟಿ ಪಡೆದ ವೆಂಕಟೇಶ್ ಅಯ್ಯರ್
ಕೆಕೆಆರ್ ಮಾಜಿ ಆಲ್‌ರೌಂಡರ್ 2 ಕೋಟಿ ರೂ ಮೂಲ ಬೆಲೆಯಿಂದ ಭಾರಿ ಮೊತ್ತಕ್ಕೆ ಬಿಡ್ ಆದರು. ಕೆಕೆಆರ್ ಜೊತೆಗೆ ಆರ್‌ಸಿಬಿ ತಂಡ ಕೂಡಾ ಭಾರಿ ಬೆಲೆ ಕೊಡಲು ಮುಂದಾಯ್ತು. ಭಾರಿ ಬಿಡ್ ವಾರ್ ನಡುವೆಯೂ ಕೆಕೆಆರ್ 23.75 ಕೋಟಿ ರೂಪಾಯಿ ಕೊಟ್ಟು ತನ್ನ ಆಟಗಾರನ್ನು ತಂಡದಲ್ಲೇ ಉಳಿಸಿಕೊಂಡಿತು.
ಆರ್ ಅಶ್ವಿನ್ ಮರಳಿ ಖರೀದಿ ಮಾಡಿದ ಸಿಎಸ್‌ಕೆ
ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಖರೀದಿಗೆ ಸಿಎಸ್‌ಕೆ ಹಾಗೂ ಲಕ್ನೋ ಪೈಪೋಟಿಗೆ ಇಳಿದವು. ಇದರೊಂದಿಗೆ ಆರ್‌ಸಿಬಿ ಮತ್ತು ರಾಯಲ್ಸ್ ಕೂಡಾ ಕೈಜೋಡಿಸಿತು. ಕೊನೆಗೆ 9.75 ಕೋಟಿ ರೂಪಾಯಿ ಬೆಲೆಯೊಂದಿಗೆ ಸಿಎಸ್‌ಕೆ ತಂಡ ತನ್ನ ಮಾಜಿ ಆಟಗಾರನನ್ನು ಖರೀದಿಸಿತು.
ರಚಿನ್ ರವೀಂದ್ರ ಉಳಿಸಿಕೊಂಡ ಸಿಎಸ್‌ಕೆ
ರಚಿನ್ ರವೀಂದ್ರ ಅವರಿಗೆ 3.20 ಕೋಟಿಗೆ ಪಂಜಾಬ್ ಕಿಂಗ್ಸ್ ಬಿಡ್ ಮಾಡಿತು. ಸಿಎಸ್‌ಕೆ ಆರ್‌ಟಿಎಂ ಕಾರ್ಡ್ ಬಳಸಿತು. 4 ಕೋಟಿಯೊಂದಿಗೆ ಆಟಗಾರನನ್ನು ತನ್ನಲ್ಲೇ ಉಳಿಸಿಕೊಂಡಿತು.
8 ಕೋಟಿಗೆ ಹೈದರಾಬಾದ್ ಪಾಲಾದ ಹರ್ಷಲ್ ಪಟೇಲ್
ಹರ್ಷಲ್ ಪಟೇಲ್ 2 ಕೋಟಿ ರೂ. ಮೂಲಬೆಲೆಯೊಂದಿಗೆ ಹರಾಜಿಗೆ ಬಂದರು. ಹೈದರಾಬಾದ್, ಗುಜರಾತ್ ಬಿಡ್‌ಗೆ ಇಳಿದವು. 6.75 ಕೋಟಿ ರೂಗೆ ಎಸ್‌ಆರ್‌ಎಚ್ ತಂಡ ಬಿಡ್ ಮುಗಿಸಿತು. ಈ ವೇಳೆ ಪಂಜಾಬ್ ಕಿಂಗ್ಸ್ ಆರ್‌ಟಿಎಂ ಕಾರ್ಡ್ ಬಳಸುವ ಅವಕಾಶ ಪಡೆಯಿತು. ಆದರೆ ಹೈದರಾಬಾದ್ ತಂಡ 8 ಕೋಟಿಗೆ ಆಟಗಾರನನ್ನು ತೆಕ್ಕೆಗೆ ಹಾಕಿಕೊಂಡಿತು.
RTM ಬಳಸಿ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಉಳಿಸಿಕೊಂಡ ಡೆಲ್ಲಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಆಸೀಸ್ ಸಿಡಿಗುಂಡು ಜೇಕ್ ಫ್ರೇಸರ್ ಮೆಕ್‌ಗುರ್ಕ್ ಒಂದು ಹಂತದಲ್ಲಿ 5.50 ಕೋಟಿಗೆ ಪಂಜಾಬ್ ಕಿಂಗ್ಸ್ ಬಿಡ್ ಮಾಡಿತು. ಈ ವೇಳೆ 9 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಟಿಎಂ ಕಾರ್ಡ್ ಬಳಸಿಕೊಂಡಿತು.
ಡೇವಿಡ್ ವಾರ್ನರ್ ಅನ್‌ಸೋಲ್ಡ್
2 ಕೋಟಿ ರೂ ಮೂಲಬೆಲೆಗೆ ಹರಾಜಿಗೆ ನಿಂತಿದ್ದ ಆಸೀಸ್ ಓಪನರ್ ಡೇವಿಡ್ ವಾರ್ನರ್ ಅನ್‌ಸೋಲ್ಡ್ ಆಗಿದ್ದಾರೆ.
ಸಿಎಸ್‌ಕೆಗೆ ರಾಹುಲ್ ತ್ರಿಪಾಠಿ
75 ಲಕ್ಷ ಮೂಲ ಬೆಲೆಗೆ ಹರಾಜಿಗೆ ನಿಂತಿದ್ದ ರಾಹುಲ್ ತ್ರಿಪಾಠಿ 3.4 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ.
ಡಿವೋನ್ ಕಾನ್ವೆ ಮರಳಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್
ಡಿವೋನ್ ಕಾನ್ವೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮರಳಿ ಪಡೆದಿದೆ. ಆಟಗಾರನಿಗೆ ತಂಡವು 6.25 ಕೋಟಿ ರೂಪಾಯಿ ಕೊಟ್ಟು ತಂಡಕ್ಕೆ ಮತ್ತೆ ಕರೆಸಿಕೊಂಡಿದೆ.
ಐಡೆನ್ ಮರ್ಕ್ರಾಮ್ 2 ಕೋಟಿಗೆ ಲಕ್ನೋ ಪಾಲು
ಎಸ್‌ಆರ್‌ಎಚ್ ಮಾಜಿ ಆಟಗಾರ ಐಡೆನ್ ಮರ್ಕ್ರಾಮ್, 2 ಕೋಟಿ ರೂ ಮೂಲ ಬೆಲೆಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ.
ದೇವದತ್ ಪಡಿಕ್ಕಲ್ ಅನ್‌ಸೋಲ್ಡ್
ಕನ್ನಡಿಗ ದೇವದತ್ ಪಡಿಕ್ಕಲ್ ಅನ್‌ಸೋಲ್ಡ್ ಆಗಿದ್ದಾರೆ. 2 ಕೋಟಿ ಮೂಲಬೆಲೆಗೆ ಯಾವುದೇ ತಂಡ ಖರೀದಿ ಮಾಡಲಿಲ್ಲ.
IPL 2025 Auction Latest Update: ಹ್ಯಾರಿ ಬ್ರೂಕ್ 6.25 ಕೋಟಿ ಗೆ ಸೇಲ್
ಹ್ಯಾರಿ ಬ್ರೂಕ್ 2 ಕೋಟಿ ರೂ ಮೂಲ ಬೆಲೆಗೆ ಸಿಎಸ್‌ಕೆ ಬಿಡ್ಡಿಂಗ್ ಆರಂಭಿಸಿತು. ಇದರೊಂದಿಗೆ ಪಂಜಾಬ್ ಕಿಂಗ್ಸ್ ತಂಡ ಕೂಡಾ ಹರಾಜು ಪೈಪೋಟಿಗೆ ಇಳಿಯಿತು. ಅತ್ತ ಡೆಲ್ಲಿ ಕೂಡಾ ಬಿಡ್ ವಾರ್ ಶುರು ಮಾಡಿತು. ಕೊನೆಗೆ ತಂಡವು 6.25 ಕೋಟಿ ರೂಪಾಯಿಗೆ ಬ್ರೂಕ್ ಖರೀದಿ ಮಾಡಿತು.
IPL 2025 Auction Latest Update: ಊಟದ ವಿರಾಮ
ಮಾರ್ಕ್ಯೂ ಆಟಗಾರರ ಮೊದಲ ಎರಡು ಸುತ್ತಿನ ಹರಾಜು ಪ್ರಕ್ರಿಯೆ ಮುಗಿದಿದೆ. ಈಗ ಊಟದ ವಿರಾಮ ನೀಡಲಾಗಿದ್ದು, ವಿರಾಮದ ನಂತರ ಹರಾಜು ಪ್ರಕ್ರಿಯೆ ಮುಂದುವರೆಯಲಿದೆ.
ಕೆಎಲ್ ರಾಹುಲ್ಗೆ ನಿರಾಸೆ
ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅವರಿಗೆ ಹರಾಜಿನಲ್ಲಿ ಭಾರಿ ನಿರಾಸೆಯಾಗಿದೆ. ಕೇವಲ 14 ಕೋಟಿಗೆ ಡೆಲ್ಲಿ ಪಾಲಾಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ರಾಹುಲ್ ಖರೀದಿಗೆ ತೀವ್ರ ಪೈಪೋಟಿ ನಡೆಸಿದವು. ಉಭಯ ತಂಡಗಳಿಗೂ ನಾಯಕತ್ವ ಬೇಕಿದ್ದ ಕಾರಣ ಆತನ ಖರೀದಿಗೆ ಮುಗಿಬಿದ್ದವು. ಬಳಿಕ ಡೆಲ್ಲ-ಸಿಎಸ್‌ಕೆ ಮಧ್ಯ ಪ್ರವೇಶಿಸಿದವು. ಇದರಿಂದ ಆರ್ಸಿಬಿ-ಲಕ್ನೋ ಬಿಡ್ನಿಂದ ಹಿಂದೆ ಸರಿದವು. ಬಳಿಕ ಸಿಎಸ್‌ಕೆ-ಡಿಸಿ ನಡುವೆ ಪೈಪೋಟಿ ಏರ್ಪಟ್ಟಿತು.
ಕೆಎಲ್ ರಾಹುಲ್ ನಾಯಕತ್ವ ದಾಖಲೆ
ಪಂದ್ಯಗಳು - 64
ಗೆಲುವು - 31
ಸೋಲು - 31
ಟೈ - 2
ಗೆಲುವಿನ ಶೇಕಡಾವಾರು - 50.00
======
ಐಪಿಎಲ್ನಲ್ಲಿ ಕೆಎಲ್ ರಾಹುಲ್ ಪ್ರದರ್ಶನ
ಪಂದ್ಯ - 132
ರನ್ - 4683
ಬೆಸ್ಟ್ - 132*
ಸರಾಸರಿ - 45.47
ಸ್ಟ್ರೈಕ್ರೇಟ್ - 134.61
50/100 - 37/04
4/6 - 400/187
ನಾಟೌಟ್ - 20
=====
2024ರ ಐಪಿಎಲ್ನಲ್ಲಿ ಕೆಎಲ್ ರಾಹುಲ್ ಪ್ರದರ್ಶನ
ಪಂದ್ಯ - 14
ರನ್ - 520
ಬೆಸ್ಟ್ - 82
ಸರಾಸರಿ - 37.14
ಸ್ಟ್ರೈಕ್ರೇಟ್ - 136.13
50/100 - 04/00
4/6 - 45/19
ನಾಟೌಟ್ - 0
ಲಿಯಾಮ್ ಲಿವಿಂಗ್‌ಸ್ಟನ್ ಆರ್ಸಿಬಿ
ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಅವರನ್ನು 8.75 ಕೋಟಿಗೆ ಆರ್ಸಿಬಿ ತಂಡ ಖರೀದಿತು. ಆರ್ಸಿಬಿ ಮೊದಲಿಗೆ ಬಿಡ್ ಆರಂಭಿಸಿತು. ಡೆಲ್ಲಿ ತೀವ್ರ ಪೈಪೋಟಿ ನೀಡಿತು. ಆದರೆ 6.75 ಕೋಟಿ ಇದ್ದಾಗ ಸಿಎಸ್‌ಕೆ ಮಧ್ಯ ಪ್ರವೇಶಿಸಿತು. ಆದರೂ ಆರ್ಸಿಬಿ ಪಟ್ಟು ಬಿಡಲಿಲ್ಲ. ಕೊನೆಗೆ 8.75 ಕೋಟಿಗೆ ತಮ್ಮ ತಂಡವನ್ನು ಸೇರಿಸಿಕೊಂಡಿತು.
ಮೊಹಮ್ಮದ್ ಸಿರಾಜ್ 12.25 ಕೋಟಿ
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ 12.25 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾದರು. ಈ ಹಿಂದೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಆರ್‌ಟಿಎಂ ಅವಕಾಶಕ್ಕೆ ಆರ್ಸಿಬಿ ನಿರಾಕರಿಸಿತು.
ಯುಜ್ವೇಂದ್ರ ಚಹಲ್ 18 ಕೋಟಿ
ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ಗೆ ಜಾಕ್ಪಾಟ್ ಹೊಡೆಯಿತು. 18 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಅವರು ಈ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದ ಆಡಿದ್ದರು. ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಮಾಜಿ ಆಟಗಾರ ಯುಜ್ವೇಂದ್ರ ಚಹಲ್ ಬಿಡ್ಡಿಂಗ್ 2 ಕೋಟಿಯಿಂದ ಆರಂಭವಾಯ್ತು. ಗುಜರಾತ್ ಮತ್ತು ಸಿಎಸ್‌ಕೆ ಬಿಡ್ ವಾರ್‌ಗೆ ಇಳಿಯಿತು. ಈ ನಡುವೆ ಎಲ್‌ಎಸ್‌ಜಿ ಮತ್ತು ಪಂಜಾಬ್ ಕಿಂಗ್ಸ್ ಕೂಡಾ ಅಖಾಡಕ್ಕೆ ಧುಮುಕಿತು. ಹರಾಜು 14 ಕೋಟಿ ದಾಟಿದ ಬಳಿಕ ಆರ್‌ಸಿಬಿ ಬಿಡ್‌ಗೆ ಬಂತು. ಒಮ್ಮೆ ಹರಾಜು ಕೂಗಿ ಬಿಡ್ಡಿಂಗ್ ನಿಲ್ಲಿಸಿತು. ಈ ವೇಳೆ ಎಸ್‌ಆರ್‌ಎಚ್ ಎಂಟ್ರಿ ಕೊಟ್ಟಿತು. ಪಂಜಾಬ್ ಮತ್ತು ಹೈದರಾಬಾದ್ ಬಿಡ್ ನಡೆಸುತ್ತಾ ಸಾಗಿತು. ಕೊನೆಗೆ ಪಂಜಾಬ್ ಕಿಂಗ್ಸ್ ತಂಡ 18 ಕೋಟಿಗೆ ಯೂಜಿ ಖರೀದಿಸಿತು.
ಡೇವಿಡ್ ಮಿಲ್ಲರ್ಗೆ 7.50 ಕೋಟಿ
ಸೌತ್ ಆಫ್ರಿಕಾದ ಫಿನಿಷರ್ ಡೇವಿಡ್ ಮಿಲ್ಲರ್ ಅವರನ್ನು 7.50 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿತು.
ಡೇವಿಡ್ ಮಿಲ್ಲರ್ ಮೂಲಬೆಲೆ 1.50 ಕೋಟಿ ರೂಪಾಯಿಗೆ ಬಿಡ್‌ಗೆ ಬಂದರು. ಆರ್‌ಸಿಬಿ ತಂಡವು ಆರಂಭದಿಂದಲೇ ಮಿಲ್ಲರ್ ಖರೀದಿಗೆ ಆಸಕ್ತಿ ತೋರಿತು. ಈ ವೇಳೆ ಮಿಲ್ಲರ್ ಮಾಜಿ ತಂಡ ಗುಜರಾತ್ ಟೈಟಾನ್ಸ್ ಕೂಡಾ ಸಾಥ್ ನೀಡಿತು. ಅಷ್ಟರಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಬಿಡ್ ವಾರ್‌ಗೆ ಬಂತು. ದಕ್ಷಿಣ ಆಫ್ರಿಕಾ ಹಿಟ್ಟರ್ ಖರೀದಿಗೆ ತಂತ್ರ ರೂಪಿಸಿದ್ದ ಆರ್‌ಸಿಬಿ, ಬಿಡ್ ಮುಂದುವರೆಸುತ್ತಲೇ ಹೋಯ್ತು. ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ 7.50 ಕೋಟಿಗೆ ಖರೀದಿ ಮಾಡಿತು.
ಮೊಹಮ್ಮದ್ ಶಮಿ 10 ಕೋಟಿ
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ 10 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ.
ರಿಷಭ್ ಪಂತ್ 27 ಕೋಟಿ
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಬಹುನಿರೀಕ್ಷೆ ಹುಟ್ಟಿಸಿದ್ದ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, 27 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಸೇಲ್ ಆದರು. ಕೆಲವೇ ನಿಮಿಷಗಳಲ್ಲಿ 26.75 ಕೋಟಿಗೆ ಸೇಲ್ ಆಗಿದ್ದ ಅಯ್ಯರ್ ದಾಖಲೆಯನ್ನು ಮುರಿದರು. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದರು. ಆದರೆ ಅವರ ನಾಯಕತ್ವದಲ್ಲಿ ಡೆಲ್ಲಿ ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಪಂತ್ ಖರೀದಿಗೆ ಆರ್ಸಿಬಿ ಮತ್ತು ಎಲ್ಎಸ್ಜಿ ತಂಡಗಳು ಮುಗಿಬಿದ್ದವು. ಇವುಗಳಿಗೆ ಠಕ್ಕರ್ ಕೊಡಲು ಸನ್‌ರೈಸರ್ಸ್ ಹೈದರಾಬಾದ್ ಮಧ್ಯೆ ಪ್ರವೇಶಿಸಿತು. ಐಪಿಎಲ್ ಹರಾಜು ಇತಿಹಾಸದಲ್ಲಿ 20 ಕೋಟಿ ದಾಟಿದ ಭಾರತದ ಎರಡನೇ ಆಟಗಾರ ರಿಷಭ್ ಪಂತ್. ಅಯ್ಯರ್ ಮೊದಲ ಆಟಗಾರ.
ಐಪಿಎಲ್ನಲ್ಲಿ ಪಂತ್ ಪ್ರದರ್ಶನ
ಪಂದ್ಯ - 111
ರನ್ - 3284
ಬೆಸ್ಟ್ - 128*
ಸರಾಸರಿ - 35.31
ಸ್ಟ್ರೈಕ್ರೇಟ್ - 148.93
50/100 - 18/01
4/6 - 296/154
ನಾಟೌಟ್ - 17
ಡೆಲ್ಲಿ ಪಾಲಾದ ಮಿಚೆಲ್ ಸ್ಟಾರ್ಕ್
ಕಳೆದ ವರ್ಷದ ಮಿನಿ ಹರಾಜಿನಲ್ಲಿ ದಾಖಲೆಯ 24.75 ಕೋಟಿಗೆ ಕೆಕೆಆರ್ ತಂಡಕ್ಕೆ ಬಿಕರಿಯಾಗಿದ್ದ ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಈ ಬಾರಿ 11.75 ಕೋಟಿಗೆ ಡೆಲ್ಲಿ ಪಾಲಾಗಿದ್ದಾರೆ.
2024ರ ಐಪಿಎಲ್ನಲ್ಲಿ ಮಿಚೆಲ್ ಸ್ಟಾರ್ಕ್ ಪ್ರದರ್ಶನ
ಪಂದ್ಯ - 14
ವಿಕೆಟ್ - 17
ಬೆಸ್ಟ್ - 4/33
ಎಕಾನಮಿ - 10.61
ಜೋಸ್ ಬಟ್ಲರ್ಗೆ 15.75 ಕೋಟಿ
ಇಂಗ್ಲೆಂಡ್ ತಂಡದ ಆಟಗಾರ ಜೋಸ್ ಬಟ್ಲರ್ 15.75 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾದರು.
ಶ್ರೇಯಸ್ ಅಯ್ಯರ್ ದಾಖಲೆ
ಭಾರತ ತಂಡದ ಶ್ರೇಯಸ್ ಅಯ್ಯರ್ ಅವರನ್ನು ಬರೋಬ್ಬರಿ 26.75 ಕೋಟಿ ನೀಡಿ ಪಿಬಿಕೆಸ್ ತಂಡವು ಖರೀದಿಸಿದೆ. ಹರಾಜಿಗೂ ಮುನ್ನ ನಿರೀಕ್ಷೆ ಹುಟ್ಟಿಸಿದ್ದ ಆಟಗಾರ ಅಯ್ಯರ್. 2024ರ ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ್ದ ಅಯ್ಯರ್ ನಾಯಕನಾಗಿ ಉತ್ತಮ ದಾಖಲೆ ಹೊಂದಿದ್ದಾರೆ. ಇದೇ ಕಾರಣಕ್ಕೆ ಕೆಕೆಆರ್ ಅವರ ಖರೀದಿಗೆ ಮತ್ತೊಮ್ಮೆ ಒಲವು ತೋರಿತು. ಹೀಗಾಗಿ ಬಿಡ್ ಆರಂಭಿಸಿತು. ಬಳಿಕ ಪಂಜಾಬ್, ಡೆಲ್ಲಿ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತು. 10 ಕೋಟಿ ಸಮೀಪಿಸಿತ್ತಿದ್ದಂತೆ ಕೆಕೆಆರ್ ಬಿಡ್ ನಿಲ್ಲಿಸಿತು. ಆದರೆ ಪಂಜಾಬ್, ಡೆಲ್ಲಿ ಮಧ್ಯೆ ಪೈಪೋಟಿ ತೀವ್ರಗೊಂಡಿತು. ಹರಾಜಿನಲ್ಲಿ 20 ಕೋಟಿ ದಾಟಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅಲ್ಲದೆ ಹರಾಜು ಇತಿಹಾಸದಲ್ಲಿ 24.75 ಕೋಟಿಗೆ ಸೇಲ್ ಆಗಿದ್ದ ಮಿಚೆಲ್ ಸ್ಟಾರ್ಕ್ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ಪ್ರದರ್ಶನ
ಪಂದ್ಯ - 115
ರನ್ - 3127
ಬೆಸ್ಟ್ - 96
ಸರಾಸರಿ - 32.24
ಸ್ಟ್ರೈಕ್ರೇಟ್ 127.48
4/6 - 271/113
ನಾಟೌಟ್ - 18
2024ರ ಐಪಿಎಲ್ನಲ್ಲಿ ಅಯ್ಯರ್ ಪ್ರದರ್ಶನ
ಪಂದ್ಯ - 14
ರನ್ - 351
ಬೆಸ್ಟ್ - 58*
ಸರಾಸರಿ - 39.00
ಸ್ಟ್ರೈಕ್ರೇಟ್ - 146.86
4/6 - 34/14
ನಾಟೌಟ್ - 5
ಕಗಿಸೋ ರಬಾಡ ಗುಜರಾತ್ ಪಾಲು
ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡ 10.75 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾದರು.
ಅರ್ಷದೀಪ್ ಸಿಂಗ್ಗೆ 18 ಕೋಟಿ
ಹರಾಜಿಗೆ ಬಂದ ಮೊದಲ ಆಟಗಾರ ವೇಗಿ ಅರ್ಷದೀಪ್ ಸಿಂಗ್ 18 ಕೋಟಿಗೆ ತಂಡಕ್ಕೆ ಖರೀದಿಯಾದರು. ಅರ್ಷದೀಪ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಬಿಡ್ ಆರಂಭಿಸಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತೀವ್ರ ಪೈಪೋಟಿ ನೀಡಿತು. 6 ಕೋಟಿ ದಾಟಿದ ಬಳಿಕ ಗುಜರಾತ್ ಟೈಟಾನ್ಸ್ ಮಧ್ಯೆ ಪ್ರವೇಶಿಸಿತು. ಬಳಿಕ ಆರ್ಸಿಬಿ, ರಾಜಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ ನಡುವೆ ಪೈಪೋಟಿ ನಡೆಯಿತು. ಮೂಲಬೆಲೆ 2 ಕೋಟಿ ಇದ್ದದ್ದು18 ಕೋಟಿಗೆ ಸೇಲ್ ಆದರು. ಆರ್‌ಟಿಎಂ ಮೂಲಕ ಪಂಜಾಬ್ ಪಾಲಾದರು.
ಅರ್ಷದೀಪ್ ಸಿಂಗ್ ಮೊದ ಆಟಗಾರ
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಡ್‌ಗೆ ಬಂದ ಮೊದಲ ಆಟಗಾರ ಭಾರತ ತಂಡದ ವೇಗಿ ಅರ್ಷದೀಪ್ ಸಿಂಗ್.
ಐಪಿಎಲ್ ಮೆಗಾ ಹರಾಜು ಆರಂಭ
ಐಪಿಎಲ್ ಮೆಗಾ ಹರಾಜು ಆರಂಭವಾಗಿದೆ. ಎಲ್ಲಾ ತಂಡಗಳು ತಮ್ಮ ನೆಚ್ಚಿನ ಆಟಗಾರರ ಖರೀದಿಗೆ ಸಜ್ಜಾಗಿವೆ. ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಎಲ್ಲಾ ತಂಡಗಳಿಗೆ ಸ್ವಾಗತ ಕೋರಿದರು. ಅಲ್ಲದೆ, ಆಟಗಾರರಿಗೆ ಶುಭ ಕೋರಿದ್ದಾರೆ.
IPL 2025 Auction Live Updates: ಮಾರ್ಕ್ಯೂ ಪಟ್ಟಿಯಲ್ಲಿರುವ ಆಟಗಾರರು
ಮೊದಲ ಗುಂಪಿನಲ್ಲಿ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಜೋಸ್ ಬಟ್ಲರ್, ಕಗಿಸೊ ರಬಾಡ ಮತ್ತು ಮಿಚೆಲ್ ಸ್ಟಾರ್ಕ್ ಇದ್ದಾರೆ. ಕೆಎಲ್ ರಾಹುಲ್, ಯಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಡೇವಿಡ್ ಮಿಲ್ಲರ್ ಮಾರ್ಕ್ಯೂ ಸೆಟ್ 2ರ ಭಾಗವಾಗಿದ್ದಾರೆ. ಮಾರ್ಕ್ಯೂ ಸೆಟ್ ಮುಗಿದ ನಂತರ, ಹರಾಜು ಪ್ರಕ್ರಿಯೆಯ ಮೊದಲ ದಿನದಂದು ಊಟದ ವಿರಾಮ ಇರುತ್ತೆ.
IPL 2025 Auction Live Updates: ರಿಷಭ್ ಪಂತ್ ಮೇಲೆ ಕಣ್ಣಿಟ್ಟ ಪಂಜಾಬ್
ಪಂಜಾಬ್ ಕಿಂಗ್ಸ್ ತಂಡದ ಮೆಂಟರ್ ಕಂ ಕೋಚ್ ರಿಕ್ಕಿ ಪಾಟಿಂಗ್ ರಿಷಭ್ ಪಂತ್ ಅವರನ್ನು ಹರಾಜಿನಲ್ಲಿ ಖರೀದಿಸುವ ಬಗ್ಗೆ ಫ್ರಾಂಚೈಸಿಯೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ ರಿಷಭ್ ಪಂತ್, ಕೆಎಲ್ ರಾಹುಲ್ ಸೇರಿದಂತೆ ಕೆಲವು ಆಟಗಾರರು ಭಾರಿ ಮೊತ್ತಕ್ಕೆ ತಂಡಗಳ ಪಾಲಾಗುವ ಸಾಧ್ಯತೆ ಇದೆ.
IPL 2025 Auction Live Updates: ಕಳೆದ ಹರಾಜಿನಲ್ಲಿ ದಾಖಲೆ ಬರೆದಿದ್ದ ಸ್ಟಾರ್ಕ್
ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ದಾಖಲೆ ಬರೆದಿದ್ದರು. ಕೋಲ್ಕತ್ತ ನೈಟ್ ರೈಡರ್ಸ್ ತಂಡ ಇವರನ್ನು 24.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ ಮಿಚೆಲ್ ಸ್ಟಾರ್ಕ್ 2024ರ ಐಪಿಎಲ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
IPL 2025 Auction Live Updates: ಹೇಗಿರುತ್ತೆ ಹರಾಜು ಪ್ರಕ್ರಿಯೆ
18ನೇ ಆವೃತ್ತಿಯ ಐಪಿಎಲ್ ಟೂರ್ನಿಗಾಗಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಮೊದಲು ಕ್ಯಾಪ್ಡ್ ಆಟಗಾರರನ್ನು ಪರಿಗಣಿಸಲಾಗುತ್ತದೆ. ಇದರಲ್ಲಿ ಕ್ಯಾಪ್ಡ್ ಆಟಗಾರರನ್ನು ಬ್ಯಾಟರ್ ಗಳು, ಸೀಮರ್ ಗಳು, ವಿಕೆಟ್ ಕೀಪರ್ ಗಳು ಹಾಗೂ ಆಲ್ ರೌಂಡರ್ ಗಳು ಎಂದು ವರ್ಗೀಕರಿಸಲಾಗಿದೆ. ಇದರ ನಂತರ ಅನ್‌ಕ್ಯಾಪ್ ಆಟಗಾರರ ಹರಾಜು ನಡೆಯುತ್ತದೆ. ಮೊದಲ ಸುತ್ತಿನಲ್ಲಿ ಅನ್ ಸ್ಟೋಲ್ಡ್ ಆದ ಕ್ಯಾಪ್ಡ್ ಆಟಗಾರರನ್ನು ಮೂರನೇ ಸುತ್ತಿಗೆ ಪರಿಗಣಿಸಲಾಗುತ್ತದೆ.
IPL 2025 Auction Live Updates: ಕನಿಷ್ಠ ಹಾಗೂ ಗರಿಷ್ಠ ಮೊತ್ತ
ಪಂಜಾಬ್ ಕಿಂಗ್ಸ್ ಬಳಿ ಗರಿಷ್ಠ ಪರ್ಸ್ ಮೊತ್ತವಿದೆ. ರಿಟೆನ್ಷನ್ ಬಳಿಕ ಉಳಿದ 110.5 ಕೋಟಿ ರೂ. ಮೊತ್ತದೊಂದಿಗೆ ತಂಡ ಹರಾಜಿನಲ್ಲಿ ಭಾಗಿಯಾಗುತ್ತಿದೆ. ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ಬಳಿ ಕನಿಷ್ಠ 41 ಕೋಟಿ ರೂಪಾಯಿ ಮೊತ್ತವಿದೆ.
IPL 2025 Auction Live Updates: ಪ್ರಾಂಚೈಸಿಗಳ ಉಳಿದಿರುವ ಮೊತ್ತ
ಪಂಜಾಬ್ ಕಿಂಕ್ಸ್ - 110.5 ಕೋಟಿ ರೂಪಾಯಿ
ರಾಜಸ್ಥಾನ್ ರಾಯಲ್ಸ್ - 41 ಕೋಟಿ ರೂಪಾಯಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು - 83 ಕೋಟಿ ರೂಪಾಯಿ
ಡೆಲ್ಲಿ ಕ್ಯಾಪಿಟಲ್ಸ್ - 73 ಕೋಟಿ ರೂಪಾಯಿ
ಲಕ್ನೋ ಸೂಪರ್ ಜೈಂಟ್ಸ್ - 69 ಕೋಟಿ ರೂಪಾಯಿ
ಗುಜರಾತ್ ಟೈಟಾನ್ಸ್ - 69 ಕೋಟಿ ರೂಪಾಯಿ
ಚೆನ್ನೈ ಸೂಪರ್ ಕಿಂಗ್ಸ್ - 55 ಕೋಟಿ ರೂಪಾಯಿ
ಕೋಲ್ಕತ್ತ ನೈಟ್ ರೈಡರ್ಸ್ - 51 ಕೋಟಿ ರೂಪಾಯಿ
ಮುಂಬೈ ಇಂಡಿಯನ್ಸ್ - 45 ಕೋಟಿ ರೂಪಾಯಿ
ಸೈನ್ ರೈಸರ್ಸ್ ಹೈದಾರಾಬಾದ್ - 45 ಕೋಟಿ ರೂಪಾಯಿ
IPL 2025 Auction Live Updates: ಲೈವ್ ಸ್ಟ್ರೀಮಿಂಗ್ ವಿವರ
ಐಪಿಎಲ್ 2025ರ ಹರಾಜು ಪ್ರಕ್ರಿಯೆಯು ಇಂದು ಮತ್ತು ನಾಳೆ ಮಧ್ಯಾಹ್ನ 3:30 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿ ಮೂಲಕ ಹರಾಜನ್ನು ಲೈವ್ ಆಗಿ ವೀಕ್ಷಿಸಬಹುದು. ಇದೇ ವೇಳೆ JioCinema ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
IPL 2025 Auction Live Updates: ಒಟ್ಟು 120 ಕೋಟಿ ರೂ ಪರ್ಸ್ ಮೊತ್ತ
ಐಪಿಎಲ್ ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಪ್ರತಿ ಫ್ರಾಂಚೈಸಿಗೆ ಒಟ್ಟು 120 ಕೋಟಿ ರೂಪಾಯಿ ಪರ್ಸ್ ಮೊತ್ತವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಈಗಾಗಲೇ ಆಟ ಗಾರರ ರಿಟೆನ್ಷನ್‌ಗಾಗಿ ತಂಡಗಳು ಹಣ ಬಳಸಿಕೊಂಡಿವೆ. ಉಳಿದ ಪರ್ಸ್‌ನೊಂದಿಗೆ, ಬಾಕಿ ಉಳಿದ ಸ್ಲಾಟ್‌ಗಳನ್ನು ತುಂಬಬೇಕಿದೆ.
IPL 2025 Auction Live Updates: ಯಾವ ತಂಡ ಎಷ್ಟು ಆಟಗಾರರನ್ನು ಉಳಿಸಿಕೊಂಡಿದೆ?
ಒಟ್ಟು ಹತ್ತು ತಂಡಗಳು ಈಗಾಗಲೇ 46 ಆಟಗಾರರನ್ನು ಉಳಿಸಿಕೊಂಡಿವೆ. ಇದರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೇವಲ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸುವ ಮೂಲಕ ಬರೋಬ್ಬರಿ 110.5 ಕೋಟಿ ರೂಪಾಯಿ ಪರ್ಸ್ ಮೊತ್ತದೊಂದಿಗೆ ಹರಾಜಿನಲ್ಲಿ ಭಾಗಿಯಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಮೂವರನ್ನು ಉಳಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ 4 ಆಟಗಾರರನ್ನು ಉಳಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಲಾ 6 ಆಟಗಾರರನ್ನು ರಿಟೈನ್ ಮಾಡಿಕೊಂಡರೆ, ಉಳಿದ ಐದು ತಂಡಗಳಾದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಲಾ ಐವರನ್ನು ಉಳಿಸಿಕೊಂಡಿವೆ.
IPL 2025 Auction Live Updates: ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಬಲ್ಲ ಆಟಗಾರರು
ನಿಸ್ಸಂದೇಹ ಎಂಬಂತೆ ಈ ಬಾರಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಮೇಲೆ ಭಾರಿ ನಿರೀಕ್ಷೆಗಳಿವೆ. ಕಳೆದ ಆವೃತ್ತಿಯಲ್ಲಿ ತಂಡಗಳ ನಾಯಕರಾಗಿದ್ದ ಆಟಗಾರರ ಮೇಲೆ ಫ್ರಾಂಚೈಸಿಗಳು ದೊಡ್ಡ ಮೊತ್ತ ಸುರಿಯಲು ಸಜ್ಜಾಗಿವೆ. ಇದೇ ವೇಳೆ ಅರ್ಷದೀಪ್ ಸಿಂಗ್, ಜಾಸ್ ಬಟ್ಲರ್, ಗ್ಲೆನನ್ ಮ್ಯಾಕ್ಸ್‌ವೆಲ್, ಡೇವಿಡ್ ಮಿಲ್ಲರ್, ಯುಜ್ವೇಂದ್ರ ಚಹಾಲ್ ಕೂಡಾ ಭಾರಿ ಬೆಲೆ ಪಡೆಯುವ ಸಾಧ್ಯತೆ ಇದೆ.
IPL 2025 Auction Live Updates: ಮಾರ್ಕ್ಯೂ ಪ್ಲೇಯರ್ ಎಂದರೇನು?
ಐಪಿಎಲ್ 2025ರ ಹರಾಜಿನ ಮೊದಲ ಎರಡು ಸೆಟ್‌ಗಳು ಆರು ಆಟಗಾರರನ್ನು ಒಳಗೊಂಡಿರುತ್ತವೆ. ಇವು ಹೆಚ್ಚು ಬೇಡಿಕೆಯಿರುವ ಬಲಿಷ್ಠ ಆಟಗಾರರ ಹೆಸರುಗಳಾಗಿವೆ. ಈ ಮಾರ್ಕ್ಯೂ ಆಟಗಾರರ ಹೆಸರು ಹರಾಜಿನ ಆರಂಭದಲ್ಲಿಯೇ ಬಿಡ್ಡಿಂಗ್‌ಗೆ ಬರಲಿದೆ. ಹೀಗಾಗಿ ಹರಾಜು ಪ್ರಕ್ರಿಯೆಯು ಆರಂಭದಲ್ಲೇ ಭಾರಿ ಕುತೂಹಲ ಮೂಡಿಸಲಿದೆ.
IPL 2025 Auction Live Updates: ಒಂದು ತಂಡದಲ್ಲಿ ಎಷ್ಟು ಆಟಗಾರರು ಇರಬೇಕು?
ಪ್ರತಿ ತಂಡ ಸ್ಕ್ವಾಡ್‌ನಲ್ಲಿ ಗರಿಷ್ಠ 25 ಆಟಗಾರರು ಇರಬಹುದು. ಅದರಲ್ಲಿ ಎಂಟು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿದೆ. ಹಾಗಂತಾ ಫ್ರಾಂಚೈಸಿಯು 25 ಆಟಗಾರರನ್ನು ಖರೀದಿಸಲೇಬೇಕೆಂದೇನಿಲ್ಲ. ಕನಿಷ್ಠ ತಂಡದ ಗಾತ್ರ 18 ಆಟಗಾರರು. ಹೀಗಾಗಿ ಮೊದಲ 18 ಖರೀದಿಗಳೊಂದಿಗೆ ತಂಡಗಳು ಸಂತೃಪ್ತರಾಗಿದ್ದರೆ, ಹೆಚ್ಚುವರಿ ಖರೀದಿಗೆ ಮುಂದಾಗಬೇಕಿಲ್ಲ.