logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧ ಶತಕ; 3000 ರನ್, 250+ ವಿಕೆಟ್​ ಪಡೆದ ದಿಗ್ಗಜರ ಎಲೈಟ್​ ಪಟ್ಟಿಗೆ ಸೇರಿದ ರವೀಂದ್ರ ಜಡೇಜಾ

ಇಂಗ್ಲೆಂಡ್ ವಿರುದ್ಧ ಶತಕ; 3000 ರನ್, 250+ ವಿಕೆಟ್​ ಪಡೆದ ದಿಗ್ಗಜರ ಎಲೈಟ್​ ಪಟ್ಟಿಗೆ ಸೇರಿದ ರವೀಂದ್ರ ಜಡೇಜಾ

Prasanna Kumar P N HT Kannada

Feb 15, 2024 06:19 PM IST

google News

3000 ರನ್, 250+ ವಿಕೆಟ್​ ಪಡೆದ ದಿಗ್ಗಜರ ಎಲೈಟ್​ ಪಟ್ಟಿಗೆ ಸೇರಿದ ರವೀಂದ್ರ ಜಡೇಜಾ

    • Ravindra Jadeja Records : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​​ ಪಂದ್ಯದಲ್ಲಿ ಶತಕ ಸಿಡಿಸಿರುವ ಟೀಮ್ ಇಂಡಿಯಾ ಆಲ್​ರೌಂಡರ್​ ರವೀಂದ್ರ ಜಡೇಜಾ, ಹಲವು ದಾಖಲೆಗಳನ್ನು ಬರೆದಿದ್ದಾರೆ.
3000 ರನ್, 250+ ವಿಕೆಟ್​ ಪಡೆದ ದಿಗ್ಗಜರ ಎಲೈಟ್​ ಪಟ್ಟಿಗೆ ಸೇರಿದ ರವೀಂದ್ರ ಜಡೇಜಾ
3000 ರನ್, 250+ ವಿಕೆಟ್​ ಪಡೆದ ದಿಗ್ಗಜರ ಎಲೈಟ್​ ಪಟ್ಟಿಗೆ ಸೇರಿದ ರವೀಂದ್ರ ಜಡೇಜಾ (PTI)

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಎಡಗೈ ಬ್ಯಾಟ್ಸ್​ಮನ್​ ರವೀಂದ್ರ ಜಡೇಜಾ (Ravindra Jadeja) ಅವರು ತಮ್ಮ 4ನೇ ಟೆಸ್ಟ್​ ಶತಕ ಪೂರೈಸಿದ್ದಾರೆ. ತವರಿನ ರಾಜ್​ಕೋಟ್​​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ (ನಿರಂಜನ್ ಶಾ ಮೈದಾನ ಎಂದು ಹೆಸರು ಬದಲಿಸಲಾಗಿದೆ) ಆಕರ್ಷಕ ಸೆಂಚುರಿ ಸಿಡಿಸಿ ಆಸರೆಯಾಗಿದ್ದಾರೆ. ದಿನದ ಕೊನೆಯಲ್ಲಿ ಮೂರಂಕಿ ದಾಟಿ ಗಮನ ಸೆಳೆದಿದ್ದಾರೆ.

33ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟ್ ಹಿಡಿದು ಕ್ರೀಸ್​ಗೆ ಬಂದ ಜಡ್ಡು 82ನೇ ಓವರ್​​ನಲ್ಲಿ ಶತಕವನ್ನು ಪೂರೈಸಿದರು. 198ನೇ ಎಸೆತದಲ್ಲಿ ಮೂರಂಕಿ ದಾಟಿದ ಜಡೇಜಾ, 7 ಬೌಂಡರಿ, 2 ಸಿಕ್ಸರ್​​ ಕೂಡ ಸಿಡಿಸಿದ್ದಾರೆ. ಇದು ಟೆಸ್ಟ್​ನಲ್ಲಿ ತನ್ನ 4ನೇ ಸೆಂಚುರಿ. ಮತ್ತೊಂದು ವಿಶೇಷ ಅಂದರೆ ಈ ಮೈದಾನದಲ್ಲಿ ಜಡೇಜಾ ಸಿಡಿಸಿದ ಎರಡನೇ ಶತಕ ಇದಾಗಿದೆ. ಅಲ್ಲದೆ, ಹಲವು ದಾಖಲೆ ಕೂಡ ಬರೆದಿದ್ದಾರೆ.

2022ರ ನಂತರ ಹೆಚ್ಚು ಶತಕ (ಮಧ್ಯಮ ಕ್ರಮಾಂಕ)

2022ರ ನಂತರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ಯಾಟರ್​​ಗಳ ಪೈಕಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರ ಪೈಕಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ. ಜಡ್ಡು 3 ಶತಕ ಸಿಡಿಸಿದ್ದರೆ, ರಿಷಭ್ ಪಂತ್ ಮತ್ತು ವಿರಾಟ್ ಕೊಹ್ಲಿ ತಲಾ ಎರಡು ಶತಕ ಸಿಡಿಸಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಕಪಿಲ್ ದೇವ್, ಅಶ್ವಿನ್ ಕ್ಲಬ್ ಸೇರಿದ ಜಡ್ಡು

ಶತಕ ಸಿಡಿಸುವ ಮೂಲಕ ಟೆಸ್ಟ್​​ನಲ್ಲಿ ರವೀಂದ್ರ ಜಡೇಜಾ 3000 ರನ್ ಕಲೆ ಹಾಕಿದ್ದಾರೆ. ಆ ಮೂಲಕ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಟೆಸ್ಟ್​​ನಲ್ಲಿ 3,000 ರನ್, 200 ವಿಕೆಟ್‌ ಪಡೆದ ಭಾರತದ ಮೂರನೇ ಆಟಗಾರ ಎನಿಸಿದ್ದಾರೆ.

ಕಪಿಲ್ ದೇವ್ (5248 ರನ್, 434 ವಿಕೆಟ್)

ರವಿಚಂದ್ರನ್ ಅಶ್ವಿನ್ (3271 ರನ್, 499 ವಿಕೆಟ್)

ರವೀಂದ್ರ ಜಡೇಜಾ (3003 ರನ್, 280 ವಿಕೆಟ್)

ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್ ಮತ್ತು 250 ಪ್ಲಸ್ ವಿಕೆಟ್‌ ಪಡೆದ ಆಟಗಾರರು

ಶೇನ್ ವಾರ್ನ್ - 3154 ರನ್ ಮತ್ತು 708 ವಿಕೆಟ್

ಸ್ಟುವರ್ಟ್ ಬ್ರಾಡ್ - 3662 ರನ್ ಮತ್ತು 604 ವಿಕೆಟ್

ಆರ್ ಅಶ್ವಿನ್ - 3271 ರನ್ ಮತ್ತು 499 ವಿಕೆಟ್

ಕಪಿಲ್ ದೇವ್ - 5248 ರನ್ ಮತ್ತು 434 ವಿಕೆಟ್

ಸರ್ ರಿಚರ್ಡ್ ಹ್ಯಾಡ್ಲಿ - 3124 ರನ್ ಮತ್ತು 431 ವಿಕೆಟ್

ಶಾನ್ ಪೊಲಾಕ್ - 3781 ರನ್ ಮತ್ತು 421 ವಿಕೆಟ್

ಇಯಾನ್ ಬೋಥಮ್ - 5200 ರನ್ ಮತ್ತು 383 ವಿಕೆಟ್

ಇಮ್ರಾನ್ ಖಾನ್ - 3807 ರನ್ ಮತ್ತು 362 ವಿಕೆಟ್

ಡೇನಿಯಲ್ ವೆಟ್ಟೋರಿ - 4531 ರನ್ ಮತ್ತು 362 ವಿಕೆಟ್

ಚಾಮಿಂದಾ ವಾಸ್ - 3089 ರನ್ ಮತ್ತು 355 ವಿಕೆಟ್

ಜಾಕ್ವೆಸ್ ಕಾಲಿಸ್ - 13289 ರನ್ ಮತ್ತು 292 ವಿಕೆಟ್

ರವೀಂದ್ರ ಜಡೇಜಾ - 3003 ರನ್ ಮತ್ತು 280 ವಿಕೆಟ್

ರಾಜ್​ಕೋಟ್​ನಲ್ಲಿ ಜಡ್ಡು ಪ್ರದರ್ಶನ (ಪ್ರಥಮ ದರ್ಜೆ ಕ್ರಿಕೆಟ್)

ಪಂದ್ಯಗಳು : 12

ಇನ್ನಿಂಗ್ಸ್ : 17

ರನ್ : 1564

ಸರಾಸರಿ : 142.18

50/100 : 04/06

ಗರಿಷ್ಠ ಸ್ಕೋರ್ : 331

4ನೇ ವಿಕೆಟ್​ಗೆ 200 ರನ್​​ಗಳ ಜೊತೆಯಾಟ

ಸತತ ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾದ ಈ ಜೋಡಿ 4ನೇ ವಿಕೆಟ್​ಗೆ 200+ ರನ್​ ಪಾಲುದಾರಿಕೆ ನೀಡಿತು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರೋಹಿತ್-ಜಡ್ಡು, ಇಂಗ್ಲೆಂಡ್ ಬೌಲರ್ಸ್ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 329 ಎಸೆತಗಳನ್ನು ಎದುರಿಸಿದ 204 ರನ್​ಗಳ ಜೊತೆಯಾಟವಾಡಿದರು. ಈ ರನ್ನುಗಳ ಪೈಕಿ ರೋಹಿತ್​ 114 ರನ್​ಗಳ ಕಾಣಿಕೆ ನೀಡಿದರೆ, ಜಡ್ಡು 84 ರನ್ ಕೊಡುಗೆ ನೀಡಿದರು.

ರೋಹಿತ್​ ಶರ್ಮಾ ಭರ್ಜರಿ ಶತಕ

ನಾಯಕನ ಆಟವಾಡಿದ ರೋಹಿತ್​, ಟೆಸ್ಟ್​​ ಕ್ರಿಕೆಟ್​ನಲ್ಲಿ ತನ್ನ 11ನೇ ಶತಕ ಸಿಡಿಸಿದರು. ತಾನು ಎದುರಿಸಿದ 157ನೇ ಎಸೆತದಲ್ಲಿ ಮೂರಂಕಿ ದಾಟಿದ ಹಿಟ್​ಮ್ಯಾನ್, ಇಂಗ್ಲೆಂಡ್ ವಿರುದ್ಧವೇ ಮೂರನೇ ಸೆಂಚುರಿ ದಾಖಲಿಸಿದರು. ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ಯುತ್ತಿದ್ದ ಹಿಟ್​ಮ್ಯಾನ್, 196 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್​ ಸಹಿತ 131 ರನ್ ಸಿಡಿಸಿ ಮಾರ್ಕ್​ವುಡ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ