logo
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Pak: ಗೆಲ್ಲೋಕೆ ಆಗದಿದ್ರೆ ಕನಿಷ್ಠ ಪಕ್ಷ ಪೈಪೋಟಿ ಕೊಡಿ; ಭಾರತ ವಿರುದ್ಧ ಪಾಕಿಸ್ತಾನ ಸಪ್ಪೆ ಆಟಕ್ಕೆ ಮಾಜಿ ನಾಯಕ ಕೆಂಡಾಮಂಡಲ

IND vs PAK: ಗೆಲ್ಲೋಕೆ ಆಗದಿದ್ರೆ ಕನಿಷ್ಠ ಪಕ್ಷ ಪೈಪೋಟಿ ಕೊಡಿ; ಭಾರತ ವಿರುದ್ಧ ಪಾಕಿಸ್ತಾನ ಸಪ್ಪೆ ಆಟಕ್ಕೆ ಮಾಜಿ ನಾಯಕ ಕೆಂಡಾಮಂಡಲ

Raghavendra M Y HT Kannada

Oct 15, 2023 10:47 AM IST

google News

ಟೀಂ ಇಂಡಿಯಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನ ಸೋತಿರುವುದಕ್ಕೆ ಪಾಕ್ ಮಾಜಿ ನಾಯಕ ರಮೀಜ್ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೋತಿರುವುದಕ್ಕೆ ಪಾಕ್‌ನ ಮಾಜಿ ಕ್ರಿಕೆಟಿಗರು ಆ ತಂಡ ಆಟಗಾರರ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ 8ನೇ ಸೋಲು ಕಂಡಿದೆ.

ಟೀಂ ಇಂಡಿಯಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನ ಸೋತಿರುವುದಕ್ಕೆ ಪಾಕ್ ಮಾಜಿ ನಾಯಕ ರಮೀಜ್ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನ ಸೋತಿರುವುದಕ್ಕೆ ಪಾಕ್ ಮಾಜಿ ನಾಯಕ ರಮೀಜ್ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್: ಐಸಿಸಿ ಪುರುಷರ ಏಕದಿನ ವಿಶ್ವಕಪ್‌ನ (ICC ODI World Cup 2023) ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ (India vs Pakistan) 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಆ ಮೂಲಕ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್ ತಂಡದ ಸೋಲಿನ ಆಟ ಮುಂದುವರೆದಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೋಡಿಯಂನಲ್ಲಿ ನೆರೆದಿದ್ದ 1 ಲಕ್ಷ 20 ಸಾವಿರಕ್ಕೂ ಮಂದಿ ಸೇರಿದ್ದ ಈ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನಕ್ಕೆ ಆ ತಂಡದ ಮಾಜಿ ನಾಯಕ, ಪಿಸಿಬಿ ಮಾಜಿ ಅಧ್ಯಕ್ಷರೂ ಆಗಿರುವ ರಮೀಜ್ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೆಲ್ಲೋಕೆ ಆಗದಿದ್ದರೆ ಸ್ಪರ್ಧೆಯನ್ನಾದ್ರೂ ನೀಡಿ

ಬಾಬರ್ ಅಜಮ್ ನೇತೃತ್ವದ ತಂಡದ ವಿರುದ್ಧ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದ ರಮೀಜ್, “ನಿಮ್ಮ ಕೈಯಲ್ಲಿ ಗೆಲ್ಲೋಕೆ ಆಗಲ್ವಾ, ಕನಿಷ್ಠ ಪಕ್ಷ ಪೈಪೋಟಿ ಕೊಡಿ. ಪಾಕಿಸ್ತಾನ ಕ್ರಿಕೆಟ್ ತಂಡದಿಂದ ಇದನ್ನೂ ಮಾಡುತ್ತಿಲ್ಲ” ಎಂದು ಪಾಕಿಸ್ತಾನ ಮಾಜಿ ನಾಯಕ ರಮೀಜ್ ರಾಜಾ ಆಕ್ರೋಶ ವ್ಯಕ್ತಪಸಿದ್ದಾರೆ.

ಇದು ಪಾಕಿಸ್ತಾನಕ್ಕೆ ತುಂಬಾ ನೋವಿನ ವಿಷಯವಾಗಿದೆ. ಯಾಕೆಂದರೆ ನಮ್ಮ ತಂಡ ಪೈಪೋಟಿಯನ್ನೇ ನೀಡಲು ಸಾಧ್ಯವಾಗಲಿಲ್ಲ ಎಂದು ರಮೀಜ್ ರಾಜಾ ಐಸಿಸಿ ರಿವ್ಯೂ ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನೀವು ಭಾರತದ ವಿರುದ್ಧ ಆಡುವಾಗ ಶೇಕಡಾ 99 ರಷ್ಟು ಭಾರತೀಯ ಅಭಿಮಾನಿಗಳು ಮತ್ತು ವೀಕ್ಷಕ ಜನಸಂದಣಿ ತುಂಬಿ ತುಳುಕುತ್ತಿರುವಾಗ ವಾತಾವರಣದಲ್ಲಿ ನಿಸ್ಸಂಶಯವಾಗಿ ಆಡಬೇಕಿದೆ. ನಾನು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇನೆ. ಆದರೆ ಬಾಬರ್ ಅಜಮ್ ಅವರು ನಾಲ್ಕೈದು ವರ್ಷಗಳಿಂದ ತಂಡವನ್ನು ಮುನ್ನಡೆಸಿದ್ದಾರೆ. ಆದ್ದರಿಂದ ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಬೇಕಿತ್ತು. ನೀವು ಗೆಲ್ಲಲು ಸಾಧ್ಯವಾಗದಿದ್ದರೆ, ಕನಿಷ್ಠ ಸ್ಪರ್ಧೆಯನ್ನು ನೀಡಿ, ಪಾಕಿಸ್ತಾನ ಅದನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ರಾಜಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

1992 ರಿಂದ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಗೆದ್ದೇ ಇಲ್ಲ

ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿತ್ತು. ನೆದರ್ಲೆಂಡ್ಸ್ ವಿರುದ್ಧ 81 ರನ್‌ಗಳ ಗೆಲುವು, ಶ್ರೀಲಂಕಾ ವಿರುದ್ಧ 345 ರನ್‌ಗಳ ಗುರಿಯನ್ನು ಚೇಸ್ ಮಾಡಿ ಗೆದ್ದಿತ್ತು. ಆದರೆ ಟೀಂ ಇಂಡಿಯಾ ವಿರುದ್ಧ ತುಂಬಾ ಕಳಪೆ ಪ್ರದರ್ಶನ ನೀಡಿದೆ. ವಿಶ್ವಕಪ್‌ನಲ್ಲಿ 1992 ರಿಂದ ಈವರೆಗೆ ಭಾರತ ವಿರುದ್ಧ ಪಾಕಿಸ್ತಾನ ಒಟ್ಟು 8 ಪಂದ್ಯಗಳನ್ನು ಮುಖಾಮುಖಿಯಾಗಿದ್ದು, ಎಂಟರಲ್ಲೂ ಸೋಲು ಕಂಡಂತಾಗಿದೆ.

ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಅತ್ಯಂತ ಕೆಟ್ಟ ದಾಖಲೆಯನ್ನು ಹೊಂದಿದೆ. ಆದರೆ ಮುಂದಿನ ಪಂದ್ಯಗಳನ್ನು ಗೆದ್ದು ಮುಂದೆ ಸಾಗಿದರೆ ದಾಖಲೆಯನ್ನು ಮುರಿಯಬಹುದು ಎಂದು ರಾಜಾ ಹೇಳಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೋಡಿಯಂನಲ್ಲಿ ನಿನ್ನೆ (ಅಕ್ಟೋಬರ್ 14, ಶನಿವಾರ) ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ 191 ರನ್ ಗಳಿಸಿ ಸರ್ವ ಪತನ ಕಂಡಿತು. 192 ರನ್‌ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ, ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ತಲಾ ಅರ್ಧ ಶತಕಗಳ ನೆರವಿನಿಂದ 30.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಪಾಕ್ ನೀಡಿದ್ದ ಗುರಿಯನ್ನು ಮುಟ್ಟಿತು. ಆ ಮೂಲಕ ಟೀಂ ಇಂಡಿಯಾ ಐಸಿಸಿ ವಿಶ್ವಕಪ್ 2023ರ ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ