logo
ಕನ್ನಡ ಸುದ್ದಿ  /  ಕ್ರಿಕೆಟ್  /  ಚಹಲ್-ಕುಲ್ದೀಪ್​ಗಲ್ಲ, 23 ವರ್ಷದ ಈ ಆಟಗಾರನನ್ನು ಟಿ20 ವಿಶ್ವಕಪ್​ಗೆ ಅವಕಾಶ ನೀಡಿ; ಗವಾಸ್ಕರ್ ಸಲಹೆ

ಚಹಲ್-ಕುಲ್ದೀಪ್​ಗಲ್ಲ, 23 ವರ್ಷದ ಈ ಆಟಗಾರನನ್ನು ಟಿ20 ವಿಶ್ವಕಪ್​ಗೆ ಅವಕಾಶ ನೀಡಿ; ಗವಾಸ್ಕರ್ ಸಲಹೆ

Prasanna Kumar P N HT Kannada

Jan 12, 2024 10:31 AM IST

google News

ಸುನಿಲ್ ಗವಾಸ್ಕರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್.

    • Sunil Gavaskar: ಟಿ20 ವಿಶ್ವಕಪ್ ಟೂರ್ನಿಗೆ ಸ್ಪೆಷಲಿಸ್ಟ್​ ಸ್ಪಿನ್ನರ್ ಆಗಿ ರವಿ ಬಿಷ್ಣೋಯ್​ ಅವರನ್ನು ಆಯ್ಕೆ ಮಾಡಬೇಕು ಎಂದು ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸುನಿಲ್ ಗವಾಸ್ಕರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್.
ಸುನಿಲ್ ಗವಾಸ್ಕರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್.

ಅಫ್ಘಾನಿಸ್ತಾನ ವಿರುದ್ಧದ ನಡೆಯುತ್ತಿರುವ ಟಿ20ಐ ಸರಣಿ ಭಾರತ ಕ್ರಿಕೆಟ್ ತಂಡಕ್ಕೆ ಮಹತ್ವವಾದದ್ದು. ಏಕೆಂದರೆ, ಇದು ಟಿ20 ವಿಶ್ವಕಪ್ 2024ರ ಟೂರ್ನಿಗೂ ಮುನ್ನ ತಯಾರಿ ನಡೆಸಲು ಇರುವ ಕೊನೆಯ ಸರಣಿ. ಈಗಾಗಲೇ ಮೊದಲ ಟಿ20 ಪಂದ್ಯದಲ್ಲಿ ಗೆದ್ದಿರುವ ಭಾರತ 2ನೇ ಟಿ20 ಪಂದ್ಯಕ್ಕೆ ಮೆನ್ ಇನ್ ಬ್ಲೂ ಭರ್ಜರಿ ಸಿದ್ಧತೆ ನಡೆಸುತ್ತಿದೆ.

14 ತಿಂಗಳ ಸುದೀರ್ಘ ಅಂತರದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತೀಯ ಟಿ20 ತಂಡಕ್ಕೆ ಪುನರಾಗಮನದ ಮೇಲೆ ಹೆಚ್ಚಿನ ಗಮನಹರಿಸಿದ್ದರೂ ಟಿ20 ವಿಶ್ವಕಪ್​ಗೆ ಮೊದಲ ಆಯ್ಕೆಯ ಮಣಿಕಟ್ಟಿನ ಸ್ಪಿನ್ನರ್ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅನುಭವಿ-ಅನಾನುಭವಿ ಆಟಗಾರರ ನಡುವೆ ಪೈಪೋಟಿ ನಡೆಯುತ್ತಿದೆ.

ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಅದರಂತೆ ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್ ಮತ್ತು ರವಿ ಬಿಷ್ಣೋಯ್ ಈ ಮೂವರಲ್ಲಿ ಒಬ್ಬರನ್ನು ಟಿ20 ವಿಶ್ವಕಪ್​ಗೆ ಸ್ಪೆಷಲಿಸ್ಟ್ ಸ್ಪಿನ್ನರ್ ಆಯ್ಕೆ ಸಾಕಷ್ಟು ಕಷ್ಟವಾಗುತ್ತಿದೆ.

ರವಿ ಬಿಷ್ಣೋಯ್​ನನ್ನ ಆಯ್ಕೆ ಮಾಡಿ ಎಂದ ಗವಾಸ್ಕರ್​

ಇದೀಗ ಟಿ20 ವಿಶ್ವಕಪ್ ಟೂರ್ನಿಗೆ ಸ್ಪೆಷಲಿಸ್ಟ್​ ಸ್ಪಿನ್ನರ್ ಆಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, 'ಕುಲ್ಚಾ' ಜೋಡಿಯನ್ನು ತಿರಸ್ಕರಿಸಿದ್ದಾರೆ. 23 ವರ್ಷದ ಯುವ ಆಟಗಾರನಿಗೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ.

ಕುಲ್ದೀಪ್​ ಯಾದವ್ ಮತ್ತು ಯುಜ್ವೇಂದ್ರ ಚಹಲ್ ಅವರ ಬದಲಿಗೆ 23ರ ಹರೆಯದ ಆಟಗಾರ ರವಿ ಬಿಷ್ಣೋಯ್ ಆಯ್ಕೆಗೆ ಗವಾಸ್ಕರ್​ ಸಲಹೆ ನೀಡಿದ್ದಾರೆ. ಆತ ಅತ್ಯುತ್ತಮ ಫೀಲ್ಡರ್ ಆಗಿದ್ದು, ಬ್ಯಾಟಿಂಗ್​​ನಲ್ಲೂ ಕಾಣಿಕೆ ನೀಡುತ್ತಾರೆ. ಆತ ಕೇವಲ ಬೌಲಿಂಗ್​ ಮಾತ್ರ ಸೀಮಿತವಲ್ಲ ಎಂಬುದು ಪ್ರಮುಖ ವಿಷಯ ​ಎಂದು ಗವಾಸ್ಕರ್ ಹೇಳಿದ್ದಾರೆ.

‘ಚಹಲ್-ಕುಲ್ದೀಪ್​ಗಿಂತ ಉತ್ತಮ’

ನಾನು ಮೊದಲ ಸ್ಪಿನ್ನರ್​ ಆಗಿ ರವಿ ಬಿಷ್ಣೋಯ್ ಆಯ್ಕೆ ಮಾಡುತ್ತೇನೆ. ಅಲ್ಲದೆ, ಅತ್ಯುತ್ತಮ ಫೀಲ್ಡರ್. ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್​ಗಿಂತ ಉತ್ತಮ ಫೀಲ್ಡರ್. ಆತ ಬ್ಯಾಟಿಂಗ್ ಸಹ ಮಾಡಲಿದ್ದಾರೆ. ಬುದ್ಧಿವಂತಿಕೆಯಿಂದ ಬೌಲಿಂಗ್​ ಮತ್ತು ಶಾಂತತೆಯ ಮೂಲಕ ಪಂದ್ಯಗಳನ್ನು ಗೆದ್ದ ಉದಾಹರಣೆ ಇದೆ ಎಂದು ಬಣ್ಣಿಸಿದ್ದಾರೆ.

ಕಳೆದ ಐಪಿಎಲ್‌ನಲ್ಲಿ ಬಿಷ್ಣೋಯ್ ಮತ್ತು ಅವೇಶ್ ಖಾನ್ ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಹಾಗಾಗಿ ಅನುಭವಿಗಳ ಬದಲಿಗೆ ನಾನು ರವಿ ಬಿಷ್ಣೋಯ್ ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡುವಂತೆ ಸಲಹೆ ನೀಡುತ್ತೇನೆ ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಗವಾಸ್ಕರ್ ಹೇಳಿದ್ದಾರೆ.

ಬಿಷ್ಣೋಯ್ vs ಕುಲ್ದೀಪ್ vs ಚಹಲ್

ಭಾರತ-ಅಫ್ಘಾನಿಸ್ತಾನ ಸರಣಿಯ ಮೊದಲ ಟಿ20ಐನಲ್ಲಿ ಕುಲ್ದೀಪ್ ಬದಲಿಗೆ ರವಿ ಬಿಷ್ಣೋಯ್​ ಕಣಕ್ಕಿಳಿದಿದ್ದರು. 3 ಓವರ್​​ಗಳಿಗೆ 35 ರನ್ ಬಿಟ್ಟುಕೊಟ್ಟರು. ನವೆಂಬರ್-ಡಿಸೆಂಬರ್​​ನಲ್ಲಿ ಮುಕ್ತಾಯಗೊಂಡ ಆಸ್ಟ್ರೇಲಿಯಾ vs ಭಾರತ ನಡುವಿನ 5 ಪಂದ್ಯಗಳ ಟಿ20 ಸರಣಿಯಲ್ಲಿ 9 ವಿಕೆಟ್‌ ಗಳಿಸುವ ಮೂಲಕ ಸರಣಿ ಪ್ರಶಸ್ತಿ ಗೆದ್ದಿದ್ದರು ಬಿಷ್ಣೋಯ್.

ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಬಿಷ್ಣೋಯ್ ಬದಲಿಗೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದ ಕುಲ್ದೀಪ್ ಯಾದವ್ ಕೂಡ ಬೆಂಕಿ ಪ್ರದರ್ಶನ ನೀಡಿದ್ದರು. ಜೋಬರ್ಗ್ ಘರ್ಷಣೆಯಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದರು. ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯಲ್ಲಿ ಚಹಲ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ಆ ಬಳಿಕ ಆಡಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ