logo
ಕನ್ನಡ ಸುದ್ದಿ  /  ಕ್ರಿಕೆಟ್  /  ಲಾಸ್ಟ್‌ ಓವರ್‌ನಲ್ಲಿ ವೇಡ್‌ ಕಟ್ಟಿ ಹಾಕಿದ ಅರ್ಷದೀಪ್‌; ಟಿ20 ವಿಶ್ವಕಪ್‌ ನೆನಪಿಸಿ ಶಾಹೀನ್ ಅಫ್ರಿದಿ ಕಾಲೆಳೆದ ಪಂಜಾಬ್ ಕಿಂಗ್ಸ್

ಲಾಸ್ಟ್‌ ಓವರ್‌ನಲ್ಲಿ ವೇಡ್‌ ಕಟ್ಟಿ ಹಾಕಿದ ಅರ್ಷದೀಪ್‌; ಟಿ20 ವಿಶ್ವಕಪ್‌ ನೆನಪಿಸಿ ಶಾಹೀನ್ ಅಫ್ರಿದಿ ಕಾಲೆಳೆದ ಪಂಜಾಬ್ ಕಿಂಗ್ಸ್

Jayaraj HT Kannada

Dec 04, 2023 05:32 PM IST

google News

ಶಾಹೀನ್ ಅಫ್ರಿದಿಯನ್ನು ಟ್ರೋಲ್ ಮಾಡಿದ ಪಂಜಾಬ್‌ ಕಿಂಗ್ಸ್

    • Shaheen Afridi troll: ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್, ಪಾಕ್‌ ವೇಗಿ ಶಾಹೀನ್‌ ಅಫ್ರಿದಿಯನ್ನು ಟ್ರೋಪ್‌ ಮಾಡಿದೆ. ಇದಕ್ಕೆ ಕಾರಣ ಅರ್ಷದೀಪ್‌ ಸಿಂಗ್.
ಶಾಹೀನ್ ಅಫ್ರಿದಿಯನ್ನು ಟ್ರೋಲ್ ಮಾಡಿದ ಪಂಜಾಬ್‌ ಕಿಂಗ್ಸ್
ಶಾಹೀನ್ ಅಫ್ರಿದಿಯನ್ನು ಟ್ರೋಲ್ ಮಾಡಿದ ಪಂಜಾಬ್‌ ಕಿಂಗ್ಸ್

ಆಸ್ಟ್ರೇಲಿಯಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ (India vs Australia 5th T20I) ಭಾರತ ತಂಡವು ರೋಚಕ ಜಯ ಸಾಧಿಸಿತು. ಕೊನೆಯ ಓವರ್‌ನಲ್ಲಿ ಕೇವಲ 3 ರನ್‌ ಬಿಟ್ಟುಕೊಡುವ ಮೂಲಕ ಅರ್ಷದೀಪ್‌ ಸಿಂಗ್‌ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಸೀಸ್‌ ನಾಯಕ ಮ್ಯಾಥ್ಯೂ ವೇಡ್, ಚೇಸಿಂಗ್‌ ಮಾಡಿ ತಮ್ಮ ತಂಡವನ್ನು ಗೆಲ್ಲಿಸುವ ಅವಕಾಶ ಹೊಂದಿದ್ದರು. ಆದರೆ, ಅದಿಕ್ಕೆ ಅರ್ಷದೀಪ್‌ ಅವಕಾಶ ನೀಡಲಿಲ್ಲ.

ಮ್ಯಾಥ್ಯೂ ವೇಡ್‌ ಹಲವು ಪಂದ್ಯಗಳಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಚೇಸಿಂಗ್‌ ನಡೆಸಿ ತಮ್ಮ ತಂಡವನ್ನು ಗೆಲ್ಲಿಸಿದ್ದಾರೆ. ಅದರಲ್ಲಿ 2021ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅವರ ಪ್ರದರ್ಶನ ಅಮೋಘವಾಗಿತ್ತು. ಇನ್‌ಫಾರ್ಮ್‌ ಬೌಲರ್‌ ಶಾಹೀನ್ ಅಫ್ರಿದಿ ಎಸೆದ 19ನೇ ಓವರ್‌ನಲ್ಲಿ ಬರೋಬ್ಬರಿ 22 ರನ್‌ಗಳನ್ನು ಬೆನ್ನಟ್ಟಿದ ವೇಡ್, ಆಸ್ಟ್ರೇಲಿಯಾಗೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟರು. ಎಡಗೈ ವೇಗಿ ಅಫ್ರಿದಿ ಎಸೆದ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದರು. ಪಾಕಿಸ್ತಾನಕ್ಕೆ ಆ ಸೋಲನ್ನು ಅರಗಿಸಿಕೊಳ್ಳುವುದು ಇಂದಿಗೂ ಕಷ್ಟವಾಗಿದೆ.

ಇದನ್ನೂ ಓದಿ | ಅಂತಿಮ ಟಿ20 ಪಂದ್ಯದಲ್ಲೂ ಗೆದ್ದು ಬೀಗಿದ ಭಾರತ; 4-1ರಿಂದ ಚುಟುಕು ಸರಣಿ ಕೈವಶ

ಕಳೆದ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿಯೂ ಇಂಥಹದೇ ಸಂದರ್ಭ ಮರುಕಳಿಸುವ ಸಾಧ್ಯತೆ ಇತ್ತು. ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಆಸೀಸ್‌ ಗೆಲುವಿಗೆ ಕೊನೆಯ ಓವರ್‌ನಲ್ಲಿ ಕೇವಲ 10 ರನ್‌ ಬೇಕಿತ್ತು. ಈ ವೇಳೆ ಬ್ಯಾಟಿಗ್‌ ಮಾಡುತ್ತಿದ್ದವರು ವೇಡ್. ಆದರೆ, ವೇಡ್‌ ಅಬ್ಬರಕ್ಕೆ ಅರ್ಷದೀಪ್ ಸಿಂಗ್ ಅವಕಾಶ ನೀಡಲಿಲ್ಲ. ಅಲ್ಲದೆ ಸಿಕ್ಸರ್‌ ಸಿಡಿಸುವ ಪ್ರಯತ್ನಕ್ಕೆ ಕೈಹಾಕಿದ ವೇಡ್‌ ವಿಕೆಟ್‌ ಪಡೆದು ಪಂದ್ಯದ ಹೀರೋ ಆದರು. ಹೀಗಾಗಿ ಪಂದ್ಯದ ಬಳಿಕ ಐಪಿಎಲ್ ಫ್ರಾಂಚೈಸ್‌ ಪಂಜಾಬ್ ಕಿಂಗ್ಸ್, 2021ರ ಟಿ20 ವಿಶ್ವಕಪ್ ಸನ್ನಿವೇಶವನ್ನು ನೆನಪಿಸಿದೆ. ಅರ್ಷದೀಪ್‌ ವಿರೋಚಿತ ಪ್ರದರ್ಶನವನ್ನು ಹೊಗಳುವ ಮೂಲಕ ಅಫ್ರಿದಿಗೆ ಟಾಂಗ್‌ ಕೊಟ್ಟಿದೆ.

ಕೊನೆಯ ಓವರ್‌​ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 10 ರನ್​ ಬೇಕಿತ್ತು. ಟಿ20 ಕ್ರಿಕೆಟ್‌ನಲ್ಲಿ ಇದು ದೊಡ್ಡ ಮೊತ್ತವೇನೂ ಆಗಿರಲಿಲ್ಲ. ಅಲ್ಲದೆ ವೇಡ್‌ ಬ್ಯಾಟಿಂಗ್‌ ಮಾಡುತ್ತಿದ್ದಾಗ ಅಸಾಧ್ಯವಂತೂ ಆಗಿರಲಿಲ್ಲ. ಆದರೆ, ಅರ್ಷ​​ದೀಪ್​ ಸಿಂಗ್ 1 ವಿಕೆಟ್​ ಜೊತೆಗೆ ಕೇವಲ 3 ರನ್​ ನೀಡಿ ಭಾರತಕ್ಕೆ ಗೆಲುವು ತಂದುಕೊಟ್ಟರು.

ಐಪಿಎಲ್‌ನಲ್ಲಿ ಅರ್ಷ‌ದೀಪ್ ಸಿಂಗ್ ಪಂಜಾಬ್‌ ಕಿಂಗ್ಸ್‌ ಪರ ಆಡುತ್ತಾರೆ. ಹೀಗಾಗಿ ತನ್ನ ತಂಡದ ಆಟಗಾರನ ಪ್ರದರ್ಶನವನ್ನು ಫ್ರಾಂಚೈಸಿ ಹೊಗಳಿದೆ. ವೇಡ್‌ ಔಟಾಗುತ್ತಿರುವ ವಿಡಿಯೋ ಹಂಚಿಕೊಂಡಿರುವ ಫ್ರಾಂಚೈಸಿ ಅದಕ್ಕೆ ಉತ್ತಮ ಶೀರ್ಷಿಕೆ ನೀಡಿದೆ. “ಈ ಎಡಗೈ ವೇಗಿ ವಿರುದ್ಧ ಅಲ್ಲ, ಮ್ಯಾಥ್ಯೂ ವೇಡ್‌” ಎಂಬುದಾಗಿ ಬರೆದು ಒಂದೇ ವಾಕ್ಯದಲ್ಲಿ ಅಫ್ರಿದಿ ಕಾಲೆಳೆದಿದೆ.

ಪಾಕ್‌ ವೇಗಿ ಅಫ್ರಿದಿ ಕೂಡಾ ಎಡಗೈ ವೇಗಿ. ಟಿ20 ವಿಶ್ವಕಪ್‌ ಪಂದ್ಯದಲ್ಲಿ ಅವರ ಓವರ್‌ನಲ್ಲಿಯೇ ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್‌ ಸಿಡಿಸಿದ್ದ ವೇಗಿ ತಂಡವನ್ನು ಗೆಲ್ಲಿಸಿದ್ದರು. ಈ ಬಾರಿ ಭಾರತದ ಎಡಗೈ ವೇಗಿ ಅರ್ಷದೀಪ್‌ ಬೌಲಿಂಗ್‌ನಲ್ಲಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸಿ ಇದೇ ಜೋಶ್‌ನಿಂದ ಅಫ್ರಿದಿ ಕಾಲೆಳೆದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ