logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮಾಲ್ಡೀವ್ಸ್​ನಲ್ಲೇನಿದೆ, ಇಲ್ಲೇ ಇರೋ ಉಡುಪಿ ಬೀಚ್​​ಗಳ ಸೌಂದರ್ಯ ನೋಡ್ರಿ; ಸೆಹ್ವಾಗ್ ತಿರುಗೇಟು

ಮಾಲ್ಡೀವ್ಸ್​ನಲ್ಲೇನಿದೆ, ಇಲ್ಲೇ ಇರೋ ಉಡುಪಿ ಬೀಚ್​​ಗಳ ಸೌಂದರ್ಯ ನೋಡ್ರಿ; ಸೆಹ್ವಾಗ್ ತಿರುಗೇಟು

Prasanna Kumar P N HT Kannada

Jan 09, 2024 08:59 AM IST

ವೀರೇಂದ್ರ ಸೆಹ್ವಾಗ್.

    • Virender Sehwag: ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದ ಮಾಲ್ಡೀವ್ಸ್​ ರಾಜಕೀಯ ನಾಯಕರಿಗೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ತಿರುಗೇಟು ನೀಡಿದ್ದಾರೆ.
ವೀರೇಂದ್ರ ಸೆಹ್ವಾಗ್.
ವೀರೇಂದ್ರ ಸೆಹ್ವಾಗ್.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು (Prime Minister Narendra Modi) ಲಕ್ಷದ್ವೀಪಕ್ಕೆ ಭೇಟಿಕೊಟ್ಟು ಪ್ರವಾಸೋದ್ಯಮ ಕುರಿತು ಪ್ರವಾಸ ಮಾಡಿದ ನಂತರ ಮಾಲ್ಡೀವ್ಸ್​ನ ರಾಜಕೀಯ ನಾಯಕರು ವ್ಯಂಗ್ಯವಾಡಿದ್ದರು. ಭಾರತೀಯ ಕ್ರಿಕೆಟಿಗರು ಮೋದಿ ಪರ ಬ್ಯಾಟ್ ಬೀಸಿದ್ದು, ಮಾಲ್ಡೀವ್ಸ್​​ಗೆ (Maldives Row) ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಎಕ್ಸ್​ ಮಾಧ್ಯಮ ಖಾತೆಯಲ್ಲಿ ಟ್ರೆಂಡ್​ ಕೂಡ ಶುರುವಾಗಿತ್ತು. ಈ ಅಭಿಯಾನ ಆರಂಭವಾದ ಬೆನ್ನಲ್ಲೇ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag) ತಮ್ಮದೇ ದಾಟಿಯಲ್ಲಿ ಉತ್ತರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಆರ್​ಸಿಬಿ ಆಟಗಾರರಿಗೆ ಹ್ಯಾಂಡ್​ಶೇಕ್ ಮಾಡದೆ ಮೈದಾನ ತೊರೆದ ಎಂಎಸ್ ಧೋನಿ; ಮಾಹಿ ಹುಡುಕುತ್ತಾ ಹೊರಟ ವಿರಾಟ್ ಕೊಹ್ಲಿ

ಉಡುಪಿ ಬೀಚ್ ಹಂಚಿಕೊಂಡ ಸೆಹ್ವಾಗ್

ವೀರೇಂದ್ರ ಸೆಹ್ವಾಗ್ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಭಾರತದಲ್ಲಿರುವ ಅತ್ಯಂತ ಸುಂದರ ಬೀಚ್​​ಗಳ ರಮಣೀಯ ಫೋಟೋಗಳನ್ನು ಶೇರ್​​ ಮಾಡಿದ್ದಾರೆ. ಮತ್ತೊಂದು ಖುಷಿಯ ಸಂಗತಿ ಏನೆಂದೆರೆ, ಕರ್ನಾಟಕದ ಅತ್ಯಂತ ಸುಂದರ ಬೀಚ್​​ಗಳಲ್ಲಿ ಒಂದಾದ ಉಡುಪಿಯ ಮರವಂತೆ ಬೀಚ್​​ನ ಚಿತ್ರವನ್ನೂ ಅವರು ಹಂಚಿಕೊಂಡಿದ್ದು, ಗಮನ ಸೆಳೆದಿದೆ. ಇದು ಕರ್ನಾಟಕ ಜನತೆಯೆ ಸಂತಸದ ವಿಚಾರಕ್ಕೆ ಕಾರಣವಾಗಿದೆ. ಅಲ್ಲದೆ, ಉಡುಪಿ ದೇವಸ್ಥಾನ, ಆಹಾರ ಪದ್ಧತಿ ಬಗ್ಗೆಯೂ ಹೇಳಿದ್ದಾರೆ.

ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಂಡು ಬಂದ ಬಳಿಕ ಮಾಲ್ಡೀವ್ಸ್​ ರಾಜಕೀಯ ನಾಯಕರು, ಉರಿದು ಬಿದ್ದರು. ಇಸ್ರೇಲ್​ನ ಕೈಗೊಂಬೆ ಎಂದು ಅಲ್ಲಿನ ಸಚಿವರು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಪ್ರಚಾರ ಮಾಡಿದ ಮೇಲೆ ನಂತರ ತಮ್ಮ ಆದಾಯಕ್ಕೆ ಕುತ್ತು ಬೀಳುತ್ತದೆ ಎಂಬುದು ಮಾಲ್ಡೀವ್ಸ್​ ರಾಜಕೀಯ ನಾಯಕರ ಆತಂಕಕ್ಕೆ ಕಾರಣ. ಏಕೆಂದರೆ ಭಾರತೀಯರೇ ಮಾಲ್ಡೀವ್ಸ್​ಗೆ ಹೆಚ್ಚಾಗಿ ಹೋಗುತ್ತಾರೆ.

ಸೆಹ್ವಾಗ್ ಟ್ವೀಟ್​ನಲ್ಲಿ ಏನಿದೆ?

ಉಡುಪಿಯ ಸುಂದರ ಕಡಲತೀರಗಳು, ಪೊಂಡಿಯ ಪ್ಯಾರಡೈಸ್ ಬೀಚ್, ಅಂಡಮಾನ್‌ನ ನೀಲ್ ಮತ್ತು ಹ್ಯಾವ್‌ಲಾಕ್ ನಮ್ಮ ದೇಶದಾದ್ಯಂತ ಇಂತಹ ಹಲವಾರು ಸುಂದರವಾದ ಬೀಚ್‌ಗಳಿವೆ. ಭಾರತದಲ್ಲಿ ಬೆಳಕಿಗೆ ಬರದ ಹಲವಾರು ಸ್ಥಳಗಳೂ ಇವೆ. ಅಲ್ಲಿ ಅತ್ಯುತ್ತಮ ಮೂಲ ಸೌಕರ್ಯಗಳೂ ಇವೆ. ಎಲ್ಲಾ ಅವಮಾನಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

ಮಾಲ್ಡೀವ್ಸ್ ಸಚಿವರು ನಮ್ಮ ದೇಶ ಮತ್ತು ನಮ್ಮ ಪ್ರಧಾನ ಮಂತ್ರಿಗಳನ್ನು ಟೀಕಿಸಿರುವುದು ಪ್ರವಾಸಿಗರನ್ನು ಆಕರ್ಷಿಸಲು ಭಾರತಕ್ಕೆ ಒಂದು ಅವಕಾಶವಾಗಿದೆ. ನಮ್ಮ ಆರ್ಥಿಕತೆಯನ್ನು ಹೆಚ್ಚಿಸಲು ಬೇಕಿರುವ ಮೂಲ ಸೌಕರ್ಯಗಳನ್ನು ಸೃಷ್ಟಿಸಲು ಭಾರತಕ್ಕೆ ಇದೊಂದು ದೊಡ್ಡ ಅವಸರ ಎಂಬುದು ನನ್ನ ಭಾವನೆ. ದಯವಿಟ್ಟು ಬೆಳಕಿದೆ ಬಾರದ ಅತ್ಯಂತ ಸುಂದರ ಸ್ಥಳಗಳನ್ನು ಹೆಸರಿಸಿ ಎಂದು ಅವರು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಮಿತಾಭ್ ಬಚ್ಚನ್ ರಿಪೋಸ್ಟ್​

ವೀರೇಂದ್ರ ಸೆಹ್ವಾಗ್ ಅವರ ಎಕ್ಸ್ ಪೋಸ್ಟ್ ಅನ್ನು ರೀಪೋಸ್ಟ್ ಮಾಡಿರುವ ಅಮಿತಾಬ್ ಬಚ್ಚನ್, ವಿರೂ ಪಾಜಿ, ಇದು ತುಂಬಾ ಪ್ರಸ್ತುತವಾಗಿದೆ. ನಮ್ಮ ನೆಲದ ಮನೋಭಾವ ಪ್ರತಿನಿಧಿಸುತ್ತದೆ. ನಾನು ಲಕ್ಷದ್ವೀಪ ಮತ್ತು ಅಂಡಮಾನ್‌ಗಳಿಗೆ ಹೋಗಿದ್ದೇನೆ. ನಮ್ಮದೇ ಅತ್ಯುತ್ತಮ. ಅವು ತುಂಬಾ ಆಶ್ಚರ್ಯಕರವಾದ ಸುಂದರ ಸ್ಥಳಗಳು. ಬೆರಗುಗೊಳಿಸುವ ನೀರಿನ ಕಡಲತೀರಗಳು ಮತ್ತು ನೀರೊಳಗಿನ ಅನುಭವ ಸರಳವಾಗಿ ನಂಬಲಸಾಧ್ಯ ಎಂದು ಹೇಳಿರುವ ಬಿಗ್​ ಬಿ, ನಾವು ಭಾರತ, ನಾವು ಸ್ವಾವಲಂಬಿಗಳು, ನಮ್ಮ ಸ್ವಾವಲಂಬನೆಗೆ ಹಾನಿ ಮಾಡಬೇಡಿ. ಜೈ ಹಿಂದ್ ಎಂದು ಪೋಸ್ಟ್ ಮಾಡಿ ಮಾಲ್ಡೀವ್ಸ್​​ಗೆ ಖಡಕ್ ತಿರುಗೇಟು ನೀಡಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ