logo
ಕನ್ನಡ ಸುದ್ದಿ  /  ಕ್ರಿಕೆಟ್  /  ನ್ಯೂಜಿಲ್ಯಾಂಡ್ Vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್; ಅನನುಭವಿ ಹರಿಣಗಳ ವಿರುದ್ಧ 281 ರನ್‌ಗಳಿಂದ ಗೆದ್ದ ಕಿವೀಸ್

ನ್ಯೂಜಿಲ್ಯಾಂಡ್ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್; ಅನನುಭವಿ ಹರಿಣಗಳ ವಿರುದ್ಧ 281 ರನ್‌ಗಳಿಂದ ಗೆದ್ದ ಕಿವೀಸ್

Jayaraj HT Kannada

Feb 07, 2024 02:18 PM IST

ನ್ಯೂಜಿಲ್ಯಾಂಡ್ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ281 ರನ್‌ಗಳಿಂದ ಗೆದ್ದ ಕಿವೀಸ್

    • New Zealand vs South Africa: ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್‌ ತಂಡವು ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 528 ಮುನ್ನಡೆಯೊಂದಿಗೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 247 ರನ್‌ಗಳಿಗೆ ಆಲೌಟ್ ಮಾಡಿತು. ಆ ಮೂಲಕ ಮೊದಲ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿತು. ರಚಿನ್‌ ರವೀಂದ್ರ ಪಂದ್ಯಶ್ರೇಷ್ಠರಾದರು.
ನ್ಯೂಜಿಲ್ಯಾಂಡ್ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ281 ರನ್‌ಗಳಿಂದ ಗೆದ್ದ ಕಿವೀಸ್
ನ್ಯೂಜಿಲ್ಯಾಂಡ್ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ281 ರನ್‌ಗಳಿಂದ ಗೆದ್ದ ಕಿವೀಸ್ (AP)

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ (New Zealand vs South Africa, 1st Test) ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್‌ ಭರ್ಜರಿ ಜಯ ಸಾಧಿಸಿದೆ. ನಾಲ್ಕನೇ ದಿನವೇ ಮುಕ್ತಾಯವಾದ ಪಂದ್ಯದಲ್ಲಿ ಕಿವೀಸ್‌, 281 ರನ್‌ಗಳಿಂದ ಗೆದ್ದು ಬೀಗಿದೆ. ಆ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಟ್ರೆಂಡಿಂಗ್​ ಸುದ್ದಿ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಆರ್​ಸಿಬಿ ಆಟಗಾರರಿಗೆ ಹ್ಯಾಂಡ್​ಶೇಕ್ ಮಾಡದೆ ಮೈದಾನ ತೊರೆದ ಎಂಎಸ್ ಧೋನಿ; ಮಾಹಿ ಹುಡುಕುತ್ತಾ ಹೊರಟ ವಿರಾಟ್ ಕೊಹ್ಲಿ

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಮೊತ್ತ ಕಲೆ ಹಾಕಿದ್ದ ನ್ಯೂಜಿಲ್ಯಾಂಡ್‌, ಎರಡನೇ ಇನ್ನಿಂಗ್ಸ್‌ನಲ್ಲಿ 179 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಒಟ್ಟಾರೆ 528 ರನ್‌ಗಳ ಹಿನ್ನಡೆಯೊಂದಿಗೆ ನಾಲ್ಕನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ, ಅಂತಿಮವಾಗಿ 247 ರನ್‌ಗಳಿಗೆ ಆಲೌಟ್ ಆಯ್ತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್‌, 511 ರನ್ ಗಳಿಸಿತು. ಅನುಭವಿ ಆಟಗಾರ ಕೇನ್‌ ವಿಲಿಯಮ್ಸನ್‌ ಶತಕ ಸಿಡಿಸಿದರೆ, ಯುವ ಆಟಗಾರ ರಚಿನ್‌ ರವೀಂದ್ರ ಚೊಚ್ಚಲ ದ್ವಿಶತಕ ಬಾರಿಸಿದರು. ಇದಕ್ಕೆ ಪ್ರತಿಯಾಗಿ ಪ್ರವಾಸಿ ದಕ್ಷಿಣ ಆಫ್ರಿಕಾ ಕೇವಲ 162 ರನ್‌ಗಳಿಗೆ ಆಲೌಟ್ ಆಯ್ತು. ಭರ್ಜರಿ 349 ರನ್‌ಗಳ ಮುನ್ನಡೆ ಸಾಧಿಸಿದ ಟಿಮ್‌ ಸೌಥಿ ಬಳಗವು, ಫಾಲೋ ಆನ್ ಅವಕಾಶವಿದ್ದರೂ ಮತ್ತೆ ಬ್ಯಾಟಿಂಗ್‌ ನಡೆಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇನ್ ವಿಲಿಯಮ್ಸನ್ ಮತ್ತೆ ಶತಕ ಪೂರ್ಣಗೊಳಿಸಿದರು. ವೃತ್ತಿಜೀವನದ 31ನೇ ಶತಕ ಸಿಡಿಸುವ ಮೂಲಕ ಹಲವು ದಾಖಲೆ ನಿರ್ಮಿಸಿದರು.

ಇದನ್ನೂ ಓದಿ | ಅವಳಿ ಶತಕದೊಂದಿಗೆ ವಿರಾಟ್, ಜೋ ರೂಟ್ ಹಿಂದಿಕ್ಕಿದ ಕೇನ್ ವಿಲಿಯಮ್ಸನ್; ದಕ್ಷಿಣ ಆಫ್ರಿಕಾ ವಿರುದ್ಧ ಕಿವೀಸ್‌ ಮುನ್ನಡೆ

ಕೊನೆಯ ಇನ್ನಿಂಗ್ಸ್‌ನಲ್ಲಿ ಭಾರಿ ಮೊತ್ತದ ಗುರಿ ಬೆನ್ನಟ್ಟಿದ ಹರಿಣಗಳು, ಮತ್ತೆ ಬ್ಯಾಟಿಂಗ್‌ನಲ್ಲಿ ಕುಸಿತ ಅನುಭವಿಸಿದರು. ಆರಂಭಿಕ ಆಟಗಾರರಾದ ನೀಲ್ ಬ್ರಾಂಡ್ ಮತ್ತು ಎಡ್ವರ್ಡ್ ಮೂರ್, ಮೊದಲ ನಾಲ್ಕು ಓವರ್ ಒಳಗೆ ಔಟಾದರು. ಈ ವೇಳೆ ಜುಬೈರ್ ಹಮ್ಜಾ ಮತ್ತು ರೇನಾರ್ಡ್ ವ್ಯಾನ್ ಟೊಂಡರ್ 100 ನಿಮಿಷಗಳಿಗಿಂತ ಹೆಚ್ಚು ಕಾಲ ಬ್ಯಾಟಿಂಗ್ ಮಾಡಿ ಕೆಲಕಾಲ ತಂಡಕ್ಕೆ ಭರವಸೆ ತುಂಬಿದರು. ಆದರೆ ಇಬ್ಬರೂ 40 ರನ್‌ ಗಡಿ ದಾಟಲು ಸಾಧ್ಯವಾಗಲಿಲ್ಲ. ಕೀಗನ್ ಪೀಟರ್ಸನ್ (16) ಮತ್ತು ಡೇವಿಡ್ ಬೆಡಿಂಗ್‌ಹ್ಯಾಮ್ ಐದನೇ ವಿಕೆಟ್‌ಗೆ 105 ರನ್‌ಗಳ ಜೊತೆಯಾಟವಾಡಿದರು. ಜವಾಬ್ದಾರಿಯುತ ಆಟವಾಡಿದ ಬೆಡಿಂಗ್‌ಹ್ಯಾಮ್ 96 ಎಸೆತಗಳಲ್ಲಿ 87 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಪರ ಹೆಚ್ಚು ರನ್‌ ಗಳಿಸಿದ ಆಟಗಾರನಾದರು.

ಒಂದು ಹಂತದಲ್ಲಿ 178-4ರಲ್ಲಿದ್ದ ದಕ್ಷಿಣ ಆಫ್ರಿಕಾ ಕ್ಷಣಮಾತ್ರದಲ್ಲೇ 181-6ಕ್ಕೆ ಕುಸಿಯಿತು. ಜೇಮಿಸನ್ ವೇಗಕ್ಕೆ ಕ್ರೀಸ್‌ಕಚ್ಚಿ ಆಡುತ್ತಿದ್ದ ಬ್ಯಾಟರ್‌ಗಳು ವಿಕೆಟ್‌ ಒಪ್ಪಿಸಿದರು. ಕೊನೆಗೆ 247 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಕಿವೀಸ್‌ ಬೃಹತ್‌ ಗೆಲುವು ಸಾಧಿಸಿತು.

ಇದನ್ನೂ ಓದಿ | ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ದ್ವಿಶತಕ ಸಿಡಿಸಿದ ರಚಿನ್ ರವೀಂದ್ರ; ಇತಿಹಾಸ ನಿರ್ಮಿಸಿದ ಕಿವೀಸ್ ಆಟಗಾರ

ಮೊದಲ ದಿನದಾಟದಲ್ಲಿ ಕಿವೀಸ್‌ ಪರ ವಿಲಿಯಮ್ಸನ್‌ ಹಾಗೂ ರಚಿನ್‌ 232 ರನ್‌ಗಳ ಜೊತೆಯಾಟವಾಡಿದರು. ವಿಲಿಯಮ್ಸನ್ ಎರಡನೇ ದಿನದಾಟದ ಆರಂಭದಲ್ಲಿ 118 ರನ್‌ಗಳಿಗೆ ಔಟಾದರು. ಆದರೆ ರವೀಂದ್ರ ಅವರು ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿ 240 ರನ್‌ಗಳಿಗೆ ಔಟಾದರು.

ದಕ್ಷಿಣ ಆಫ್ರಿಕಾ ತಂಡವು ಆರು ಅನ್‌ಕ್ಯಾಪ್ಡ್‌ ಆಟಗಾರರನ್ನು ಸರಣಿಗೆ ಆಯ್ಕೆ ಮಾಡಿದೆ. ದೇಶೀಯ ಟಿ20 ಸರಣಿಯಲ್ಲಿ ಆಡುತ್ತಿರುವ ಅನುಭವಿ ಆಟಗಾರರು ತವರಿನಲ್ಲೇ ಉಳಿದಿದ್ದಾರೆ. ಅನುಭವದ ಕೊರತೆಯು ದಕ್ಷಿಣ ಆಫ್ರಿಕಾ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿತು.

ಇದನ್ನೂ ಓದಿ | IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

(This copy first appeared in Hindustan Times Kannada website. To read more like this please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ