logo
ಕನ್ನಡ ಸುದ್ದಿ  /  ಕ್ರಿಕೆಟ್  /  ಜಸ್ಪ್ರೀತ್ ಬುಮ್ರಾ ಹಣೆಬರಹ ಬದಲಾಗಿದ್ದೇ ರವಿ ಶಾಸ್ತ್ರಿಯ ಆ ಒಂದು ಕರೆಯಿಂದ; 2018ರ ಘಟನೆ ನೆನೆದ ಮಾಜಿ ಕೋಚ್​

ಜಸ್ಪ್ರೀತ್ ಬುಮ್ರಾ ಹಣೆಬರಹ ಬದಲಾಗಿದ್ದೇ ರವಿ ಶಾಸ್ತ್ರಿಯ ಆ ಒಂದು ಕರೆಯಿಂದ; 2018ರ ಘಟನೆ ನೆನೆದ ಮಾಜಿ ಕೋಚ್​

Prasanna Kumar P N HT Kannada

Feb 10, 2024 05:10 PM IST

ಜಸ್ಪ್ರೀತ್ ಬುಮ್ರಾ ಹಣೆಬರಹ ಬದಲಾಗಿದ್ದೇ ರವಿ ಶಾಸ್ತ್ರಿಯ ಆ ಒಂದು ಕರೆಯಿಂದ

    • Jasprit Bumrah : 2018ರಲ್ಲಿ ವೇಗದ ಬೌಲರ್​​ ಜಸ್ಪ್ರೀತ್ ಬುಮ್ರಾ ಅವರು ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಮೊದಲು ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ವೇಗಿಗೆ ಕರೆ ಮಾಡಿದ್ದ ಘಟನೆಯನ್ನು ನೆನೆದಿದ್ದಾರೆ.
ಜಸ್ಪ್ರೀತ್ ಬುಮ್ರಾ ಹಣೆಬರಹ ಬದಲಾಗಿದ್ದೇ ರವಿ ಶಾಸ್ತ್ರಿಯ ಆ ಒಂದು ಕರೆಯಿಂದ
ಜಸ್ಪ್ರೀತ್ ಬುಮ್ರಾ ಹಣೆಬರಹ ಬದಲಾಗಿದ್ದೇ ರವಿ ಶಾಸ್ತ್ರಿಯ ಆ ಒಂದು ಕರೆಯಿಂದ (File/PTI)

ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jaspreet Bumrah), ಇತ್ತೀಚೆಗೆ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ ಪಡೆದ ದೇಶದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಬುಮ್ರಾ ಈ ಸಾಧನೆ ಮಾಡಿದ್ದಾರೆ. ಈ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ 6 ವಿಕೆಟ್, ಎರಡನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಪಡೆದಿದ್ದರು.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ವಿಶ್ವ ಕ್ರಿಕೆಟ್​​ನ ಪ್ರಮುಖ ವೇಗಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಬುಮ್ರಾ, ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ. ಸದ್ಯ ಅವರು ಈವರೆಗೂ 34 ಟೆಸ್ಟ್​​ಗಳಲ್ಲಿ ಕಣಕ್ಕಿಳಿದಿದ್ದು, 150 ವಿಕೆಟ್ ಉರುಳಿಸಿದ್ದಾರೆ. ಅಮೋಘ ಸಾಧನೆ ಮಾಡಿರುವ ಬುಮ್ರಾ ಹಣೆಬರಹ ಬದಲಾಗಿದ್ದು ಮಾಜಿ ಹೆಡ್​ಕೋಚ್​ ರವಿ ಶಾಸ್ತ್ರಿ (Ravi Shastri) ಅವರ ಆ ಒಂದು ಫೋನ್ ಕಾಲ್​ನಿಂದ.

ಕರೆ ಮಾಡಿದ್ದ ಘಟನೆ ನೆನೆದ ರವಿ ಶಾಸ್ತ್ರಿ

ಹೌದು.. ಯಾರ್ಕರ್ ಸ್ಪೆಷಲಿಸ್ಟ್​​ ಬುಮ್ರಾ ಅವರನ್ನು​ ಟೆಸ್ಟ್​​ ಕ್ರಿಕೆಟ್​ಗೆ ಪರಿಚಯಿಸಿದ್ದು, ಮಾಜಿ ​ಕೋಚ್​ ರವಿ ಶಾಸ್ತ್ರಿ. ವೇಗಿಯನ್ನು ಟೆಸ್ಟ್​ ಕ್ರಿಕೆಟ್​ಗೆ ಪರಿಚಯಿಸಿದ್ದರ ಕುರಿತು ಶಾಸ್ತ್ರಿ ಮೆಲುಕು ಹಾಕಿದ್ದಾರೆ. ಇಂಗ್ಲೆಂಡ್​ನ ಮೈಕೆಲ್ ಅಥರ್ಟನ್ ಜೊತೆಗಿನ ಸಂದರ್ಶನದಲ್ಲಿ ಶಾಸ್ತ್ರಿ, ಬುಮ್ರಾಗೆ ಕರೆ ಮಾಡಿದ್ದ ಘಟನೆಯನ್ನು ನೆನೆಸಿಕೊಂಡಿದ್ದಾರೆ. ಟೆಸ್ಟ್​​​ನಲ್ಲಿ ಆಡುವ ಆಸಕ್ತಿ ಎನ್ನುವುದರ ಕುರಿತು ವಿಚಾರಿಸಲು ಬುಮ್ರಾಗೆ ಫೋನ್ ಮಾಡಿದ್ದೆ ಎಂದಿದ್ದಾರೆ.

ಟೆಸ್ಟ್ ಕ್ರಿಕೆಟ್​​ನಲ್ಲಿ ಆತನ ಸಾಮರ್ಥ್ಯವನ್ನು ಅರಿಯದೆ ಅನೇಕರು, ಬುಮ್ರಾ ವೈಟ್-ಬಾಲ್ ಸ್ವರೂಪ ಕ್ರಿಕೆಟಿಗ ಎಂದು ಕರೆದಿದ್ದಾರೆ. ನಾನು ಅವರಿಗೆ ಮೊದಲ ಕರೆ ಮಾಡಿದ್ದು ನನಗೆ ನೆನಪಿದೆ. ಆಗ ಕೋಲ್ಕತ್ತಾದಲ್ಲಿದ್ದೆ. ಟೆಸ್ಟ್ ಕ್ರಿಕೆಟ್​ನಲ್ಲಿ ಆಸಕ್ತಿ ಇದೆಯೇ ಎಂದು ನಾನು ಬುಮ್ರಾರನ್ನು ಕೇಳಿದ್ದೆ. ನನ್ನ ಮಾತು ಕೇಳಿದ ಬುಮ್ರಾ ಜೀವನದ ಅತಿದೊಡ್ಡ ದಿನ ಎಂದು ಹೇಳಿದ್ದರು ಎಂದು ಶಾಸ್ತ್ರಿ ನೆನಪಿಸಿಕೊಂಡಿದ್ದಾರೆ.

ಸಿದ್ಧರಾಗಿರಿ ಎಂದು ಮಾಜಿ ಕೋಚ್​

ಬುಮ್ರಾರನ್ನು ಟೆಸ್ಟ್​​ನಲ್ಲಿ ಆಡುತ್ತಾರಾ ಎಂಬುದನ್ನು ಕೇಳದೆ ವೈಟ್​ಬಾಲ್ ಕ್ರಿಕೆಟಿಗ ಎಂದು ಹಣೆಪಟ್ಟಿ ಬಿಟ್ಟಿದ್ದರು. ಆದರೆ, ನನಗೆ ಗೊತ್ತಿತ್ತು. ಬುಮ್ರಾ ವಿಕೆಟ್​ ಪಡೆಯಲು ಹಸಿದಿದ್ದ. ಆಡುವ ಹಸಿವು ಹೆಚ್ಚಿತ್ತು. ಅದನ್ನು ನೋಡಲು ನಾನು ಬಯಸುತ್ತಿದ್ದೆ. ಹಾಗಾಗಿ ಕರೆ ಮಾಡಿ ಸಿದ್ಧರಾಗಿರಿ ಎಂದು ನಾನು ಅವರಿಗೆ ಹೇಳಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಅವರನ್ನು ಪದಾರ್ಪಣೆ ಮಾಡಿಸಿದ್ದೆ ಎಂದು ಶಾಸ್ತ್ರಿ ಹೇಳಿದ್ದಾರೆ.

2018ರಲ್ಲಿ ಪದಾರ್ಪಣೆ ಮಾಡಿದಾಗಿನಿಂದ ಭಾರತೀಯ ವೇಗದ ದಾಳಿಯನ್ನು ಮುನ್ನಡೆಸುತ್ತಿರುವ ಬುಮ್ರಾ, 150 ವಿಕೆಟ್​​ಗಳ ಗಡಿ ತಲುಪಿದ್ದಾರೆ. ಆ ಮೂಲಕ ವೇಗದ 150 ಟೆಸ್ಟ್ ವಿಕೆಟ್ ಪಡೆದ ದೇಶದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೇಗಿ ಪದಾರ್ಪಣೆ ಮಾಡಿದಾಗ ನಾಯಕರಾಗಿದ್ದ ವಿರಾಟ್ ಕೊಹ್ಲಿ ಅವರೊಂದಿಗೆ ಟೆಸ್ಟ್ ಕ್ರಿಕೆಟ್ ಆಡಲು ಬುಮ್ರಾ ಉತ್ಸುಕರಾಗಿದ್ದರು ಎಂದು ಶಾಸ್ತ್ರಿ ಬಹಿರಂಗಪಡಿಸಿದ್ದಾರೆ.

‘ಟೆಸ್ಟ್ ಕ್ರಿಕೆಟ್​​ನಲ್ಲಿ ಸಾಧನೆ ಎಲ್ಲರಿಗೂ ನೆನಪಿರುತ್ತೆ’

ಬುಮ್ರಾ, ವಿರಾಟ್ ಕೊಹ್ಲಿ ಅವರೊಂಂದಿಗೆ ಟೆಸ್ಟ್​ ಕ್ರಿಕೆಟ್ ಆಡಲು ಹತಾಶರಾಗಿದ್ದರು. ವೃತ್ತಿಜೀವನದ ಕೊನೆಯಲ್ಲಿ ಬಿಳಿ ಚೆಂಡಿನ ಸರಾಸರಿ ಯಾರೂ ನೆನಪಿಸಿಕೊಳ್ಳುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಟೆಸ್ಟ್ ಕ್ರಿಕೆಟ್​​ನಲ್ಲಿ ನಿಮ್ಮ ಪ್ರದರ್ಶನ, ಅಂಕಿ-ಸಂಖ್ಯೆಗಳನ್ನೇ ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದಿದ್ದರು ಎಂದು ಶಾಸ್ತ್ರಿ ಹೇಳಿದ್ದಾರೆ. 2022ರ ಜನವರಿಯಲ್ಲಿ ರವಿ ಶಾಸ್ತ್ರಿ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ನಾಯಕತ್ವ ವಹಿಸಿದ್ದರು.

ಕೋವಿಡ್ -19 ಸೋಂಕಿನಿಂದ ರೋಹಿತ್ ಅಲಭ್ಯರಾಗಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​​​ನಲ್ಲಿ ಬುಮ್ರಾ ಅದೇ ವರ್ಷ ಭಾರತೀಯ ತಂಡವನ್ನು ಮುನ್ನಡೆಸಿದ್ದರು. 30 ವರ್ಷದ ವೇಗಿಯನ್ನು ಇಂಗ್ಲೆಂಡ್ ವಿರುದ್ಧದ ಉಳಿದ 3 ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ತಂಡದ ಉಪನಾಯಕರನ್ನಾಗಿ ಹೆಸರಿಸಲಾಗಿದೆ. ಬುಮ್ರಾ ಪ್ರಸ್ತುತ ಎರಡು ಪಂದ್ಯಗಳ ನಂತರ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 15 ವಿಕೆಟ್ ಪಡೆದಿದ್ದಾರೆ.

IPL, 2024

Live

RCB

218/5

20.0 Overs

VS

CSK

58/2

(6.0)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ