Kate Cross: ಆರ್‌ಸಿಬಿ ಖರೀದಿಸಿದರೂ ಸಿಎಸ್ಕೆಗೆ ಬೆಂಬಲ ವ್ಯಕ್ತಪಡಿಸಿದ ಕೇಟ್ ಕ್ರಾಸ್; ಪೋಸ್ಟ್ ವೈರಲ್
Dec 10, 2023 11:29 AM IST
ಕೇಟ್ ಕ್ರಾಸ್.
- Kate Cross: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ್ತಿ ಕೇಟ್ ಕ್ರಾಸ್ ಅವರು ಯಾವಾಗಲೂ ಸಿಎಸ್ಕೆ ತಂಡವನ್ನು ಬೆಂಬಲಿಸುವುದನ್ನು ಖಚಿತಪಡಿಸಿದ್ದಾರೆ. ಈ ಕುರಿತ ಪೋಸ್ಟ್ ವೈರಲ್ ಆಗಿದೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಅಭಿಮಾನಿ ಆಗಿರುವ ಇಂಗ್ಲೆಂಡ್ ವೇಗದ ಬೌಲರ್ ಕೇಟ್ ಕ್ರಾಸ್ (Kate Cross) ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ (Royal Challengers Bangalore) ಬೆಂಬಲ ನೀಡಲ್ಲ ಎನ್ನುವ ಪೋಸ್ಟ್ ವೈರಲ್ ಆಗುತ್ತಿದೆ. ಡಿಸೆಂಬರ್ 9ರಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್ನ ಮಿನಿ ಹರಾಜಿನಲ್ಲಿ (WPL Mini Auction 2024) 30 ಲಕ್ಷ ರೂಪಾಯಿಗೆ ಆರ್‌ಸಿಬಿ ಖರೀದಿಸಿದ ಬೆನ್ನಲ್ಲೇ ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಆದರೆ, ಆರ್‌ಸಿಬಿ ಖರೀದಿಸಿದ ಬಳಿಕವೂ ಚೆನ್ನೈಗೆ ಈಗಲೂ ಬೆಂಬಲ ನೀಡುವುದಾಗಿ ಕೇಟ್ ಕ್ರಾಸ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಆರ್‌ಸಿಬಿ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೆಡ್ ಆರ್ಮಿ ಸೇರಿದ ಬೆನ್ನಲ್ಲೆ ಆರ್‌ಸಿಬಿ ಜೆರ್ಸಿ ತೊಟ್ಟಿರುವ ಫೋಟೋವನ್ನು ಹಂಚಿಕೊಂಡಿರುವ ಕ್ರಾಸ್, ಪೋಸ್ಟ್ ಮಾಡಿದ್ದು, ಆರ್ಸಿಬಿಗೆ ಯಾವಾಗಲೂ ವಿಶೇಷ ಸ್ಥಾನ ಇದೆ ಎಂದು ಬರೆದಿದ್ದಾರೆ.
ಸಿಎಸ್ಕೆಗೆ ಬೆಂಬಲ
ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಸಿಬಿ ಅಭಿಮಾನಿಯಾಗಿರುವ ಇಂಗ್ಲೆಂಡ್ ತಂಡದ ಮಾಜಿ ಆಟಗಾರ್ತಿ ಲೆಕ್ಸಾಂಡ್ರಾ ಹಾರ್ಟ್ಲಿ, ವೆಲ್ಕಮ್ ಟು ಹೋಮ್ ಎಂದು ಕ್ರಾಸ್ಗೆ ಟ್ಯಾಗ್ ಮಾಡಿದ್ದಾರೆ. ಆದರೆ ಇದಕ್ಕೆ ಉತ್ತರಿಸಿದ ಅನುಭವಿ ಆಟಗಾರ್ತಿ, PS; ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ. ಯಲ್ಲೋ ಕಲರ್ನಲ್ಲಿ ಲವ್ ಎಮೋಜಿ ಹಾಕುವ ಮೂಲಕ ಸಿಎಸ್ಕೆಗೆ ಬೆಂಬಲ ತೋರುವುದಾಗಿ ತಿಳಿಸಿದ್ದಾರೆ. ಚೆನ್ನೈ ಅಧಿಕೃತ ಖಾತೆಯಿಂದಲೂ ಈ ಪೋಸ್ಟ್ ಪ್ರತಿಕ್ರಿಯೆ ಬಂದಿದೆ.
ಆರ್‌ಸಿಬಿ ಫ್ಯಾನ್ಸ್ ಗರಂ
ಆರ್‌ಸಿಬಿ ಖರೀದಿಸಿದ ಬಳಿಕವೂ ಚೆನ್ನೈಗೆ ಬೆಂಬಲ ನೀಡಿದ್ದಕ್ಕೆ ಅಭಿಮಾನಿಗಳು ಕೇಟ್ ಕ್ರಾಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆರ್‌ಸಿಬಿ ವಿರೋಧಿಗಳು ಎಂದೆಲ್ಲಾ ಪೋಸ್ಟ್ ಹಾಕುತ್ತಿದ್ದಾರೆ. ಆರ್ಸಿಬಿಗೆ ವಿಶೇಷ ಸ್ಥಾನ ಎಂದು ಹೇಳಿ ನಾಟಕವಾಡಬೇಡಿ. ಅಪಟ್ಟ ಅಭಿಮಾನಿಗಳು ಆರ್ಸಿಬಿಗೆ ಬೇಕಿದೆ. ನೀವಲ್ಲ ಎಂದು ಕೆಲವರು ಪೋಸ್ಟ್ನಲ್ಲಿ ಕಿಡಿಕಾರಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್, ನಿಮ್ಮನ್ನು ಯಲ್ಲೋ ಜರ್ಸಿಯಲ್ಲಿ ನೋಡಲು ಕಾಯುತ್ತಿದ್ದೇವೆ ಎಂದಿದ್ದಾರೆ.
ಈ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರ್ತಿಯರ ಪಟ್ಟಿ
ಏಕ್ತಾ ಬಿಷ್ಟ್ (ಭಾರತ) - 60 ಲಕ್ಷ, ಬೌಲರ್
ಜಾರ್ಜಿಯಾ ವೇರ್ಹ್ಯಾಮ್ (ಆಸ್ಟ್ರೇಲಿಯಾ) - 40 ಲಕ್ಷ, ಆಲ್ರೌಂಡರ್
ಕೇಟ್ ಕ್ರಾಸ್ (ಇಂಗ್ಲೆಂಡ್) - 30 ಲಕ್ಷ, ಆಲ್ರೌಂಡರ್
ಸಬ್ಬಿನೇನಿ ಮೇಘನಾ (ಭಾರತ) - 30 ಲಕ್ಷ, ಆಲ್ರೌಂಡರ್
ಸೋಫಿ ಮೊಲಿನಿಕ್ಸ್ (ಆಸ್ಟ್ರೇಲಿಯಾ) - 30 ಲಕ್ಷ, ಆಲ್ರೌಂಡರ್
ಸಿಮ್ರಾನ್ ಬಹದ್ದೂರ್ (ಭಾರತ) - 30 ಲಕ್ಷ, ಬೌಲರ್
ಶುಭಾ ಸತೀಶ್ (ಭಾರತ, ಕರ್ನಾಟಕ) - 10 ಲಕ್ಷ, ಆಲ್ರೌಂಡರ್.
ಆರ್‌ಸಿಬಿ ಪೂರ್ಣ ತಂಡ
ಆಶಾ ಶೋಭನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್, ಏಕ್ತಾ ಬಿಷ್ಟ್, ಕೇಟ್ ಕ್ರಾಸ್, ಜಾರ್ಜಿಯಾ ವೇರ್ಹ್ಯಾಮ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಸಿಮ್ರಾನ್ ಬಹದ್ದೂರ್, ಶುಭಾ ಸತೀಶ್.