ವಿಶ್ವಕಪ್‌ನಲ್ಲಿ 50 ವಿಕೆಟ್‌ಗಳ ಸಾಧನೆ; ಮೆಗ್ರಾಥ್, ವಾಸೀಮ್ ಅಕ್ರಂ ವಿಶೇಷ ಕ್ಲಬ್ ಸೇರಿ ಟ್ರೆಂಟ್ ಬೌಲ್ಟ್
Nov 09, 2023 07:07 PM IST
ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಚರಿತ್ ಅಸಲಂಕಾ ಅವರನ್ನು ಎಲ್‌ಬಿಡಬ್ಲ್ಯೂಗೆ ಬೀಳಿಸಿದಾಗ ಟ್ರೆಂಟ್ ಬೌಲ್ಡ್ ಅಪೀಲ್ ಮಾಡಿದ್ದು ಹೀಗೆ.
ಏಕದಿನ ವಿಶ್ವಕಪ್‌ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿರುವ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಮೆಗ್ರಾಥ್ ಮತ್ತು ವಾಸಿಂ ಅಕ್ರಂ ವಿಶೇಷ ಕ್ಲಬ್ ಸೇರಿದ್ದಾರೆ.
ಬೆಂಗಳೂರು: ಐಸಿಸಿ ವಿಶ್ವಕಪ್ ಕ್ರಿಕೆಟ್‌ನ (ICC ODI World Cup 2023) 41ನೇ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ತಂಡದ ವೇಗಿ ಟ್ರೆಂಟ್ ಬೌಲ್ಟ್ (Trent Boult) ಅರ್ಧ ಶತಕ ಗಳಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ (Sri Lanka) ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ಒಂದೇ ಓವರ್‌ನಲ್ಲಿಲ 2 ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಹೊಸ ಚೆಂಡಿನಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಬಲ್ಲ ಬೌಲ್ಟ್ ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಮೊದಲ ನ್ಯೂಜಿಲೆಂಡ್ ತಂಡದ ಬೌಲರ್ ಎಂಬ ಹೆಗ್ಗಳಿಗೂ ಪಾತ್ರರಾಗಿದ್ದಾರೆ.
ಶ್ರೀಲಂಕಾದ ಆರಂಭಿಕ ಬ್ಯಾಟರ್ ಕುಸಾಲ್ ಪೆರೇರಾ ಈ ಪಂದ್ಯದಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡಿದರು. ಪೆರೇರಾ ಕೇವಲ 22 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸೇರಿ 50 ರನ್ ಗಳಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಟ್ರೆಂಟ್ ಬೋಲ್ಟ್ ಶ್ರೀಲಂಕಾಗೆ ಆಘಾತ ನೀಡಿದರು. ನಾಯಕ ಕುಸಾಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಅವರನ್ನು ಒಂದೇ ಓವರ್‌ನಲ್ಲಿ ಔಟ್ ಮಾಡಿದರು.
ಶ್ರೀಲಂಕಾ ನಾಯಕ ಕುಸಾಲ್ ಮೆಂಡಿಸ್ ಅವರನ್ನು ಬೌಲ್ಟ್ ಅವರನ್ನು ಔಟ್ ಮಾಡುವ ಮೂಲಕ ವಿಶ್ವಕಪ್‌ನಲ್ಲಿ 50ನೇ ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಬೌಲ್ಟ್ 3 ವಿಕೆಟ್ ಗಳಿಸಿದರು. ಬೌಲ್ಟ್ ಒಟ್ಟು 28 ಪಂದ್ಯಗಳನ್ನು ಆಡಿದ್ದಾರೆ. ಸರಾಸರಿ 24.17 ಮತ್ತು 4.83 ಏಕಾನಮಿಯಲ್ಲಿ 52 ವಿಕೆಟ್ ಗಳಿಸಿದ್ದಾರೆ. ಇನ್ನಿಂಗ್ಸ್‌ನಲ್ಲಿ ಒಮ್ಮೆ 5 ವಿಕೆಟ್, ಮೂರು ಬಾರಿ 4 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. 27 ರನ್‌ಗೆ 5 ವಿಕೆಟ್ ಪಡೆದಿರುವುದು ಇದುವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.
ವಿಶ್ವಕಪ್‌ನಲ್ಲಿ ಗ್ಲೆನ್ ಮೆಗ್ರಾಥ್ ಅತಿ ಹೆಚ್ಚು ವಿಕೆಟ್
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾಥ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಮೆಗ್ರಾಥ್ 71 ವಿಕೆಟ್ ಕಬಳಿಸಿದ್ದಾರೆ. ನಂತರದ ಸ್ಥಾನದಲ್ಲಿ ಮುತ್ತಯ್ಯ ಮುರಳೀಧರನ್ (68), ಮೆಚೆಲ್ ಸ್ಟಾರ್ಕ್ (59), ಲಸಿತ್ ಮಾಲಿಂಗ (56), ವಾಸಿಂ ಅಕ್ರಮ್ (55), ಟ್ರೆಂಟ್ ಬೌಲ್ಟ್ 52 ವಿಕೆಟ್ ಪಡೆದು ಪ್ರಸ್ತುತ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ.