ಜಿಯೋ ಸಿನಿಮಾದಲ್ಲಿ ಐಪಿಎಲ್ ಉಚಿತ ಲೈವ್ ಸ್ಟ್ರೀಮಿಂಗ್; 12 ಭಾಷೆಗಳಲ್ಲಿ ಕಾಮೆಂಟರಿ, ಕನ್ನಡ ವೀಕ್ಷಕ ವಿವರಣೆಕಾರರು ಇವರೇ
Mar 21, 2024 12:55 PM IST
ಜಿಯೋ ಸಿನಿಮಾದಲ್ಲಿ ಐಪಿಎಲ್ ಉಚಿತ ಲೈವ್ ಸ್ಟ್ರೀಮಿಂಗ್
- ಐಪಿಎಲ್ ಪಂದ್ಯಾವಳಿಯನ್ನು ತಮ್ಮದೇ ಭಾಷೆಗಳ ವೀಕ್ಷಕ ವಿವರಣೆಯೊಂದಿಗೆ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಸಂಪೂರ್ಣ ಟೂರ್ನಿಯನ್ನು ಇಂಗ್ಲಿಷ್, ಹಿಂದಿ ಮಾತ್ರವಲ್ಲದೆ ಕನ್ನಡ ಕಾಮೆಂಟರಿಯೊಂದಿಗೂ ವೀಕ್ಷಿಸಬಹುದು. ಒಟ್ಟು 12 ಭಾಷೆಗಳ ಕಾಮೆಂಟರಿಯೊಂದಿಗೆ ಜಿಯೋ ಸಿನೆಮಾದಲ್ಲಿ ಉಚಿತವಾಗಿ ಪಂದ್ಯ ಪ್ರಸಾರ ಮಾಡಲಾಗುತ್ತದೆ.
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ. ಇದೇ ವೇಳೆ ಪಂದ್ಯಾವಳಿಯ ಡಿಜಿಟಲ್ ಹಕ್ಕುಗಳನ್ನು ಜಿಯೋ ಸಿನಿಮಾ ತೆಕ್ಕೆಗೆ ಹಾಕಿಕೊಂಡಿದೆ. ಹೀಗಾಗಿ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಹಾಗೂ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದು. ಒಟ್ಟು 12 ಭಾಷೆಗಳಲ್ಲಿ ಜಿಯೋ ಸಿನಿಮಾದಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದ್ದು, ಮೊಬೈಲ್ ಮೂಲಕ ಸಂಪೂರ್ಣ ಉಚಿತವಾಗಿ ಪಂದ್ಯಾವಳಿಯನ್ನು ಆನಂದಿಸಬಹುದಾಗಿದೆ.
ವಿಶ್ವದ ಜನಪ್ರಿಯ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು, ತಮ್ಮದೇ ಭಾಷೆಗಳ ವೀಕ್ಷಕ ವಿವರಣೆಯೊಂದಿಗೆ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗಿದೆ. ಹೀಗಾಗಿ ಕಾಮೆಂಟರಿಗಾಗಿ ಕ್ರಿಕೆಟ್ ತಜ್ಞರ ಬಳಗವನ್ನು ಜಿಯೋ ಸಿನಿಮಾ ಹೆಸರಿಸಿದೆ. ಪಂದ್ಯಾವಳಿಯನ್ನು ಇಂಗ್ಲಿಷ್, ಹಿಂದಿ ಮಾತ್ರವಲ್ಲದೆ ಕನ್ನಡ ಕಾಮೆಂಟರಿಯೊಂದಿಗೂ ವೀಕ್ಷಿಸಬಹುದು. ಇದರೊಂದಿಗೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಗುಜರಾತಿ, ಭೋಜ್ಪುರಿ, ಪಂಜಾಬಿ, ಬಂಗಾಳಿ ಸೇರಿದಂತೆ 12 ಭಾಷೆಗಳಲ್ಲಿ ಜಿಯೋ ಸಿನೆಮಾದಲ್ಲಿ ಉಚಿತವಾಗಿ ಪ್ರಸಾರ ಮಾಡಲಾಗುತ್ತಿದೆ.
ಐಪಿಎಲ್ ಚಾಂಪಿಯನ್ ಶೇನ್ ವ್ಯಾಟ್ಸನ್, ನ್ಯೂಜಿಲ್ಯಾಂಡ್ ಮಾಜಿ ಕೋಚ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಕಾಮೆಂಟರಿ ಪ್ಯಾನೆಲ್‌ನಲ್ಲಿ ಇರಲಿದ್ದಾರೆ. ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಟ್ರೋಫಿ ಗೆದ್ದ ಆಟಗಾರ ಶೆನ್ ವ್ಯಾಟ್ಸನ್, ಕಾಮೆಂಟರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ | ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ರೋಹಿತ್ ಕೆಳಗಿಳಿಸಲು ಕಾರಣವೇನು; ಪ್ರಶ್ನೆಗೆ ಉತ್ತರಿಸದೆ ಮೌನ ವಹಿಸಿದ ಹಾರ್ದಿಕ್, ಬೌಚರ್
ವಿಶ್ವದ ಅತ್ಯಂತ ಸ್ಫೋಟಕ ಆರಂಭಿಕ ಆಟಗಾರರಲ್ಲಿ ಒಬ್ಬರಾದ ಭಾರತದ ವೀರೇಂದ್ರ ಸೆಹ್ವಾಗ್ ಅವರು ಜಿಯೋ ಸಿನೆಮಾದಲ್ಲಿ ಹೊಸದಾಗಿ ಪರಿಚಯಿಸಲಾದ ಹರಿಯಾನ್ವಿ ಭಾಚೆಯಲ್ಲಿ ಕಾಮೆಂಟರಿ ಮಾಡಲಿದ್ದಾರೆ. ಅಜಯ್ ಜಡೇಜಾ ಗುಜರಾತಿ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲಿದ್ದಾರೆ. 2012ರ ಐಪಿಎಲ್ ಫೈನಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮನ್ವಿಂದರ್ ಬಿಸ್ಲಾ ಕೂಡ ಸೆಹ್ವಾಗ್ ಅವರೊಂದಿಗೆ ಹರಿಯಾನ್ವಿ ಕಾಮೆಂಟರಿಯಲ್ಲಿ ಸಾಥ್ ನೀಡಲಿದ್ದಾರೆ.
ವೀಕ್ಷಕ ವಿವರಣೆಕಾರರ ವಿವರ
ಕನ್ನಡ: ಎಸ್ ಅರವಿಂದ್, ಅಮಿತ್ ವರ್ಮಾ, ವೇದಾ ಕೃಷ್ಣಮೂರ್ತಿ, ಎಚ್ ಎಸ್ ಶರತ್, ಭರತ್ ಚಿಪ್ಲಿ, ಸುಜಯ್ ಶಾಸ್ತ್ರಿ, ರಾಘವೇಂದ್ರ ರಾಜ್, ಸುಮಂತ್ ಭಟ್, ರೀನಾ ಡಿಸೋಜಾ, ಕೆ ಶ್ರೀನಿವಾಸ್ ಮೂರ್ತಿ, ವಿ ಕೌಶಿಕ್, ಅಂಕಿತಾ ಅಮರ್.
ಇಂಗ್ಲಿಷ್: ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಶೇನ್ ವ್ಯಾಟ್ಸನ್, ಇಯಾನ್ ಮಾರ್ಗನ್, ಬ್ರೆಟ್ ಲೀ, ಮೈಕ್ ಹೆಸ್ಸನ್, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಗ್ರೇಮ್ ಸ್ಮಿತ್, ಸ್ಕಾಟ್ ಸ್ಟೈರಿಸ್, ಸಂಜನಾ ಗ್ಯಾನೆಸನ್, ಸುಹೈಲ್ ಚಂದೋಕ್.
ಹಿಂದಿ: ಜಹೀರ್ ಖಾನ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ, ಆಕಾಶ್ ಚೋಪ್ರಾ, ನಿಖಿಲ್ ಚೋಪ್ರಾ, ಸಬಾ ಕರೀಮ್, ಅನಂತ್ ತ್ಯಾಗಿ, ರಿಧಿಮಾ ಪಾಠಕ್.
ತೆಲುಗು: ಹನುಮ ವಿಹಾರಿ, ವೆಂಕಟಪತಿ ರಾಜು, ಅಕ್ಷತ್ ರೆಡ್ಡಿ, ಆಶಿಶ್ ರೆಡ್ಡಿ, ಸಂದೀಪ್ ಬವನಕ, ಕಲ್ಯಾಣ್ ಕೊಲ್ಲರಾಪು, ಆರ್‌ಜೆ ಹೇಮಂತ್, ಪ್ರತ್ಯೂಷಾ, ಆರ್‌ಜೆ ಕೌಶಿಕ್, ಸುನೀತಾ ಆನಂದ್.
ಮಲಯಾಳಂ: ಸಚಿನ್ ಬೇಬಿ, ರೋಹನ್ ಪ್ರೇಮ್, ರೈಫಿ ಗೊಮೆಜ್, ಸೋನಿ ಚೆರುವತ್ತೂರ್, ಮನು ಕೃಷ್ಣನ್, ವಿಎ ಜಗದೀಶ್, ಎಂಡಿ ನಿದೀಶ್, ಅಜು ಜಾನ್ ಥಾಮಸ್, ರೇಣು ಜೋಸೆಫ್, ಬಿನೋಯ್.
ತಮಿಳು: ಅಭಿನವ್ ಮುಕುಂದ್, ರಾವ್ ಶ್ರೀಧರ್, ಸುಧೀರ್ ಶ್ರೀನಿವಾಸನ್, ಭಗವತಿ ಪ್ರಸಾದ್, ವಿದ್ಯುತ್ ಶಿವರಾಮಕೃಷ್ಣನ್, ಬಾಬಾ ಅಪ್ರಜಿತ್, ಬಾಬಾ ಇಂದ್ರಜಿತ್, ಅನಿರುದ್ಧ ಶ್ರೀಕಾಂತ್, ಕೆಬಿ ಅರುಣ್ ಕಾರ್ತಿಕ್, ಸಮೀನಾ ಅನ್ವರ್, ಅಶ್ವಥ್ ಬೊಬೊ.
ಮರಾಠಿ: ಕೇದಾರ್ ಜಾಧವ್, ಧವಳ್ ಕುಲಕರ್ಣಿ, ಕಿರಣ್ ಮೋರೆ, ಸಿದ್ದೇಶ್ ಲಾಡ್, ಪ್ರಸನ್ನ ಸಂತ್, ಚೈತನ್ಯ ಸಂತ್, ಕುನಾಲ್ ಡೇಟ್.
ಗುಜರಾತಿ: ಅಜಯ್ ಜಡೇಜಾ, ಮನ್ಪ್ರೀತ್ ಜುನೇಜಾ, ರಾಕೇಶ್ ಪಟೇಲ್, ಭಾರ್ಗವ್ ಭಟ್, ಶೆಲ್ಡನ್ ಜಾಕ್ಸನ್, ಅತುಲ್ ಬೆಡಾಡೆ, ರಾಜ್ ಅಸಿಮ್.
ಭೋಜ್ಪುರಿ: ಮೊಹಮ್ಮದ್ ಸೈಫ್, ಶಿವಂ ಸಿಂಗ್, ಸತ್ಯ ಪ್ರಕಾಶ್, ಗುಲಾಮ್ ಹುಸೇನ್, ಸೌರಭ್ ಕುಮಾರ್, ವಿಶಾಲ್ ಆದಿತ್ಯ ಸಿಂಗ್, ಶಾಲಿನಿ ಸಿಂಗ್, ಸುಮಿತ್ ಕುಮಾರ್, ಅಶುತೋಷ್ ಅಮನ್, ರವಿ ಕಿಶನ್ಸ್.
ಬೆಂಗಾಳಿ: ಜೂಲನ್ ಗೋಸ್ವಾಮಿ, ಸುಭೋಮೋಯ್ ದಾಸ್, ಶ್ರೀವತ್ಸ್ ಗೋಸ್ವಾಮಿ, ಅನುಸ್ತುಪ್ ಮಜುಂದಾರ್, ಸಂಜೀವ್ ಮುಖರ್ಜಿ, ಸರದಿಂಡು ಮುಖರ್ಜಿ, ಅನಿಂದ್ಯಾ ಸೇನ್ ಗುಪ್ತಾ, ದೇಬಿ ಸಹಾ.
ಹರಿಯಾನ್ವಿ : ವೀರೇಂದ್ರ ಸೆಹ್ವಾಗ್, ಮನ್ವಿಂದರ್ ಬಿಸ್ಲಾ, ಸೋನು ಶರ್ಮಾ, ರಾಜ್ ಕಿಸ್ನಾ, ರವೀನ್ ಕುಂಡು, ಪ್ರೀತಿ ದಹಿಯಾ.
ಪಂಜಾಬಿ: ಸರಣ್ದೀಪ್ ಸಿಂಗ್, ರಾಹುಲ್ ಶರ್ಮಾ, ವಿಆರ್ವಿ ಸಿಂಗ್, ರೀತಿಂದರ್ ಸಿಂಗ್ ಸೋಧಿ, ಚೇತನ್ ಶರ್ಮಾ, ಸುನಿಲ್ ತನೇಜಾ, ಗುರ್ಜಿತ್ ಸಿಂಗ್, ಬಲರಾಜ್ ಸಿಯಾಲ್.
ಹ್ಯಾಂಗೌಟ್ : ವಿಪುಲ್ ಗೋಯಲ್, ಅಂಗದ್ ಸಿಂಗ್ ಆರ್, ಆದಿತ್ಯ ಕುಲಶ್ರೇಷ್ಠ, ಇಂದರ್ ಸಾಹ್ನಿ, ಆಶಿಶ್ ಸೋಲಂಕಿ, ಶಶಿ ಧಿಮನ್, ಕುನಾಲ್ ಸಲೂಜಾ.
ಜಿಯೋ ಸಿನೆಮಾ ಈ ವರ್ಷ ಒಟ್ಟು 18 ಫೀಡ್‌ಗಳನ್ನು ನೀಡುತ್ತದೆ. ಇದರಲ್ಲಿ ಕಳೆದ ವರ್ಷದ ಜನಪ್ರಿಯ ಇನ್‌ಸೈಡರ್ಸ್ ಮತ್ತು ಹ್ಯಾಂಗ್ಔಟ್ ಫೀಡ್ ಕೂಡಾ ಸೇರಿದೆ. ಇದರೊಂದಿಗೆ ಹೊಸದಾಗಿ ಪರಿಚಯಿಸಲಾದ ಹೀರೋ ಕ್ಯಾಮ್ ಫೀಡ್ ಮತ್ತು ವೈರಲ್ ವೀಕೆಂಡ್ ಎಂಬ ಹೊಸ ಪ್ರಸ್ತುತಿಯೂ ಸೇರಿದೆ.
ಈ ಋತುವಿನಲ್ಲಿ ಜಿಯೋ ಸಿನೆಮಾದ ಇತ್ತೀಚಿನ ಕ್ಯಾಮೆರಾ ಆಂಗಲ್ ಸೇರ್ಪಡೆಯಾದ ಹೀರೋ ಕ್ಯಾಮ್, ವೀಕ್ಷಕರಿಗೆ ಎಲ್ಲಾ ಲೈವ್ ಆಕ್ಷನ್ ವೀಕ್ಷಣೆಗೆ ನೆರವಾಗಲಿದೆ. ಇದು ಪಂದ್ಯವನ್ನು ನೇರವಾಗಿ ವೀಕ್ಷಿಸಿದ ಅನುಭವ ನೀಡಲಿದೆ. ವೀಕ್ಷಕರು ತಮಗೆ ಬೇಕಾದ ಕ್ಯಾಮರಾ ಆಂಗಲ್ ಅನ್ನು ಆಯ್ಕೆ ಮಾಡಬಹುದಾದ ಆಯ್ಕೆ ಇರುತ್ತದೆ.
ವೀಕ್ಷಕರು ಜಿಯೋ ಸಿನಿಮಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.