logo
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2025 Auction: ಐಪಿಎಲ್ ಹರಾಜು ಮೊದಲ ದಿನ: 72 ಆಟಗಾರರಿಗೆ 467.95 ಕೋಟಿ ರೂಪಾಯಿ ಖರ್ಚು ಸೇರಿ ಪ್ರಮುಖ 10 ಅಂಶಗಳಿವು

IPL 2025 Auction: ಐಪಿಎಲ್ ಹರಾಜು ಮೊದಲ ದಿನ: 72 ಆಟಗಾರರಿಗೆ 467.95 ಕೋಟಿ ರೂಪಾಯಿ ಖರ್ಚು ಸೇರಿ ಪ್ರಮುಖ 10 ಅಂಶಗಳಿವು

Raghavendra M Y HT Kannada

Nov 25, 2024 12:33 PM IST

google News

ಐಪಿಎಲ್ ಹರಾಜಿನ ಮೊದಲ ದಿನ ಪ್ರಮುಖ ಹೈಲೈಟ್ಸ್ ಇಲ್ಲಿ ನೀಡಲಾಗಿದೆ

    • ಐಪಿಎಲ್ 2025 ಹರಾಜಿನ ಮೊದಲ ದಿನ ಹೇಗಿತ್ತು, ಯಾವ ಆಟಗಾರರು ಯಾವ ತಂಡದ ಪಾಲಾಗಿದ್ದಾರೆ. ಅನ್ ಕ್ಯಾಪ್ಡ್ ಆಟಗಾರರಲ್ಲಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರರು, ಅತಿ ಹೆಚ್ಚು ಮೊತ್ತವನ್ನು ಪಡೆದ ಕ್ಯಾಪ್ಡ್ ಆಟಗಾರರು ಸೇರಿದಂತೆ ಮೊದಲ ದಿನದ ಹರಾಜಿನ ಪ್ರಮುಖ 10 ಅಂಶಗಳು ಇಲ್ಲಿವೆ. 
ಐಪಿಎಲ್ ಹರಾಜಿನ ಮೊದಲ ದಿನ ಪ್ರಮುಖ ಹೈಲೈಟ್ಸ್ ಇಲ್ಲಿ ನೀಡಲಾಗಿದೆ
ಐಪಿಎಲ್ ಹರಾಜಿನ ಮೊದಲ ದಿನ ಪ್ರಮುಖ ಹೈಲೈಟ್ಸ್ ಇಲ್ಲಿ ನೀಡಲಾಗಿದೆ

2025ನೇ ಸಾಲಿನ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೊದಲ ದಿನ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಮೊದಲ ದಿನವೇ ಕೆಲವು ಆಟಗಾರರಿಗೆ ಬಂಪರ್ ಲಾಟರಿ ಹೊಡೆದಿದೆ. ಟೀಂ ಇಂಡಿಯಾದ ಬ್ಯಾಟರ್ ಕಂ ವಿಕೆಟ್ ಕೀಪರ್ ರಿಷಭ್ ಪಂತ್ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಂತ್ ಅವರ ನಂತರದ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಇದ್ದಾರೆ. ಶ್ರೇಯಸ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂಪಾಯಿಗೆ ಹರಾಜಿನಲ್ಲಿ ಖರೀದಿಸಿದೆ. ವೆಂಕಟೇಶ್ ಅಯ್ಯರ್ 23.75 ಕೋಟಿ ರೂಪಾಯಿಗೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾಗಿದ್ದಾರೆ. ಮೊದಲ ದಿನ ಹರಾಜು ಹೇಗಿತ್ತು, ಯಾವ ಫ್ರಾಂಚೈಸಿ ಬಳಿ ಇನ್ನೂ ಎಷ್ಟು ಮೊತ್ತ ಉಳಿದಿದೆ, ವಿದೇಶಿ ಹಾಗೂ ಸ್ವದೇಶಿಯ ಎಷ್ಟು ಆಟಗಾರರನ್ನು ಖರೀದಿಸಬಹುದು ಎಂಬಿತ್ಯಾದಿ ಸೇರಿದಂತೆ ಪ್ರಮುಖ 10 ಅಂಶಗಳನ್ನು ಇಲ್ಲಿ ನೀಡಲಾಗಿದೆ.

  1. ಮೊದಲ ದಿನದ ಹರಾಜಿನಲ್ಲಿ ಎಷ್ಟು ಆಟಗಾರರ ಖರೀದಿಗೆ ಎಷ್ಟು ಖರ್ಚಾಯಿತು:‌ ನವೆಂಬರ್ 24ರ ಭಾನುವಾರ ಸೌದಿ ಅರೇಬಿಯಾದ ಜೆಡ್ಡಾದಲ್ಲಿನ ನಡೆದ ಮೊದಲ ದಿನದ ಐಪಿಎಲ್ ಹರಾಜಿನಲ್ಲಿ ಒಟ್ಟು 72 ಆಟಗಾರರನ್ನು 10 ಫ್ರಾಂಚೈಸಿಗಳು ಖರೀದಿ ಮಾಡಿದ್ದು, ಇದಕ್ಕಾಗಿ 467.95 ಕೋಟಿ ರೂಪಾಯಿ ಖರ್ಚು ಮಾಡಿವೆ.
  2. ಮೊದಲ ದಿನ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಟಾಪ್ 5 ಆಟಗಾರರು
    ರಿಷಭ್ ಪಂತ್ - 27 ಕೋಟಿ ರೂ (ಲಕ್ನೋ ಸೂಪರ್ ಜೈಂಟ್ಸ್)
    ಶ್ರೇಯಸ್ ಅಯ್ಯರ್ - 26.75 ಕೋಟಿ ರೂ. (ಪಂಜಾಬ್ ಕಿಂಗ್ಸ್)
    ವೆಂಕಟೇಶ್ ಅಯ್ಯರ್ - 23.75 ಕೋಟಿ ರೂ. (ಕೋಲ್ಕತ್ತ ನೈಟ್ ರೈಡರ್ಸ್)
    ಅರ್ಷದೀಪ್ ಸಿಂಗ್ - 18 ಕೋಟಿ ರೂ. (ಪಂಜಾಬ್ ಕಿಂಗ್ಸ್)
    ಯುಜ್ವೇಂದ್ರ ಚಾಹಲ್ - 18 ಕೋಟಿ ರೂ. (ಪಂಜಾಬ್ ಕಿಂಗ್ಸ್)
  3. ಮೊದಲ ದಿನ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಟಾಪ್ 5 ಅನ್‌ಕ್ಯಾಪ್ಡ್ ಆಟಗಾರರು
    1. ರಸಿಖ್ ಸಲಾಮ್ ದಾರ್ - 6 ಕೋಟಿ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
    2. ನಮನ್ ಧೀರ್ - 5.25 ಕೋಟಿ ರೂ.(ಮುಂಬೈ ಇಂಡಿಯನ್ಸ್)
    3. ನೇಹಾಲ್ ವಧೇರಾ - 4.2 ಕೋಟಿ ರೂ. (ಪಂಜಾಬ್ ಕಿಂಗ್ಸ್)
    4. ಅಬ್ದುಲ್ ಸಮದ್ - 4.2 ಕೋಟಿ ರೂ. (ಲಕ್ನೋ ಸೂಪರ್ ಜೈಂಟ್ಸ್)
    5. ಅಶುತೋಷ್ ಶರ್ಮಾ - 3.8 ಕೋಟಿ ರೂ. (ಡೆಲ್ಲಿ ಕ್ಯಾಪಿಟಲ್ಸ್)
  4. ಮೊದಲ ದಿನದ ಹರಾಜು ಬಳಿಕ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ:‌
    ರಾಯಲ್ ಚಾಲೆಂಜರ್ಸ್ ಬೆಂಗಳೂರು - 30.65 ಕೋಟಿ ರೂಪಾಯಿ
    ಮುಂಬೈ ಇಂಡಿಯನ್ಸ್ - 26.10 ಕೋಟಿ ರೂಪಾಯಿ
    ಪಂಜಾಬ್ ಕಿಂಗ್ಸ್ - 22.50 ಕೋಟಿ ರೂಪಾಯಿ
    ಗುಜರಾತ್ ಟೈಟಾನ್ಸ್ - 17.50 ಕೋಟಿ ರೂಪಾಯಿ
    ರಾಜಸ್ಥಾನ್ ರಾಯಲ್ಸ್ - 17.35 ಕೋಟಿ ರೂಪಾಯಿ
    ಚೆನ್ನೈ ಸೂಪರ್ ಕಿಂಗ್ಸ್ - 15.60 ಕೋಟಿ ರೂಪಾಯಿ
    ಲಕ್ನೋ ಸೂಪರ್ ಜೈಂಟ್ಸ್ - 14.85 ಕೋಟಿ ರೂಪಾಯಿ
    ಡೆಲ್ಲಿ ಕ್ಯಾಪಿಟಲ್ಸ್ - 13.80 ಕೋಟಿ ರೂಪಾಯಿ
    ಕೋಲ್ಕತ್ತ ನೈಟ್ ರೈಡರ್ಸ್ - 10.05 ಕೋಟಿ ರೂಪಾಯಿ
    ಸನ್ ರೈಸರ್ಸ್ ಹೈದರಾಬಾದ್ - 5.15 ಕೋಟಿ ರೂಪಾಯಿ
  5. ಮೊದಲ ದಿನದ ಹರಾಜು ಬಳಿಕ ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ
    ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿದೇಶಿ ಆಟಗಾರರು-3, ಸ್ವದೇಶಿ ಆಟಗಾರರು-9
    ಮುಂಬೈ ಇಂಡಿಯನ್ಸ್: ವಿದೇಶಿ ಆಟಗಾರರು-1, ಸ್ವದೇಶಿ ಆಟಗಾರರು-9
    ಪಂಜಾಬ್ ಕಿಂಗ್ಸ್: ವಿದೇಶಿ ಆಟಗಾರರು-2, ಸ್ವದೇಶಿ ಆಟಗಾರರು-12
    ಗುಜರಾತ್ ಟೈಟಾನ್ಸ್: ವಿದೇಶಿ ಆಟಗಾರರು-3, ಸ್ವದೇಶಿ ಆಟಗಾರರು-14
    ರಾಜಸ್ಥಾನ್ ರಾಯಲ್ಸ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-11
    ಚೆನ್ನೈ ಸೂಪರ್ ಕಿಂಗ್ಸ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-12
    ಲಕ್ನೋ ಸೂಪರ್ ಜೈಂಟ್ಸ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-12
    ಡೆಲ್ಲಿ ಕ್ಯಾಪಿಟಲ್ಸ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-13
    ಕೋಲ್ಕತ್ತ ನೈಟ್ ರೈಡರ್ಸ್: ವಿದೇಶಿ ಆಟಗಾರರು-5, ಸ್ವದೇಶಿ ಆಟಗಾರರು-13
    ಸನ್ ರೈಸರ್ಸ್ ಹೈದರಾಬಾದ್: ವಿದೇಶಿ ಆಟಗಾರರು-4, ಸ್ವದೇಶಿ ಆಟಗಾರರು-13
  6. ಎರಡನೇ ದಿನದ (ನವೆಂಬರ್ 25, ಸೋಮವಾರ) ಹರಾಜಿಗೆ ಮೊದಲು ಬರಲಿರುವ ಆಟಗಾರರು
    ಮಯಾಂಕ್ ಅಗರ್ವಾಲ್ (ಭಾರತ) - ಮೂಲ ಬೆಲೆ 1 ಕೋಟಿ ರೂಪಾಯಿ
    ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ) - ಮೂಲ ಬೆಲೆ 2 ಕೋಟಿ ರೂಪಾಯಿ
    ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್) - ಮೂಲ ಬೆಲೆ 2 ಕೋಟಿ ರೂಪಾಯಿ
    ರೋವ್ಮನ್ ಪೊವೆಲ್ (ವೆಸ್ಟ್ ಇಂಡೀಸ್) - 1.5 ಕೋಟಿ ರೂಪಾಯಿ
    ಅಜಿಂಕ್ಯ ರಹಾನೆ (ಭಾರತ) - 1.5 ಕೋಟಿ ರೂಪಾಯಿ
    ಪೃಥ್ವಿ ಶಾ (ಭಾರತ) - 75 ಲಕ್ಷ ರೂಪಾಯಿ
  7. ಮೊದಲ ದಿನ ಹರಾಜಿನಲ್ಲಿ ಮೂಲ ಬೆಲೆ 2 ಕೋಟಿ ರೂಪಾಯಿ ಹೊಂದಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಅನ್ ಸೋಲ್ಡ್
  8. ಮೊದಲ ದಿನ ಹರಾಜಿಗೆ ಬಂದ ಕೊನೆಯ ಆಟಗಾರ, ಕನ್ನಡಿಗ ಶ್ರೇಯಸ್ ಗೋಪಾಲ್ ಅನ್ ಸೋಲ್ಡ್
  9. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳಲ್ಲಿ ಎರಡನೇ ಸ್ಥಾನದಲ್ಲಿರುವ ಪಿಯೂಷ್ ಚಾವ್ಲ ಅನ್ ಸೋಲ್ಡ್ ಆಗಿದ್ದಾರೆ.
  10. ಕನ್ನಡಿಗ ವೈಶಾಕ್ ವಿಜಯಕುಮಾರ್ ಅವರನ್ನು 1.8 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಆರ್ ಸಿಬಿ ಇವರನ್ನು ಆರ್ ಟಿಎಂ ಮಾಡಲು ಮನಸು ಮಾಡಲಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ