ಬುಮ್ರಾ, ಪಾಟೀದಾರ್ ಔಟ್; ಕೆಎಲ್ ರಾಹುಲ್ ಇನ್; ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
Feb 19, 2024 03:19 PM IST
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
- IND vs ENG 4th Test: ಇಂಗ್ಲೆಂಡ್ ವಿರುದ್ಧದ ಸತತ ಎರಡು ಪಂದ್ಯಗಳಲ್ಲಿ ಸುಲಭ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಫೆಬ್ರುವರಿ 23ರಿಂದ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಗುರಿ ಇಟ್ಟುಕೊಂಡಿದೆ. ರಾಂಚಿ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಪಡೆಯು ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳಲಿದೆ.
ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವಿನ ಗುರಿ ಹೊಂದಿರುವ ಭಾರತ ತಂಡವು, ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ (India vs England 4th Test) ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರನ್ನು ಭರ್ಜರಿ 434 ರನ್‌ಗಳ ಅಂತರದಿಂದ ಮಣಿಸಿದ ರೋಹಿತ್ ಶರ್ಮಾ ಪಡೆ, ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇದೀಗ ನಾಲ್ಕನೇ ಪಂದ್ಯ ಗೆದ್ದರೆ ಸರಣಿ ಭಾರತದ ಕೈವಶವಾಗಲಿದೆ.
ಮೊದಲ ಟೆಸ್ಟ್ ಸೋತ ಬಳಿಕ ಸತತ ಎರಡು ಪಂದ್ಯಗಳಲ್ಲಿ ಸುಲಭ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ರಾಜ್‌ಕೋಟ್‌ನಿಂದ ರಾಂಚಿಯತ್ತ ಮುಖ ಮಾಡಿದೆ. ಫೆಬ್ರುವರಿ 23ರಿಂದ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ, ರೋಹಿತ್ ಶರ್ಮಾ ಪಡೆಯು ಕೆಲವೊಂದು ಬದಲಾವಣೆಗಳೊಂದಿಗೆ ಆಡಲಿದೆ.
ಇದನ್ನೂ ಓದಿ | Jasprit Bumrah: ಭಾರತ vs ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ
ನಾಲ್ಕನೇ ಟೆಸ್ಟ್‌ನಿಂದ ತಂಡದ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲೇ ಬುಮ್ರಾಗೆ ವಿಶ್ರಾಂತಿ ನೀಡುವ ಸುಳಿವಿತ್ತು. ಆದರೆ, ತಂಡಕ್ಕೆ ಗಾಯದ ಹೊಡೆತ ಬಿದ್ದ ಕಾರಣದಿಂದಾಗಿ ಅವರನ್ನು ಆಡಿಸಲಾಯ್ತು. ಈ ನಡುವೆ ಮೊಹಮ್ಮದ್ ಸಿರಾಜ್‌ಗೆ ಒಂದು ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಇದುವರೆಗೆ ಎಲ್ಲಾ ಮೂರು ಟೆಸ್ಟ್ ಪಂದ್ಯಗಳನ್ನು ಆಡಿರುವ ಬುಮ್ರಾ, ನಾಲ್ಕನೇ ಪಂದ್ಯದಿಂದ ರೆಸ್ಟ್ ಮಾಡಲಿದ್ದಾರೆ.
ಮುಖೇಶ್ ಕುಮಾರ್ ತಂಡಕ್ಕೆ ವಾಪಸ್
ಅತ್ತ ರಣಜಿ ಟ್ರೋಫಿಯಲ್ಲಿ ಬಿಹಾರ ವಿರುದ್ಧ ಬಂಗಾಳ ಪರ ಆಡಿದ್ದ ವೇಗಿ ಮುಖೇಶ್ ಕುಮಾರ್, 10 ವಿಕೆಟ್‌ಗಳನ್ನು ಪಡೆದಿದ್ದರು. ಇದೀಗ ಅವರು ಟೆಸ್ಟ್ ತಂಡಕ್ಕೆ ಮರಳಲಿದ್ದಾರೆ. ಅವರು ಆಡುವ ಬಳಗಕ್ಕೆ ಎಂಟ್ರಿ ಕೊಡಲಿದ್ದಾರೆ.
ಇದನ್ನೂ ಓದಿ | ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ ಕೆಎಲ್ ರಾಹುಲ್; ಮತ್ತೆ ಬೌಲಿಂಗ್ ಮಾಡಲು ಬೆನ್ ಸ್ಟೋಕ್ಸ್ ಕಾತರ
ಮೊಣಕಾಲು ಗಾಯದಿಂದಾಗಿ ಸತತ ಎರಡು ಪಂದ್ಯಗಳಿಂದ ಹೊರಬಿದ್ದಿದ್ದ ಕೆಎಲ್ ರಾಹುಲ್, ನಾಲ್ಕನೇ ಟೆಸ್ಟ್‌ಗೂ ಮುನ್ನ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಆಡುವ ಬಳಗಕ್ಕೆ ಎಂಟ್ರಿ ಕೊಡಲಿದ್ದಾರೆ. ಹೀಗಾಗಿ ಎರಡನೇ ಟೆಸ್ಟ್‌ನಿಂದ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದ ರಜತ್ ಪಾಟೀದಾರ್, ತಂಡದಿಂದ ಬಹುತೇಕ ಹೊರಬೀಳಲಿದ್ದಾರೆ. ಸತತ ನಾಲ್ಕು ಇನ್ನಿಂಗ್ಸ್‌ಗಳಲ್ಲಿಯೂ ರಜತ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಅತ್ತ ಸರ್ಫರಾಜ್ ಖಾನ್ ತಂಡದಲ್ಲೇ ಉಳಿಯುವ ಭರವಸೆ ಮೂಡಿಸಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಸತತ ಎರಡು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ ಮುಂದುವರೆಯುವ ಸಾಧ್ಯತೆ ಇದೆ. ವೈಯಕ್ತಿಕ ತುರ್ತು ಪರಿಸ್ಥಿತಿಯಿಂದ ತಂಡದಿಂದ ಹೊರಹೋಗಿದ್ದ ರವಿಚಂದ್ರನ್ ಅಶ್ವಿನ್, ಮತ್ತೆ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಅವರು ತಂಡದಲ್ಲೇ ಉಳಿಯುವ ಸಾಧ್ಯತೆ ಇದೆ.
ಇದನ್ನೂ ಓದಿ | ದ್ವಿಶತಕ ಸಿಡಿಸಿದರೂ ಯಶಸ್ವಿ ಜೈಸ್ವಾಲ್ಗೆ ಸಿಗಲಿಲ್ಲ ಪಂದ್ಯಶ್ರೇಷ್ಠ; ಹಾಗಾದರೆ ಈ ಪ್ರಶಸ್ತಿ ಗೆದ್ದಿದ್ಯಾರು?
ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್.
(This copy first appeared in Hindustan Times Kannada website. To read more like this please logon to kannada.hindustantimes.com)