logo
ಕನ್ನಡ ಸುದ್ದಿ  /  ಕ್ರಿಕೆಟ್  /  Team India: ಭಾರತ ತಂಡದಲ್ಲಿ ಮಹತ್ವದ ಬದಲಾವಣೆ, ಉಪನಾಯಕತ್ವದಿಂದ ಹಾರ್ದಿಕ್ ಪಾಂಡ್ಯ ಔಟ್?

Team India: ಭಾರತ ತಂಡದಲ್ಲಿ ಮಹತ್ವದ ಬದಲಾವಣೆ, ಉಪನಾಯಕತ್ವದಿಂದ ಹಾರ್ದಿಕ್ ಪಾಂಡ್ಯ ಔಟ್?

Prasanna Kumar P N HT Kannada

Aug 20, 2023 02:29 PM IST

google News

ಹಾರ್ದಿಕ್ ಪಾಂಡ್ಯ.

    • ರೋಹಿತ್​ ಶರ್ಮಾ (Rohit Sharma) ತಂಡದ ನಾಯಕನಾಗಿದ್ದರೆ, ಹಾರ್ದಿಕ್​ ಪಾಂಡ್ಯ (Hardik Pandya) ಉಪನಾಯಕನಾಗಿದ್ದರು. ಆದರೀಗ ಬಂದಿರುವ ಮಾಹಿತಿ ಪ್ರಕಾರ, ಹಾರ್ದಿಕ್ ಅವರನ್ನು ಉಪನಾಯಕತ್ವದಿಂದ ಕೈಬಿಡಲು ಬಿಸಿಸಿಐ ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ
ಹಾರ್ದಿಕ್ ಪಾಂಡ್ಯ.
ಹಾರ್ದಿಕ್ ಪಾಂಡ್ಯ.

ಏಷ್ಯಾಕಪ್ (Asia Cup 2023) ಮತ್ತು ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ದಿನಗಣನೆ ಆರಂಭವಾಗಿದೆ. ಟೀಮ್ ಇಂಡಿಯಾ (Team India) ಸೇರಿದಂತೆ ಎಲ್ಲಾ ತಂಡಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. ವಿಶ್ವಸಮರದಲ್ಲಿ ಟ್ರೋಫಿ ಗೆಲ್ಲಲು ಎಲ್ಲಾ ತಂಡಗಳು ಸಮರ್ಥ ತಂಡವನ್ನೇ ಕಟ್ಟುತ್ತಿವೆ. ಇದರ ನಡುವೆ ಭಾರತೀಯ ಕ್ರಿಕೆಟ್​ ತಂಡದಲ್ಲಿ ಹೊಸ ಅಪ್​ಡೇಟ್ ಒಂದು ಹೊರ ಬಿದ್ದಿದ್ದು, ತಂಡಕ್ಕೆ ನೂತನ ಉಪನಾಯಕ ಆಯ್ಕೆಯಾಗಲಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಉಪನಾಯಕ ಬದಲಾವಣೆ

ರೋಹಿತ್​ ಶರ್ಮಾ (Rohit Sharma) ತಂಡದ ನಾಯಕನಾಗಿದ್ದರೆ, ಹಾರ್ದಿಕ್​ ಪಾಂಡ್ಯ (Hardik Pandya) ಉಪನಾಯಕನಾಗಿದ್ದರು. ಆದರೀಗ ಬಂದಿರುವ ಮಾಹಿತಿ ಪ್ರಕಾರ, ಹಾರ್ದಿಕ್ ಅವರನ್ನು ಉಪನಾಯಕತ್ವದಿಂದ ಕೈಬಿಡಲು ಬಿಸಿಸಿಐ ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ (PTI) ವರದಿ ಮಾಡಿದೆ. ಹಾರ್ದಿಕ್ ಕೈಯಲಿದ್ದ ಉಪನಾಯಕತ್ವ ಪಟ್ಟವನ್ನು ಈಗ ಏಷ್ಯಾಕಪ್‌ ಹಾಗೂ ವಿಶ್ವಕಪ್​ನಲ್ಲಿ ವೇಗಿ ಜಸ್​ಪ್ರೀತ್​ ಬೂಮ್ರಾ (Jasprit Bumrah) ಅವರಿಗೆ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.

ಐರ್ಲೆಂಡ್ ಪ್ರವಾಸದಲ್ಲಿ (India Tour of Ireland) ಭಾರತ ತಂಡವನ್ನು ಮುನ್ನಡೆಸುತ್ತಿರುವ ಬೂಮ್ರಾ, ಏಕದಿನ ವಿಶ್ವಕಪ್​ ಮತ್ತು ಏಷ್ಯಾಕಪ್ ಟೂರ್ನಿಗೆ ಉಪನಾಯಕತ್ವ ಪಟ್ಟ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಸ್ಥಾನಕ್ಕೆ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಪೈಪೋಟಿ ಏರ್ಪಟ್ಟಿದೆ. ಆದರೆ ಪಿಟಿಐ ಮಾಡಿರುವ ವರದಿ ಪ್ರಕಾರ, ಬೂಮ್ರಾನೇ ಮೇಲುಗೈ ಸಾಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ನಾಯಕತ್ವದ ವಿಚಾರಕ್ಕೆ ಸಂಬಂಧಿಸಿ ಬೂಮ್ರಾ ಹಿರಿಯ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲು ಬಿಸಿಸಿಐ ತೀರ್ಮಾನಿಸಿದೆ.

ಟೆಸ್ಟ್​ ತಂಡಕ್ಕೆ ನಾಯಕನಾಗಿದ್ದ ಬೂಮ್ರಾ

ಐರ್ಲೆಂಡ್​ ಎದುರಿನ ಟಿ20 ಸರಣಿ ಮುನ್ನಡೆಸುತ್ತಿರುವ ಬೂಮ್ರಾ ಅವರು ಈ ಹಿಂದೆಯೂ ಫುಲ್​ ಸ್ಟ್ರೆಂಥ್​ ತಂಡಕ್ಕೂ ನಾಯಕತ್ವ ವಹಿಸಿದ್ದರು. 2022ರ ಜುಲೈನಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್​ ಪಂದ್ಯಕ್ಕೆ ರೋಹಿತ್​ ಅನುಪಸ್ಥಿತಿಯನ್ನು ತಂಡದ ಜವಾಬ್ದಾರಿ ಹೊತ್ತಿದ್ದರು. ಅಲ್ಲದೆ, ಅದಕ್ಕೂ ಹಿಂದೆ ಅದೇ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಭಾರತದ ಉಪನಾಯಕನಾಗಿ ಸೇವೆ ಸಲ್ಲಿಸಿದ್ದರು.

ಬೂಮ್ರಾಗೆ ನಾಯಕತ್ವ ಎಂದರೆ ಇಷ್ಟವಂತೆ!

ಕಳೆದ ಸೆಪ್ಟೆಂಬರ್​​ನ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಬೂಮ್ರಾ, ಸರಿಸುಮಾರು ವರ್ಷದ ನಂತರ ತಂಡದಲ್ಲಿ ಕಣಕ್ಕಿಳಿದಿದ್ದಾರೆ. ಕ್ಯಾಪ್ಟನ್ಸಿ ಮೇಲೆ ಹೆಚ್ಚು ಒಲವಿರುವುದೇ ಬೂಮ್ರಾಗೆ ಉಪನಾಯಕ ಸ್ಥಾನ ನೀಡಲು ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ಋತುರಾಜ್ ಗಾಯಕ್ವಾಡ್ ಬದಲಿಗೆ ಐರ್ಲೆಂಡ್​ ಸರಣಿಗೆ ಬೂಮ್ರಾರನ್ನೇ ಕ್ಯಾಪ್ಟನ್ ಮಾಡಲಾಗಿದೆ. ತಂಡವನ್ನು ಮುನ್ನಡೆಸುವ ಆಸೆ ವ್ಯಕ್ತಪಡಿಸಿದ ಹಿನ್ನೆಲೆ ಈ ಜವಾಬ್ದಾರಿ ನೀಡಲಾಗಿದೆ.

ಹಾರ್ದಿಕ್​​ ಕ್ಯಾಪ್ಟನ್ಸಿಗೂ ಕುತ್ತು?

ಸದ್ಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ, ಹಾರ್ದಿಕ್ ಪಾಂಡ್ಯ ಟಿ20 ನಾಯಕತ್ವ ಕಳೆದುಕೊಂಡರೂ ಅಚ್ಚರಿ ಇಲ್ಲ. ಸದ್ಯ ಏಕದಿನ ತಂಡದ ಉಪನಾಯಕತ್ವ ಕಳೆದುಕೊಳ್ಳಲಿರುವ ಹಾರ್ದಿಕ್, ಟಿ20 ತಂಡದ ನಾಯಕನಾಗಿ ಮುಂದುವರೆದಿದ್ದಾರೆ. ಆದರೆ ವೆಸ್ಟ್ ಇಂಡೀಸ್​ ಟಿ20 ಸರಣಿ ಸೋಲಲು ಅವರು ತೆಗೆದುಕೊಂಡ ಹಲವು ಅಚ್ಚರಿಯ ನಿರ್ಧಾರಗಳೇ ಕಾರಣ ಎಂಬ ಟೀಕೆ ವ್ಯಕ್ತವಾಗಿತ್ತು. ಹಾಗಾಗಿ, ಏಕದಿನ ತಂಡದ ವೈಸ್​ ಕ್ಯಾಪ್ಟನ್ಸಿ ಹಿಂಪಡೆಯಲು ಮುಂದಾಗಿರುವ ಬಿಸಿಸಿಐ, ಕಳಪೆ ಪ್ರದರ್ಶನ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಟಿ20 ನಾಯಕತ್ವದಿಂದಲೂ ಗೇಟ್​ಪಾಸ್​​ ನೀಡುವ ಎಚ್ಚರಿಕೆಯನ್ನೂ ನೀಡಿದೆ ಎನ್ನಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ