logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಅಲ್ಲ; ಆರ್​ಸಿಬಿ ಮಾಜಿ ಬ್ಯಾಟರ್ ನನ್ನ ಕನಸಿನ ಬ್ಯಾಟಿಂಗ್ ಪಾಲುದಾರ ಎಂದ ಬಾಬರ್ ಅಜಮ್

ವಿರಾಟ್ ಕೊಹ್ಲಿ ಅಲ್ಲ; ಆರ್​ಸಿಬಿ ಮಾಜಿ ಬ್ಯಾಟರ್ ನನ್ನ ಕನಸಿನ ಬ್ಯಾಟಿಂಗ್ ಪಾಲುದಾರ ಎಂದ ಬಾಬರ್ ಅಜಮ್

Prasanna Kumar P N HT Kannada

Feb 02, 2024 05:44 PM IST

ಆರ್​ಸಿಬಿ ಮಾಜಿ ಬ್ಯಾಟರ್ ನನ್ನ ಕನಸಿನ ಬ್ಯಾಟಿಂಗ್ ಪಾಲುದಾರ ಎಂದ ಬಾಬರ್ ಅಜಮ್

    • Babar Azam : ಕ್ರಿಕೆಟ್​ನಲ್ಲಿ ತಮ್ಮ ನೆಚ್ಚಿನ ಬ್ಯಾಟಿಂಗ್​ ಪಾಲುದಾರ ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಕೈ ಬಿಟ್ಟಿರುವ ಬಾಬರ್ ಅಜಮ್, ಎಬಿ ಡಿವಿಲಿಯರ್ಸ್​ ಅವರಿಗೆ ಮತ ಹಾಕಿದ್ದಾರೆ.
ಆರ್​ಸಿಬಿ ಮಾಜಿ ಬ್ಯಾಟರ್ ನನ್ನ ಕನಸಿನ ಬ್ಯಾಟಿಂಗ್ ಪಾಲುದಾರ ಎಂದ ಬಾಬರ್ ಅಜಮ್
ಆರ್​ಸಿಬಿ ಮಾಜಿ ಬ್ಯಾಟರ್ ನನ್ನ ಕನಸಿನ ಬ್ಯಾಟಿಂಗ್ ಪಾಲುದಾರ ಎಂದ ಬಾಬರ್ ಅಜಮ್

ದಕ್ಷಿಣ ಆಫ್ರಿಕಾ ತಂಡದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ (AB de Villiers) ಅವರನ್ನು ತಮ್ಮ ನೆಚ್ಚಿನ ಬ್ಯಾಟಿಂಗ್ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಪಾಕಿಸ್ತಾನದ ಬಾಬರ್ ಅಜಮ್ (Babar Azam) ಹೇಳಿದ್ದಾರೆ. ಟ್ವಿಟ್ಟರ್‌ನಲ್ಲಿ ಯಾರೊಂದಿಗೆ ಬ್ಯಾಟಿಂಗ್ ಮಾಡಲು ಬಯಸುತ್ತೀರಾ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಬರ್ ಅಜಮ್, ಎಬಿ ಡಿವಿಲಿಯರ್ಸ್ ಹೆಸರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ನಿರ್ಣಾಯಕ​ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಎಸ್​ಕೆ ಬೌಲಿಂಗ್ ಆಯ್ಕೆ; ಆರ್​ಸಿಬಿ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್​ ಟಿಕೆಟ್

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

ಐಪಿಎಲ್ vs ಪಿಎಸ್​​ಎಲ್ - ಯಾವುದು ಬೆಸ್ಟ್?

ವಿಶ್ವಕಪ್ ಗೆಲ್ಲುವುದು ತನ್ನ ಜೀವನದ ದೊಡ್ಡ ಕನಸು ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಮಾಜಿ ನಾಯಕನಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ ನಡುವಿನ ಉತ್ತಮ ಟಿ20 ಲೀಗ್ ಆಯ್ಕೆ ಮಾಡಲು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪಾಕ್ ಆಟಗಾರ ಐಪಿಎಲ್​ಗೆ ಬೆಂಬಲ ನೀಡದೆ, ಪಿಎಸ್‌ಎಲ್‌ಗೆ ಮತ ಹಾಕಿದರು. ಅಲ್ಲದೆ, ಕರಾಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 196 ರನ್‌ಗಳ ಇನ್ನಿಂಗ್ಸ್ ತಮ್ಮ ಅತ್ಯುತ್ತಮ ಟೆಸ್ಟ್ ಇನ್ನಿಂಗ್ಸ್​ ಎಂದು ಹೇಳಿದ್ದಾರೆ.

ಭಾವನಾತ್ಮಕ ಕ್ಷಣವನ್ನು ತಿಳಿಸಿದ ಬಾಬರ್​

ಜೀವನದಲ್ಲಿ ಅತ್ಯಂತ ಭಾವನಾತ್ಮಕ ಕ್ಷಣವನ್ನು ಯಾವುದೆಂದು ಕೇಳಲಾಯಿತು. ಪಾಕಿಸ್ತಾನದ ತಂಡದಲ್ಲಿ ನನ್ನ ಹೆಸರು ಪ್ರಕಟಗೊಂಡ ವೇಳೆ ಕಣ್ಣೀರು ಹಾಕಿದ್ದೆ ಎಂದು ಅನುಭವಿ ಬ್ಯಾಟರ್ ಆ ದಿನವನ್ನು ನೆನಪಿಸಿಕೊಂಡರು. ಜತೆಗೆ ಮತ್ತೊಂದು ಕ್ಷಣವನ್ನೂ ಹಂಚಿಕೊಂಡರು. ಪಾಕಿಸ್ತಾನದ ನಾಯಕನಾಗಿ ನೇಮಕಗೊಂಡಾಗಲೂ ನನಗೆ ತುಂಬಾ ಭಾವನಾತ್ಮಕವಾಗಿದ್ದೆ ಎಂದು ಬಾಬರ್ ತಿಳಿಸಿದ್ದಾರೆ.

ಬಾಬರ್ ಮದುವೆ ಯಾವಾಗ?

ಇದೇ ವೇಳೆ ಮೊಹಮ್ಮದ್ ರಿಜ್ವಾನ್ ಕೂಡ ಚರ್ಚೆಯಲ್ಲಿ ಪಾಲ್ಗೊಂಡು ಬಾಬರ್ ಅವರ ಮದುವೆ ಬಗ್ಗೆ ಕೇಳಿದರು. ಆದಾಗ್ಯೂ, ಬಾಬರ್ ಅಚ್ಚರಿಯ ಉತ್ತರವನ್ನು ನೀಡಿದರು. ನಾನು ನಿನಗೆ ಖಾಸಗಿಯಾಗಿ ಉತ್ತರಿಸುತ್ತೇನೆ ಎಂದು ಹೇಳಿದರು. ಆದರೆ ಇದು ಅಭಿಮಾನಿಗಳಿಗೆ ಬೇಸರ ತರಿಸಿತು. ತಮ್ಮ ವೃತ್ತಿಜೀವನದ ಮೇಲೆ ಸರ್ಫರಾಜ್ ಅಹ್ಮದ್ ಅವರ ಪ್ರಭಾವ ಹೇಗೆ ಬೀರಿತು ಎನ್ನುವುದರ ಕುರಿತು ಬಾಬರ್ ಮಾತನಾಡಿದ್ದಾರೆ.

ಅವರಿಂದಲೇ ನಾನಿಲ್ಲಿದ್ದೇನೆ ಎಂದ ಮಾಜಿ ನಾಯಕ

ನನ್ನ ಆರಂಭಿಕ ದಿನಗಳಲ್ಲಿ ಮಾಜಿ ನಾಯಕ ತುಂಬಾ ಬೆಂಬಲಿಸಿದರು ಎಂದು ಹೇಳಿದ ಬಾಬರ್, ಸೈಫೀ ಭಾಯ್ (ಸರ್ಫರಾಜ್ ಖಾನ್) ನನ್ನ ಬ್ಯಾಟ್‌ಗಳನ್ನು ತುಂಬಾ ಇಷ್ಟಪಡುತ್ತಾರೆ. ಇದು ನನ್ನ ಬ್ಯಾಟ್ ಎಂದು ಅವರು ಯಾವಾಗಲೂ ಹೇಳುತ್ತಾರೆ. ಸೈಫೀ ಭಾಯ್ ಯಾವಾಗಲೂ ನಮ್ಮನ್ನು ಬೆಂಬಲಿಸುತ್ತಾರೆ. ಅವರಿಂದಲೇ ನಾನು ಇಂದು ಇಲ್ಲಿದ್ದೇನೆ ಎಂದು ಹೇಳಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ ಹೀನಾಯ ಪ್ರದರ್ಶನದ ನಂತರ ಬಾಬರ್, 3 ಮಾದರಿಯ ಕ್ರಿಕೆಟ್ ಫಾರ್ಮೆಟ್​ ನಾಯಕತ್ವದಿಂದ ಕೆಳಗಿಳಿದರು.

ಪ್ರಸ್ತುತ ಬಿಪಿಎಲ್ ಆಡ್ತಿರುವ ಬಾಬರ್

ಬಾಬರ್ ಅಜಮ್ ಪ್ರಸ್ತುತ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ರಂಗ್‌ಪುರ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ. ಬಾಬರ್ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಬಾಬರ್​, ನ್ಯೂಜಿಲೆಂಡ್ ವಿರುದ್ಧ ಟಿ20ಐ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಸದ್ಯ ಬಿಬಿಎಲ್​ನಲ್ಲಿ 4 ಪಂದ್ಯಗಳಲ್ಲಿ 157 ರನ್ ಗಳಿಸಿ ಮತ್ತೊಮ್ಮೆ ಟಿ20ಯಲ್ಲಿ ಮಿಂಚುತ್ತಿದ್ದಾರೆ.

IPL, 2024

Live

RCB

31/0

3.0 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ