logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಂಗ್ಲಾ ವಿರುದ್ಧ 4 ವಿಕೆಟ್ ಪಡೆದು ದಾಖಲೆ ಬರೆದ ಪತಿರಾಣ; ದಿಗ್ಗಜನ ರೆಕಾರ್ಡ್ ಮುರಿದ ಸಿಎಸ್​ಕೆ ಆಟಗಾರ

ಬಾಂಗ್ಲಾ ವಿರುದ್ಧ 4 ವಿಕೆಟ್ ಪಡೆದು ದಾಖಲೆ ಬರೆದ ಪತಿರಾಣ; ದಿಗ್ಗಜನ ರೆಕಾರ್ಡ್ ಮುರಿದ ಸಿಎಸ್​ಕೆ ಆಟಗಾರ

Sep 01, 2023 10:48 AM IST

Bangladesh vs Sri Lanka, Matheesha Pathirana: ಏಷ್ಯಾಕಪ್​ ಟೂರ್ನಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಎದುರಿನ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಾಣ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

  • Bangladesh vs Sri Lanka, Matheesha Pathirana: ಏಷ್ಯಾಕಪ್​ ಟೂರ್ನಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಎದುರಿನ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಾಣ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಏಷ್ಯಾಕಪ್​ ಟೂರ್ನಿಯ 2ನೇ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಬಾಂಗ್ಲಾದೇಶ ವಿರುದ್ಧ 5 ವಿಕೆಟ್​ಗಳ ಗೆಲುವು ಸಾಧಿಸಿದೆ.
(1 / 11)
ಏಷ್ಯಾಕಪ್​ ಟೂರ್ನಿಯ 2ನೇ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಬಾಂಗ್ಲಾದೇಶ ವಿರುದ್ಧ 5 ವಿಕೆಟ್​ಗಳ ಗೆಲುವು ಸಾಧಿಸಿದೆ.(AP)
ಇನ್ನು ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಾಣ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ 29 ವರ್ಷಗಳ ಹಿಂದೆ ಲಂಕಾದ ದಿಗ್ಗಜ ಬೌಲರ್​​ ಚಮಿಂದಾ ವಾಸ್ ಅವರ ಹಳೆಯ ದಾಖಲೆ ಮುರಿದಿದ್ದಾರೆ.
(2 / 11)
ಇನ್ನು ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಾಣ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ 29 ವರ್ಷಗಳ ಹಿಂದೆ ಲಂಕಾದ ದಿಗ್ಗಜ ಬೌಲರ್​​ ಚಮಿಂದಾ ವಾಸ್ ಅವರ ಹಳೆಯ ದಾಖಲೆ ಮುರಿದಿದ್ದಾರೆ.(AFP)
ಬೆಂಕಿ ಬೌಲಿಂಗ್​ ಮೂಲಕ ಮತೀಶ ಪತಿರಾಣ ಅವರು 7.4 ಓವರ್​ಗಳಲ್ಲಿ 32 ರನ್ ನೀಡಿ 4 ವಿಕೆಟ್ ಉರುಳಿಸಿದರು. ಇದರಿಂದ ಬಾಂಗ್ಲಾದೇಶ ಅಲ್ಪಮೊತ್ತಕ್ಕೆ ತತ್ತರಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
(3 / 11)
ಬೆಂಕಿ ಬೌಲಿಂಗ್​ ಮೂಲಕ ಮತೀಶ ಪತಿರಾಣ ಅವರು 7.4 ಓವರ್​ಗಳಲ್ಲಿ 32 ರನ್ ನೀಡಿ 4 ವಿಕೆಟ್ ಉರುಳಿಸಿದರು. ಇದರಿಂದ ಬಾಂಗ್ಲಾದೇಶ ಅಲ್ಪಮೊತ್ತಕ್ಕೆ ತತ್ತರಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಶ್ರೀಲಂಕಾ ತಂಡದ ಪರ 4 ವಿಕೆಟ್ ಉರುಳಿಸಿದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆಯನ್ನು ಪತಿರಾಣ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಚಾಮಿಂದಾ ವಾಸ್ ಹೆಸರಿನಲ್ಲಿ ಈ ದಾಖಲೆ ಇತ್ತು.
(4 / 11)
ಶ್ರೀಲಂಕಾ ತಂಡದ ಪರ 4 ವಿಕೆಟ್ ಉರುಳಿಸಿದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆಯನ್ನು ಪತಿರಾಣ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಚಾಮಿಂದಾ ವಾಸ್ ಹೆಸರಿನಲ್ಲಿ ಈ ದಾಖಲೆ ಇತ್ತು.
ಚಾಮಿಂದಾ ವಾಸ್ ಅವರು 1994ರಲ್ಲಿ ಜಿಂಬಾಬ್ವೆ ವಿರುದ್ಧ ಕೇವಲ 20 ರನ್ ನೀಡಿ 4 ವಿಕೆಟ್ ಉರುಳಿಸಿದ್ದರು. ಅಂದು ಚಾಮಿಂದಾ ವಾಸ್ ವಯಸ್ಸು 20 ವರ್ಷ, 280 ದಿನಗಳು ಆಗಿತ್ತು.
(5 / 11)
ಚಾಮಿಂದಾ ವಾಸ್ ಅವರು 1994ರಲ್ಲಿ ಜಿಂಬಾಬ್ವೆ ವಿರುದ್ಧ ಕೇವಲ 20 ರನ್ ನೀಡಿ 4 ವಿಕೆಟ್ ಉರುಳಿಸಿದ್ದರು. ಅಂದು ಚಾಮಿಂದಾ ವಾಸ್ ವಯಸ್ಸು 20 ವರ್ಷ, 280 ದಿನಗಳು ಆಗಿತ್ತು.
ಆಗಸ್ಟ್ 31ರಂದು ಅಂದರೆ ನಿನ್ನೆ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಪತಿರಾಣ 4 ವಿಕೆಟ್ ಕಬಳಿಸಿದರು. ಅವರಿಗೀಗ 20 ವರ್ಷ, 256 ದಿನಗಳು. ಇದರೊಂದಿಗೆ 29 ವರ್ಷಗಳಿಂದ ವಾಸ್ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ.
(6 / 11)
ಆಗಸ್ಟ್ 31ರಂದು ಅಂದರೆ ನಿನ್ನೆ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಪತಿರಾಣ 4 ವಿಕೆಟ್ ಕಬಳಿಸಿದರು. ಅವರಿಗೀಗ 20 ವರ್ಷ, 256 ದಿನಗಳು. ಇದರೊಂದಿಗೆ 29 ವರ್ಷಗಳಿಂದ ವಾಸ್ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ.
ಅಷ್ಟೇ ಅಲ್ಲದೆ, ಏಷ್ಯಾಕಪ್ ಟೂರ್ನಿಯಲ್ಲಿ ನಾಲ್ಕು ವಿಕೆಟ್ ಉರುಳಿಸಿದ ಶ್ರೀಲಂಕಾದದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆಯನ್ನೂ ಪತಿರಾಣ ತಮ್ಮದಾಗಿಸಿಕೊಂಡಿದ್ದಾರೆ.
(7 / 11)
ಅಷ್ಟೇ ಅಲ್ಲದೆ, ಏಷ್ಯಾಕಪ್ ಟೂರ್ನಿಯಲ್ಲಿ ನಾಲ್ಕು ವಿಕೆಟ್ ಉರುಳಿಸಿದ ಶ್ರೀಲಂಕಾದದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆಯನ್ನೂ ಪತಿರಾಣ ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 42.4 ಓವರ್​​​ಗಳಲ್ಲಿ 164 ರನ್​ ಗಳಿಸಿ ಆಲೌಟ್​​ ಆಯಿತು.
(8 / 11)
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 42.4 ಓವರ್​​​ಗಳಲ್ಲಿ 164 ರನ್​ ಗಳಿಸಿ ಆಲೌಟ್​​ ಆಯಿತು.(AP)
ಬಾಂಗ್ಲಾದೇಶ ಅಲ್ಪಮೊತ್ತಕ್ಕೆ ಆಲ್​ಔಟ್ ಆದರೂ ತಂಡದ ಪರ ನಜ್ಮುಲ್ ಹೊಸೈನ್​ ಶಾಂಟೋ ಅವರು 122 ಎಸೆತಗಳಲ್ಲಿ 89 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಉಳಿದ ಬ್ಯಾಟರ್​​​ಗಳಿಂದ ಅವರಿಗೆ ಉತ್ತಮವಾದ ಸಾಥ್​ ಸಿಗಲಿಲ್ಲ.
(9 / 11)
ಬಾಂಗ್ಲಾದೇಶ ಅಲ್ಪಮೊತ್ತಕ್ಕೆ ಆಲ್​ಔಟ್ ಆದರೂ ತಂಡದ ಪರ ನಜ್ಮುಲ್ ಹೊಸೈನ್​ ಶಾಂಟೋ ಅವರು 122 ಎಸೆತಗಳಲ್ಲಿ 89 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಉಳಿದ ಬ್ಯಾಟರ್​​​ಗಳಿಂದ ಅವರಿಗೆ ಉತ್ತಮವಾದ ಸಾಥ್​ ಸಿಗಲಿಲ್ಲ.(AFP)
ಅಲ್ಪಗುರಿ ಮುನ್ನಡೆಸಿದ ಶ್ರೀಲಂಕಾ 39 ಓವರ್​​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಗೆಲುವು ಸಾಧಿಸಿತು. ಸಮರ ವಿಕ್ರಮ ಅವರು 77 ಎಸೆತಗಳಲ್ಲಿ 54 ರನ್ ಗಳಿಸಿದರು.
(10 / 11)
ಅಲ್ಪಗುರಿ ಮುನ್ನಡೆಸಿದ ಶ್ರೀಲಂಕಾ 39 ಓವರ್​​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಗೆಲುವು ಸಾಧಿಸಿತು. ಸಮರ ವಿಕ್ರಮ ಅವರು 77 ಎಸೆತಗಳಲ್ಲಿ 54 ರನ್ ಗಳಿಸಿದರು.(AP)
ಚರಿತ್ ಅಸಲಂಕಾ ಅವರು ಕೂಡ ಅರ್ಧಶತಕ ಸಿಡಿಸಿದರು. ಇವು ಅವರ 8ನೇ ಅರ್ಧಶತಕ ಚಚ್ಚಿದರು. 92 ಎಸೆತಗಳಲ್ಲಿ 62 ರನ್ ಗಳಿಸಿದರು.
(11 / 11)
ಚರಿತ್ ಅಸಲಂಕಾ ಅವರು ಕೂಡ ಅರ್ಧಶತಕ ಸಿಡಿಸಿದರು. ಇವು ಅವರ 8ನೇ ಅರ್ಧಶತಕ ಚಚ್ಚಿದರು. 92 ಎಸೆತಗಳಲ್ಲಿ 62 ರನ್ ಗಳಿಸಿದರು.(AFP)

    ಹಂಚಿಕೊಳ್ಳಲು ಲೇಖನಗಳು