ICC Awards 2023: ಐಸಿಸಿ ಪ್ರಶಸ್ತಿಗೆ ನಾಮಿನೇಟ್ ಆದ ಆಟಗಾರರ ಪೂರ್ಣ ಪಟ್ಟಿ ಇಲ್ಲಿದೆ; ಯಾರೆಲ್ಲಾ ಭಾರತೀಯರಿದ್ದಾರೆ ನೋಡಿ
ICC Awards 2023: 2023ರ ವರ್ಷದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಆಟಗಾರರನ್ನು 9 ವಿಭಾಗಗಳಲ್ಲಿ ಐಸಿಸಿ ವರ್ಷದ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಆ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.
2023ರ ಕ್ಯಾಲೆಂಡರ್ನಲ್ಲಿ ಬೆಂಕಿ ಬಿರುಗಾಳಿ ಪ್ರದರ್ಶನ ನೀಡಿದ ಎಲ್ಲಾ ವಿಭಾಗಗಳಲ್ಲೂ ಆಟಗಾರರ ಹೆಸರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket council) 2023ರ ಆಟಗಾರರ ಪ್ರಶಸ್ತಿ ವಿಭಾಗಕ್ಕೆ ನಾಮನಿರ್ದೇಶನ (ICC Awards 2023) ಮಾಡಿರುವ ಪಟ್ಟಿಯನ್ನು ಘೋಷಿಸಿದೆ.
ಕ್ರಿಕೆಟ್ನ 9 ವಿಭಾಗಗಳಲ್ಲಿ ವಾರ್ಷಿಕ ಪ್ರಶಸ್ತಿ ನೀಡಲಿರುವ ಐಸಿಸಿ, ಅಭಿಮಾನಿಗಳ ವೋಟಿಂಗ್ ಪ್ರಕ್ರಿಯೆ ನಡೆಸುತ್ತಿದೆ. ಶೀಘ್ರದಲ್ಲೇ ಗೆದ್ದವರ ಹೆಸರನ್ನು ಪ್ರಕಟಿಸಲಿದೆ. ಎಲ್ಲ ವಿಭಾಗಗಳಲ್ಲಿ ನಾಮನಿರ್ದೇಶಿತವಾದ ಆಟಗಾರರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ? ಭಾರತೀಯರು ಯಾರೆಲ್ಲಾ ಇದ್ದಾರೆ ಅನ್ನೋದನ್ನ ನೋಡೋಣ.
ವರ್ಷದ ಉದಯೋನ್ಮುಖ ಪುರುಷ ಆಟಗಾರ ಪ್ರಶಸ್ತಿ: ಯಶಸ್ವಿ ಜೈಸ್ವಾಲ್ (ಭಾರತ), ದಿಲ್ಶನ್ ಮಧುಶಂಕ (ಶ್ರೀಲಂಕಾ), ರಚಿನ್ ರವೀಂದ್ರ (ನ್ಯೂಜಿಲೆಂಡ್), ಜೆರಾಲ್ಡ್ ಕೊಯೆಟ್ಜಿ (ಸೌತ್ ಆಫ್ರಿಕಾ).
ವರ್ಷದ ಉದಯೋನ್ಮುಖ ಮಹಿಳಾ ಆಟಗಾರ್ತಿ ಪ್ರಶಸ್ತಿ: ಫೋಬೆ ಲಿಚ್ಫೀಲ್ಡ್ (ಆಸ್ಟ್ರೇಲಿಯಾ), ಡಾರ್ಸಿ ಕಾರ್ಟರ್ (ಸ್ಕಾಟ್ಲೆಂಡ್), ಲಾರೆನ್ ಬೆಲ್ (ಇಂಗ್ಲೆಂಡ್), ಮಾರುಫಾ ಅಕ್ತರ್ (ಬಾಂಗ್ಲಾದೇಶ).
ವರ್ಷದ ಟಿ20 ಆಟಗಾರ ಪ್ರಶಸ್ತಿ: ಸೂರ್ಯಕುಮಾರ್ ಯಾದವ್ (ಭಾರತ), ಮಾರ್ಕ್ ಚಾಪ್ಮನ್ (ನ್ಯೂಜಿಲೆಂಡ್), ಸಿಕಂದರ್ ರಾಜಾ (ಜಿಂಬಾಬ್ವೆ), ಅಲ್ಪೇಶ್ ರಾಮ್ಜಾನಿ (ಉಗಾಂಡ).
ವರ್ಷದ ಟಿ20 ಆಟಗಾರ್ತಿ ಪ್ರಶಸ್ತಿ: ಎಲಿಸ್ ಪೆರ್ರಿ (ಆಸ್ಟ್ರೇಲಿಯಾ), ಚಾಮರಿ ಅಟ್ಟಪಟ್ಟು (ಶ್ರೀಲಂಕಾ), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್).
ವರ್ಷದ ಏಕದಿನ ಆಟಗಾರ ಪ್ರಶಸ್ತಿ: ಮೊಹಮ್ಮದ್ ಶಮಿ (ಭಾರತ), ಶುಭ್ಮನ್ ಗಿಲ್ (ಭಾರತ), ವಿರಾಟ್ ಕೊಹ್ಲಿ (ಭಾರತ), ಡೇರಿಲ್ ಮಿಚೆಲ್ (ನ್ಯೂಜಿಲೆಂಡ್).
ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿ: ಚಾಮರಿ ಅಟ್ಟಪಟ್ಟು (ಶ್ರೀಲಂಕಾ), ಆ್ಯಶ್ಲೇ ಗಾರ್ಡ್ನರ್ (ಆಸ್ಟ್ರೇಲಿಯಾ), ಅಮೆಲಿಯಾ ಕೆರ್ (ನ್ಯೂಜಿಲೆಂಡ್), ನ್ಯಾಟ್ ಸ್ಕಿವರ್-ಬ್ರಂಟ್ (ಇಂಗ್ಲೆಂಡ್).
ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ: ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ರವಿಚಂದ್ರನ್ ಅಶ್ವಿನ್ (ಭಾರತ), ಜೋ ರೂಟ್ (ಇಂಗ್ಲೆಂಡ್).
ವರ್ಷದ ಮಹಿಳಾ ಆಟಗಾರ್ತಿ- ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿ: ಆಶ್ಲೇ ಗಾರ್ಡ್ನರ್ (ಆಸ್ಟ್ರೇಲಿಯಾ), ಚಾಮರಿ ಅಟ್ಟಪಟ್ಟು (ಶ್ರೀಲಂಕಾ), ಬೆತ್ ಮೂನಿ (ಆಸ್ಟ್ರೇಲಿಯಾ), ನ್ಯಾಟ್ ಸ್ಕಿವರ್-ಬ್ರಂಟ್ (ಇಂಗ್ಲೆಂಡ್).
ವರ್ಷದ ಪುರುಷ ಆಟಗಾರ: ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ: ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ರವೀಂದ್ರ ಜಡೇಜಾ (ಭಾರತ), ವಿರಾಟ್ ಕೊಹ್ಲಿ (ಭಾರತ).