logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ಜೇಕ್​ ಫ್ರೇಸರ್ ಮೆಕ್​ಗುರ್ಕ್; ಈ ಸಾಧನೆಗೈದ ಮೊದಲ ಆಟಗಾರ

ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ಜೇಕ್​ ಫ್ರೇಸರ್ ಮೆಕ್​ಗುರ್ಕ್; ಈ ಸಾಧನೆಗೈದ ಮೊದಲ ಆಟಗಾರ

Prasanna Kumar P N HT Kannada

May 08, 2024 02:59 PM IST

google News

ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ‘ವೇಗ’ದೂತ ಜೇಕ್​ ಫ್ರೇಸರ್ ಮೆಕ್​ಗುರ್ಕ್; ಈ ಸಾಧನೆಗೈದ ಮೊದಲ ಆಟಗಾರ

    • Jake Fraser-Mcgurk : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೇಕ್​ ಫ್ರೇಸರ್ ಮೆಕ್​ಗುರ್ಕ್ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧ ವೇಗವಾಗಿ ಅರ್ಧಶತಕ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ವಿನೂತನ ದಾಖಲೆ ಬರೆದಿದ್ದಾರೆ.
ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ‘ವೇಗ’ದೂತ ಜೇಕ್​ ಫ್ರೇಸರ್ ಮೆಕ್​ಗುರ್ಕ್; ಈ ಸಾಧನೆಗೈದ ಮೊದಲ ಆಟಗಾರ
ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ‘ವೇಗ’ದೂತ ಜೇಕ್​ ಫ್ರೇಸರ್ ಮೆಕ್​ಗುರ್ಕ್; ಈ ಸಾಧನೆಗೈದ ಮೊದಲ ಆಟಗಾರ

2024ರ ಇಂಡಿಯನ್ ಪ್ರೀಮಿಯರ್​ ಲೀಗ್​​​ನಲ್ಲಿ (IPL 2024) ಅದ್ಭುತ ಫಾರ್ಮ್​ ಮುಂದುವರೆಸಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಜೇಕ್​ ಫ್ರೇಸರ್ ಮೆಕ್​ಗುರ್ಕ್ (Jake Fraser-Mcgurk)​ ಅವರು ಮತ್ತೊಂದು ಸ್ಫೋಟಕ ಅರ್ಧಶತಕ ಸಿಡಿಸಿ ವಿನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ತನ್ನ ಚೊಚ್ಚಲ ನಗದು ಸಮೃದ್ಧ ಲೀಗ್‌ನಲ್ಲಿ ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿರುವ ಮೆಕ್​​ಗುರ್ಕ್​, ಮೇ 7ರಂದು ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಕೇವಲ 19 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಜರುಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡಿಸಿ, ಭರ್ಜರಿ ಮೊತ್ತ ಕಲೆ ಹಾಕಿತು. ಪವರ್​​ಪ್ಲೇನಲ್ಲಿ ವಿನಾಶಕಾರಿ ಬ್ಯಾಟಿಂಗ್ ಮೂಲಕ ಬೌಲರ್​​ಗಳನ್ನು ಚೆಂಡಾಡಿದ ಜೇಕ್ ಫ್ರೇಸರ್​, 4ನೇ ಓವರ್​ನಲ್ಲಿ 28 ರನ್ ಬಾರಿಸಿದರು. ಆವೇಶ್ ಖಾನ್ ಅವರ ಬೌಲಿಂಗ್​​ನಲ್ಲಿ ನಾಲ್ಕು ಬೌಂಡರಿ, 2 ಸಿಕ್ಸರ್ ಸಿಡಿಸಿ ಕೇವಲ 19 ಎಸೆತಗಳಲ್ಲಿ 50ರ ಗಡಿ ದಾಟಿದರು. ಇದರೊಂದಿಗೆ ಇದೇ ಐಪಿಎಲ್​ನಲ್ಲಿ 3ನೇ ಬಾರಿಗೆ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ವೇಗದ ಅರ್ಧಶತಕ ಬಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಜೇಕ್​ ಫ್ರೇಸರ್ ಮೆಕ್​ ಐತಿಹಾಸಿಕ ದಾಖಲೆ

ಪಂದ್ಯದಲ್ಲಿ ಎದುರಿಸಿದ 20 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​​ ಸಹಿತ 50 ರನ್ ಸಿಡಿಸಿ ಔಟಾದ ಆಸ್ಟ್ರೇಲಿಯಾ ಯುವ ಆಟಗಾರ, ಕೇವಲ 7 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಐಪಿಎಲ್ ಇತಿಹಾಸದಲ್ಲಿಅತಿ ಹೆಚ್ಚು 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟು ಮೂರು ಬಾರಿ ಈ ಸಾಧನೆ ಮಾಡಿದ್ದಾರೆ. ಆದರೆ ಕೇವಲ 7 ಪಂದ್ಯಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷ.

ಆರ್​ಆರ್​ ವಿರುದ್ಧ 19 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ಫ್ರೇಸರ್ ಮೆಕ್‌ಗುರ್ಕ್, ಸನ್‌ರೈಸರ್ ಹೈದರಾಬಾದ್ (SRH) ಮತ್ತು ಮುಂಬೈ ಇಂಡಿಯನ್ಸ್ (MI) ವಿರುದ್ಧ ಕೇವಲ 15 ಎಸೆತಗಳಲ್ಲಿ ಎರಡು ಅರ್ಧ ಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೆಕ್‌ಗುರ್ಕ್ ಅವರು 20 ಎಸೆತಗಳಿಗಿಂತ ಕಡಿಮೆ ಎಸೆತಗಳಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.

7 ಆಟಗಾರರು 2 ಬಾರಿ ಈ ಸಾಧನೆ

ಮೆಕ್‌ಗುರ್ಕ್ ತಮ್ಮ ಐಪಿಎಲ್​​ ಚೊಚ್ಚಲ ಪಂದ್ಯದಲ್ಲಿ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 25 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಮೆಕ್‌ಗುರ್ಕ್ ಸೇರಿದಂತೆ ಒಟ್ಟು 7 ಆಟಗಾರರು 20 ಬಾಲ್‌ಗಿಂತ ಕಡಿಮೆ ಎಸೆತಗಳಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಅರ್ಧಶತಕ ಗಳಿಸಿದ್ದಾರೆ. ಆದರೆ, ಮೆಕ್‌ಗುರ್ಕ್ ಮಾತ್ರ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.

ಜೇಕ್ ಫ್ರೇಸರ್​ 3 ಬಾರಿ, ಸುನಿಲ್ ನರೇರ್, ಕೆಎಲ್ ರಾಹುಲ್, ಕಿರನ್ ಪೊಲಾರ್ಡ್, ನಿಕೋಲಸ್ ಪೂರನ್, ಯಶಸ್ವಿ ಜೈಸ್ವಾಲ್, ಟ್ರಾವಿಸ್ ಹೆಡ್ ತಲಾ ಎರಡು ಬಾರಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಫ್ರೇಸರ್-ಮೆಕ್‌ಗುರ್ಕ್ 20 ಎಸೆತಗಳಲ್ಲಿ 50 ರನ್ ಗಳಿಸಿ, ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್​ನಲ್ಲಿ ಔಟಾದರು. 22ರ ಹರೆಯದ ಆಟಗಾರನ ಬಿರುಸಿನ ಆರಂಭದಿಂದ ಡೆಲ್ಲಿ ತನ್ನ ಮೊದಲ 10 ಓವರ್​​ಗಳಲ್ಲಿ 115 ರನ್ ಗಳಿಸಲು ನೆರವಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ