IPL 2025: ಮುಂಬೈ ಇಂಡಿಯನ್ಸ್ ಅಚ್ಚರಿಯ ರಿಟೆನ್ಷನ್; ರೋಹಿತ್ ಶರ್ಮಾ ಇನ್, ಇಶಾನ್ ಕಿಶನ್ ಔಟ್
Oct 18, 2024 01:42 PM IST
IPL 2025: ಮುಂಬೈ ಇಂಡಿಯನ್ಸ್ ಅಚ್ಚರಿಯ ರಿಟೆನ್ಷನ್; ರೋಹಿತ್ ಶರ್ಮಾ ಇನ್, ಇಶಾನ್ ಕಿಶನ್ ಔಟ್
- ರೋಹಿತ್ ಶರ್ಮಾ ವಿಚಾರದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿರುವ ಮುಂಬೈ ತಂಡ ಈ ಆಟಗಾರನನ್ನು ತಮ್ಮ ತಂಡದಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಇದು ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿಸಿದೆ. ಇವರಲ್ಲದೆ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸಹ ಉಳಿಸಿಕೊಳ್ಳಲಿದೆಯಂತೆ.
ಐಪಿಎಲ್ 2025ರ ಹರಾಜು ಪ್ರಕ್ರಿಯೆಗೂ ಮುನ್ನ ಮುಂಬೈ ಇಂಡಿಯನ್ಸ್ ಮಹತ್ವದ ನಿರ್ಧಾರ ಕೈಗೊಂಡಿದೆ. ವರದಿಗಳ ಪ್ರಕಾರ, ಐಪಿಎಲ್ 2025ರ ಮೆಗಾ ಹರಾಜಿನ ಮೊದಲು ಮುಂಬೈ ಇಂಡಿಯನ್ಸ್ ತಂಡ ಉಳಿಸಿಕೊಳ್ಳಲಿರುವ 4 ಆಟಗಾರರ ಹೆಸರನ್ನು ಅಂತಿಮಗೊಳಿಸಿದೆ. ರೋಹಿತ್ ಶರ್ಮಾ ವಿಚಾರದಲ್ಲಿ ಕೂಡ ಮುಂಬೈ ಕೂಡ ಆಘಾತಕಾರಿ ನಿರ್ಧಾರ ತೆಗೆದುಕೊಂಡಿದೆ. ವರದಿಗಳ ಪ್ರಕಾರ, ಮುಂಬೈ ತಂಡವು ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಉಳಿಸಿಕೊಳ್ಳಲಿದೆ. ಇವರಲ್ಲದೆ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸಹ ಉಳಿಸಿಕೊಳ್ಳಲಿದೆಯಂತೆ. ರೋಹಿತ್ ಶರ್ಮಾ ವಿಚಾರದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿರುವ ಮುಂಬೈ ತಂಡ ಈ ಆಟಗಾರನನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದೆ.
ಕಳೆದ ವರ್ಷವೇ ರೋಹಿತ್ ಅವರನ್ನು ಮುಂಬೈ ನಾಯಕತ್ವದಿಂದ ವಜಾಗೊಳಿಸಿತ್ತು. ಅವರ ಸ್ಥಾನದಲ್ಲಿ ಹಾರ್ದಿಕ್ ಕ್ಯಾಪ್ಟನ್ ಆಗಿದ್ದು, ಮುಂಬೈ ತಂಡವು ಪ್ಲೇಆಫ್ ತಲುಪಲು ಸಾಧ್ಯವಾಗಲಿಲ್ಲ. ರೋಹಿತ್ ಈ ನಿರ್ಧಾರದಿಂದ ನಿರಾಶೆಗೊಂಡಿದ್ದಾರೆ ಎಂದು ವರದಿಯಾಗಿತ್ತು. ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ಇಂಡಿಯನ್ಸ್‌ನಲ್ಲಿ ಉಳಿಯಲಿದ್ದಾರೆ ಎಂದು ವರದಿ ತಿಳಿಸಿದೆ. ಅವರು ಭಾರತದ ಪ್ರಸ್ತುತ ಟಿ20I ನಾಯಕರಾಗಿದ್ದಾರೆ.
ಜಸ್ಪ್ರೀತ್ ಬುಮ್ರಾ ಕೂಡ ಮುಂಬೈ ಇಂಡಿಯನ್ಸ್‌ನಲ್ಲಿ ಉಳಿಯಲಿದ್ದಾರೆ. ಬಲಗೈ ವೇಗಿ 2013 ರಿಂದ ಮುಂಬೈ ಜೊತೆಯಲ್ಲಿದ್ದಾರೆ. ಐಪಿಎಲ್ 2018 ಮತ್ತು 2022 ರ ಮೆಗಾ-ಹರಾಜಿನ ಮೊದಲು ಕೂಡ ಬುಮ್ರಾ ಅವರನ್ನು ಉಳಿಸಿಕೊಂಡಿತ್ತು. ಇಶಾನ್ ಕಿಶನ್ ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಎಂಐ ಅವರನ್ನು ಮೆಗಾ ಹರಾಜಿನಲ್ಲಿ ಮರು ಸಹಿ ಮಾಡಲು ಪ್ರಯತ್ನಿಸಲಿದೆ. ಐಪಿಎಲ್ 2022ರ ಮೆಗಾ-ಹರಾಜಿನಲ್ಲಿ 15.25 ಕೋಟಿ ರೂ. ಗೆ ಇಶಾನ್ ಅವರನ್ನು ಎಂಐ ಖರೀದಿಸಿತ್ತು. ಅವರು 2018 ರಿಂದ ಮುಂಬೈ ಜೊತೆಯಲ್ಲಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್
ವರದಿಗಳ ಪ್ರಕಾರ ಮುಂಬೈ ಮಾತ್ರವಲ್ಲ, ಸನ್ ರೈಸರ್ಸ್ ಹೈದರಾಬಾದ್ ಕೂಡ ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ಮೊದಲು ಹೆನ್ರಿಚ್ ಕ್ಲಾಸೆನ್ ಅವರನ್ನು ಉಳಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ, ಅವರಿಗೆ 23 ಕೋಟಿ ನೀಡಬಹುದು. ಇವರಲ್ಲದೆ ಪ್ಯಾಟ್ ಕಮ್ಮಿನ್ಸ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಉಳಿಸಿಕೊಳ್ಳುವುದು ಖಚಿತವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಸಹ ನಿರ್ಧರಿಸಿದೆ. ವರದಿಗಳ ಪ್ರಕಾರ, ತಂಡವು ರಿಷಬ್ ಪಂತ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರನ್ನು ಉಳಿಸಿಕೊಳ್ಳಲಿದೆ. ತಂಡವು ಎಲ್ಲಾ ವಿದೇಶಿ ಆಟಗಾರರಿಗಾಗಿ ಹರಾಜಿಗೆ ಹೋಗಲು ಅವಕಾಶ ನೀಡುತ್ತದಂತೆ.
ಆರ್‌ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಯಾವ ಮಾಹಿತಿ ಕೂಡ ಹೊರಬಿದ್ದಿಲ್ಲ. ಆದರೆ, ವಿರಾಟ್ ಕೊಹ್ಲಿಯನ್ನ ಉಳಿಸುವುದು ಶೇ. 100 ರಷ್ಟು ಖಚಿತ. ಇವರ ಜೊತೆಗೆ ಉಳಿದ ಆಟಗಾರರು ಯಾರು ಎಂಬುದು ತಿಳಿದುಬಂದಿಲ್ಲ. ಮೊಹಮ್ಮದ್ ಸಿರಾಜ್, ರಜಟ್ ಪಾಟೀದರ್, ಫಾಫ್ ಡುಪ್ಲೆಸಿಸ್ ಅವರನ್ನು ಉಳಿಸಿಕೊಳ್ಳುವ ಸಂಭವವಿದೆ.
ವರದಿ: ವಿನಯ್ ಭಟ್.
ಇದನ್ನೂ ಓದಿ | IPL 2025: ಐಪಿಎಲ್ 2025 ಮೆಗಾ ಹರಾಜಿನಲ್ಲಿ ದೊಡ್ಡ ಬದಲಾವಣೆ: ಈ ಬಾರಿ ಆಕ್ಷನ್ ನಡೆಯೋದು ಭಾರತದಲ್ಲಲ್ಲ?