logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ, ಮನೆಗೆ ಬಂದ ನೆಂಟರು ಕೊಟ್ಟ ಉಡುಗೊರೆ ಇದು; ಅಜಿತ್ ಬೊಪ್ಪನಳ್ಳಿ ಬರಹ

ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ, ಮನೆಗೆ ಬಂದ ನೆಂಟರು ಕೊಟ್ಟ ಉಡುಗೊರೆ ಇದು; ಅಜಿತ್ ಬೊಪ್ಪನಳ್ಳಿ ಬರಹ

Prasanna Kumar P N HT Kannada

Nov 26, 2024 07:12 AM IST

google News

ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ, ಮನೆಗೆ ಬಂದ ನೆಂಟರು ಕೊಟ್ಟ ಉಡುಗೊರೆ ಇದು; ಅಜಿತ್ ಬೊಪ್ಪನಳ್ಳಿ ಬರಹ

    • India vs Australia 1st Test: ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್​​ಗಳ ದಾಖಲೆಯ ಗೆಲುವು ಸಾಧಿಸಿದೆ. ಈ ಗೆಲುವಿನ ಕುರಿತು ಅಜಿತ್ ಬೊಪ್ಪನಳ್ಳಿ ಎಂಬವರು ಫೇಸ್​ಬುಕ್​​ನಲ್ಲಿ ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ, ಮನೆಗೆ ಬಂದ ನೆಂಟರು ಕೊಟ್ಟ ಉಡುಗೊರೆ ಇದು; ಅಜಿತ್ ಬೊಪ್ಪನಳ್ಳಿ ಬರಹ
ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ, ಮನೆಗೆ ಬಂದ ನೆಂಟರು ಕೊಟ್ಟ ಉಡುಗೊರೆ ಇದು; ಅಜಿತ್ ಬೊಪ್ಪನಳ್ಳಿ ಬರಹ (HT_PRINT)

ಪಡಿಕ್ಕಲ್ ಯಾವ್ ಬಸ್ಸನ್ನ ಹತ್ಕೊಂಡು ಬಂದ? ಅರೆ ಇವ್ನು ರೆಡ್ಡಿಗಾರು ಎಲ್ಲಿಂದ ಬಂದ? ರಾಣಾ ಇಲ್ಲೇನ್ ಮಾಡ್ತಾ ಇದಾನೆ? ಧ್ರುವ ಜುರೇಲ್ ಕೂಡ ಆಡ್ತಾ ಇದಾನಾ? ಅವರು ನೋಡಿದ್ರೆ ಅವರ ಬೆಸ್ಟ್ ಟೀಮ್ ತಂದಿದೆ. ಬೌಲಿಂಗ್ ಲೈನ್ ಅಪ್ ನೋಡಿದರೆ ಎದೆಯೊಳಗೆ ಜಲ್ಲಿ ಮಶೀನ್ ಆನ್ ಆದ ಹಾಗಿದೆ. ಖವಾಜಾ, ಸ್ಮಿತ್, ಹೆಡ್, ಲಬುಶೇನ್, ಮಾರ್ಶ್, ಕ್ಯಾಪ್ಟನ್ ಕಮ್ಮಿನ್ಸ್, ಸ್ಟಾರ್ಕ್, ಹೆಜಲ್​ವುಡ್, ನೇಥನ್ ಲಿಯಾನ್ ಯಪ್ಪಾ.. ಅನುಭವಿಗಳೇ ಎಲ್ಲಿ ನೋಡಿದರೂ ಕಾಣೋದು. ಮೊದಲ ಮ್ಯಾಚ್ ದೇವರಿಗೆ ಅಂತ ಭಾರತದ ಮೊದಲ ಇನ್ನಿಂಗ್ಸ್ ನೋಡಿ ನನ್ನನ್ನೂ ಸೇರಿ ಅನೇಕರಿಗೆ ಅನಿಸಿರಬಹುದು. ಇದಕ್ಕೆ ಇನ್ನೊಂದು ಕಾರಣ ಟೀಮಲ್ಲಿ ಕಂಡ ಮುಖಗಳುಭಾರಯ.

ಆದರೆ, ಈ ಆಟದಲ್ಲಿ ಏನನ್ನೂ ಬೇಗ ನಿರ್ಧರಿಸಬಾರದು ಅನ್ನೋದನ್ನ ಈ ಹಿಂದೆ ಅನೇಕ ಪಂದ್ಯಗಳು ಸಾಬೀತು ಮಾಡಿವೆ. ಮೊದಲ ಇನ್ನಿಂಗ್ಸ್​​ನಲ್ಲಿ ನಮ್ದು 150. ಆಸ್ಟ್ರೇಲಿಯಾ 104. ಕೊನೆ ವಿಕೆಟ್​​ಗೆ ಬಂದ 25 ರನ್ನುಗಳ ಪಾರ್ಟ್​ನರ್​​​ಶಿಪ್ ಅತಿ ದೊಡ್ಡದು. ಬುಮ್ರಾ, ರಾಣಾ, ಸಿರಾಜ್ ಎಸೆದಿದ್ದು ಬೆಂಕಿ ಉಂಡೆಗಳನ್ನ. ಎರಡೂ ತಂಡದ ಮೊದಲ ಇನ್ನಿಂಗ್ಸ್ ಸೇರಿಸಿದ್ರೆ ಆಗೋದು 254 ರನ್ಸ್. ಆದರೆ, ಈಗ ಭಾರತ ಗೆದ್ದ ಲೀಡ್ 295 ರನ್ಸ್.

ಎರಡನೇ ಇನ್ನಿಂಗ್ಸ್ ತುಂಬಾ ವರ್ಷಗಳ ಕಾಲ ನೆನಪಲ್ಲಿ ಉಳಿಯೋ ಆಟ. ಇಡೀ ದಿನ ಜೈಸ್ವಾಲ್ ಹಾಗೂ ರಾಹುಲ್ ಆ ದೈತ್ಯ ಬೌಲಿಂಗ್ ಲೈನ್​ ಅಪ್​ನ ಗೋಳಾಡಿಸಿದ್ರಲ್ಲ.. ಜೈಸ್ವಾಲ್ ಅಂತೂ ಬೌಲ್ ಮಾಡಿದ್ರೆ ಬ್ಯಾಟ್ ಮಾಡೋದು ಬಾಕಿ ಟೈಮಲ್ಲಿ ರೋಸ್ಟ್ ಮಾಡೋದು. ಅದು ಸ್ಟಾರ್ಕ್​ಗೆ.. ಆತ್ಮವಿಶ್ವಾಸ ತುಂಬಿ ತುಳುಕ್ತಾ ಇದೆ. ಪಡಿಕ್ಕಲ್ ತನಗಿರೋ ಅನುಭಕ್ಕೆ ತಕ್ಕಂತೆ ಕೊಡುಗೆ ಕೊಟ್ಟ ಅನಿಸ್ತು.

ಬಟ್ ಘರ್ಜಿಸುವಂತೆ ಮಾಡಿದ್ದು ಕೊಹ್ಲಿ ಶತಕ. ಕೊಹ್ಲಿ ಮತ್ತು ಆಸ್ಟ್ರೇಲಿಯಾ ಚಕಾಮಕಿ ತುಂಬಾ ಹಳೆಯದ್ದು.. ಎಂತದ್ದೇ ಅಸ್ತ್ರ ಹೂಡಿದ್ರೂ ಕೊಹ್ಲಿ ವಿಕೆಟ್ ಪಡೆಯೋಕೆ ಆಗಲೆ ಇಲ್ಲ. ಇನ್ನೊಂದು ಕಡೆಯಲ್ಲಿ ನಿತೀಶ್ ರೆಡ್ಡಿಯ ಆಟ.. ಮಕ ಮೂತಿ ನೋಡದೇ ಚಚ್ಚೋದು ಅಂತಾರಲ್ಲ.. ಅದನ್ನೇ ಮಾಡಿದ್ದು.. ಡಿಕ್ಲೇರ್ ಹೊತ್ತಿಗೆ ಆಸ್ಟ್ರೇಲಿಯಾ ಮುಂದೆ ದೊಡ್ಡ ಬೆಟ್ಟ.

ಬೆಟ್ಟ ಹತ್ತೋಕೆ ಬಂದ ಮೊದಲ ನಾಲ್ವರು ಡಬಲ್ ಡಿಜಿಟ್ ಚೆಂದವನ್ನೂ ಕಾಣೋಕೆ ಆಗಲಿಲ್ಲ. ಬುಮ್ರಾ ಸಿರಾಜ್ ಅಬ್ಬರವೇ ಹಾಗಿತ್ತು. ಇಲ್ಲಿ ತನಕ ಆಸ್ಟ್ರೇಲಿಯಾ ಪರ್ತ್ ಸ್ಟೇಡಿಯಂನಲ್ಲಿ ಸೋಲೇ ಕಂಡಿರ್ಲಿಲ್ಲವಂತೆ. ಅದನ್ನೂ ಕೂಡ ಮನೆಗೆ ಬಂದ ನೆಂಟರು ಉಡುಗೊರೆ ಕೊಟ್ಟಿದಾರೆ. ಈ ಸಮಯದಲ್ಲಿ ಗಂಭೀರ್ ಕೂಡ ನೆನಪಾಗಲೇ ಬೇಕು. ಸೋತಾಗ ಮಾತ್ರ ನೆನಪಿಸಿಕೊಂಡ್ರೆ ಸರಿ ಅನಿಸೋದೇ ಇಲ್ಲ.. ಥ್ಯಾಂಕ್ಯೂ ಟೀಮ್ ಇಂಡಿಯಾ.. ಗೆಲ್ತಾನೆ ಇರೋಣ.. ಬೀಗ್ತಾನೇ ಇರೋಣ.

ಗಮನಕ್ಕೆ: ಅಜಿತ್ ಬೊಪ್ಪನಳ್ಳಿ ಅವರ ಫೇಸ್​ಬುಕ್​ ಪೋಸ್ಟ್ ಅನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ