logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮದುವೆಯಾದ ಮರು ವರ್ಷವೇ ಕ್ರಿಕೆಟ್ ವಿಶ್ವಕಪ್ ಗೆದ್ದ ಸ್ಟಾರ್ ನಾಯಕರು; ಪಾಂಟಿಂಗ್‌ರಿಂದ ಕಮಿನ್ಸ್‌ವರೆಗೆ ಯಾರೆಲ್ಲಾ ಇದ್ದಾರೆ

ಮದುವೆಯಾದ ಮರು ವರ್ಷವೇ ಕ್ರಿಕೆಟ್ ವಿಶ್ವಕಪ್ ಗೆದ್ದ ಸ್ಟಾರ್ ನಾಯಕರು; ಪಾಂಟಿಂಗ್‌ರಿಂದ ಕಮಿನ್ಸ್‌ವರೆಗೆ ಯಾರೆಲ್ಲಾ ಇದ್ದಾರೆ

Raghavendra M Y HT Kannada

Nov 20, 2023 08:09 PM IST

google News

ವಿವಾಹವಾದ ಮರು ವರ್ಷವೇ ಕ್ರಿಕೆಟ್ ವಿಶ್ವಕಪ್ ಗೆದ್ದ ಲಕ್ಕಿ ನಾಯಕರು ಇವರೇ ನೋಡಿ.

  • ಮದುವೆಯಾದ ಮರು ವರ್ಷವೇ ವಿಶ್ವಕಪ್ ಗೆದ್ದ ಸ್ಟಾರ್ ನಾಯಕ ಪಟ್ಟಿ ಇಲ್ಲಿದೆ. ಎಂಎಸ್‌ ಧೋನಿಯಿಂದ ಕಮಿನ್ಸ್‌ವರೆಗೆ ಯಾರೆಲ್ಲಾ ಇದ್ದಾರೆ ನೋಡಿ.

ವಿವಾಹವಾದ ಮರು ವರ್ಷವೇ ಕ್ರಿಕೆಟ್ ವಿಶ್ವಕಪ್ ಗೆದ್ದ ಲಕ್ಕಿ ನಾಯಕರು ಇವರೇ ನೋಡಿ.
ವಿವಾಹವಾದ ಮರು ವರ್ಷವೇ ಕ್ರಿಕೆಟ್ ವಿಶ್ವಕಪ್ ಗೆದ್ದ ಲಕ್ಕಿ ನಾಯಕರು ಇವರೇ ನೋಡಿ.

2023ರ ಆವೃತ್ತಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹೊರಹೊಮ್ಮಿದೆ. ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ನಾಯಕ ಪ್ಯಾಟ್ ಕಮಿನ್ಸ್‌ಗೆ ಇದು ಉತ್ತಮ ವರ್ಷ. ಕಮಿನ್ಸ್ ಈ ವರ್ಷ ಆಸ್ಟ್ರೇಲಿಯಾವನ್ನು ಟೆಸ್ಟ್ ಚಾಂಪಿಯನ್‌ಶಿಪ್, ಆಶಸ್ ಸರಣಿ ಮತ್ತು ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನ ಮುನ್ನಡೆಸಿದ್ದಾರೆ.

ಇದೀಗ ಈ ವಿಶ್ವಕಪ್ ಗೆಲುವಿನೊಂದಿಗೆ ಪ್ಯಾಟ್ ಕಮ್ಮಿನ್ಸ್ ವಿಶೇಷ ಕ್ಲಬ್ ಸೇರಿದ್ದಾರೆ. ಮದುವೆಯಾದ ಮರು ವರ್ಷವೇ ವಿಶ್ವಕಪ್ ಚಾಂಪಿಯನ್ ಆಗಿರುವ ನಾಯಕರ ಪಟ್ಟಿಗೆ ಪ್ಯಾಟ್ ಕಮಿನ್ಸ್ ಸೇರಿಕೊಂಡಿದ್ದಾರೆ.

ಈ ಹಿಂದೆ ರಿಕಿ ಪಾಂಟಿಂಗ್, ಎಂಎಸ್ ಧೋನಿ ಮತ್ತು ಇಯಾನ್ ಮಾರ್ಗನ್ ಅವರೊಂದಿಗೆ ಈ ಅಪರೂಪದ ಕ್ಲಬ್‌ಗೆ ಇದೀಗ ಈ ಪಟ್ಟಿಗೆ ಪ್ಯಾಟ್ ಕಮಿನ್ಸ್ ಹೆಸರು ಸೇರ್ಪಡೆಯಾಗಿದೆ.

ಮದುವೆಯಾದ ಮರು ವರ್ಷವೇ ವಿಶ್ವಕಪ್ ಗೆದ್ದ ಸ್ಟಾರ್ ನಾಯಕರು

ಪ್ಯಾಟ್ ಕಮಿನ್ಸ್ 2022ರಲ್ಲಿ ತನ್ನ ಗೆಳತಿ ಬೆಕಿ ಬೋಸ್ಟನ್ ಅವರನ್ನು ವಿವಾಹವಾದರು. ಇದರೊಂದಿಗೆ ಮದುವೆಯಾದ ಒಂದು ವರ್ಷದ ನಂತರ ಏಕದಿನ ವಿಶ್ವಕಪ್ ಚಾಂಪಿಯನ್ ನಾಯಕರಾಗಿದ್ದಾರೆ.

ಅದೇ ರೀತಿ ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ ಕೂಡ ಮದುವೆಯಾದ ಒಂದು ವರ್ಷದ ನಂತರ ವಿಶ್ವ ಚಾಂಪಿಯನ್ ಆದರು. ಮಾರ್ಗನ್ 2018 ರಲ್ಲಿ ರಿಡ್ಜ್‌ವೇ ಅವರನ್ನು ಮದುವೆಯಾದರು. ಒಂದು ವರ್ಷದ ನಂತರ, ಮಾರ್ಗನ್ ನಾಯಕತ್ವದಲ್ಲಿ, ಇಂಗ್ಲೆಂಡ್ 2019ರ ವಿಶ್ವಕಪ್ ಮುಡಿಗೇರಿಸಿಕೊಂಡಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು.

ರಿಕಿ ಪಾಂಟಿಂಗ್, ಎಂಎಸ್‌ ಧೋನಿ ಅವರಿಗೂ ಅದೃಷ್ಟ ತಂದ ಮದುವೆ

ಪ್ಯಾಟ್ ಕಮಿನ್ಸ್ ಮತ್ತು ಇಯಾನ್ ಮಾರ್ಗನ್ ಅವರಿಗೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರೂ ಈ ಅಪರೂದ ಕಬ್ಲ್‌ನಲ್ಲಿದ್ದಾರೆ. ಧೋನಿ 2010 ರಲ್ಲಿ ಸಾಕ್ಷಿ ರಾವತ್ ಅವರನ್ನು ವಿವಾಹವಾದರು. ಇದಾದ ಬಳಿಕ ಭಾರತ 2011ರ ವಿಶ್ವಕಪ್‌ನಲ್ಲಿ ಧೋನಿ ನಾಯಕತ್ವದಲ್ಲಿ ಗೆಲುವು ಸಾಧಿಸಿತ್ತು.

ಕೂಲ್ ಕ್ಯಾಪ್ಟನ್ ಧೋನಿ ಅವರಿಗೂ ಮೊದಲು ಅಂದರೆ 2003ರಲ್ಲಿ ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿತ್ತು. ಅದಕ್ಕೂ ಒಂದು ವರ್ಷದ ಮೊದಲು, 2002ರಲ್ಲಿ ಪಾಂಟಿಂಗ್ ಅವರು ರಿಯಾನ್ನಾ ಜೆನ್ನಿಫರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಕಾಕತಾಳೀಯತೆ ರಿಕಿ ಪಾಂಟಿಂಗ್‌ ಅವರಿಂದ ಪ್ರಾರಂಭವಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ