logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ಔಟ್; ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್​ಗೆ ಭಾರತ ಸಂಭಾವ್ಯ ಪ್ಲೇಯಿಂಗ್ 11

ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ಔಟ್; ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್​ಗೆ ಭಾರತ ಸಂಭಾವ್ಯ ಪ್ಲೇಯಿಂಗ್ 11

Prasanna Kumar P N HT Kannada

Oct 15, 2024 03:16 PM IST

google News

ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸರ್ಫರಾಜ್ ಖಾನ್.

    • ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟೆಸ್ಟ್​​ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲಲು ಭಾರತ ಕಣಕ್ಕಿಳಿಸುವ ಬಲಿಷ್ಠ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವುದನ್ನು ತಿಳಿಯೋಣ.
ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸರ್ಫರಾಜ್ ಖಾನ್.
ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸರ್ಫರಾಜ್ ಖಾನ್.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ಪಂದ್ಯವು ನ್ಯೂಜಿಲೆಂಡ್ ವಿರುದ್ಧ ಭಾರತ ಸೆಣಸಾಟ ನಡೆಸಲು ಸಜ್ಜಾಗಿದೆ. 2025ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್‌ ಫೈನಲ್‌ಗೆ ಸತತ 3ನೇ ಬಾರಿಗೆ ಪ್ರವೇಶಿಸಲು ಟೀಮ್ ಇಂಡಿಯಾ, ಈ ಸಿರೀಸ್ ಅನ್ನು ವೈಟ್‌ವಾಶ್ ಮಾಡುವುದು ಅತ್ಯಗತ್ಯ. ಆದರೆ, ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತ ಬಲಿಷ್ಠ ಪ್ಲೇಯಿಂಗ್ 11 ಅನ್ನು ಕಣಕ್ಕಿಳಿಸುವ ಅಗತ್ಯ ಇದೆ. ಈಗಾಗಲೇ 3 ಟೆಸ್ಟ್‌ಗಳಿಗೆ ತಮ್ಮ ತಂಡವನ್ನು ಪ್ರಕಟಿಸಿದ್ದು, ಯಾರಿಗೆಲ್ಲ ಅವಕಾಶ ಸಿಗಬಹುದು ಎಂದು ತಿಳಿಯೋಣ.

ಯಾವೆಲ್ಲಾ ಬ್ಯಾಟರ್​ಗಳಿಗೆ ಅವಕಾಶ?

ಯಶಸ್ವಿ ಜೈಸ್ವಾಲ್ ಜೊತೆಗೆ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆರಂಭಿಸಲಿದ್ದಾರೆ. ಜೈಸ್ವಾಲ್ ಉತ್ತಮ ಫಾರ್ಮ್‌ನಲ್ಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 2023-25ರ ಆವೃತ್ತಿಯಲ್ಲಿ ಭಾರತದ ಅಗ್ರಸ್ಕೋರ್​ ಮಾಡಿದ ಆಟಗಾರ ಎನಿಸಿದ್ದಾರೆ. ಶುಭ್ಮನ್ ಗಿಲ್ ಮೂರನೇ ಕ್ರಮಾಂಕ, ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಆದರೆ ಕೊಹ್ಲಿ ಬಾರ್ಡರ್​ ಗವಾಸ್ಕರ್ ಟ್ರೋಫಿಗೂ ಮುನ್ನ ದೊಡ್ಡ ಸ್ಕೋರ್ ಮಾಡುವುದು ಅಗತ್ಯ ಇದೆ. ರಿಷಭ್ ಪಂತ್ ಮೊದಲ ವಿಕೆಟ್ ಕೀಪರ್ ಆಗಿದ್ದು, ಕೆಎಲ್ ರಾಹುಲ್ ನಂತರ ಕಣಕ್ಕಿಳಿಯಲಿದ್ದಾರೆ. ಸರ್ಫರಾಜ್ ಖಾನ್, ಧ್ರುವ್ ಜುರೆಲ್ ಮತ್ತೆ ಬೆಂಚ್ ಕಾಯಬೇಕಾಗುತ್ತದೆ.

ಆಲ್​ರೌಂಡರ್ಸ್​​ ಮತ್ತು ಸ್ಪಿನ್ನರ್ಸ್

ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಕ್ರಮವಾಗಿ 7 ಮತ್ತು 8 ರಲ್ಲಿ ಬರುವ ಇಬ್ಬರು ಪ್ರಬಲ ಆಲ್‌ರೌಂಡರ್​ಗಳಾಗಿದ್ದಾರೆ. ಅಲ್ಲದೆ, ಇಬ್ಬರೂ ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಾಗಿದ್ದು, ಅವಕಾಶ ಸಿಕ್ಕಾಗ ಬ್ಯಾಟ್‌ನಲ್ಲೂ ಕೊಡುಗೆ ನೀಡುತ್ತಾರೆ. ಇನ್ನು ಬೌಲರ್​ಗಳ ವಿಚಾರಕ್ಕೆ ಬರುವುದಾದರೆ, ಮೊದಲ ಟೆಸ್ಟ್​ಗೆ ಭಾರತ ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೀಗಾಗಿ, ಅಶ್ವಿನ್ ಮತ್ತು ಜಡೇಜಾ ಅವರೊಂದಿಗೆ ಕುಲ್ದೀಪ್ ಯಾದವ್ 3ನೇ ಸ್ಪಿನ್ನರ್ ಆಗಲಿದ್ದಾರೆ. ಆದರೆ ಅಕ್ಷರ್ ಪಟೇಲ್ ಅವಕಾಶ ಪಡೆಯಲು ವಿಫಲವಾಗಲಿದ್ದಾರೆ. ಇಬ್ಬರು ವೇಗಿಗಳಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಆಗಿರುತ್ತಾರೆ. ಹೀಗಾಗಿ ಮೊಹಮ್ಮದ್ ಸಿರಾಜ್ ಅವಕಾಶ ವಂಚಿತರಾಗುತ್ತಾರೆ ಎನ್ನುವುದು ಖಚಿತ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್.

ಪಂದ್ಯದಿನಾಂಕಸಮಯ (ಬೆಳಗ್ಗೆಸ್ಥಳ
1 ನೇ ಟೆಸ್ಟ್ಅಕ್ಟೋಬರ್ 16-209:30
ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
2 ನೇ ಟೆಸ್ಟ್ಅಕ್ಟೋಬರ್ 24-289:30
ಎಂಸಿಎ ಸ್ಟೇಡಿಯಂ, ಪುಣೆ
3 ನೇ ಟೆಸ್ಟ್ನವೆಂಬರ್ 1-59:30
ವಾಂಖೆಡೆ ಸ್ಟೇಡಿಯಂ, ಮುಂಬೈ

ಇಂಡೋ-ಕಿವೀಸ್ ಪಂದ್ಯ ನೋಡುವುದೇಗೆ?

ಭಾರತದಲ್ಲಿ ಭಾರತ vs ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಸ್ಪೋರ್ಟ್ಸ್ 18 ವಾಹಿನಿಯು ನೇರಪ್ರಸಾರ ಮಾಡುತ್ತದೆ. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಸರಣಿಯನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಹಿಂದಿ, ಇಂಗ್ಲೀಷ್, ಕನ್ನಡ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ವೀಕ್ಷಕ ವಿವರಣೆಯೊಂದಿಗೆ ಪಂದ್ಯಗಳನ್ನು ವೀಕ್ಷಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ