logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್ ಅಲ್ಲ! ಆರ್​ಸಿಬಿ ಪರ ಅಬ್ಬರಿಸಬೇಕಾದ ಆಟಗಾರರನ್ನು ಹೆಸರಿಸಿದ ಸುನಿಲ್ ಗವಾಸ್ಕರ್

ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್ ಅಲ್ಲ! ಆರ್​ಸಿಬಿ ಪರ ಅಬ್ಬರಿಸಬೇಕಾದ ಆಟಗಾರರನ್ನು ಹೆಸರಿಸಿದ ಸುನಿಲ್ ಗವಾಸ್ಕರ್

Prasanna Kumar P N HT Kannada

Feb 08, 2024 07:00 AM IST

ಆರ್​ಸಿಬಿ ಪರ ಅಬ್ಬರಿಸಬೇಕಾದ ಆಟಗಾರರನ್ನು ಹೆಸರಿಸಿದ ಸುನಿಲ್ ಗವಾಸ್ಕರ್

    • Sunil Gavaskar on Cameron Green : 17ನೇ ಆವೃತ್ತಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕ್ಯಾಮರೂನ್ ಗ್ರೀನ್ ಅಬ್ಬರಿಸಬೇಕಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಆರ್​ಸಿಬಿ ಪರ ಅಬ್ಬರಿಸಬೇಕಾದ ಆಟಗಾರರನ್ನು ಹೆಸರಿಸಿದ ಸುನಿಲ್ ಗವಾಸ್ಕರ್
ಆರ್​ಸಿಬಿ ಪರ ಅಬ್ಬರಿಸಬೇಕಾದ ಆಟಗಾರರನ್ನು ಹೆಸರಿಸಿದ ಸುನಿಲ್ ಗವಾಸ್ಕರ್

17 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಕೆಲವೇ ತಿಂಗಳಲ್ಲಿ ಪ್ರಾರಂಭವಾಗಲಿದೆ. 10 ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲು ಭರ್ಜರಿ ತಯಾರಿ ನಡೆಸುತ್ತಿವೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಎಲ್ಲರ ಕಣ್ಣುಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೇಲೆ ಬಿದ್ದಿವೆ. 16 ಆವೃತ್ತಿಗಳಲ್ಲಿ ಮೂರು ಫೈನಲ್ ಪ್ರವೇಶಿಸಿದ ಆರ್​​ಸಿಬಿ ಒಂದು ಬಾರಿಯೂ ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ಚೊಚ್ಚಲ ಐಪಿಎಲ್​ ಕಿರೀಟಕ್ಕೆ ಮುತ್ತಿಕ್ಕಬೇಕೆಂದರೆ ಬೆಂಗಳೂರು ಪರ ಅಬ್ಬರಿಸಬೇಕಾದ ಆಟಗಾರನ ಹೆಸರನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar)​ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಆರ್​ಸಿಬಿ ಆಟಗಾರರಿಗೆ ಹ್ಯಾಂಡ್​ಶೇಕ್ ಮಾಡದೆ ಮೈದಾನ ತೊರೆದ ಎಂಎಸ್ ಧೋನಿ; ಮಾಹಿ ಹುಡುಕುತ್ತಾ ಹೊರಟ ವಿರಾಟ್ ಕೊಹ್ಲಿ

ಸುನಿಲ್ ಗವಾಸ್ಕರ್ ಪ್ರಕಾರ, ಐಪಿಎಲ್ 2024 ಟ್ರೇಡ್ ವಿಂಡೋದಲ್ಲಿ 17.5 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡದಿಂದ ಆರ್​​ಸಿಬಿ ಟ್ರೇಡ್ ಆಗಿರುವ ಕ್ಯಾಮರೂನ್ ಗ್ರೀನ್ ಅವರು ಉತ್ತಮ ಪ್ರದರ್ಶನ ನೀಡಿದರೆ ನಗದು ಸಮೃದ್ಧ ಲೀಗ್‌ನ ಮುಂಬರುವ ಋತುವಿನಲ್ಲಿ ಆರ್​​ಸಿಬಿ ಕಪ್​ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ನಡೆದ ಸಂವಾದದಲ್ಲಿ ಸುನಿಲ್ ಗವಾಸ್ಕರ್, ದುಬಾರಿ ಮೊತ್ತವನ್ನು ಪಡೆದಿರುವ ಗ್ರೀನ್​ 2023 ಐಪಿಎಲ್​ಗಿಂತ ಈ ಬಾರಿ ಉತ್ತಮ ಕಾರ್ಯ ನಿರ್ವಹಿಸುವುದು ಅಗತ್ಯ ಇದೆ ಎಂದು ಹೇಳಿದ್ದಾರೆ.

‘ಮುಂಬೈ ಇನ್ನೂ ಚೇತರಿಸಿಕೊಳ್ಳುತ್ತಿದೆ’

ನೀವು ಅವರನ್ನು ಖರೀದಿಸಿದ ಬೆಲೆಯಿಂದಾಗಿ ಈ ಆಟಗಾರ ಕಳೆದ ವರ್ಷಕ್ಕಿಂತ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಹೌದು, ಕಳೆದ ವರ್ಷ ಮುಂಬೈ ಇಂಡಿಯನ್ಸ್‌ ಪರ ಅವರು ಶತಕ ಸಿಡಿಸಿದ್ದರೆಂದು ನಾನು ಒಪ್ಪುತ್ತೇನೆ. ಆದಾಗ್ಯೂ ಅವರು ಅದಕ್ಕಿಂತ ಉತ್ತಮ ಪ್ರದರ್ಶನ ನೀಡಬೇಕು. ನೀವು ಆತನನ್ನು ಖರೀದಿಸಿದ ಬೆಲೆ ಮರು ಪಡೆಯಿರಿ. ಆದರೆ ಗ್ರೀನ್​ಗೆ ಕೊಟ್ಟಿದ್ದ ಹಣವನ್ನು ಮರಳಿ ಪಡೆಯಲು ಮುಂಬೈ ಇಂಡಿಯನ್ಸ್​ಗೆ ಸಾಧ್ಯವಾಗಿಲ್ಲ. ಇನ್ನೂ ಚೇತರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

‘ಬ್ಯಾಟಿಂಗ್​ನಲ್ಲಿ ಸಂಘಟಿತರಾಗಿದ್ದಾರೆ’

ಗ್ರೀನ್​ಗೆ ಕೊಟ್ಟಿರುವ ಬೆಲೆಯಿಂದ ಆರ್​ಸಿಬಿ ಚೇತರಿಸಿಕೊಳ್ಳಬೇಕೆಂದರೆ, ಆತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಬೇಕು ಎಂದು ಮಾಜಿ ಭಾರತದ ದಂತಕಥೆ ಅಭಿಪ್ರಾಯಪಟ್ಟರು. ಅದ್ಭುತಗಳನ್ನೇ ಸೃಷ್ಟಿಸಬೇಕು. ಅವರಿಗೆ ಆ ಸಾಮರ್ಥ್ಯ ಇದೆ. ಈಗಾಗಲೇ ಬ್ಯಾಟಿಂಗ್​ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ದೊಡ್ಡ ಹೊಡೆತಗಳನ್ನು ಆಡಬಲ್ಲರು. ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಸಂಘಟಿತರಾಗಿದ್ದಾರೆ ಎಂದು ಗವಾಸ್ಕರ್ ಸೇರಿಸಿದ್ದಾರೆ.

ಗ್ರೀನ್​ ಪಾತ್ರ ಯಾವುದೆಂದು ತಿಳಿಸಿದ ಗವಾಸ್ಕರ್

ಈಗಾಗಲೇ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಹೊಂದಿರುವುದರಿಂದ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬೇಕು ಎಂಬುದನ್ನು ಗವಾಸ್ಕರ್ ಸೂಚಿಸಿದ್ದಾರೆ. ಆರ್​ಸಿಬಿ ಈಗಾಗಲೇ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಹೊಂದಿರುವ ಕಾರಣ, ಗ್ರೀನ್​ ಫಿನಿಶರ್ ಆಗಿ ತಮ್ಮ ಸೇವೆ ಸಲ್ಲಿಸಬೇಕಿದೆ ಎಂದು ನಾನು ಭಾವಿಸುತ್ತೇನೆ. ರಜತ್ ಪಾಟೀದಾರ್ ನಂಬರ್​​ 3 ರಲ್ಲಿ ಆಡುತ್ತಾರೆ. ಆರಂಭಿಕರಾಗಿ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ನಂಬರ್​​ 4 ಆಡಲಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಆರ್​​​ಸಿಬಿ ಪ್ರದರ್ಶನ

ಕಳೆದ ಐಪಿಎಲ್​ನಲ್ಲಿ ಆರ್​ಸಿಬಿ ಅದ್ಭುತ ಪ್ರದರ್ಶನ ನೀಡಿತ್ತು. ಆದರೆ ಪ್ಲೇ ಆಫ್​ಗೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು. 2022ರಲ್ಲಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದ್ದರೂ, ಫೈನಲ್​ ಪ್ರವೇಶಿಸಲು ವಿಫಲವಾಗಿತ್ತು. 2016ರಲ್ಲಿ ಕೊನೆಯ ಬಾರಿಗೆ ಫೈನಲ್​ ಪ್ರವೇಶಿಸಿರುವ ಆರ್​​ಸಿಬಿ ಆ ಬಳಿಕ ಪ್ಲೇ ಆಫ್​ಗಷ್ಟೇ ಸೀಮಿತಗೊಂಡಿದೆ. 2009, 2011 ಮತ್ತು 2016ರಲ್ಲಿ ಆರ್​ಸಿಬಿ ರನ್ನರ್​ಅಪ್​ಗೆ ತೃಪ್ತಿಗೊಂಡಿದೆ. 17ನೇ ಆವೃತ್ತಿಯಲ್ಲಾದರೂ ಟ್ರೋಫಿ ವನವಾಸ ಅಂತ್ಯಗೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ